ಬ್ಲಾಕ್ ಬೆರಿಯಿಂದ ಬ್ಲಾಕ್ ಗೋಸ್ಟ್ ಸ್ಮಾರ್ಟ್ ಫೋನ್ ಬಿಡುಗಡೆ ಶೀಘ್ರ..!
ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತೀರಾ ಹಿಂದುಳಿದಿರುವ ಬ್ಲಾಕ್ ಬೆರಿ ಮತ್ತೊಂದು ಸುಂದರ ಸ್ಮಾರ್ಟ್ ಫೋನ್ ನೊಂದಿಗೆ ಕಾಣಿಸಿಕೊಳ್ಳಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕ್ವರ್ಟಿ ಕೀಪ್ಯಾಡ್ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿ ಸೋಲು ಕಂಡಿರುವ ಬ್ಲಾಕ್ ಬೆರಿ, ಈ ಬಾರಿ ಹೊಸತನದೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಲೀಕ್ ಆಗಿರುವ ಫೋಟೋದಲ್ಲಿ ಸ್ಮಾರ್ಟ್ ಫೋನ್ ಹೆಸರು ಲಭ್ಯವಾಗಿಲ್ಲ, ಆದರೆ ವಿನ್ಯಾಸದ ಬಗ್ಗೆ ಮಾಹಿತಿ ದೊರೆತಿದೆ.

ಸದ್ಯ ಲಭ್ಯವಾಗಿರುವ ಲೀಕ್ ಮಾಹಿತಿಯ ಪ್ರಕಾರ ಬ್ಲಾಕ್ ಬೆರಿ ನೂತನ ಫೋನ್ ಅನ್ನು ಗೊಸ್ಟ್ ಫೋನ್ ಎಂದು ಕರೆಯಾಗುತ್ತಿದ್ದು, ಕಳೆದ ವರ್ಷದಿಂದಲೇ ಬ್ಲಾಕ್ ಬೆರಿ ಈ ಸ್ಮಾರ್ಟ ಫೋನ್ ಅನ್ನು ಅಭಿವೃದ್ಧಿ ಮಾಡಲು ಶ್ರಮಿಸುತ್ತಿತ್ತು, ಇಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಆಗಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಎಲ್ಲಾ ವಿಶೇಷತೆಗಳನ್ನು ಈ ಸ್ಮಾರ್ಟ್ ಫೋನಿನಲ್ಲಿ ನಾವು ಕಾಣಬಹುದಾಗಿದ್ದು, ಭಾರತದಲ್ಲಿಯೇ ಮೊದಲ ಬಾರಿಗೆ ಈ ಸ್ಮಾರ್ಟ್ ಪೋನ್ ಬಿಡುಗಡೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬ್ರೆಜಿಲ್ ಲೈಸ್ ವಿನ್ಯಾಸವಿರುವ ಸ್ಮಾರ್ಟ್ ಫೋನ್ ಬ್ಲಾಕ್ ಬಣ್ಣದಲ್ಲಿ ಮಾರಾಟವಾಗಲಿದೆ.
ಇದು ನೋಡಲು ಒನ್ ಪ್ಲಸ್ 5T ಮಾದರಿಯಲ್ಲಿದ್ದು, ವಿಶೇಷತೆಗಳು, ಕ್ಯಾಮೆರಾ, ಡಿಸ್ ಪ್ಲೇ ಕುರಿತಾದ ಯಾವುದೇ ಮಾಹಿತಿಯನ್ನು ಬ್ಲಾಕ್ ಬೆರಿ ಬಿಟ್ಟು ಕೊಟ್ಟಿಲ್ಲ. ಒಟ್ಟಿನಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನ ಇರುವಿಕೆಯನ್ನು ಈ ಸ್ಮಾರ್ಟ್ ಪೋನ್ ಮೂಲಕ ಪ್ರಸ್ತುತ ಪಡಿಸಲಿದೆ ಎನ್ನವು ಮಾತು ಕೇಳಿಬಂದಿದೆ.
ಶೀಘ್ರವೇ ಈ ಸ್ಮಾರ್ಟ್ ಫೋನ್ ಕುರಿತಾದ ಎಲ್ಲಾ ಮಾಹಿತಿಗಳನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡಲಿದ್ದೇವೆ, ಮಾರುಕಟ್ಟೆಯಲ್ಲಿ ಹೊಸ ಹೊಸ ಆವಿಷ್ಕಾರವನ್ನು ಮಾಡಿರುವ ಬ್ಲಾಕ್ ಬೆರಿ ಈ ಸ್ಮಾರ್ಟ್ ಪೋನ್ ಮೂಲಕ ಹೊಸದಾಗಿ ಏನನ್ನು ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








