Home
ಮೊಬೈಲ್

ದೀಪಾವಳಿ ಧಮಾಕಾ: ಕ್ಯಾಮೆರಾ ಕಿಂಗ್ Vivo T4 Ultra ಖರೀದಿಗೆ ಇದುವೇ ಸಕಾಲ!

ಒಂದು ಅತ್ಯುತ್ತಮ ಕ್ಯಾಮೆರಾ ಆಧಾರಿತ ಸ್ಮಾರ್ಟ್‌ಫೋನ್ ಅನ್ನು ಉತ್ತಮ ಬೆಲೆಯಲ್ಲಿ ಖರೀದಿಸಬೇಕು ಎಂದು ಯೋಚಿಸಿದ್ದರೆ ಈ ಆಫರ್ ಅನ್ನು ಮಿಸ್‌ಮಾಡಲೇಬೇಡಿ. ಏಕೆಂದರೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಕ್ಯಾಮೆರಾ ಆಧಾರಿತ Vivo T4 Ultra ಸ್ಮಾರ್ಟ್‌ಪೋನ್ ಒಂದು ಅದ್ಭುತ ಕೊಡುಗೆಯಾಗಿ ಪರಿಣಮಿಸಿದೆ. ಕ್ಯಾಮೆರಾ ಮತ್ತು ಕಾರ್ಯಕ್ಷಮತೆಯ ವಿಚಾರದಲ್ಲಿ ರಾಜಿಯಾಗದಂತೆ, ಯುವಗ್ರಾಹಕರ ಮನಗೆದ್ದಿರುವ ಈ ಸ್ಮಾರ್ಟ್‌ಫೋನ್ ಈಗ ಆಕರ್ಷಕ ರಿಯಾಯಿತಿಗಳು ಮತ್ತು ಬ್ಯಾಂಕಿಂಗ್ ಕೊಡುಗೆಗಳೊಂದಿಗೆ ಲಭ್ಯವಿದೆ. ಇದು ಮಧ್ಯಮ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಮಾಡಲು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

Vivo T4 Ultra: ಬೆಲೆ ಮತ್ತು ಆಕರ್ಷಕ ರಿಯಾಯಿತಿಗಳು
ಹೌದು, ಕಳೆದ ಜೂನ್ ತಿಂಗಳಿನಲ್ಲಿ ದೇಶದಲ್ಲಿ Vivo T4 Ultra ಸ್ಮಾರ್ಟ್‌ಪೊನ್ ಬಿಡುಗಡೆಯಾದಾಗ ₹40,999 ರೂ. ಬೆಲೆ ಹೊಂದಿತ್ತು. ಇದೀಗ Flipkart ಮಾರಾಟದಲ್ಲಿ ನೇರವಾಗಿ 12% ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರಿಂದ ಫೋನಿನ ಬೆಲೆ ₹35,999ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಲಭ್ಯವಿರುವ ಬ್ಯಾಂಕಿಂಗ್ ಮತ್ತು ವಿನಿಮಯ (ಎಕ್ಸ್‌ಚೇಂಜ್) ಕೊಡುಗೆಗಳು ಈ ಸ್ಮಾರ್ಟ್‌ಫೋನ್ ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ದೊರೆಯುವಂತೆ ಮಾಡುತ್ತವೆ. ಗ್ರಾಹಕರು,
Axis, HDFC, ಮತ್ತು SBI ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಖರೀದಿಸಿದರೆ ₹2,000 ಹೆಚ್ಚುವರಿ ರಿಯಾಯಿತಿ ಪಡೆಯಬಹುದು.
Flipkart ನ Axis Bank ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 5% ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.
ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ₹35,340 ವರೆಗೆ ವಿನಿಮಯ ಕೊಡುಗೆಯೂ ದೊರೆಯಬಹುದು. ಇದು ಗರಿಷ್ಠ ವಿನಿಮಯ ಮೌಲ್ಯವಾಗಿದ್ದು, ನಿಮ್ಮ ಹಳೆಯ ಫೋನಿನ ಸ್ಥಿತಿಯನ್ನು ಅವಲಂಬಿಸಿರುತ್ತದೆ.
₹3,705 ರೂಪಾಯಿಗಳ ಮಾಸಿಕ ಕಂತುಗಳ ಮೂಲಕ (No-Cost EMI) ಫೋನ್ ಖರೀದಿಸುವ ಅವಕಾಶವೂ ಇದೆ.

ದೀಪಾವಳಿ ಧಮಾಕಾ: ಕ್ಯಾಮೆರಾ ಕಿಂಗ್ Vivo T4 Ultra ಖರೀದಿಗೆ ಇದುವೇ ಸಕಾಲ!

Vivo T4 Ultraಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ Vivo T4 Ultra ಒಂದು ಅತ್ಯುತ್ತಮ ಮಿಡ್‌ರೇಂಜ್ ಫೀಚರ್ಸ್ ಹೊಂದಿರುವ ಸಾಧನವಾಗಿ ಹೊರಹೊಮ್ಮಿದೆ. ಇದು ಪ್ರಬಲವಾದ MediaTek Dimensity 9300+ ಪ್ರೊಸೆಸರ್ಹೊಂದಿದ್ದು, ಗೇಮಿಂಗ್, ಭಾರೀ ಆ್ಯಪ್‌ಗಳ ಬಳಕೆ ಮತ್ತು ಮಲ್ಟಿಟಾಸ್ಕಿಂಗ್ ಅನ್ನು ಅತಿ ವೇಗವಾಗಿ ನಿರ್ವಹಿಸುತ್ತದೆ. ಇದರ 6.67-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ 120Hz ರಿಫ್ರೆಶ್ ದರವನ್ನು ಹೊಂದಿದ್ದು, ಸಿನಿಮಾ ನೋಡುವಾಗ ಅಥವಾ ಗೇಮ್ ಆಡುವಾಗ ಸ್ಪಷ್ಟ ಮತ್ತು ರೋಮಾಂಚಕ ವೀಕ್ಷಣೆಯ ಅನುಭವ ನೀಡುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಇದು ನಿಜಕ್ಕೂ "ಅನ್‌ಸ್ಟಾಪಬಲ್". ಈ ಫೋನ್ ಹಿಂಭಾಗದಲ್ಲಿ 50MP ಮುಖ್ಯ ಸಂವೇದಕ, 8MP ಅಲ್ಟ್ರಾ-ವೈಡ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 100X ವರೆಗಿನ ಜೂಮ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಮುಂಭಾಗದಲ್ಲಿರುವ 32MP ಸೆಲ್ಫಿ ಕ್ಯಾಮರಾ, ಪ್ರತಿ ಕ್ಷಣವನ್ನೂ ಅತ್ಯುತ್ತಮ ಗುಣಮಟ್ಟದಲ್ಲಿ ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದರ 5500 mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಬೆಂಬಲವು ದಿನವಿಡೀ ನಿಮ್ಮನ್ನು ಸಂಪರ್ಕದಲ್ಲಿರಿಸುತ್ತದೆ.

ಈ ಮಢಲಿನ ಎಲ್ಲಾ ಕೊಡುಗೆಗಳನ್ನು ಪರಿಗಣಿಸಿದರೆ, Vivo T4 Ultra ಸ್ಮಾರ್ಟ್‌ಫೋನ್ ಖರೀದಿಗೆ ಇದು ನಿಜಕ್ಕೂ ಸುಸಮಯ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉನ್ನತ ಶ್ರೇಣಿಯ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್, ಸೀಮಿತ ಅವಧಿಯ ಆಫರ್‌ಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದೆ. ದೀಪಾವಳಿ ಪ್ರಯುಕ್ತ ನಿಮ್ಮ ಕನಸಿನ ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ, Vivo T4 Ultra ಅನ್ನು ಖಂಡಿತವಾಗಿಯೂ ಪರಿಗಣಿಸಬಹುದು. ಈ ಕೊಡುಗೆಗಳು ನಿಮ್ಮ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತವೆ ಎಂಬುದರಲ್ಲಿ ಸಂದೇಹವಿಲ್ಲ ಎಂಬುದು ನನ್ನ ಸ್ವಂತ ಅಭಿಪ್ರಾಯ.

Best Mobiles in India

English summary
Celebrate this Diwali with stunning photos and unbeatable savings — the Vivo T4 Ultra brings flagship-level camera performance at a festive price!. check here all the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+