2026 ರಲ್ಲಿ 15 ಸಾವಿರಕ್ಕಿಂತ ಕಡಿಮೆ ಬೆಲೆಯ ಟಾಪ್ 7 ಸ್ಮಾರ್ಟ್‌ಫೋನ್‌ಗಳು!
2026ರಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಹೆಚ್ಚು ಹಣ ಖರ್ಚು ಮಾಡದೇ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸುವುದು ಈಗ ಕಷ್ಟವೇನಲ್ಲ. ಇಂದಿನ ಭಾರತೀಯ ಮಾರುಕಟ್ಟೆಯಲ್ಲಿ ₹15,000 ಒಳಗಿನ ಬಜೆಟ್ ಸ್ಮಾರ್ಟ್‌ಫೋನ್‌ಗಳು ದೊಡ್ಡ ಬ್ಯಾಟರಿ, ವೇಗವಾದ ಪ್ರೊಸೆಸರ್, ಹೈ ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಉತ್ತಮ ಕ್ಯಾಮೆರಾ ಸಾಮರ್ಥ್ಯಗಳೊಂದಿಗೆ ಲಭ್ಯವಿವೆ. ವಿಶೇಷವಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ದಿನನಿತ್ಯದ ಬಳಕೆದಾರರಿಗೆ ಈ ಸೆಗ್ಮೆಂಟ್ ಅತ್ಯಂತ ಉಪಯುಕ್ತವಾಗಿದ್ದು, ಬಲೆಟ್ ಬೆಲೆಯಲ್ಲೇ ಎಲ್ಲವೂ ದೊರೆಯುತ್ತಿದೆ.

ನೀವು ಗೇಮಿಂಗ್‌ಗೆ ಫೋನ್ ಹುಡುಕುತ್ತಿದ್ದೀರಾ, ಸೋಷಿಯಲ್ ಮೀಡಿಯಾ ಮತ್ತು ವೀಡಿಯೊ ಸ್ಟ್ರೀಮಿಂಗ್‌ಗೆ ಒಳ್ಳೆಯ ಡಿಸ್ಪ್ಲೇ ಬೇಕಾ ಅಥವಾ ಕ್ಯಾಮೆರಾ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೀರಾ ಎಂಬುದರ ಮೇಲೆ ಸ್ಮಾರ್ಟ್‌ಫೋನ್ ಆಯ್ಕೆಗಳು ಬದಲಾಗುತ್ತವೆ. ಈ ಹಿನ್ನೆಲೆಯಲ್ಲಿ, 2026ರಲ್ಲಿ ಭಾರತದಲ್ಲಿ ₹15,000 ಒಳಗೆ ಖರೀದಿಸಬಹುದಾದ ಉತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ನಾವು ಇಲ್ಲಿ ವಿವರವಾಗಿ ಪರಿಚಯಿಸುತ್ತಿದ್ದೇವೆ. Vivo, Realme, iQOO, Redmi, Samsung ಮತ್ತು POCO ಮೊದಲಾದ ಜನಪ್ರಿಯ ಬ್ರಾಂಡ್‌ಗಳು ಈ ಸೆಗ್ಮೆಂಟ್‌ನಲ್ಲಿ ಉತ್ತಮ ಆಯ್ಕಗಳನ್ನು ನೀಡುತ್ತಿವೆ.
Redmi 15C 5G (₹12,499)
Redmi 15C 5G ಕಡಿಮೆ ಬೆಲೆಯಲ್ಲೇ ಉತ್ತಮ ಪ್ರದರ್ಶನ ಮತ್ತು ದೀರ್ಘ ಬ್ಯಾಟರಿ ಬ್ಯಾಕ್‌ಅಪ್ ನೀಡುವ ಫೋನ್ ಆಗಿದೆ. MediaTek Dimensity 6300 ಪ್ರೊಸೆಸರ್‌ನೊಂದಿಗೆ ಬಂದಿರುವ ಈ ಫೋನ್ 6.9 ಇಂಚಿನ HD+ ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ. 6,000mAh ಬ್ಯಾಟರಿ ಮತ್ತು 33W ಫಾಸ್ಟ್ ಚಾರ್ಜಿಂಗ್ ದೈನಂದಿನ ಬಳಕೆಗೆ ಸಾಕಷ್ಟು ಅನುಕೂಲಕರವಾಗಿದೆ.
Vivo T4x 5G (₹14,999 - ಬ್ಯಾಂಕ್ ಆಫರ್ ಸೇರಿ)
ಶಕ್ತಿಶಾಲಿ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿ ಬೇಕೆಂದವರಿಗೆ Vivo T4x 5G ಒಳ್ಳೆಯ ಆಯ್ಕೆ. 6,500mAh ಬ್ಯಾಟರಿಯೊಂದಿಗೆ 44W ವೇಗದ ಚಾರ್ಜಿಂಗ್ ಇದರಲ್ಲಿ ಲಭ್ಯವಿದೆ. ಕೇವಲ 30 ನಿಮಿಷಗಳಲ್ಲಿ 40% ಚಾರ್ಜ್ ಆಗುವ ಸಾಮರ್ಥ್ಯ ಇದಕ್ಕೆ ಇದೆ. 50MP ಮುಖ್ಯ ಕ್ಯಾಮೆರಾ ಮತ್ತು Aura Light ಫೀಚರ್ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋಗೆ ಸಹಾಯ ಮಾಡುತ್ತದೆ. ಜೊತೆಗೆ Dimensity 7300 ಚಿಪ್‌ಸೆಟ್, 120Hz FHD+ ಡಿಸ್ಪ್ಲೇ ಮತ್ತು IP64 ರೇಟಿಂಗ್ ಈ ಫೋನ್‌ನ ವಿಶೇಷತೆಗಳು.
OPPO K13x 5G (₹12,499)
ಬಲಿಷ್ಠ ವಿನ್ಯಾಸ ಮತ್ತು ನಂಬಿಕಾರ್ಹ ಬ್ಯಾಟರಿಗಾಗಿ OPPO K13x 5G ಗಮನ ಸೆಳೆಯುತ್ತದೆ. MIL-STD 810-H ಪ್ರಮಾಣಿತ ಶಾಕ್ ರೆಸಿಸ್ಟೆಂಟ್ ಬಾಡಿಯೊಂದಿಗೆ ಈ ಫೋನ್ ಬರುತ್ತದೆ. 6.67 ಇಂಚಿನ 120Hz LCD ಡಿಸ್ಪ್ಲೇ ಮತ್ತು Gorilla Glass 7i ರಕ್ಷಣೆಯಿದೆ. 50MP ಕ್ಯಾಮೆರಾ, Dimensity 6300 ಪ್ರೊಸೆಸರ್ ಮತ್ತು 6,000mAh ಬ್ಯಾಟರಿ (45W ಫಾಸ್ಟ್ ಚಾರ್ಜಿಂಗ್) ಇದರ ಪ್ರಮುಖ ಅಂಶಗಳು.

Samsung Galaxy M17 5G (₹13,999)
ದೀರ್ಘಕಾಲ ಬಳಕೆಗೆ ಸೂಕ್ತವಾದ ಫೋನ್ ಬೇಕಾದರೆ Samsung Galaxy M17 5G ಉತ್ತಮ ಆಯ್ಕೆ. ಆರು ವರ್ಷಗಳ Android ಅಪ್‌ಡೇಟ್ ಮತ್ತು ಭದ್ರತಾ ಪ್ಯಾಚ್‌ಗಳನ್ನು Samsung ನೀಡುತ್ತಿರುವುದು ಈ ಬೆಲೆ ವಿಭಾಗದಲ್ಲಿ ಅಪರೂಪ. Super AMOLED FHD+ ಡಿಸ್ಪ್ಲೇ ಮತ್ತು Exynos 1330 ಪ್ರೊಸೆಸರ್‌ನಿಂದ ದಿನನಿತ್ಯದ ಬಳಕೆಗೆ ಸ್ಥಿರ ಕಾರ್ಯಕ್ಷಮತೆ ಸಿಗುತ್ತದೆ.

Realme P3x 5G (₹12,999)
ಬಲಿಷ್ಠ ಬ್ಯಾಟರಿ ಮತ್ತು ದೀರ್ಘ ಬಳಕೆಯ ಮೇಲೆ ಒತ್ತು ನೀಡುವವರಿಗೆ Realme P3x 5G ಸೂಕ್ತವಾಗಿದೆ. 6,000mAh ಬ್ಯಾಟರಿ ಮತ್ತು 45W ಫಾಸ್ಟ್ ಚಾರ್ಜಿಂಗ್ ಇದರ ಪ್ರಮುಖ ಆಕರ್ಷಣೆ. MediaTek Dimensity 6400 ಚಿಪ್‌ಸೆಟ್ ಮತ್ತು 50MP AI ಕ್ಯಾಮೆರಾ ಸಾಮಾನ್ಯ ಬಳಕೆಗೆ ಉತ್ತಮ ಅನುಭವ ನೀಡುತ್ತದೆ.
iQOO Z10x 5G (₹14,999)
iQOO Z10x 5G ಶಕ್ತಿಶಾಲಿ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿಯೊಂದಿಗೆ ಆಲ್‌ರೌಂಡರ್ ಫೋನ್ ಆಗಿದೆ. 6.7 ಇಂಚಿನ FHD+ ಡಿಸ್ಪ್ಲೇ, 120Hz ರಿಫ್ರೆಶ್ ರೇಟ್, Dimensity 7300 ಚಿಪ್‌ಸೆಟ್ ಮತ್ತು 6,500mAh ಬ್ಯಾಟರಿ (44W ಚಾರ್ಜಿಂಗ್) ಇದರ ಪ್ರಮುಖ ವಿಶೇಷತೆಗಳು. 50MP ಕ್ಯಾಮೆರಾ ದೈನಂದಿನ ಫೋಟೋಗ್ರಫಿಗೆ ಸಹಾಯಕವಾಗಿದೆ.
POCO M7 Plus (₹12,999)
ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ POCO M7 Plus ಅತ್ಯುತ್ತಮ ಆಯ್ಕೆಯಾಗಿದೆ. 6.9 ಇಂಚಿನ ದೊಡ್ಡ FHD+ ಡಿಸ್ಪ್ಲೇ ಮತ್ತು 144Hz ರಿಫ್ರೆಶ್ ರೇಟ್ ಇದನ್ನು ವಿಶೇಷವಾಗಿಸುತ್ತದೆ. Snapdragon 6s Gen 3 ಪ್ರೊಸೆಸರ್, 50MP ಕ್ಯಾಮೆರಾ ಮತ್ತು 7,000mAh ಬ್ಯಾಟರಿ ದೀರ್ಘ ಬಳಕೆಗೆ ನೆರವಾಗುತ್ತದೆ. ಜೊತೆಗೆ ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಕೂಡ ಲಭ್ಯವಿದೆ.

ಒಟ್ಟಿನಲ್ಲಿ, 2026ರಲ್ಲಿ ₹15,000 ಒಳಗೆ ಲಭ್ಯವಿರುವ ಬಜೆಟ್ ಸ್ಮಾರ್ಟ್‌ಫೋನ್‌ಗಳು ಬೆಲೆಗೂ ಹೆಚ್ಚು ಮೌಲ್ಯ ನೀಡುತ್ತಿವೆ. ನಿಮ್ಮ ಬಳಕೆ, ಆದ್ಯತೆ ಮತ್ತು ಬಜೆಟ್‌ಗೆ ತಕ್ಕಂತೆ ಆಯ್ಕೆ ಮಾಡಿದರೆ, ದೀರ್ಘಕಾಲ ತೃಪ್ತಿದಾಯಕ ಅನುಭವ ಪಡೆಯಬಹುದು. ಸೂಚನೆ: ಇಲ್ಲಿ ಉಲ್ಲೇಖಿಸಿರುವ ಬೆಲೆಗಳು ಲೇಖನ ಬರೆಯುವ ಸಮಯದ ಪ್ರಕಾರವಾಗಿದ್ದು, ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆ ಇದೆ. ಖರೀದಿಸುವ ಮೊದಲು ಬ್ರಾಂಡ್‌ನ ಅಧಿಕೃತ ವೆಬ್‌ಸೈಟ್ ಅಥವಾ ಆನ್‌ಲೈನ್ ಸ್ಟೋರ್‌ನಲ್ಲಿ ಇತ್ತೀಚಿನ ಬೆಲೆ ಪರಿಶೀಲಿಸುವುದು ಉತ್ತಮ.


Click it and Unblock the Notifications








