'ಹಾನರ್ 9ಎನ್' ಭಾರೀ ಬೆಲೆ ಇಳಿಕೆಗೆ ಹೆದರಿದ ಶಿಯೋಮಿ!..ಇದು ಬೆಸ್ಟ್ ಡೀಲ್!!
ಆಪಲ್ ನೋಚ್ ಮಾದರಿಯ 5.84 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ, 4 ಇನ್ 1 ಲೈಟ್ ಫ್ಯೂಶನ್ ತಂತ್ರಜ್ಞಾನವಿರುವ 16ಎಂಪಿ ಸಾಮರ್ಥ್ಯದ ಕ್ಯಾಮೆರಾ ಮತ್ತು ಆಕ್ಟ ಕೋರ್ ಹೈಸಿಲಿಕಾನ್ ಕಿರಿನ್ 559 ಪ್ರೊಸೆಸರ್‌ನಂತಹ ಮಿಡ್ ಹೈ ಎಂಡ್ ಫೀಚರ್ಸ್‌ಗಳನ್ನು 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಬೆಲೆ ಇದೀಗ ಕೇವಲ 8,999 ರೂ.ಗಳಿಂದ ಆರಂಭವಾಗಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡುವ ನಿರೀಕ್ಷೆಯಲ್ಲಿ 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಬೆಲೆ ಭಾರೀ ಇಳಿಕೆಯಾಗಿದೆ.
ಹೌದು, ರೆಡ್‌ಮಿ ನೋಟ್ 7 ಪ್ರೊ ಬಿಡುಗಡೆ ನಂತರ, ಬಹು ಬೇಡಿಕೆಯಲ್ಲಿರುವ ಹಾನರ್ ಸರಣಿಯ 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಬೆಲೆಯನ್ನು ಹಾನರ್ ಕಂಪೆನಿ ಕಡಿತಗೊಳಿಸಿದೆ. ಭಾರತದ ಮೊಬೈಲ್ ಪ್ರಿಯರ ನಿರೀಕ್ಷೆಗೂ ಮೀರಿದ ಫೀಚರ್ಸ್ ಹೊತ್ತು ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದ 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಬೆಲೆ ಭಾರೀ ಇಳಿಕೆಯಾಗಿರುವುದು ಮಧ್ಯಮ ವರ್ಗದ ಮೊಬೈಲ್ ಖರೀದಿದಾರರು ಸ್ಮಾರ್ಟ್‌ಫೋನ್ ಒಂದನ್ನು ಖರೀದಿಸಲು ಉತ್ತಮ ಸಮಯ ಇದಾಗಿದೆ.

ಪ್ರಸ್ತುತ ಸಮಯದಲ್ಲಿ ಗ್ರಾಹಕರ ಜೇಬಿಗೆ ಹೊರೆಯಾಗದಂತಿರುವ ಸ್ಮಾರ್ಟ್‌ಫೋನ್ ಆಗಿ 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಕಾಣುತ್ತಿದ್ದು, ಇದೀಗ ಖರೀದಿಸಿಸಬಹುದಾದ ಟಾಪ್ ಬೆಸ್ಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಹಾಗಾದರೆ, 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಹೇಗಿದೆ?, ಇದೀಗ ಹಾನರ್ 9ಎನ್' ಸ್ಮಾರ್ಟ್‌ಫೋನಿನ ಪ್ರಸ್ತುತ ಬೆಲೆಗಳು ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಹಾನರ್ 9ಎನ್' ಡಿಸ್‌ಪ್ಲೇ ಮತ್ತು ವಿನ್ಯಾಸ
ಮೊದಲೇ ಹೇಳಿದಂತೆ ಹಾನರ್ 9ಎನ್' ಸ್ಮಾರ್ಟ್‌ಪೋನ್ ಆಪಲ್ ನೋಚ್ ಮಾದರಿಯ5.84 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 19:9 ಅನುಪಾತದಲ್ಲಿರುವ ಈ ಡಿಸ್‌ಪ್ಲೇ 2280 x 1080 ಪಿಕ್ಸೆಲ್ಸ್ ಸಾಮರ್ಥ್ಯವನ್ನು ಹೊಂದಿದೆ. ಮೇಲೆ ನೋಚ್ ವಿನ್ಯಾಸವನ್ನು ಹೊಂದಿದ್ದರೂ 79% ಸ್ಕ್ರೀನ್ ಟು ಬಾಡಿ ಬಿಗ್ ಸ್ಕ್ರೀನ್ ವೀವ್ ಅನುಭವವನ್ನು ನೀಡಲಿದೆ. ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ವಿಡಿಯೋ ಮತ್ತು ಗೇಮಿಂಗ್ ಪ್ರಿಯರಿಗೆ
ಹಾನರ್ 9ಎನ್' ಸ್ಮಾರ್ಟ್‌ಪೋನ್ ಬಳಸುವಾಗ, ಒಂದು ಕೈಯಲ್ಲಿ ಆರಾಮವಾಗಿ ಸರಿಹೊಂದುವಂತಹ ಡಿಸ್‌ಪ್ಲೇ ಗಾತ್ರದ ಜೊತೆಗೆ, ವೀಡಿಯೋ ಪ್ಲೇಬ್ಯಾಕ್ ಮತ್ತು ಗೇಮಿಂಗ್ ಅನುಭವಕ್ಕೂ ಸ್ಮಾರ್ಟ್‌ಫೋನ್ ಹೇಳಿಸಿದಂತಿದೆ. ಮೊಬೈಲ್ ಅಂಚಿನ ಕಡಿಮೆ ಅನುಭವವನ್ನು ನೀಡುವ ಡಿಸ್‌ಪ್ಲೇ ಗೇಮಿಂಗ್ ಸಮಯದಲ್ಲಿ ಹೆಚ್ಚುವರಿ ಮಾಹಿತಿಯನ್ನು ಪ್ರದರ್ಶಿಸಲು ಪರಿಣಾಮಕಾರಿಯಾಗಿ ಸಂಘಟಿತವಾಗಿದೆ. ಹಾಗಾಗಿ, ಮೊಬೈಲ್ ಬಳಕೆದಾರರ ಅನುಭವಕ್ಕಾಗಿ ಬಳಕೆಯಾಗುವ ಡಿಸ್‌ಪ್ಲೇ ಇದಾಗಿದೆ ಎಂದು ಹೇಳಬಹುದು.

'ಐ ಕಂಫರ್ಟ್ ವೀವ್'
2280 x 1080 ಪಿಕ್ಸೆಲ್ಸ್ ಸಾಮರ್ಥ್ಯವಿರುವ ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು ಆರಾಮದಾಯಕ ಓದುವಿಕೆ ಅನುಭವ ನೀಡುವ ತಂತ್ರಜ್ಞಾನವನ್ನು ಹೊಂದಿದೆ. ನಿಮ್ಮ ನೆಚ್ಚಿನ ಪುಸ್ತಕಗಳನ್ನು ಓದಲು ನಿಮ್ಮ ಕಣ್ಣುಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುವ ತಂತ್ರಜ್ಞಾನ ಇದಾಗಿದೆ. ನೇರವಾಗಿ ಸೂರ್ಯನ ಬೆಳಕಿನಲ್ಲಿ ಅನುಕೂಲಕರವಾದ ಬಳಕೆದಾರ ಅನುಭವವನ್ನು ನೀಡುವ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

ಅದ್ಬುತ ಮಲ್ಟಿಟಾಸ್ಕ್ ಸಪೋರ್ಟೆಡ್
ಹಾನರ್ 9ಎನ್' ಸ್ಮಾರ್ಟ್‌ಪೋನ್ ಯಾವುದೇ ಸಮಸ್ಯೆಗಳಿಲ್ಲದೆ ಮಲ್ಟಿಟಾಸ್ಕ್ ಕಾರ್ಯನಿರ್ವಹಿಸುತ್ತದೆ. ನೀವು ಆರಾಮವಾಗಿ ಪರದೆಯ ಮೇಲೆ ಎರಡು ಅಪ್ಲಿಕೇಶನ್‌ಳನ್ನು ಬಳಸಬಹುದಾಗಿದೆ. ಉದಾಹರಣೆಗೆ, ನೀವು ವೀಡಿಯೊ ವೀಕ್ಷಿಸುವಾಗಲೂ ಪಠ್ಯವನ್ನು ಟೈಪ್ ಮಾಡಬಹುದು ಅಥವಾ ನಿಮ್ಮ ಫೇಸ್‌ಬುಕ್ ಟೈಮ್ಲೈನ್ ಮೂಲಕ ನೀವು ಸ್ಕ್ರಾಲ್ ಮಾಡುತ್ತಿರುವಾಗಲೂ ಕೂಡ ಟೈಪ್ ಮಾಡಬಹುದು.

ಹಿಂಭಾಗದಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾ
ಹಾನರ್ 9N ಸ್ಮಾರ್ಟ್‌ಫೋನ್ ಬೆಸ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನೀವು ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಇದು 13 MP ಪ್ರೈಮರಿ ಸೆನ್ಸಾರ್ ನೊಂದಿಗೆ 2 MP ಸೆಕೆಂಡರಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರಿಂದಾಗಿ ನೀವು ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಇದಲ್ಲದೇ ಫ್ರಿ ಲೋಡ್ ಕ್ಯಾಮೆರಾ ಆಯ್ಕೆಗಳಿದ್ದು, ಇದು ನಿಮಗೆ ಪ್ರೋ ಮಾದರಿಯಲ್ಲಿ ಫೋಟೋಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ.

ಸೆಲ್ಫಿಗಾಗಿಯೇ ಬ್ಯೂಟಿಫಿಕೇಷನ್
ಸ್ಯಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಸೆಲ್ಪಿ ಬ್ಯೂಟಿ ಮೋಡ್ ಅನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಲಾಗಿರುವುದನ್ನು ನೀವು ಕಾಣಬಹುದಾಗಿದೆ. ಮುಂಭಾಗದಲ್ಲಿ 16ವMP ಸೆಲ್ಪೀ ಕ್ಯಾಮೆರಾವನ್ನು ನೀಡಲಾಗಿದೆ. ಇದು ಬೆಸ್ಟ್ ಮಾದರಿಯ ಫೋಟೋಗಳನ್ನು ಸೆರೆಹಿಡಿಯಲು ಹೊಸ ಮಾದರಿಯ ಕ್ಯಾಮೆರಾ UI ಅನ್ನು ಹೊಂದಿದೆ.

ಬೆಸ್ಟ್ ಮೋಡ್‌ಗಳು
ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಪ್ರೋಟೆಟ್ ಮೋಡ್, ಫೇಸ್ ಐಡಿಟಿಫಿಕೇಷನ್ ಮೋಡ್, ಬೋಕೆ ಮೋಡ್, ಜೆಂಡರ್ ಬ್ಯೂಟಿ ಮೋಡ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಬ್ಯೂಟಿ ಮೋಡ್ ಫೋಟೊವನ್ನು ಎಡಿಟ್ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಬೇರೆ ಮಾದರಿಯಲ್ಲಿ ಮತ್ತು ಪುರುಷರಿಗೆ ಬೇರೆ ಮಾದರಿಯಲ್ಲಿ ಎಫೆಕ್ಟ್ ಅನ್ನು ನೀಡಲಿದೆ. ಇದಲ್ಲದೇ ಫೋಟೋ ಕ್ಲಿಕಿಸಲು ವಿವಿಧ ಮಾದರಿಯ ಅವಕಾಶವನ್ನು ನೀಡಲಾಗಿದೆ.

ಸ್ಮಾರ್ಟ್ ಫೇಸ್ ಲಾಕ್
ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಫೀಂಗರ್ ಪ್ರಿಂಟ್ ಸ್ಕ್ಯಾನರ್ ನೊಂದಿಗೆ ಫೇಸ್ ಲಾಕ್ ಆನ್ನು ಸಹ ನೀಡಲಾಗಿದೆ. ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಲಾಕ್ ಅನ್ನು ಒಪನ್ ಮಾಡಬಹುದಾಗಿದೆ. ಅಲ್ಲದೇ ನಿಮ್ಮ ಡೇಟಾವನ್ನು ಕೇವಲ ಫೇಸ್‌ಲಾಕ್ ಮೂಲಕ ಮಾತ್ರವೇ ಓಪನ್ ಆಗುವಂತೆ ಮಾಡಬಹುದಾಗಿದೆ.

ವೈ-ಫೈ ಬ್ರಿಡ್ಜ್
ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನ್ ಇನ್ನಷ್ಟು ವಿಶೇಷತೆಗಳನ್ನು ಹೊಂದಿದೆ. ಇವುಗಳಲ್ಲಿ ಮುಖ್ಯವಾಗಿರುವುದು ವೈ-ಫೈ ಬ್ರಿಡ್ಜ್ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ವೈ-ಫೈ ಕನೆಕ್ಟಿವಿಟಿಯನ್ನು ಹಾಟ್ ಸ್ಪಾಟ್ ಮಾದರಿಯಲ್ಲಿ ಅದನ್ನು ಸ್ನೇಹಿತರೊಂದಿಗೆ ಶೇರ್ ಮಾಡಬಹುದಾಗಿದೆ. ಅಲ್ಲದೇ ಇದು ಗೇಮಿಂಗ್ ಸಂದರ್ಭದಲ್ಲಿ ನಿಮಗೆ ಸಾಕಷ್ಟು ಸಹಾಯವನ್ನು ಮಾಡಲಿದೆ.

ಡ್ಯುಯಲ್ ಬ್ಲೂಟೂತ್
ಡ್ಯುಯಲ್ ಬ್ಲೂಟೂತ್ ಸೇವೆಯನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದು ಒಂದೇ ಸಂದರ್ಭದಲ್ಲಿ ಎರಡು ಡಿವೈಸ್‌ಗಳನ್ನು ಕನೆಕ್ಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಒಂದೇ ಸಂದರ್ಭದಲ್ಲಿ ಬ್ಲೂಟೂತ್ ಹೆಡ್ ಸೆಟ್ ಮತ್ತು ಸ್ಮಾರ್ಟ್‌ವಾಚ್ ಎರಡನ್ನು ಒಟ್ಟಿಗೆ ಬಳಸುವ ಅವಕಾಶವನ್ನು ಮಾಡಿಕೊಡಲಿದೆ.

ರೈಡ್ ಮೋಡ್ ಸಹ ಇದೆ
ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಟೂ ವೀಲ್ಹರ್ ರೈಡರ್ಸ್‌ಗಾಗಿಯೇ ರೈಡ್ ಮೋಡ್ ವೊಂದನ್ನು ನೀಡಲಾಗಿದೆ. ಇದರಿಂದಾಗಿ ಟೂ ವೀಲ್ಹರ್ ರೈಡಿಂಗ್ ಸೇಫ್ ಆಗಲಿದೆ. ಇದಲ್ಲದೇ ಪೇಟಿಎಂ ಪೇ ಆಯ್ಕೆಯನ್ನು ನೀಡಲಾಗಿದೆ. ಇದು ಒಂದೇ ಟಚ್ ನಲ್ಲಿ ಪೇಮೆಂಟ್ ಮಾಡುವ ಅವಕಾಶವನ್ನು ನೀಡುತ್ತಿದೆ.

ಬೆಲೆ ಮತ್ತು ಲಭ್ಯತೆ?
ಕಳೆದ ಜುಲೈ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುದ್ದ ಹಾನರ್ 9N ಸ್ಮಾರ್ಟ್‌ಫೋನ್ 4GBRAM ಮತ್ತು 64GB ಮೆಮೊರಿ ಹಾಗೂ 3GB ಮತ್ತು 32GB ಮೆಮೊರಿ ವೆರಿಯಂಟ್‌ಗಳಲ್ಲಿ ಮಾರಾಟಕ್ಕಿದೆ. ಭಾರತದ ನಂ.1 ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೊನ್ ಬೆಲೆ ಈಗ 8,999 ರೂಪಾಯಿಗಳಿಂದ ಶುರುವಾಗಿದ್ದು, 4GBRAM ಮತ್ತು 64GB ಮೆಮೊರಿ ವೆರಿಯಂಟ್ ಫೋನ್ ಬೆಲೆ ಕೇವಲ 9,999 ರೂಪಾಯಿಗಳಾಗಿವೆ.


Click it and Unblock the Notifications








