Home
ಮೊಬೈಲ್

ಭಾರತದಲ್ಲಿ 30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳಿವು..! ಏನೆಲ್ಲ ಫೀಚರ್ಸ್ ಇವೆ

ಕಳೆದ ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್‌ಗಳ ಬೆಲೆ ದಿನೇ ದಿನೇ ಹೆಚ್ಚುತ್ತಿದ್ದು, ಉತ್ತಮ ಫೀಚರ್ಸ್ ಹೊಂದಿರುವ ಮೊಬೈಲ್‌ಗಳನ್ನು ಪಡೆಯಲು ಗ್ರಾಹಕರು ಹೆಚ್ಚಿನ ಹಣ ಖರ್ಚು ಮಾಡುವಂತಹ ಸ್ಥಿತಿ ಎದುರಾಗಿದೆ.

ಜನರು ಸ್ಯಾಮ್ಸಂಗ್ ಗ್ಯಾಲಕ್ಸಿ, ಐಫೋನ್, ಗೋಗಲ್ ಪಿಕ್ಸೆಲ್ ಮೊಬೈಲ್‌ಗಳನ್ನು 70,000 ಸಾವಿರಕ್ಕಿಂತ ಅಧಿಕ ಹಣ ನೀಡಿ ಖರೀದಿಸುತ್ತಿದ್ದಾರೆ. ಒಂದು ವೇಳೆ ನಿಮ್ಮ ಬಳಿ ಮೊಬೈಲ್ ಕೊಳ್ಳಲು ಅಷ್ಟು ಹಣ ಇಲ್ಲದಿದ್ದರೆ ಖಂಡಿತವಾಗಿಯೂ 30,000 ರೂ ಗಳಲ್ಲಿ ಅದೇ ಫೀಚರ್ಸ್ ಹೊಂದಿರುವ ಉತ್ತಮ ಮೊಬೈಲ್‌ಗಳನ್ನು ಖರೀದಿಸಬಹುದಾಗಿದೆ.

ಭಾರತದಲ್ಲಿ 30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಬೆಸ್ಟ್ ಸ್ಮಾರ್ಟ್‌ಫೋನ್ಸ್

ನೀವು 30,000 ರೂ. ಗಳನ್ನು ಖರ್ಚು ಮಾಡಲು ಸಿದ್ಧವಿದ್ದರೆ ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಪಡೆಯಬಹುದು. ಬ್ಯಾಟರಿ ಬಾಳಿಕೆ, ಆಧುನಿಕ ತಂತ್ರಜ್ಞಾನ, ಉತ್ತಮ ಗುಣಮಟ್ಟದ ಕ್ಯಾಮೆರಾ ಹೊಂದಿರುವ ಮೊಬೈಲ್‌ಗಳನ್ನು ನೀವು ಕೇವಲ 30,000 ದಲ್ಲಿ ಖರೀದಿಸಬಹುದಾಗಿದೆ. ಅಂತಹ ಕೆಲವು ಮೊಬೈಲ್‌ಗಳ ಕುರಿತು ತಿಳಿಯಲು ಈ ಲೇಖನ ಓದಿ.

ವಿವೋ ವಿ15ಪ್ರೋ ( Vivo V15 Pro) ಈ ಸ್ಮಾರ್ಟ್‌ಫೋನ್ ಉತ್ತಮ ಗುಣಮಟ್ಟದ ಸೆಲ್ಫಿ ಕ್ಯಾಮೆರಾ ಮತ್ತು ಡಿಸ್‌ಪ್ಲೇ ಮೇಲೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ ಹಾಗೂ ಸ್ಯಾಮ್ಸಂಗ್ ಗ್ಯಾಲಕ್ಸಿ ಎ9 (Samsung Galaxy A9 ನಾಲ್ಕು ಬ್ಯಾಕ್ ಕ್ಯಾಮೆರಾಗಳಂತಹ ವೈಶಿಷ್ಟ್ಯ ಹೊಂದಿರುವ ಈ ಫೋನ್ ಗ್ರಾಹಕರಿಗೆ ಕೇವಲ 30,000 ರೂ.ಗಳಿಗೆ ಸಿಗಲಿದೆ.

30,000 ರೂ.ಗಿಂತ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ಗಳ ವಿವರ:

* ರಿಯಲ್‌ಮಿ 12ಪ್ರೋ+5ಜಿ (Realme 12 Pro+ 5G): 27,399 ರೂ. ಬೆಲೆಯ ಈ ಮೊಬೈಲ್ ಉತ್ತಮ ವಿನ್ಯಾಸದ ಜೊತೆಗೆ 6.70-inch, 2400x1080 pixels ಡಿಸ್‌ಪ್ಲೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7sಜೆನ್ ಪ್ರೊಸೆಸರ್, 12GB RAM, 256GB ಸ್ಟೋರೇಜ್ ಸಾಮಾರ್ಥ್ಯ ಹೊಂದಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 50MP+64MP+8MP ಬ್ಯಾಕ್ ಕ್ಯಾಮೆರಾ ಹಾಗೂ 32MP ಫ್ರಂಟ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

* ಒನ್‌ಪ್ಲಸ್ 11R (onePlus 11R): 29,499 ಬೆಲೆಯ ಈ ಮೊಬೈಲ್ ಆಕರ್ಷಣೀಯ ವಿನ್ಯಾಸ ಹೊಂದಿದೆ, 6.70-inch, 1080x2412 ಪಿಕ್ಸೆಲ್ ಡಿಸ್‌ಪ್ಲೇ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ಜೆನ್1 ಪ್ರೊಸೆಸರ್, 16GB RAM, 256GB ಸ್ಟೋರೇಜ್ ಸಾಮರ್ಥ್ಯ, 5000mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 50MP+8MP+2MP ಬ್ಯಾಕ್ ಕ್ಯಾಮೆರಾ ಹಾಗೂ 16MP ಫ್ರಂಟ್ ಕ್ಯಾಮೆರಾದ ವ್ಯವಸ್ಥೆ ಹೊಂದಿದೆ.

*ರೆಡ್‌ಮಿ ನೋಟ್ 12 ಪ್ರೋ+ 5G (Redmi Note 12 Pro+ 5G): 27,999 ರೂ. ಬೆಲೆಯ ಈ ಮೊಬೈಲ್ ಹಿಂಬಾಗದಲ್ಲಿ ಗ್ಲಾಸ್ ನಿಂದ ಕವರ್ ಮಾಡಲಾಗಿದೆ 120Hz ಅಮೋಲ್ಡ್ (AMOLED) ಡಿಸ್‌ಪ್ಲೇ ಹೊಂದಿದೆ, ಮೀಡಿಯಾಟೆಕ್ ಪೊಸೆಸರ್ ಒಳಗೊಂಡಿದೆ ಹಾಗೂ 12GB RAM, 256GB ಆಂತರಿಕ ಸ್ಟೋರೇಜ್ ಹೊಂದಿದೆ, 4980mAh ಸಾಮರ್ಥ್ಯದ ಬ್ಯಾಟರಿ ವ್ಯವಸ್ಥೆಯನ್ನು ಈ ಫೋನ್ ಹೊಂದಿದೆ. ಜೊತೆಗೆ 200MP+8MP+2MP ಬ್ಯಾಕ್ ಕ್ಯಾಮೆರಾ ಹಾಗೂ 16MP ಫ್ರಂಟ್ ಕ್ಯಾಮೆರಾ ಹೊಂದಿದೆ.

*ರೆಡ್‌ಮಿ ನೋಟ್ 13 ಪ್ರೋ+ 5G (Redmi Note 13 Pro+ 5G): ಇದು 29,215 ಬೆಲೆಯ ಮೊಬೈಲ್ ಇದಾಗಿದ್ದು, ಅನೇಕ ಬಗೆಯ ಫೀಚರ್ಸ್‌ಗಳನ್ನು ಹೊಂದಿದೆ ಪ್ರಮುಖವಾಗಿ 6.67 ಇಂಚಿನ 3D ಕರ್ವಡ್ ಅಮೋಲ್ಡ್ ಡಿಸ್‌ಪ್ಲೆ 120Hz ಅಡಾಪ್ಟಿವ್ ರಿಫ್ರೆಶ್‌ ರೇಟ್ ಹೊಂದಿದೆ, ಮೀಡಿಯಾಟೆಕ್ ಡೈಮನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್ ಸೌಲಭ್ಯ, 16GB RAM, 512GB ಆಂತರಿಕ ಸ್ಟೋರೇಜ್ ಸಾಮರ್ಥ್ಯ, 500mAh ಗಾತ್ರದ ಬ್ಯಾಟರಿ ಜೊತೆಗೆ 200MP+8MP+2MP ಬ್ಯಾಕ್ ಕ್ಯಾಮೆರಾ ಹಾಗೂ 16MP ಫ್ರಂಟ್ ಕ್ಯಾಮೆರಾ ಹೊಂದಿದೆ.

*ಐಕ್ಯೂ ನಿಯೋ 7 ಪ್ರೋ 5G (iQOO Neo 7 Pro 5G): 29,999 ರೂ. ಬೆಲೆಯ ಈ ಫೋನ್ 6.78-inch, 1080x2400 ಪಿಕ್ಸೆಲ್ ಡಿಸ್‌ಪ್ಲೇ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ಜೆನ್1 ಪ್ರೊಸೆಸರ್, 8GB RAM, 128GB ಆಂತರಿಕ ಸ್ಟೋರೇಜ್ 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ, 50MP + 8MP + 2MP ಬ್ಯಾಕ್ ಕ್ಯಾಮೆರಾ 16MP ಫ್ರಂಟ್ ಕ್ಯಾಮೆರಾದ ಸೌಲಭ್ಯ ಹೊಂದಿದೆ.

ಇದರ ಜೊತೆಗೆ ಹಾನರ್ 90 (honor 90), ರಿಯಲ್‌ಮಿ 11 pro+, ಕ್ಯಾಮನ್ 20 ಪ್ರೀಮಿಯರ್ 5G, ಪೊಕೊ ಎಫ್5 5G ಹಾಗೂ ಮೊಟೊರೊಲಾ ಎಡ್ಜ್ 40 ಈ ಮೊಬೈಲ್‌ಗಳು 30,000 ರೂ. ಗಳಿಗಿಂತ ಕಡಿಮೆ ದರದಲ್ಲಿ ಸಿಗುವ ಉತ್ತಮ ಫಿಚರ್ಸ ಇರುವ ಸ್ಮಾರ್ಟ್‌ಫೋನ್‌ಗಳಾಗಿವೆ.

Best Mobiles in India

English summary
You can buy mobiles with good battery life, modern technology, high quality camera in just 30,000. Read this article to know about some such mobiles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+