ಪಾಪ್ ಅಪ್ ಕ್ಯಾಮರಾವಿರುವ ಬೆಸ್ಟ್ ಪ್ರೀಮಿಯಂ ಫೋನ್ ಗಳು
ಈ ಹಿಂದೆ ಲಭ್ಯವಿರದಂತಹ ಬೆಸ್ಟ್ ಆಗಿರುವ ಪ್ರೀಮಿಯಂ ಡಿಸೈನ್ ಗಳನ್ನು ಇಂದಿನ ಸ್ಮಾರ್ಟ್ ಫೋನ್ ಗಳು ಹೊಂದಿದೆ. ಅದರಲ್ಲಿ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಸ್ಲಿಮ್ ಮತ್ತು ಕಡೆಗಡಿಸಬಹುದಾದಂತಹ ಬೆಝಲ್ ಹೊಂದಿರುವ ಡಿಸ್ಪ್ಲೇ ವ್ಯವಸ್ಥೆ ಕೂಡ ಇದೆ. ನಾಚ್ ಡಿಸ್ಪ್ಲೇ, ಪಂಚ್ ಹೋಲ್ ಕಟ್ ಔಟ್ ಅಥವಾ ಪಾಪ್ ಅಪ್ ಸೆಲ್ಫೀ ಕ್ಯಾಮರಾ ಮಾಡ್ಯೂಲ್ ಗಳು ಇಂದಿನ ಟ್ರೆಂಡ್ ಅನ್ನಿಸಿವೆ. ಇದಕ್ಕಿರುವ ಪ್ರಮುಖ ಕಾರಣವೇನೆಂದರೆ ಸ್ಕ್ರೀನ್ ಜಾಗ ಗರಿಷ್ಟವಾಗಿರುತ್ತದೆ ಮತ್ತು ಹೆಚ್ಚಿನ ಟಾಸ್ಕ್ ಗಳನ್ನು ನಿರ್ವಹಿಸುವುದಕ್ಕೆ ಚೆನ್ನಾಗಿರುತ್ತದೆ. ಉದಾಹರಣೆಗೆ ವೀಡಿಯೋ ನೋಡುವುದು, ಗೇಮ್ ಗಳನ್ನು ಆಡುವುದು ಇತ್ಯಾದಿಗಳನ್ನು ಮಾಡುವುದಕ್ಕೆ ಅಧ್ಬುತವಾಗಿರುತ್ತದೆ.

ಟಾಪ್ ಅಪ್ ಸೆಲ್ಫೀ ಕ್ಯಾಮರಾ ಮಾಡ್ಯೂಲ್ ಗಳ ಬಗ್ಗೆ ಮಾತನಾಡುವುದಾದರೆ ಹಲವು ಫೋನ್ ಗಳು ಈ ಕೆಟಗರಿಯಲ್ಲಿ ಲಭ್ಯವಿದ್ದು ಅದರಲ್ಲಿ ಬೆಸ್ಟ್ ಇರುವ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಹ್ಯಾವ್ ಎ ಲುಕ್.

ಒನ್ ಪ್ಲಸ್ 7ಟಿ ಪ್ರೋ
ಒನ್ ಪ್ಲಸ್ 7ಟಿ ಪ್ರೋ ಪಾಪ್ ಅಪ್ ಸೆಲ್ಫೀ ಕ್ಯಾಮರಾ ಹೊಂದಿದೆ ಮತ್ತು ನಾಚ್ ನಿಂದ ಡಿಸ್ಪ್ಲೇ ಫ್ರೀ ಆಗಿದೆ. 16MP ಸೋನಿ IMX471 ಸೆಲ್ಫೀ ಕ್ಯಾಮರಾ ಜೊತೆಗೆ f/2.0 ಅಪರ್ಚರ್ ಪಾಪ್ ಅಪ್ ಮಾಡ್ಯೂಲ್ ನ ಒಳಗೇ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 ಗ್ಯಾಲಕ್ಸಿ ಎ ಸರಣಿಯಲ್ಲಿ ಲಭ್ಯವಿರುವ ಮೊದಲ 48ಎಂಪಿ ಕ್ಯಾಮರಾ ಸ್ಮಾರ್ಟ್ ಫೋನ್ ಆಗಿದೆ. ಪಾಪ್ ಅಪ್ ಮಾಡ್ಯೂಲ್ ನ ಒಳಗೆ ಇದರಲ್ಲಿ ಮೂರು ಕ್ಯಾಮರಾಗಳು ಇವೆ ಮತ್ತು ಸೆಲ್ಫೀ ಕ್ಯಾಮಾರಾದ ಮುಂಭಾಗದಕ್ಕೆ ರೊಟೇಟ್ ಆಗುವಂತಿರುತ್ತದೆ.

ಒಪ್ಪೋ ಕೆ3
ಒಪ್ಪೋ ಕೆ3 6.5-ಇಂಚಿನ ಬೆಝಲ್ ಲೆಸ್ ಡಿಸ್ಪ್ಲೇ ಹೊಂದಿದ್ದು ನಾಚ್ ನಿಂದ ಫ್ರೀ ಆಗಿರುತ್ತದೆ ಮತ್ತು 16ಎಂಪಿ ಸೆಲ್ಫೀ ಕ್ಯಾಮರಾ ಸೆನ್ಸರ್ ನ್ನು ಪಾಪ್ ಅಪ್ ಕ್ಯಾಮರಾ ಮಾಡ್ಯೂಲ್ ನ ಒಳಗೇ ಹೊಂದಿರುತ್ತದೆ. ಈ ಸ್ಮಾರ್ಟ್ ಫೋನ್ ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 710 SoC, 128GB ಸ್ಟೋರೇಜ್ ವ್ಯವಸ್ಥೆ ಇರುತ್ತದೆ.

ಶಿಯೋಮಿ ರೆಡ್ಮಿ ಕೆ20 ಪ್ರೋ 256GB
ಶಿಯೋಮಿ ಸಂಸ್ಥೆಯಿಂದ ಬಿಡುಗಡೆಗೊಂಡಿರುವ ಬಹಳ ದುಬಾರಿ ಫೋನ್ ಗಳಲ್ಲಿ ಒಂದೆನಿಸಿರುವ ಮತ್ತು ನೂತನ ಫೀಚರ್ ಗಳನ್ನು ಹೊಂದಿರುವ ಫೋನ್ ರೆಡ್ಮಿ ಕೆ20 ಪ್ರೋ. ಇದರಲ್ಲಿ ಗುರುತಿಸಬಹುದಾದ ಫೀಚರ್ ಎಂದರೆ ಪಾಪ್ ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ.ಇದು 20MP ಸೆಲ್ಫೀ ಕ್ಯಾಮರಾ ಜೊತೆಗೆ f/2.2 ಅಪರ್ಚರ್ ನ್ನು ಹೊಂದಿದೆ.

ವಿವೋ ವಿ15 ಪ್ರೋ 8GB RAM
ವಿವೋ ವಿ15 ಪ್ರೋ ಪಾಪ್ ಅಪ್ ಸೆಲ್ಫೀ ಕ್ಯಾಮರಾ ಸೆನ್ಸರ್ ನ್ನು ಹೊಂದಿದೆ. ಈ ಡಿವೈಸ್ ನಲ್ಲಿ 32MP ಪಾಪ್ ಅಪ್ ಕ್ಯಾಮರಾ ಮಾಡ್ಯೂಲ್ ನ್ನು ಹೊಂದಿದ್ದು ಸೆಲ್ಫೀ ಜೊತೆಗೆ f/2.0 ಅಪರ್ಚರ್ ಜೊತೆಗೆ ಕಸ್ಟಮೈಸ್ಡ್ ಪಾಪ್ ಅಪ್ ಸೌಂಡ್ಸ್ ನ್ನು ಹೊಂದಿದೆ.


Click it and Unblock the Notifications








