2018 ರಲ್ಲಿ ಬಿಡುಗಡೆಗೊಂಡಿರುವ ಮಿಡ್-ರೇಂಜಿನ 10 ಬೆಸ್ಟ್ ಸ್ಮಾರ್ಟ್ ಫೋನ್ ಗಳು

    2018 ರಲ್ಲಿ ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ಹಲವು ಮಹತ್ವದ ಮತ್ತು ಕುತೂಹಲಕಾರಿಯಾಗಿರುವ ಬದಲಾವಣೆಗಳನ್ನು ನಾವು ಗಮನಿಸಿದ್ದೇವೆ. ಹಲವು ಸ್ಮಾರ್ಟ್ ಫೋನ್ ಗಳು ಯೂನಿಕ್ ಫೀಚರ್ ಗಳನ್ನು ಒಳಗೊಂಡು ಬಿಡುಗಡೆಗೊಂಡಿವೆ. ಅದೂ ಅಲ್ಲದೆ ಅವುಗಳು ಲಭ್ಯವಾದ ಬೆಲೆಯಲ್ಲಿ ಹಿಂದೆಂದೂ ಆ ವೈಶಿಷ್ಟ್ಯತೆಗಳು ಇರಲಿಲ್ಲ.

    2018 ರಲ್ಲಿ ಬಿಡುಗಡೆಗೊಂಡಿರುವ ಮಿಡ್-ರೇಂಜಿನ 10 ಬೆಸ್ಟ್ ಸ್ಮಾರ್ಟ್ ಫೋನ್ ಗಳು

    ಅದರಲ್ಲೂ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಗಳಲ್ಲಿ ಇಂತಹ ಕುತೂಹಲಕಾರಿ ಫೀಚರ್ ಗಳು ಸೇರಿಕೊಂಡದ್ದು ಮಧ್ಯಮ ವರ್ಗದ ಜನರಿಗೆ ಬಹಳ ಖುಷಿಯ ವಿಚಾರವಾಗಿತ್ತು. 2018 ರಲ್ಲಿ ಬಿಡುಗಡೆಗೊಂಡ ಬೆಸ್ಟ್ ಫೀಚರ್ ಗಳನ್ನು ಒಳಗೊಂಡಿರುವ ಮಿಡ್-ರೇಂಜ್ ಸೆಗ್ಮೆಂಟ್ ನ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಶಿಯೋಮಿ ಪೋಕೋ ಎಫ್1

    ಪೋಕೋ ಎಫ್1 ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ನ್ನು ಒಳಗೊಂಡು ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ. ಮೂರು ವಿಭಿನ್ನ ಸ್ಟೋರೇಜ್ ವೇರಿಯಂಟ್ ನಲ್ಲಿ ಈ ಫೋನ್ ಲಭ್ಯವಾಗುತ್ತದೆ. 6GB RAM ಮತ್ತು 64GB ROM ಯ ಬೆಲೆ Rs. 20,999, ಮಿಡ್-ವೇರಿಯಂಟ್ 6GB RAM ಮತ್ತು 128GB ROM ಯ ಬೆಲೆ Rs. 23,999 ಮೂರನೆಯದು ಹೈ-ಎಂಡ್ 8GB RAM ಮತ್ತು 256GB ಸ್ಟೋರೇಜ್ ನ ಬೆಲೆ Rs. 28,999.

    ರಿಯಲ್ ಮಿ 2 ಪ್ರೋ

    ರಿಯಲ್ ಮಿ 2 ಪ್ರೋ ಹೆಚ್ಚು ಅಡ್ವಾನ್ಸ್ಡ್ ಆಗಿರುವ ಸ್ಮಾರ್ಟ್ ಫೋನ್ ನ್ನು ಕಂಪೆನಿ ಬಿಡುಗಡೆಗೊಳಿಸಿದೆ. 4GB RAM ಮತ್ತು 64GB ROM ನ ಬೆಲೆ Rs. 13,990, ಮಿಡ್-ರೇಂಜಿನ 6GB RAM ಮತ್ತು 6GB ROM ನ ಬೆಲೆ Rs. 15,990 ಮತ್ತು ಹೈ-ಎಂಡ್ ವೇರಿಯಂಟ್ 8GB RAM ಮತ್ತು 128GB ROM ಬೆಲೆ Rs. 17,990.

    ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1

    ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ನ ಹೈಲೆಟ್ ಏನೆಂದರೆ ಸ್ಟಾಕ್ ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ 8.1 ಓರಿಯೋ. 5000mAh ಬ್ಯಾಟರಿಯನ್ನು ಇದು ಹೊಂದಿದೆ. ಮೂರು ವೇರಿಯಂಟ್ ಗಳು ಲಭ್ಯವಾಗುತ್ತದೆ. 3GB RAM + 32GB ROM, ಮಿಡ್ ವೇರಿಯಂಟ್ 4GB RAM + 64GB ROM ಮತ್ತು ಟಾಪ್ ಎಂಡ್ ವೇರಿಯಂಟ್ ನಲ್ಲಿ 6GB RAM + 64GB ROM ಇದ್ದು ಕ್ರಮವಾಗಿ ಇದರ ಬೆಲೆ 10,999, Rs. 12,999 ಮತ್ತು Rs. 14,999.

    ಶಿಯೋಮಿ ರೆಡ್ಮಿ ನೋಟ್ 5 ಪ್ರೋ

    ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಡುಯಲ್ ಕ್ಯಾಮರಾ ಮಾಡ್ಯೂಲ್ ಹೊಂದಿರುವ ಕೈಗೆಟುಕುವ ಬೆಲೆಯ ಅತ್ಯುತ್ತಮ ಫೋನ್ ಆಗಿದೆ. 4GB RAM + 64GB ROM ನ ಬೆಲೆ Rs.13,999 ಮತ್ತು ಹೈ ಎಂಡ್ ವೇರಿಯಂಟ್ 6GB RAM + 64GB ROM ನ ಬೆಲೆ Rs. 16,999 ಆಗಿದೆ.

    ಹಾನರ್ ಪ್ಲೇ

    ಹಾನರ್ ಪ್ಲೇ ಎಐ ಕೆಪಾಬ್ಲಿಟೀಸ್ ನೊಂದಿಗೆ ಉತ್ತಮ ಕ್ಯಾಮರಾವಿರುವ ಫೋನ್ ಆಗಿದೆ. ಎರಡು ವೇರಿಯಂಟ್ ನಲ್ಲಿ ಇದು ಲಭ್ಯವಾಗುತ್ತದೆ. 4GB RAM + 64GB ROM ಮತ್ತು 6GB RAM + 64GB ROM. ಇದರ ಬೆಲೆ ಕ್ರಮವಾಗಿ Rs. 19,999 ಮತ್ತು Rs. 23,999.

    ನೋಕಿಯಾ 6.1 ಪ್ಲಸ್

    ನೋಕಿಯಾ 6.1 ಪ್ಲಸ್ ನೋಕಿಯಾ ಎಕ್ಸ್ 6 ಗ್ಲೋಬಲ್ ವೇರಿಯಂಟ್ ಆಗಿದ್ದು ಚೀನಾದಲ್ಲಿ ಬಿಡುಗಡೆಗೊಂಡಿದೆ.ಫೀಚರ್ ನಾಚ್ ಡಿಸ್ಪ್ಲೇ ಇರುವ ನೋಕಿಯಾ ಸಂಸ್ಥೆಯ ಮೊದಲ ಸ್ಮಾರ್ಟ್ ಫೋನ್ ಇದಾಗಿದೆ. ಭಾರತದಲ್ಲಿ 4GB RAM ಮತ್ತು 64GB ಸ್ಟೋರೇಜ್ ಸ್ಪೇಸ್ ನ ಫೋನ್ ಬಿಡುಗಡೆಗೊಂಡಿದ್ದು ಅದರ ಬೆಲೆ Rs. 15,999 ರುಪಾಯಿಗಳು.

    ಹಾನರ್ 9ಎನ್

    ಹಾನರ್ 9ಎನ್ ಹಾನರ್ 9ಐ(2018 )ನ ಗ್ಲೋಬಲ್ ವೇರಿಯಂಟ್ ಆಗಿದೆ. ಬೇಸ್ ವೇರಿಯಂಟ್ 3GB RAM ಮತ್ತು 32GB ಸ್ಟೋರೇಜ್ ಅವಕಾಶಗಳನ್ನು ಹೊಂದಿದ್ದು ಅದರ ಬೆಲೆ Rs. 11,999 ಮತ್ತು 4GB, 64GB ವೇರಿಯಂಚ್ ನ ಬೆಲೆ Rs.13,999. ಟಾಪ್ ಎಂಡ್ ಫೋನ್ 128GB ಸ್ಟೋರೇಜ್ ಮತ್ತು 4GB RAM ಯ ಬೆಲೆ Rs. 17,999.

    ವಿವೋ ವಿ9

    ವಿವೋ ವಿ9 ಡಿಸ್ಪ್ಲೇ ನಾಚ್ ಮತ್ತು 24MP ಸೆಲ್ಫೀ ಕ್ಯಾಮರಾ ಫೀಚರ್, 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಇದರ ಬೆಲೆ Rs 22,990 ಮತ್ತು ಇದರ ಪ್ರಮುಖ ಹೈಲೆಟ್ ಎಂದರೆ ಎಐ ಫೋಸ್ ಆಕ್ಸಿಸ್ ಫೀಚರ್ ಇದೆ. ಇದು ಸ್ಮಾರ್ಟ್ ಫೋನ್ ಮತ್ತು ಆಪ್ ಗಳನ್ನು ಅನ್ ಲಾಕ್ ಮಾಡಲು ನೆರವಾಗುತ್ತದೆ. 19:9 ಡಿಸ್ಪ್ಲೇ ಹೊಂದಿರುವ ಈ ಫೋನ್ ಆಕರ್ಷಕ ಬ್ಯಾಟರಿ ಲೈಫ್ ನ್ನು ಒಳಗೊಂಡಿದೆ.

    ಓಪ್ಪೋ ಎಫ್9 ಪ್ರೋ

    ಒಪ್ಪೋ ಎಫ್9 ಪ್ರೋ VOOC ಫ್ಲ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಲಭ್ಯವಾಗುತ್ತದೆ. 5 ನಿಮಿಷ ಮೊಬೈಲ್ ನ್ನು ಚಾರ್ಜ್ ಮಾಡಿದರೆ 2 ತಾಸು ಬಳಕೆ ಮಾಡಲು ಇದು ಅವಕಾಸ ನೀಡುತ್ತದೆ. ಇದು 6GB RAM ಮತ್ತು 64GB ಸ್ಟೋರೇಜ್ ಅವಕಾಶವಿರುವ ಫೋನಿನ ಬೆಲೆ Rs. 23,990. ಒಪ್ಪೋ ಎಫ್ 9 4GB RAM ಮತ್ತು 64GB ಸ್ಟೋರೇಜ್ ವ್ಯವಸ್ಥೆಯ ಬೆಲೆ Rs. 19,990.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    10 best mid-range smartphones launched in 2018
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more