Home
ಮೊಬೈಲ್

Big Billion Days 2025: ಇತ್ತೀಚಿನ POCO ಫೋನ್‌ಗಳ ಮೇಲೆ ಭರ್ಜರಿ ಆಫರ್ಸ್!

ಫ್ಲಿಪ್‌ಕಾರ್ಟ್‌ನ ಬಹು ನಿರೀಕ್ಷಿತ 'ಬಿಗ್ ಬಿಲಿಯನ್ ಡೇಸ್ 2025' ಮಾರಾಟವು ಇದೇ ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಮತ್ತು ಬ್ಲಾಕ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ 22 ರಂದು ವಿಶೇಷ ಅವಕಾಶ ಸಿಗಲಿದೆ. ಈ ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಆಕರ್ಷಿಸಲು POCO ತನ್ನ 'ಫೆಸ್ಟಿವ್ ಮ್ಯಾಡ್ನೆಸ್' ಅಭಿಯಾನವನ್ನು ಘೋಷಿಸಿದೆ. ಇದರಿಂದ POCO ಸ್ಮಾರ್ಟ್‌ಫೋನ್‌ಗಳು ಭಾರೀ ರಿಯಾಯಿತಿಯಲ್ಲಿ ದೊರೆಯುವುದು ಖಚಿತವಾಗಿದೆ.

ಈ ಮಾರಾಟದಲ್ಲಿ POCO F7, POCO X7 Pro ಮತ್ತು POCO M7 Plus ಸೇರಿದಂತೆ ಹಲವಾರು ಪ್ರಮುಖ ಮಾದರಿಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುವುದಾಗಿ ಘೋಷಿಸಲಾಗಿದ್ದು, ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಅಧಿಕೃತ ಬೆಲೆ ವಿವರಗಳನ್ನು ಸೆಪ್ಟೆಂಬರ್ 15 ರಂದು ಸಂಜೆ 7 ಗಂಟೆಗೆ ಅನಾವರಣಗೊಳಿಸಲಾಗುವುದು ಎಂದು ಹೇಳಲಾಗಿದೆ. ಅದಕ್ಕೂ ಮೊದಲೇ ಪ್ರಮುಖ POCO ಪೋನ್‌ಗಳ ಮೇಲೆ ಎಷ್ಟು ಕೊಡುಗೆ ದೊರೆಯಬಹುದು ಎಂಬುದನ್ನು ನೋಡೋಣ ಬನ್ನಿ.

POCO F7: ಫ್ಲಾಗ್‌ಶಿಪ್ ಸಾಮರ್ಥ್ಯದೊಂದಿಗೆ ಕೈಗೆಟುಕುವ ಬೆಲೆ
ಫ್ಲಾಗ್‌ಶಿಪ್ ಮಟ್ಟದ ಫೀಚರ್ಸ್ ನೀಡುವ ಮೂಲಕ ಮಧ್ಯಮ ಶ್ರೇಣಿಯ ಫೋನ್‌ಗಳ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿರುವ POCO F7 ಫೋನ್ ಪ್ರಸ್ತುತ 12GB RAM ಮತ್ತು 256GB ಮಾದರಿಗೆ ₹31,999 ಬೆಲೆ ಹೊಂದಿದೆ.

ಈ ಮಾರಾಟದ ಸಂದರ್ಭದಲ್ಲಿ ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳೊಂದಿಗೆ ಇದರ ಬೆಲೆ ₹27,000-₹28,000ಕ್ಕೆ ಇಳಿಯುವ ನಿರೀಕ್ಷೆ ಇದೆ. ಇದು ಈ ಬೆಲೆ ವಿಭಾಗದಲ್ಲಿ ಅತ್ಯುತ್ತಮ ಪ್ರೊಸೆಸರ್ ಮತ್ತು ಬ್ಯಾಟರಿ ಸಾಮರ್ಥ್ಯವನ್ನು ಹುಡುಕುತ್ತಿರುವ ಗ್ರಾಹಕರಿಗೆ ಸೂಕ್ತ ಆಯ್ಕೆಯಾಗಿದೆ.

Big Billion Days 2025: ಇತ್ತೀಚಿನ POCO ಫೋನ್‌ಗಳ ಮೇಲೆ ಭರ್ಜರಿ ಆಫರ್ಸ್!

POCO F7 ಶಕ್ತಿಶಾಲಿ Snapdragon 8s Gen 4 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಅತ್ಯುತ್ತಮ ಗೇಮಿಂಗ್ ಮತ್ತು ಮಲ್ಟಿ-ಟಾಸ್ಕಿಂಗ್ ಅನುಭವವನ್ನು ನೀಡುತ್ತದೆ. ದೀರ್ಘಕಾಲದ ಬಳಕೆಗೆ ಸೂಕ್ತವಾದ 7550mAh ಸಾಮರ್ಥ್ಯದ ಬ್ಯಾಟರಿ ಇದರ ಮತ್ತೊಂದು ವಿಶೇಷತೆ.

POCO X7 Pro: ಮಿಡ್-ರೇಂಜ್‌ನಲ್ಲಿ ಅತ್ಯುತ್ತಮ ಆಯ್ಕೆ
ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ POCO X7 Pro ಫೋನ್ ಆರಂಭದಲ್ಲಿ ₹27,999 ಬೆಲೆಗೆ ಪರಿಚಯಗೊಂಡಿತ್ತು.

ಈ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಆಫರ್‌ಗಳೊಂದಿಗೆ ₹20,000 ಕ್ಕಿಂತ ಕಡಿಮೆಯಾಗಬಹುದೆಂದು ಅಂದಾಜಿಸಲಾಗಿದೆ. ₹18,999ಕ್ಕೆ ಇದು ದೊರೆಯುವ ಸಾಧ್ಯತೆ ಇದೆ.

ಇದು MediaTek Dimensity 8400 Ultra ಪ್ರೊಸೆಸರ್ ಹೊಂದಿದ್ದು, ಇದು ದೈನಂದಿನ ಕಾರ್ಯಗಳು ಮತ್ತು ಸುಧಾರಿತ ಅಪ್ಲಿಕೇಶನ್‌ಗಳಿಗೆ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಈ ಫೋನ್ 6,550mAh ಬ್ಯಾಟರಿ ಮತ್ತು ವೇಗದ 90W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

POCO M7 Plus: ಬಜೆಟ್-ಸ್ನೇಹಿ ಬಳಕೆದಾರರಿಗಾಗಿ
ಬಜೆಟ್ ಬೆಲೆಯಲ್ಲಿ ಉತ್ತಮ ಫೋನ್ ಹುಡುಕುತ್ತಿರುವವರಿಗೆ POCO M7 Plus 5G ಅತ್ಯುತ್ತಮ ಆಯ್ಕೆಯಾಗಬಹುದು. ಏಕೆಂದರೆ, ₹13,999 ರೂ.ಗೆ ಬಿಡುಗಡೆಯಾಗಿದ್ದ ಈ ಫೋನ್ ಮಾರಾಟದ ಸಮಯದಲ್ಲಿ ಎಲ್ಲಾ ರಿಯಾಯಿತಿಗಳ ನಂತರ ₹10,999 ಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.

ಇದು Snapdragon 6s Gen 3 ಪ್ರೊಸೆಸರ್ ಅನ್ನು ಹೊಂದಿದ್ದು, ವೆಬ್ ಬ್ರೌಸಿಂಗ್, ಸಾಮಾಜಿಕ ಮಾಧ್ಯಮ ಮತ್ತು ವಿಡಿಯೋ ವೀಕ್ಷಣೆಯಂತಹ ಸಾಮಾನ್ಯ ಬಳಕೆಗೆ ಉತ್ತಮ ಕಾರ್ಯಕ್ಷಮತೆ ನೀಡುತ್ತದೆ. 7000mAh ಸಾಮರ್ಥ್ಯದ ಬೃಹತ್ ಬ್ಯಾಟರಿಯು ದೀರ್ಘಕಾಲದವರೆಗೆ ಫೋನ್ ಬಳಸಲು ಸಹಕಾರಿಯಾಗಿದೆ.

ಈ ಬೆಲೆಯಲ್ಲಿ, POCO M7 Plus 5G ಫೀನ್ ತನ್ನ ದೀರ್ಘಾವಧಿಯ ಬ್ಯಾಟರಿ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯಿಂದಾಗಿ ಬಜೆಟ್ ವಿಭಾಗದಲ್ಲಿ ಅತ್ಯಂತ ಆಕರ್ಷಕ ಫೋನ್ ಎಂದು ಪರಿಗಣಿಸಲ್ಪಡಬಹುದು

ಈ ಮುಖ್ಯ ಮಾದರಿಗಳ ಜೊತೆಗೆ, POCO M7 Pro 5G ಮತ್ತು POCO C75 5G ನಂತಹ ಇತರ ಮಾದರಿಗಳ ಮೇಲೂ ರಿಯಾಯಿತಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಈ ಮಾರಾಟದ ಸಮಯದಲ್ಲಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ರಿಯಾಯಿತಿಗಳು, ಹಳೆಯ ಫೋನ್ ವಿನಿಮಯ ಕೊಡುಗೆಗಳು ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ EMI ಆಯ್ಕೆಗಳು ಕೂಡ ಲಭ್ಯವಿರುತ್ತವೆ. ಹಾಗಾಗಿ, ಈ ಹಬ್ಬದ ಸೀಸನ್‌ನಲ್ಲಿ POCO ಫೋನ್ ನಿಮ್ಮ ಕೈಸೇರುವ ಅವಕಾಶ ಹೆಚ್ಚು.

Best Mobiles in India

English summary
Get the newest POCO smartphones at unbeatable prices during Flipkart’s Big Billion Days Sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+