Subscribe to Gizbot

ಬ್ಲ್ಯಾಕ್‌ಬೆರ್ರಿ P'9983 ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆ

Written By:

ಹೆಚ್ಚು ಪ್ರಸಿದ್ಧಿಯಲ್ಲಿರುವ ಸ್ಮಾರ್ಟ್‌ಫೋನ್ ಕಂಪೆನಿಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಸೋನಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಡಿವೈಸ್‌ಗಳನ್ನು ಲಾಂಚ್ ಮಾಡುತ್ತಿದ್ದು ಗ್ರಾಹಕರ ಮನಸೆಳೆಯುವ ಪ್ರಯತ್ನವನ್ನು ಭಾರೀ ಪ್ರಮಾಣದಲ್ಲಿ ಮಾಡುತ್ತಿವೆ. ಆದರೆ ಇದೇ ಶ್ರೇಣಿಗೆ ಸೇರುವ ಬ್ಲ್ಯಾಕ್‌ಬೆರ್ರಿ ಈ ವರ್ಷ ಕಡಿಮೆ ಸಂಖ್ಯೆಯಲ್ಲಿ ತನ್ನ ಫೋನ್ ಅನ್ನು ಲಾಂಚ್ ಮಾಡಿದೆ.

ಆದರೆ ಇತ್ತೀಚಿನ ಒಂದು ವರದಿಯ ಪ್ರಕಾರ ಈ ವರ್ಷದ ಮಧ್ಯಭಾಗದಲ್ಲಿ ಸಾಕಷ್ಟು ಫೋನ್‌ಗಳನ್ನು ಲಾಂಚ್ ಮಾಡುವ ತಯಾರಿಯಲ್ಲಿದೆ. ಆನ್‌ಲೈನ್ ವರದಿಯ ಪ್ರಕಾರ, ಪ್ರಯತ್ನದ ಮೇಲೆ ಪ್ರಯತ್ನ ಮಾಡುತ್ತಿರುವ ಈ ಕೆನಾಡಿಯನ್ ಸ್ಮಾರ್ಟ್‌ಫೋನ್ ಕಂಪೆನಿ, ಪೋರ್ಚ್ ವಿನ್ಯಾಸದ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಸಿದ್ಧತೆಯನ್ನು ಪೂರ್ತಿಗೊಳಿಸಿದೆಯಂತೆ. ಇದರ ಹೆಸರು ಕೂಡ ತಿಳಿದು ಬಂದಿದ್ದು P'9983 ಎಂದಾಗಿದೆ. ವರ್ಷದ ಮೊದಲೇ ಈ ಫೋನ್ ಆನ್‌ಲೈನ್‌ನಲ್ಲಿ ಕಂಡುಬಂದಿತ್ತು ಆದರೆ ಇದರ ಹೆಸರು 'ಖಾನ್' ಎಂದಾಗಿತ್ತು.

ಬ್ಲ್ಯಾಕ್‌ಬೆರ್ರಿ P'9983 ಮತ್ತು Z3 LTE ಸದ್ಯದಲ್ಲೇ ಮಾರುಕಟ್ಟೆಗೆ

ಇನ್ನು ಫೋನ್‌ನ ವಿಶೇಷತೆಗಳ ಬಗೆಗೆ ಮಾತನಾಡುವಾಗ, ಈ ಹ್ಯಾಂಡ್‌ಸೆಟ್ ಬ್ಲ್ಯಾಕ್‌ಬೆರ್ರಿ 10 ಪ್ಲಾಟ್‌ಫಾರ್ಮ್‌ನಲ್ಲಿ ಚಾಲನೆಯಾಗುತ್ತಿದ್ದು QWERTY ಕೀಪ್ಯಾಡ್ ಅನ್ನು ಒಳಗೊಂಡಿದೆ. 3.5 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, 1.7GHz ಡ್ಯುಯಲ್ - ಕೋರ್ ಪ್ರೊಸೆಸರ್, ಇದು 3 ಜಿಬಿ RAM ಜೊತೆ ಹೊಂದಿಕೆಯಾಗುತ್ತಿದೆ. BlackBerry P'9983 (ಖಾನ್) 64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಮತ್ತು ಡಿವೈಸ್ ಅನ್ನು ಕಾರ್ಬನ್ ಹಾಗೂ ಸ್ಟೀಲ್‌ನಲ್ಲಿ ನಿರ್ಮಿಸಲಾಗಿದೆ. ಕ್ರಿಸ್‌ಮಸ್ ನಂತರ ಫೋನ್ ಲಭ್ಯವಾಗುವ ನಿರೀಕ್ಷೆ ಇದೆ.

ಇದೇ ಸಂಬಂಧ, ಬ್ಲ್ಯಾಕ್‌ಬೆರ್ರಿ Z3 LTE ಅನ್ನು ಕೂಡ ಕಂಪೆನಿ ಘೋಷಿಸಲಿದ್ದು ಈ ವರ್ಷದ ಕೊನೆಗೆ ಮಾರುಕಟ್ಟೆಗೆ ಫೋನ್ ಬರಲಿದೆ. ಇದು 5 ಇಂಚಿನ ಟಚ್‌ಸ್ಕ್ರೀನ್, 1.7GHz ಡ್ಯುಯಲ್ ಕೋರ್ ಪ್ರೊಸೆಸರ್ ಇದರಲ್ಲಿದೆ ಮತ್ತು 2 ಜಿಬಿ RAM ಫೋನ್‌ನ ವೈಶಿಷ್ಟ್ಯತೆಯಾಗಿದೆ. LTE - ಸಕ್ರಿಯಗೊಳಿಸಿದ ಬ್ಲ್ಯಾಕ್‌ಬೆರ್ರಿ Z3 ಆವೃತ್ತಿ ರೂ 24,024 ಗಳಲ್ಲಿ ಲಭ್ಯವಾಗಲಿದೆ.

ಮೂಲ

Read more about:
English summary
This article tells about BlackBerry P’9983 and Z3 LTE (Manitoba) Specs Leak Online.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot