Home
ಮೊಬೈಲ್

ಬ್ಲ್ಯಾಕ್ ಬೆರಿ ಕರ್ವ್ ಮೊಬೈಲ್ ಖರೀದಿಸಲು ಸಿದ್ಧರಾಗಿ

By Super
ಬ್ಲ್ಯಾಕ್ ಬೆರಿ ಕರ್ವ್ ಮೊಬೈಲ್ ಖರೀದಿಸಲು ಸಿದ್ಧರಾಗಿ

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಬ್ಲ್ಯಾಕ್ ಬೆರಿಗೆ ಉತ್ತಮ ಬೆಂಬಲವಿದೆ. ಇತ್ತೀಚೆಗಷ್ಟೆ ಬ್ಲ್ಯಾಕ್ ಬೆರಿ ಕಂಪನಿ ಬ್ಲ್ಯಾಕ್ ಬೆರಿ ಕರ್ವ್ 9370 ಮತ್ತು ಕರ್ವ್ 9870 ಎಂಬ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿದೆ.

ಬ್ಲ್ಯಾಕ್ ಬೆರಿ ಕರ್ವ್ 9370 ಮೊಬೈಲ್ GSM ಅಥವಾ CDMA ಡ್ಯೂಯಲ್ ಮೋಡ್ ಮೊಬೈಲಾಗಿದೆ. ಬ್ಲ್ಯಾಕ್ ಬೆರಿ ಕರ್ವ್ 9870 ಮೊಬೈಲ್ ಬ್ಲ್ಯಾಕ್ ಬೆರಿ 7 ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ. ಈ ಆಪರೇಟಿಂಗ್ ಸಿಸ್ಟಮ್ ವೆಬ್ ಕಿಟ್ ಸೆಕೆಂಡ್ ಜೆನೆರೇಷನ್ ಬ್ರೌಸರ್ ಹೊಂದಿರುವುದು ವಿಶೇಷವಾಗಿದೆ. ಹಳೆಯ ಬ್ಲ್ಯಾಕ್ ಬೆರಿ 6 ಆಪರೇಟಿಂಗ್ ಸಿಸ್ಟಮ್ ಗಿಂತ ಶೇಕಡಾ 40 ರಷ್ಟು ಹೆಚ್ಚು ವೇಗವನ್ನು ಬ್ಲ್ಯಾಕ್ ಬೆರಿ 7 ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ.

ಬ್ಲ್ಯಾಕ್ ಬೆರಿ ಕರ್ವ್ 9370 ಮೊಬೈಲ್ 2.44 ಇಂಚಿನ ಡಿಸ್ಪ್ಲೇ ಹೊಂದಿದ್ದು, 360x480 ಪಿಕ್ಸಲ್ ರೆಸೊಲ್ಯೂಷನ್ ಪಡೆದುಕೊಂಡಿದೆ. ಎರಡೂ ಮೊಬೈಲ್ ಗಳಲ್ಲೂ ಸಂಪರ್ಕಕ್ಕೆಂದು ವೈ-ಫೈ, GPS ನೀಡಲಾಗಿದೆ. 5 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ ಫ್ಲಾಶ್ ಸೌಲಭ್ಯವನ್ನೂ ಮೊಬೈಲ್ ಗಳಲ್ಲಿ ಅಳವಡಿಸಲಾಗಿದೆ.

ತೆಳ್ಳಗೆ, ಕ್ಯಾಂಡಿ ಬಾರ್ ವಿನ್ಯಾಸದಲ್ಲಿರುವ ಈ ಮೊಬೈಲ್ ಗಳು ಕಪ್ಪು ಮತ್ತು ಸಿಲ್ವರ್ ಬಣ್ಣದ ಮಿಶ್ರಣದಲ್ಲಿ ವಿಶೇಷವಾಗಿ ಮೂಡಿಬಂದಿದೆ. ಉದ್ಯಮಿಗಳನ್ನು ಉದ್ದೇಶವಾಗಿಟ್ಟುಕೊಂಡು ಈ ಮೊಬೈಲ್ ಗಳನ್ನು ಪರಿಚಯಿಸಲಾಗಿದೆ. ಏಕೆಂದರೆ ಪ್ರಯಾಣ ಮಾಡುವಾಗಲೂ ಕೂಡ ಮೇಲ್, ಆಫೀಸ್ ಮಾಹಿತಿಗಳನ್ನು ರವಾನಿಸುವುದು ಈ ಮೊಬೈಲಿನಿಂದ ಸಾಧ್ಯವಾಗಲಿದೆ. ಜೊತೆಗೆ ಇದರಲ್ಲಿನ ಕ್ವೆರ್ಟಿ ಕೀ ಬೋರ್ಡ್ ಟೈಪ್ ಮಾಡುವ ವಿಭಿನ್ನ ಅನುಭವವನ್ನು ನೀಡಲಿದೆ.

ಟ್ರ್ಯಾಕ್ ಪ್ಯಾಡ್ ಕೂಡ ಮೊಬೈಲ್ ಗಳಲ್ಲಿ ಲಭ್ಯವಿದ್ದು, ಬಳಕೆದಾರರಿಗೆಂದು ಅನೇಕ ಅಪ್ಲಿಕೇಶನ್ ಗಳನ್ನೂ ಬ್ಲ್ಯಾಕ್ ಬೆರಿ ನೀಡಿದೆ. ಇದನ್ನು ಸುಲಭವಾಗಿ ಮೊಬೈಲಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಉದ್ಯಮಿಗಳಿಗೆಂದೇ ಪ್ರತ್ಯೇಕ ಅಪ್ಲಿಕೇಶನ್, ಮನರಂಜನೆ ಬಯಸುವವರಿಗೆಂದೇ ಪ್ರತ್ಯೇಕ ಅಪ್ಲಿಕೇಶನ್ ಲಭ್ಯವಿದೆ. ಜೊತೆಗೆ ಸಾಮಾಜಿಕ ತಾಣಗಳ ಆಯ್ಕೆಯನ್ನೂ ನೀಡಲಾಗಿದೆ. ಆದರೆ ಈ ಎರಡೂ ಮೊಬೈಲ್ ಗಳ ಬೆಲೆ ನಿಖರವಾಗಿ ತಿಳಿದುಬಂದಿಲ್ಲ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+