ಹೊಸ ಬ್ಲ್ಯಾಕ್‌ಬೆರ್ರಿ ಆಂಡ್ರಾಯ್ಡ್ ಫೋನ್ ಖರೀದಿಸಲು ಈಗಲೇ ರೆಡಿಯಾಗಿ!!..ಏಕೆ?

|

ಒಂದು ಕಾಲದಲ್ಲಿ ನೋಕಿಯಾ ಮೊಬೈಲ್‌ಗಳಿಗೆ ಸೆಡ್ಡುಹೊಡೆದು ನಿಂತಿದ್ದ ಬ್ಲ್ಯಾಕ್‌ ಬೆರ್ರಿ ಸ್ಮಾರ್ಟ್‌ಫೋನ್‌ಗಳು ನೋಕಿಯಾದ ಜೊತೆಯಲ್ಲಿಯೇ ಕಾಲಘಟ್ಟದ ಹಿಂದೆ ಸರಿದಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಆಂಡ್ರಾಯ್ಡ್ ಮತ್ತು ಫುಲ್‌ಟಚ್ ಸ್ಕ್ರೀನ್‌ಗಳು ಈ ಎರಡು ಕಂಪೆನಿಗಳನ್ನು ಮುಚ್ಚಿಹಾಕಿದವು ಎಂದರೆ ತಪ್ಪಾಗಲಾರದು.!!

ಕ್ವಾರ್ಟಿ ಕೀ ಪ್ಯಾಡ್‌ ಮೂಲಕ ಮೊಬೈಲ್‌ ಫೋನ್‌ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ಬ್ಲ್ಯಾಕ್‌ ಬೆರ್ರಿ ಇದೀಗ ಪೂರ್ಣ ಪ್ರಮಾಣ ಟಚ್‌ಸ್ಕ್ರೀನ್‌ ಇರುವ ಬ್ಲ್ಯಾಕ್‌ಬೆರಿ ಆಂಡ್ರಾಯ್ಡ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಹಾಗಾದರೆ, ಬ್ಲ್ಯಾಕ್‌ ಬೆರ್ರಿ ಫೋನ್ ಹೇಗಿರಲಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನೋಕಿಯಾ ಯಶಸ್ಸಿನ ಹಿಂದೆ!!

ನೋಕಿಯಾ ಯಶಸ್ಸಿನ ಹಿಂದೆ!!

ನೋಕಿಯಾ ಕಂಪೆನಿ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಂದ ಮತ್ತೆ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟು ಯಶಸ್ವಿಯಾಗಿದ್ದು, ಇದೇ ಯಶಸ್ಸನ್ನು ಪಡೆಯಲು ಕೆನಡಾ ಮೂಲದ ಬ್ಲ್ಯಾಕ್‌ ಬೆರ್ರಿ ಕಂಪೆನಿ ಕೂಡ ಮುಂದಾಗಿದೆ.! ಆಂಡ್ರಾಯ್ಡ್ ಮತ್ತು ಫುಲ್‌ಟಚ್ ಸ್ಕ್ರೀನ್ ಫೋನ್‌ಗಳಿಂದ ಬ್ಲ್ಯಾಕ್‌ ಬೆರ್ರಿ ತನ್ನ ಗತ ವೈಭವವನ್ನು ಮರಳಿ ಗಳಿಸುವ ಯತ್ನ ಮಾಡುತ್ತಿದೆ.!!

ಆಪಲ್, ನೋಕಿಯಾಗೆ ಸೆಡ್ಡುಹೊಡೆಯುವ ಫೋನ್!!

ಆಪಲ್, ನೋಕಿಯಾಗೆ ಸೆಡ್ಡುಹೊಡೆಯುವ ಫೋನ್!!

ಬ್ಲಾಕ್‌ಬೆರ್ರಿ ಮತ್ತು ಚೀನಾದ ಟಿಸಿಎಲ್ ಕಮ್ಯುನಿಕೇಶನ್ ಸಹಯೋಗದಲ್ಲಿ ನೂತನವಾಗಿ ಹೊರಬರುತ್ತಿರುವ ಬ್ಲಾಕ್‌ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಸ್ಯಾಮ್‌ಸಂಗ್, ಆಪಲ್ ಮತ್ತು ನೋಕಿಯಾ ಕಂಪೆನಿಗಳಿಗೆ ಸೆಡ್ಡುಹೊಡೆಯುವಂತಹ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ಟಿಸಿಎಲ್ ಅಧ್ಯಕ್ಷ ಸ್ಟೀವ್ ಅವರು ಹೇಳಿದ್ದಾರೆ.

ಆಲ್‌ಟಚ್‌ ಸ್ಮಾರ್ಟ್‌ಫೋನ್‌!!

ಆಲ್‌ಟಚ್‌ ಸ್ಮಾರ್ಟ್‌ಫೋನ್‌!!

ಕ್ವಾರ್ಟಿ ಕೀ ಪ್ಯಾಡ್‌ ಮೂಲಕ ಗ್ರಾಹಕರ ಗಮನ ಸೆಳೆದಿದ್ದ ಪೂರ್ಣ ಪ್ರಮಾಣ ಟಚ್‌ಸ್ಕ್ರೀನ್‌ ಇರುವ ಬ್ಲ್ಯಾಕ್‌ಬೆರಿ ಫೋನ್‌ಗಳು ಮಾರುಕಟ್ಟೆಗೆ ಕಾಲಿಡುತ್ತಿದ್ದು, 5.5 ಇಂಚ್ ಫುಲ್‌ ಎಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ. ಆಂಯಟಿ ಸ್ಕ್ರಾಚ್ ಡಿಸ್‌ಪ್ಲೇ ಇದಾಗಿದೆ ಎಂದು ಟಿಸಿಎಲ್ ಕಂಪೆನಿ ಸ್ಪಷ್ಟಪಡಿಸಿದೆ.!!

 RAM ಮತ್ತು ಪ್ರೊಸೆಸರ್!!

RAM ಮತ್ತು ಪ್ರೊಸೆಸರ್!!

ಬ್ಲ್ಯಾಕ್‌ಬೆರಿ ಆಮಡ್ರಾಯ್ಡ್ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 625 ಚಿಪ್‌ಸೆಟ್‌ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.! ಬಹುತೇಕ ಮಧ್ಯಮ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಂತೆ 4ಜಿಬಿ RAM ಮತ್ತು 32 ಜಿಬಿ ಇಂಟರ್ನಲ್‌ ಸ್ಟೋರೇಜ್ ಹೊತ್ತು ಬ್ಲ್ಯಾಕ್‌ ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹೊರಬರುತ್ತಿದೆ.!!

ಬ್ಯಾಟರಿ ಮತ್ತು ಬೆಲೆ!?

ಬ್ಯಾಟರಿ ಮತ್ತು ಬೆಲೆ!?

ಬ್ಲ್ಯಾಕ್‌ ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅತ್ಯುತ್ತಮ ಎನ್ನುವಂತಹ 4000 ಎಂಎಎಚ್ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಕ್ವಾಲ್ಕಮ್ ಕ್ವಿಕ್ ಚಾರ್ಜಿಂಗ್ 3.0 ಪ್ರೊಟೊಕಾಲ್‌ಗೆ ಸಪೋರ್ಟ್ ಮಾಡಲಿದೆ. ಇನ್ನು ಸ್ಮಾರ್ಟ್‌ಫೋನ್ ಬೆಲೆ 25 ಸಾವಿರ ರೂ. ಆಸುಪಾಸಿನಲ್ಲಿರಲಿದೆ.!!

ಐಫೋನ್ ಫೇಸ್‌ಲಾಕ್ ಎಷ್ಟು ನಿಖರವಾಗಿದೆ?..ಈ ಪ್ರಶ್ನೆಗೆ ಆಪಲ್ ಹೇಳಿದ್ದು ಹೀಗೆ!!ಐಫೋನ್ ಫೇಸ್‌ಲಾಕ್ ಎಷ್ಟು ನಿಖರವಾಗಿದೆ?..ಈ ಪ್ರಶ್ನೆಗೆ ಆಪಲ್ ಹೇಳಿದ್ದು ಹೀಗೆ!!

Best Mobiles in India

English summary
TCL has announced when you can get its latest BlackBerry smartphone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X