20,000 ರೂ. ಒಳಗಿನ ಬೊಂಬಾಟ್ 5G ಸ್ಮಾರ್ಟ್‌ಫೋನ್‌ಗಳಿವು! ಯಾವುದು ಬೆಸ್ಟ್? ಇಲ್ಲಿದೆ ಪಟ್ಟಿ
ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತಿದ್ದೀರಾ? ನಿಮ್ಮ ಬಜೆಟ್ 20 ಸಾವಿರ ರೂ. ಆಗಿದ್ರೆ ಈ ಸ್ಟೋರಿಯನ್ನು ತಪ್ಪದೇ ಓದಿ. ನಾವು ಈ ಲೇಖನದಲ್ಲಿ 20,000 ರೂ. ಒಳಗಿನ ಅತ್ಯುತ್ತಮ 5G ಮೊಬೈಲ್‌ಗಳ (Best Smartphones Under Rs 20,000 in India) ಬಗ್ಗೆ ಮಾಹಿತಿ ನೀಡಿದ್ದೇವೆ. ಇದರೊಂದಿಗೆ, ಈ ಫೋನಿನ ವೈಶಿಷ್ಟ್ಯಗಳನ್ನು ಸಹ ತಿಳಿಸಿದ್ದೇವೆ. ಈ ಫೋನ್‌ಗಳ ಡಿಸ್ಪ್ಲೇ, ಪ್ರೊಸೆಸರ್, ಸ್ಟೋರೇಜ್, ಕ್ಯಾಮೆರಾ ಮತ್ತು ಬ್ಯಾಟರಿ ಬಗ್ಗೆ ತಿಳಿದುಕೊಂಡು, ನಿಮಗೆ ಇಷ್ಟವಾದ ಮೊಬೈಲ್ ಕೊಳ್ಳಬಹುದು. ಬನ್ನಿ, ಈ ಪಟ್ಟಿಯಲ್ಲಿ ಯಾವೆಲ್ಲಾ ಫೋನ್‌ಗಳಿವೆ (Best Phones Under Rs 20,000) ತಿಳಿಯೋಣ.
20,000 ರೂ. ಒಳಗಿನ ಅತ್ಯುತ್ತಮ 5G ಫೋನ್‌ಗಳಿವು!
ಪೊಕೊ ಎಕ್ಸ್ 7 5G
ಪೊಕೊ ಇತ್ತೀಚೆಗೆ ಭಾರತದಲ್ಲಿ ಪೊಕೊ ಎಕ್ಸ್ 7 5G (POCO X7 5G) ಫೋನನ್ನು ಬಿಡುಗಡೆ ಮಾಡಿದೆ. ಈ ಫೋನಿನ ಡಿಸ್ಪ್ಲೇ ಬಗ್ಗೆ ಹೇಳುವುದಾದರೆ, ಇದು 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟ್ರಾ ಪ್ರೊಸೆಸರ್ ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮಂನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 8GB RAM ಹೊಂದಿದೆ.

ಪೊಕೊ ಎಕ್ಸ್ 7 5G ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಮೊಬೈಲ್ 5500mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 45W ಟರ್ಬೊ ಚಾರ್ಜಿಂಗ್ ಬೆಂಬಲ ಪಡೆದಿದೆ.
ರಿಯಲ್‌ಮಿ P2 ಪ್ರೊ 5G
ರಿಯಲ್‌ಮಿ P2 ಪ್ರೊ 5G (realme P2 Pro 5G) ಮೊಬೈಲ್ 6.7 ಇಂಚಿನ OLED ಬಾಗಿದ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ ಅನ್ನು 4nm ಫ್ಯಾಬ್ರಿಕೇಶನ್ ತಂತ್ರಜ್ಞಾನದಲ್ಲಿ ತಯಾರಿಸಲಾಗಿದೆ. ಕಂಪನಿಯು ಇದನ್ನು 8GB RAM ಮತ್ತು 12GB RAM ರೂಪಾಂತರಗಳಲ್ಲಿ ಪರಿಚಯಿಸಿದೆ. ಈ ಫೋನ್ 128GB ಮತ್ತು 256GB ಸ್ಟೋರೇಜ್ ಆಯ್ಕೆ ಹೊಂದಿದೆ.
ರಿಯಲ್‌ಮಿ P2 ಪ್ರೊ 5G ಫೋನ್ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಸೆಟಪ್ ಹೊಂದಿದೆ. ಇದರೊಂದಿಗೆ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ರಿಯಲ್‌ಮಿ ಈ ಫೋನನ್ನು 5200mAh ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಫೋನ್ 80W ವೇಗದ ಚಾರ್ಜಿಂಗ್ ಬೆಂಬಲ ಸಹ ಪಡೆದಿದೆ.
ನಥಿಂಗ್ ಫೋನ್ 2a 5G
ನಥಿಂಗ್ ಫೋನ್ 2a 5G (Nothing Phone (2a) 5G) ಫೋನ್ ಸಹ 20,000 ರೂ. ಬಜೆಟ್‌ನಲ್ಲಿ ಬಿಡುಗಡೆಯಾಗಿದೆ. ಇದು ನಿಮ್ಮ ಬಜೆಟ್‌ಗೆ ಉತ್ತಮ ಆಯ್ಕೆಯಾಗಿದೆ. ಈ ಮೊಬೈಲ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 1,084 × 2,412 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ನಥಿಂಗ್ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊಸೆಸರ್ ಹೊಂದಿದೆ. ಇದು 8GB RAM ಮತ್ತು 12GB RAM ರೂಪಾಂತರಗಳಲ್ಲಿ ಬರುತ್ತದೆ. ಈ ಫೋನಿನಲ್ಲಿ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ನಥಿಂಗ್ ಫೋನ್ 2a 5G ಮೊಬೈಲ್ OIS ಬೆಂಬಲದೋಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ 5000mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ 13 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ.
ಇನ್ಫಿನಿಕ್ಸ್ ನೋಟ್ 40 ಪ್ರೊ 5G
ಇನ್ಫಿನಿಕ್ಸ್ ನೋಟ್ 40 ಪ್ರೊ 5G (Infinix Note 40 Pro 5G) ಈ ವಿಭಾಗದಲ್ಲಿ ಉತ್ತಮ ಫೋನ್ ಆಗಿದೆ. ಇದು 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 1,300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 120Hz ರಿಫ್ರೆಶ್ ದರದ ಬೆಂಬಲವನ್ನು ಪಡೆದಿದೆ. ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ರಕ್ಷಣೆ ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7020 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 8GB RAM + 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊಬೈಲ್ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಈ ಮೊಬೈಲ್ 14 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ.


Click it and Unblock the Notifications








