Edge 70 vs Phone 3a Pro vs T4 Pro: ₹30 ಸಾವಿರದೊಳಗೆ ಅತ್ಯುತ್ತಮ ಯಾವುದು?
ಭಾರತದಲ್ಲಿ ₹30,000 ವಿಭಾಗದ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯು 2026ರ ಆರಂಭದಲ್ಲೇ ಸಂಚಲನ ಮೂಡಿಸಲು ಸಜ್ಜಾಗಿದೆ. ಮೋಟೊರೊಲಾ ಇತ್ತೀಚಿಗೆ ಅಲ್ಟ್ರಾ-ಸ್ಲಿಮ್ ವಿನ್ಯಾಸದ Motorola Edge 70 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ ನಂತರ ಮಧ್ಯಮ ಬೆಲೆಯ ಫೋನ್‌ಗಳ ಸಾಲಿನಲ್ಲಿ ಬಲವಾದ ಸ್ಪರ್ಧೆಯನ್ನು ತಂದಿದೆ. ಈವರೆಗೆ ಪ್ರೀಮಿಯಂ ಫ್ಲಾಗ್‌ಶಿಪ್( iPhone Air ಮತ್ತು Galaxy S25 Edge) ಫೋನ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಸ್ಲಿಮ್ ಲುಕ್ ಅನ್ನು ₹30,000ಕ್ಕಿಂತ ಕಡಿಮೆ ಬೆಲೆಯ ವಿಭಾಗಕ್ಕೆ ತಂದಿರುವುದು ಇದರ ದೊಡ್ಡ ಹೆಗ್ಗಳಿಕೆ ಎನ್ನಬಹುದು.
ಪ್ರಸ್ತುತ ದೇಶದಲ್ಲಿ ₹30,000 ವಿಭಾಗದಲ್ಲಿ Vivo T4 Pro 5G ಮತ್ತು Nothing Phone (3a) Pro ಫೋನ್‌ಗಳು ಹೆಚ್ಚು ಗಮನಸೆಳೆಯುತ್ತಿದ್ದವು. ಇದೀಗ ಇವುಗಳ ಸಾಲಿಗೆ Motorola Edge 70 ಫೋನ್ ಆಗಮನವಾಗಿದೆ. ಆದರೆ ಈ ಸೆಗ್ಮೆಂಟ್‌ನಲ್ಲಿ ಗೆಲ್ಲಲು ವಿನ್ಯಾಸವು ಮಾತ್ರ ಸಾಕಾಗುತ್ತದೆಯೇ? ಅಥವಾ ಪರ್ಫಾರ್ಮೆನ್ಸ್, ಕ್ಯಾಮೆರಾ ಮತ್ತು ಬ್ಯಾಟರಿ ಕೂಡ ಮಹತ್ವದಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾಗಿ, ಈ ಲೇಖನದಲ್ಲಿ 30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಮೂರು ಫೋನ್‌ಗಳನ್ನು ಹೋಲಿಸಿ ನೋಡೋಣ. ಅತ್ಯುತ್ತಮ ಸ್ಮಾರ್ಟ್‌ಫೋನ್ ಯಾವುದು ಎಂಬುದನ್ನು ಕಂಡುಹಿಡಿಯೋಣ.
ವಿನ್ಯಾಸ ಮತ್ತು ಬಿಲ್ಡ್ ಕ್ವಾಲಿಟಿ: ನಿಮ್ಮ ಆಧ್ಯತೆ ಮುಖ್ಯ
ಮೂರು ಫೋನ್‌ಗಳು ಫ್ಲಾಟ್ AMOLED ಡಿಸ್ಪ್ಲೇ ಮತ್ತು ಬಾಕ್ಸ್-ಶೇಪ್ ಫ್ರೇಮ್ ವಿನ್ಯಾಸವನ್ನು ಅಳವಡಿಸಿಕೊಂಡಿವೆ. ಆದರೆ Nothing Phone (3a) Pro ತನ್ನ ಟ್ರಾನ್ಸ್‌ಪರೆಂಟ್ ಬ್ಯಾಕ್ ಪ್ಯಾನೆಲ್ ಮತ್ತು ಕಸ್ಟಮೈಸೇಬಲ್ LED ಲೈಟಿಂಗ್ ಮೂಲಕ ಸ್ಪಷ್ಟವಾಗಿ ವಿಭಿನ್ನವಾಗಿ ಕಾಣುತ್ತದೆ. Motorola Edge 70 ಮತ್ತು Vivo T4 Pro ಹೆಚ್ಚು ಸೂಕ್ಷ್ಮ, ಪ್ರೀಮಿಯಂ ಮತ್ತು ಮಿನಿಮಲ್ ವಿನ್ಯಾಸವನ್ನು ಆಯ್ದುಕೊಂಡಿದ್ದು, ಸಾಮಾನ್ಯ ಬಳಕೆದಾರರಿಗೆ ಆಕರ್ಷಕವಾಗಿವೆ.

ಗುಣಮಟ್ಟದ ಅನುಭವ: Edge 70ಗೆ ಸ್ಪಷ್ಟ ಮುನ್ನಡೆ
ಬಿಲ್ಡ್ ಗುಣಮಟ್ಟದ ವಿಷಯದಲ್ಲಿ Motorola Edge 70 ಹೆಚ್ಚು ಪ್ರೀಮಿಯಂ ಅನುಭವ ನೀಡುತ್ತದೆ. ಇದರಲ್ಲಿ ಟೆಕ್ಸ್ಚರ್ಡ್ ಬ್ಯಾಕ್ ಪ್ಯಾನೆಲ್, ಮೆಟಲ್ ಫ್ರೇಮ್ ಮತ್ತು ಮುಂಭಾಗದಲ್ಲಿ Gorilla Glass 7i ರಕ್ಷಣೆ ಇದೆ. Nothing Phone (3a) Pro ಮುಂಭಾಗದಲ್ಲಿ Panda Glass ಬಳಸಿದ್ದು, ಹಿಂಭಾಗದಲ್ಲಿ ಅನ್‌ನಾಮ್ಡ್ ಗ್ಲಾಸ್ ಮತ್ತು ಪ್ಲಾಸ್ಟಿಕ್ ಫ್ರೇಮ್ ಹೊಂದಿದೆ. Vivo T4 Pro 5G ಮುಂಭಾಗದಲ್ಲಿ Diamond Shield Glass ನೀಡಿದರೂ, ಹಿಂಭಾಗ ಮತ್ತು ಫ್ರೇಮ್ ಪ್ಲಾಸ್ಟಿಕ್‌ನಲ್ಲಿವೆ.
ಡಿಸ್ಪ್ಲೇ ಗುಣಮಟ್ಟ: ರೆಸಲ್ಯೂಶನ್ ಮತ್ತು ಬ್ರೈಟ್‌ನೆಸ್‌ನಲ್ಲಿ Edge 70 ಮುಂಚೂಣಿ
ಈ ಮೂರು ಫೋನ್‌ಗಳೂ 120Hz AMOLED ಡಿಸ್ಪ್ಲೇ ಹೊಂದಿವೆ. ಆದರೆ Motorola Edge 70 ಹೆಚ್ಚಿನ ರೆಸಲ್ಯೂಶನ್ ನೀಡುವುದರಿಂದ ಚಿತ್ರಗಳು ಹೆಚ್ಚು ಶಾರ್ಪ್ ಆಗಿ ಕಾಣಿಸುತ್ತವೆ. Edge 70 ಡಿಸ್ಪ್ಲೇ 1600 ನಿಟ್ಸ್ HBM ಬ್ರೈಟ್‌ನೆಸ್ ತಲುಪುತ್ತದೆ, ಇದು Vivo T4 Pro ಗಿಂತ 100 ನಿಟ್ಸ್ ಹೆಚ್ಚು. ಜೊತೆಗೆ Edge 70 ಸ್ವಲ್ಪ ಹೆಚ್ಚು screen-to-body ratio ಹೊಂದಿದ್ದು, ವೀಕ್ಷಣಾ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಡಿಸ್‌ಪ್ಲೇ ವಿಭಾಗದಲ್ಲಿ Edge 70 ಮುಂಚೂಣಿಯಲ್ಲಿದೆ.
MIL-STD ಮತ್ತು IP ರೇಟಿಂಗ್: ಯಾವುದು ಉತ್ತಮ?
Motorola Edge 70 ಮತ್ತು Vivo T4 Pro ಎರಡೂ MIL-STD-810H ಪ್ರಮಾಣೀಕರಣ ಪಡೆದಿದ್ದು, ಹೆಚ್ಚು ಗಟ್ಟಿತನವನ್ನು ಒದಗಿಸುತ್ತವೆ. ಜೊತೆಗೆ ಇವು IP68/IP69 ರೇಟಿಂಗ್ ಹೊಂದಿರುವುದರಿಂದ ನೀರು ಮತ್ತು ಧೂಳಿನಿಂದ ಹೆಚ್ಚಿನ ರಕ್ಷಣೆ ನೀಡುತ್ತವೆ.Nothing Phone (3a) Proಗೆ IP64 ರೇಟಿಂಗ್ ಮಾತ್ರ ಲಭ್ಯವಿದ್ದು, ಸಣ್ಣ ಸ್ಪ್ಲ್ಯಾಶ್ ಮತ್ತು ಧೂಳಿಗೆ ಮಾತ್ರ ರಕ್ಷಣೆ ನೀಡುತ್ತದೆ.

ಕ್ಯಾಮೆರಾ ಸೆಟಪ್: ಸೆನ್ಸರ್, ಜೂಮ್ ಮತ್ತು ವೀಡಿಯೊ ಸಾಮರ್ಥ್ಯ
Nothing Phone (3a) Pro
50MP Samsung ISOCELL GNJ ಪ್ರೈಮರಿ (f/1.9, OIS)
8MP Sony IMX355 ಅಲ್ಟ್ರಾವೈಡ್ (f/2.2)
50MP Sony LYTIA 600 ಪೆರಿಸ್ಕೋಪ್ ಲೆನ್ಸ್ (f/2.55, OIS)
ಮುಂಭಾಗ: 50MP Samsung ಸೆಲ್ಫಿ ಕ್ಯಾಮೆರಾ
Vivo T4 Pro 5G
50MP Sony IMX882 ಪ್ರೈಮರಿ (f/1.8, OIS)
50MP Sony IMX882 ಪೆರಿಸ್ಕೋಪ್ ಟೆಲಿಫೋಟೋ (f/2.7, OIS, 3x ಆಪ್ಟಿಕಲ್ ಜೂಮ್)
2MP ಬೋಕೇಹ್ ಲೆನ್ಸ್
ಮುಂಭಾಗ: 32MP ಸೆಲ್ಫಿ ಕ್ಯಾಮೆರಾ
Motorola Edge 70
50MP Samsung GNJ ಪ್ರೈಮರಿ (f/1.7, OIS)
50MP Samsung JNS ಅಲ್ಟ್ರಾವೈಡ್ (f/2.0)
ಮುಂಭಾಗ: 50MP Samsung JNS ಸೆಲ್ಫಿ ಕ್ಯಾಮೆರಾ
ಕ್ಯಾಮೆರಾ ವಿಭಾಗದಲ್ಲಿ ಮೂರೂ ಫೋನ್‌ಗಳು ವಿಭಿನ್ನ ರೀತಿಯ ಬಳಕೆದಾರರನ್ನು ಗುರಿಯಾಗಿವೆ.Motorola Edge 70 ಮೂರು ಲೆನ್ಸ್‌ಗಳಲ್ಲೂ 4K 60fps ವೀಡಿಯೊ ರೆಕಾರ್ಡಿಂಗ್ ಬೆಂಬಲಿಸುವುದು ಈ ಸೆಗ್ಮೆಂಟ್‌ನಲ್ಲಿ ದೊಡ್ಡ ಪ್ಲಸ್. Vivo T4 Pro 5G ಎಲ್ಲಾ ಪ್ರಮುಖ ಕ್ಯಾಮೆರಾಗಳಲ್ಲಿ 4K 30fps ವರೆಗೆ ಸೀಮಿತವಾಗಿದೆ. Nothing Phone (3a) Pro ಮುಖ್ಯ ಮತ್ತು ಸೆಲ್ಫಿ ಕ್ಯಾಮೆರಾಗಳಲ್ಲಿ ಮಾತ್ರ 4K ರೆಕಾರ್ಡಿಂಗ್ ನೀಡುತ್ತದೆ. ಉಳಿದ ಲೆನ್ಸ್‌ಗಳು 1080pಗೆ ಸೀಮಿತ.
ಬ್ಯಾಟರಿ ಮತ್ತು ಚಾರ್ಜಿಂಗ್: ಹೆಚ್ಚು ಕಾಲ ನಿಲ್ಲುವುದು ಯಾರು?
Vivo T4 Pro 5G ಮೂರು ಫೋನ್‌ಗಳಲ್ಲಿ ಅತಿದೊಡ್ಡ ಬ್ಯಾಟರಿ ಹೊಂದಿದ್ದು, ಅತ್ಯುತ್ತಮ ಬ್ಯಾಟರಿ ಲೈಫ್ ನೀಡುತ್ತದೆ ಮತ್ತು ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ. Motorola Edge 70 ಅಲ್ಟ್ರಾ-ಸ್ಲಿಮ್ ಬಾಡಿಯಲ್ಲೇ 5000mAh ಬ್ಯಾಟರಿ, 68W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ನೀಡುತ್ತದೆ. Nothing Phone (3a) Pro 50W ವೈರ್ಡ್ ಚಾರ್ಜಿಂಗ್ ಮಾತ್ರ ಬೆಂಬಲಿಸುತ್ತದೆ ಮತ್ತು ಬಾಕ್ಸ್‌ನಲ್ಲಿ ಚಾರ್ಜರ್ ಇಲ್ಲ. Nothing Phone (3a) Pro ಚಾರ್ಜಿಂಗ್ ವೇಗದಲ್ಲಿ ಸ್ಪರ್ಧಿಗಳಿಗೆ ಹೋಲಿಸಿದರೆ ನಿಧಾನವಾಗಿದೆ.
ಸಾಫ್ಟ್‌ವೇರ್ ಅನುಭವ ಮತ್ತು ಅಪ್ಡೇಟ್ ಪಾಲಿಸಿ
Motorola Edge 70 ಮತ್ತು Nothing Phone (3a) Pro ಕ್ಲೀನ್, ಬ್ಲೋಟ್-ರಹಿತ Android ಅನುಭವ ನೀಡುತ್ತವೆ.Vivo T4 Pro ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲ ನೀಡಿದರೂ, ಅದರ FuntouchOS ಅಷ್ಟೊಂದು ಕ್ಲೀನ್ ಅಲ್ಲ.Edge 70 Android 16 ನೊಂದಿಗೆ ಔಟ್-ಆಫ್-ದಿ-ಬಾಕ್ಸ್ ಬರುತ್ತದೆ ಮತ್ತು Vivo ಜೊತೆಗೆ ಸಮಾನ ಸಂಖ್ಯೆಯ Android ಅಪ್ಡೇಟ್‌ಗಳನ್ನು ಪಡೆಯುತ್ತದೆ. Nothing ಮತ್ತು Vivo ಎರಡೂ 6 ವರ್ಷಗಳ ಸೆಕ್ಯುರಿಟಿ ಅಪ್ಡೇಟ್‌ಗಳನ್ನು ನೀಡುತ್ತವೆ.
ಅಂತಿಮ ತೀರ್ಮಾನ: ಯಾವುದು ನಿಮ್ಮ ಬಳಕೆಗೆ ಸರಿಹೊಂದುತ್ತದೆ?
₹30,000 ಒಳಗಿನ ವಿಭಾಗದಲ್ಲಿ ಸ್ಲಿಮ್ ವಿನ್ಯಾಸ, ಶಾರ್ಪ್ ಡಿಸ್ಪ್ಲೇ, ಶಕ್ತಿಶಾಲಿ ಕ್ಯಾಮೆರಾ ಮತ್ತು ಕ್ಲಾಸ್-ಲೀಡಿಂಗ್ ವೀಡಿಯೊ ಸಾಮರ್ಥ್ಯಗಳೊಂದಿಗೆ Motorola Edge 70 ಅತ್ಯುತ್ತಮ ಆಲ್-ರೌಂಡರ್ ಆಗಿ ಹೊರಹೊಮ್ಮುತ್ತದೆ. Nothing Phone (3a) Pro ವಿಶಿಷ್ಟ ವಿನ್ಯಾಸ ಮತ್ತು ಪೆರಿಸ್ಕೋಪ್ ಕ್ಯಾಮೆರಾ ಬಯಸುವವರಿಗೆ ಸೂಕ್ತ ಆಯ್ಕೆ. Vivo T4 Pro 5G ದೀರ್ಘ ಬ್ಯಾಟರಿ ಲೈಫ್, ವೇಗದ ಚಾರ್ಜಿಂಗ್ ಮತ್ತು ಸ್ಥಿರ ಕ್ಯಾಮೆರಾ ಕಾರ್ಯಕ್ಷಮತೆ ಬಯಸುವವರಿಗೆ ಉತ್ತಮ ಆಯ್ಕೆಯಾಗುತ್ತದೆ. ಅಂತಿಮವಾಗಿ, ನಿಮ್ಮ ಆದ್ಯತೆ ವಿನ್ಯಾಸ, ವೀಡಿಯೊ, ಬ್ಯಾಟರಿ ಅಥವಾ ಕ್ಲೀನ್ ಸಾಫ್ಟ್‌ವೇರ್ ಯಾವುದು ಮುಖ್ಯವೋ ಅದರ ಆಧಾರದಲ್ಲೇ ಸರಿಯಾದ ಆಯ್ಕೆ ಮಾಡುವುದು ಉತ್ತಮ.


Click it and Unblock the Notifications








