Subscribe to Gizbot

ಬ್ಲ್ಯಾಕ್‌ಬೆರ್ರಿಯಿಂದ ಹೊಸ ಪಾಸ್‌ಪೋರ್ಟ್ ಫೋನ್

Written By:

ಬ್ಲ್ಯಾಕ್‌ಬೆರ್ರಿಯು ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಇದರ ಬೆಲೆ ರೂ 49,990 ಆಗಿದೆ. ಕಳೆದ ವಾರವಷ್ಟೇ ಈ ಸ್ಮಾರ್ಟ್‌ಫೋನ್ ಘೋಷಣೆಗೊಂಡಿದ್ದು ಈ ಫೋನ್ ದೊರೆಯುತ್ತಿರುವ ಪ್ರಥಮ ದೇಶವಾಗಿ ಭಾರತ ಮೂಡಿಬಂದಿದೆ.

ಈ ಪಾಸ್‌ಪೋರ್ಟ್ ಸಾಮಾನ್ಯವಾಗಿರುವ ಫೋನ್‌ಗಿಂತ ಭಿನ್ನವಾಗಿದ್ದು ಸ್ಕ್ವೇರ್ ಆಕಾರದಲ್ಲಿದೆ. ಇದು 4.5 ಇಂಚಿನ ಟಚ್ ಪರದೆಯನ್ನು ಹೊಂದಿದ್ದು ಇದರ ಅನುಪಾತ 1:1 ಆಗಿದೆ. ರೆಸಲ್ಯೂಶನ್ 1440 x 1440 ಪಿಕ್ಸೆಲ್‌ಗಳಾಗಿವೆ. ಡಿಸ್‌ಪ್ಲೇಯು ಅನನ್ಯವಾದ ಟಚ್ ಸಕ್ರಿಯಗೊಂಡಿರುವ ಕೀಬೋರ್ಡ್ ಅನ್ನು ಒಳಗೊಂಡಿದ್ದು ಇದು ಫಿಸಿಕಲ್ ಮತ್ತು ವರ್ಚುವಲ್ ಕೀಪ್ಯಾಡ್ ಅಂಶವನ್ನು ಒಳಗೊಂಡಿದೆ.

ಇದನ್ನೂ ಓದಿ: ಈ ದಸರಾದ ಆಕರ್ಷಣೆ ಈ ಸುಂದರ ಸ್ಮಾರ್ಟ್‌ಫೋನ್‌ಗಳು

ನೀವು ಸ್ವೈಪ್ ಮಾಡಿ ಅಳಿಸುವ ಕ್ರಿಯೆಯನ್ನು ಫ್ಲಿಕ್ ಮಾಡಿ ಡಿಸ್‌ಪ್ಲೇನಲ್ಲಿರುವ ಪದವನ್ನು ಆಯ್ಕೆಮಾಡಬಹುದಾಗಿದ್ದು ಇದು ನಿಜಕ್ಕೂ ಕಂಪೆನಿಯು ಫೋನ್ ಬಳಕೆದಾರರಿಗೆ ನೀಡುತ್ತಿರುವ ಅತ್ಯಪೂರ್ಣ ಅಂಶವಾಗಿದೆ. ಇದು ಸ್ಟೈನ್‌ಲೆಸ್ ಸ್ಟೀಲ್ ಮೂಲೆಗಳನ್ನು ಹೊಂದಿದ್ದು ಗಟ್ಟಿಯಾದ ರಚನಾ ಅಂಶವನ್ನು ಪಡೆದುಕೊಂಡಿದೆ. ನಿಜಕ್ಕೂ ಈ ಫೋನ್ ಅಸಾಧಾರಣವಾಗಿದ್ದು ಅದ್ಭುತ ಹ್ಯಾಂಡ್‌ಸೆಟ್ ಆಗಿ ಹೊರಹೊಮ್ಮಿದೆ.

ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್ ಏಕೆ ವಿಭಿನ್ನ ಫೋನ್

ಇನ್ನು ಫೋನ್‌ನ ಹಾರ್ಡ್‌ವೇರ್ ಅಂಶಗಳತ್ತ ನೋಡುವುದಾದರೆ, ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್, Adreno 330 GPU, 3ಜಿಬಿ RAM, 32 ಜಿಬಿ ಆಂತರಿಕ ಸಂಗ್ರಹಣೆ ಮತ್ತು ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಡಿವೈಸ್ ಒಳಗೊಂಡಿದೆ. ಇನ್ನು ಸಂಪರ್ಕ ವಿಶೇಷತೆಗಳೆಂದರೆ 3 ಜಿ, ಡ್ಯುಯಲ್ ಬ್ಯಾಂಡ್, ವೈಫೈ, ವೈಫೈ ಡೈರೆಕ್ಟ್, ಬ್ಲ್ಯೂಟೂತ್ 4.0 ಮತ್ತು NFC ಇದರಲ್ಲಿದೆ. ಇನ್ನು ಬ್ಲ್ಯಾಕ್‌ಬೆರ್ರಿ ಪಾಸ್‌ಪೋರ್ಟ್‌ನ ಮುಖ್ಯ ಅಂಶವೆಂದರೆ ಇದು 3,450mAh ಬ್ಯಾಟರಿಯನ್ನು ಹೊಂದಿರುವುದಾಗಿದೆ. ಇದು 30 ಗಂಟೆಗಳ ಬ್ಯಾಟರಿ ಜೀವನವನ್ನು ಇದು ಪಡೆದುಕೊಂಡಿದೆ.

ಇನ್ನು ಫೋನ್‌ನ ರಿಯರ್ ಕ್ಯಾಮೆರಾವು 13 ಎಮ್‌ಪಿ ಅನ್ನು ಹೊಂದಿದ್ದು ಪೂರ್ಣ ಎಚ್‌ಡಿ ವೀಡಿಯೊವನ್ನು ಡಿವೈಸ್ ಪಡೆದುಕೊಂಡಿದೆ. ಇನ್ನು ಮುಂಭಾಗ ಕ್ಯಾಮೆರಾವು 2ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಂಡಿದ್ದು 720p HD ರೆಸಲ್ಯೂಶನ್ ಇದರಲ್ಲಿದೆ. ಇನ್ನು ಇತರ ವಿಶೇಷತೆಗಳೆಂದರೆ 4 ಮೈಕ್ರೋಫೋನ್ಸ್, MHL port. ಎಫ್‌ಎಮ್ ರೇಡಿಯೊ, ಅಕ್ಲೆರೊಮೀಟರ್, ಗೀರೊ, ಕಂಪಾಸ್ ಮತ್ತು ಪ್ರೊಕ್ಸಿಮಿಟಿ ಸೆನ್ಸಾರ್ ಇದರಲ್ಲಿದೆ.

ಇದನ್ನೂ ಓದಿ: ಈ ದಸರಾಕ್ಕಾಗಿ ಬೊಂಬಾಟ್ ಕೊಡುಗೆಯ ಫೋನ್‌ಗಳು

ಇಂದಿನಿಂದ ಅಕ್ಟೋಬರ್ 10 ರವರೆಗೆ ಬ್ಯ್ಲಾಕ್‌ಬೆರ್ರಿ ಪಾಸ್‌ಪೋರ್ಟ್ ಅನ್ನು ಪೂರ್ವ ಆರ್ಡರ್ ಮಾಡಬಹುದಾಗಿದ್ದು ಅಮೆಜಾನ್ ಇಂಡಿಯಾದಲ್ಲಿ ಇದು ಲಭ್ಯವಿದೆ. ಈ ಫೋನ್ ಅನ್ನು ಈಗಾಗಲೇ ಆರ್ಡರ್ ಮಾಡಿರುವವರು ಅಮೆಜಾನ್ ಇಂಡಿಯಾದಲ್ಲಿ 5,000 ಬೆಲೆಯ ಕೊಡುಗೆ ಮತ್ತು 5000 ವಿಮಾನ ಯಾನದ ಅನುಭವವನ್ನು ಪಡೆಯಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot