ಬ್ಲ್ಯಾಕ್ ಬೆರಿಯ ಎರಡು ಹೊಸ ಮೊಬೈಲ್ ಗಳಿವು

Posted By: Staff
ಬ್ಲ್ಯಾಕ್ ಬೆರಿಯ ಎರಡು ಹೊಸ ಮೊಬೈಲ್ ಗಳಿವು

RIM ಬ್ಲ್ಯಾಕ್ ಬೆರಿ ಮೊಬೈಲ್ ಗಳು ವಿನೂತನ ಶೈಲಿಯಿಂದ ಮಾರುಕಟ್ಟೆಯಲ್ಲಿ ತನ್ನದೇ ಛಾಪನ್ನು ಮೂಡಿಸಿದೆ. ವಿಶೇಷ ವಿನ್ಯಾಸ, ಟಚ್ ಸ್ಕ್ರಿನ್ ಡಿಸ್ಪ್ಲೇ ಮತ್ತು ಆಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡಿರುವ ಈ ಮೊಬೈಲ್ ಗಳು ಜನರಿಗೆ ಅಚ್ಚುಮೆಚ್ಚು.

ಕೆಲವು ದಿನಗಳ ಹಿಂದಷ್ಟೇ RIM ಎರಡು ಬ್ಲ್ಯಾಕ್ ಬೆರಿ ಮೊಬೈಲ್ ಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿತ್ತು.  ಬ್ಲ್ಯಾಕ್ ಬೆರಿ ಲಂಡನ್ ಮತ್ತು ಬ್ಲ್ಯಾಕ್ ಬೆರಿ ಮಿಲನ್ ಎಂಬ ಎರಡು ಹೊಸ ಮೊಬೈಲ್ ಗಳ ಬಗ್ಗೆ ಕೆಲವೇ ಮಾಹಿತಿಗಳು ದೊರೆತಿದೆ.

ಬ್ಲ್ಯಾಕ್ ಬೆರಿ ಮಿಲನ್ ಬ್ಲ್ಯಾಕ್ ಬೆರಿ 7 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಮಿಲನ್ ಮೊಬೈಲ್ ಸ್ಲೈಡರ್ ವಿನ್ಯಾಸವನ್ನು ಪಡೆದುಕೊಂಡಿದೆ. ಟಚ್ ಸ್ಕ್ರೀನ್ ಬೆಂಬಲಿತವಾಗಿರುವ ಮೊಬೈಲ್ ನಲ್ಲಿ ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಲೈಟ್ ಸೆನ್ಸಾರ್ ಕೂಡ ಅಳವಡಿಸಲಾಗಿದೆ.

ಬ್ಲಾಕ್ ಬೆರಿ ಲಂಡನ್ ಮೊಬೈಲ್ 1.5 GHz TI OMAP ಪ್ರೊಸೆಸರ್ ಮತ್ತು 1 ಜಿಬಿ RAM ಸಹಾಯದಿಂದ ಕಾರ್ಯ ನಿರ್ವಹಿಸಲಿದೆ. ಬ್ಲ್ಯಾಕ್ ಬೆರಿ ಲಂಡನ್ ಉತ್ತಮ ಕ್ಯಾಮೆರಾ ಹೊಂದಿರುವುದಾಗಿ ತಿಳಿದುಬಂದಿದೆ. ಈ ಮೊಬೈಲ್ 8 ಮೆಗಾ ಪಿಕ್ಸಲ್ ಕ್ಯಾಮೆರಾ ಪಡೆದುಕೊಂಡಿದೆ ಎಂದು, ಇನ್ನೊಂದು ಮೂಲದಿಂದ 5 ಮೆಗಾ ಪಿಕ್ಸಲ್ ಕ್ಯಾಮೆರಾ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತು ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಅಷ್ಟೇ ಅಲ್ಲ, ಈ ಮೊಬೈಲ್ ನಲ್ಲಿ 16 ಜಿಬಿವರೆಗೂ ಆಂತರಿಕ ಸಾಮರ್ಥ್ಯ ಇದೆ ಎನ್ನಲಾಗಿದೆ.

ಎರಡೂ ಮೊಬೈಲಿನಲ್ಲೂ ಉತ್ತಮ ಸಾಮರ್ಥ್ಯದ ಸೆಕೆಂಡರಿ ಕ್ಯಾಮೆರಾ ಇದ್ದು, ಮೊಬೈಲ್ ಗಳಲ್ಲಿ ಅತಿ ವೇಗದ ಇಂಟರ್ನೆಟ್ ಸಂಪರ್ಕ ಸಾಧ್ಯವಾಗಲಿದೆ. ಈ ಬ್ಲ್ಯಾಕ್ ಬೆರಿ ಮೊಬೈಲ್ ಗಳು 3ಜಿ ಸಂಪರ್ಕ ಬೆಂಬಲಿಸಲಿದೆ. 802.11 ವೈ-ಫೈ ಮತ್ತು ಇನ್ನಿತರ ಸಂಪರ್ಕ ಸಾಮರ್ಥ್ಯವನ್ನು ಈ ಮೊಬೈಲ್ ಗಳಲ್ಲಿ ಅಳವಡಿಸಲಾಗಿದೆ.

ಗೂಗಲ್ ಮತ್ತು ಸಾಮಾಜಿಕ ತಾಣಗಳ ಅಪ್ಲಿಕೇಶನ್ ಗಳ ಆಯ್ಕೆ ಎರಡೂ ಮೊಬೈಲ್ ಗಳಲ್ಲಿದೆ. ಆದರೆ ಈ ಮೊಬೈಲ್ ಗಳ ಇನ್ನಿತರ ಲಕ್ಷಣಗಳ ಬಗ್ಗೆ ಮತ್ತು ಬೆಲೆ ಕುರಿತು ನಿಖರ ಮಾಹಿತಿ ತಿಳಿದುಬಂದಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot