ಬಿಜೆಪಿಯಿಂದ ಬಾಜಾಪಾ ಸಮ್ವದ್ ಸೇತು ಅಪ್ಲಿಕೇಶನ್

Written By:

ವಾಟ್ಸಾಪ್‌ಗೆ ಸಮಾನವಾಗಿರುವ ಮಲ್ಟಿ ಮೀಡಿಯಾ ಮೆಸೇಜಿಂಗ್ ಸೇವೆಯನ್ನು ಬಿಜೆಪಿ (ಭಾರತೀಯ ಜನತಾ ಪಾರ್ಟಿ) ಆರಂಭಿಸುವ ನಿಟ್ಟಿನಲ್ಲಿದೆ. ತನ್ನ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಈ ಅಪ್ಲಿಕೇಶನ್ ಅನ್ನು ಬಿಜೆಪಿ ಹೊರತರುವ ನಿಟ್ಟಿನಲ್ಲಿದೆ.

"ನಾವು ಕೂಡ ವಾಟ್ಸಾಪ್‌ನಂತೆಯೇ ಮಲ್ಟಿಮೀಡಿಯಾ ಸಂದೇಶ ಸೇವೆಯನ್ನು ಅಭಿವೃದ್ಧಿಪಡಿಸುತ್ತಿದ್ದು ಇದನ್ನು ಬಾಜಾಪಾ ಸಮ್ವದ್ ಸೇತು ಎಂದು ಕೆರಯಲಾಗಿದೆ" ಎಂದು ಬಿಜೆಪಿಯ ರಾಜ್ಯ ತಂತ್ರಜ್ಞಾನ ಮಾಹಿತಿ ಸೇವೆಯ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಚುನಾವಣಾ ಹೊಸ ತಂತ್ರ ಮೆಸೇಜಿಂಗ್ ಸೇವೆ

ಲೋಕ ಸಭೆ ಮತ್ತು ಅಸೆಂಬ್ಲಿ ಚುನಾವಣೆಯ ಸಂದರ್ಭಗಳಲ್ಲಿ, ಪಕ್ಷವು ಹೆಚ್ಚು ಸಮಯ ವಾಟ್ಸಾಪ್ ವೇದಿಕೆಯನ್ನು ಬಳಸಿಕೊಂಡಿತ್ತು, ಹೆಚ್ಚು ಸಮಯ ಅದರಲ್ಲಿ ಸಂದೇಶಗಳು ರವಾನೆಯಾಗಿದ್ದರಿಂದ ಯುವ ಜನರು ಅದನ್ನು ನೋಡುವುದನ್ನೇ ಬಿಟ್ಟು ಬಿಟ್ಟರು. ಹೆಚ್ಚಿನ ಯುವಜನರು ನಮ್ಮ ಸಂದೇಶವನ್ನು ನೋಡಬೇಕಾಗಿದ್ದು ಅದಕ್ಕಾಗಿ ನಮ್ಮದೇ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.

ಈ ವ್ಯವಸ್ಥೆಯನ್ನು ಇನ್ನೂ ಪರೀಕ್ಷಿಸಲಾಗುತ್ತಿದ್ದು ಒಮ್ಮೆ ಯಶಸ್ವಿಯಾಯಿತೆಂದರೆ ಇದನ್ನು ಸ್ಥಳೀಯ ಚುನಾವಣೆಗಿಂತ ಮೊದಲು ಲಾಂಚ್ ಮಾಡುವುದೆಂದು ಅವರು ತಿಳಿಸಿದ್ದಾರೆ. ಪಠ್ಯ ವಿನಿಮಯ, ಆಡಿಯೋ ವೀಡಿಯೋ ಮತ್ತು ಫೋಟೋಗಳ ಹಂಚಿಕೆ ಹೀಗೆ ಬಹಳಷ್ಟನ್ನು ಈ ಅಪ್ಲಿಕೇಶನ್ ಬಳಸಿಕೊಂಡು ಮಾಡಬಹುದಾಗಿದೆ.

ಜನರ ಅತ್ಯುತ್ತಮ ಸೇವೆಗಾಗಿ ಈ ಅಪ್ಲಿಕೇಶನ್ ನಾವು ಆರಂಭಿಸುತ್ತಿದ್ದು ಈ ಸೇವೆಯ ಸದುಪಯೋಗವನ್ನು ಜನರು ಹೆಚ್ಚು ಪ್ರಮಾಣದಲ್ಲಿ ಮಾಡಬೇಕೆಂಬುದೇ ನಮ್ಮ ಆಶಯವಾಗಿದೆ ಬಿಜೆಪಿ ಸದಸ್ಯರಲ್ಲದೆ ಈ ಅಧಿಕೃತ ಆಪ್ ಸೇವೆಯನ್ನು ಜನಸಾಮಾನ್ಯರು ಬಳಸಬಹುದಾಗಿದೆ ಎಂದವರು ತಿಳಿಸಿದ್ದಾರೆ.

Read more about:
English summary
This article tells about BJP to Launch WhatsApp-Like Messaging Service: Bhajapa Samvad Setu before local body election.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot