Subscribe to Gizbot

ಬ್ಲ್ಯಾಕ್‌ಬೆರ್ರಿ P'9983 ಸ್ಮಾರ್ಟ್‌ಫೋನ್ ಲಾಂಚ್‌ನೆಡೆಗೆ

Written By:

ಹೊಸ ಬ್ಲ್ಯಾಕ್‌ಬೆರ್ರಿ P'9983 "ಖಾನ್" ಎಂಬ ಹೆಸರಿನಿಂದ ಪ್ರಸಿದ್ಧಿಗೆ ಬರಲಿದೆ ಎಂಬುದು ಇದೀಗ ಸಾಬೀತಾಗಿದೆ. ಈ ಲಕ್ಶುರಿಯಸ್ ಸ್ಮಾರ್ಟ್‌ಫೋನ್ ಬ್ಲ್ಯಾಕ್‌ಬೆರ್ರಿಯ ಸಿಗ್ನೇಚರ್ ಕ್ವಾರ್ಟಿ - ಕೀಪ್ಯಾಡ್ ಅನ್ನು ಹೊಂದಿ ಪೂರ್ಣ ಟಚ್ ಡಿಸ್‌ಪ್ಲೇಯಲ್ಲಿ ಬರಲಿದೆ. ಪೋರ್ಷ್ ಡಿಸೈನ್ P'9983 ಇದೇ ಹಾದಿಯಲ್ಲಿದ್ದು, ಈ ಹ್ಯಾಂಡ್‌ಸೆಟ್‌ನ ವಿಶೇಷತೆಗಳು ಇದು ಕಣ್ಸೆಳೆಯು ಮಾತಾಗಿದೆ.

ಮುಂಬರಲಿರುವ ಬ್ಲ್ಯಾಕ್‌ಬೆರ್ರಿ ಪೋರ್ಷ್ ವಿನ್ಯಾಸ P'9983 ನ ಕಣ್ಸೆಳೆಯುವ ನೋಟವನ್ನು ನೀಡುತ್ತಿದ್ದು ಇದು ವಿನ್ಯಾಸದಲ್ಲಿ ಮನಮೋಹಕವಾಗಿದೆ. ಇದು ಕ್ಯಾಪಸಿಟೀವ್ ಟಚ್ ಕೀಬೋರ್ಡ್‌ನೊಂದಿಗೆ ಬಂದಿದ್ದು ಈ ಡಿವೈಸ್‌ನ ಹಾರ್ಡ್‌ವೇರ್ ಇಂಟರ್ನಲ್ಸ್ ಕೆಲವೊಂದು ಚಿತ್ರಗಳಲ್ಲಿ ಹೊರಬಿದ್ದಿದೆ.

ಆನ್‌ಲೈನ್‌ನಲ್ಲಿ ಬ್ಲ್ಯಾಕ್‌ಬೆರ್ರಿ P'9983 ಸ್ಮಾರ್ಟ್‌ಫೋನ್ ಲೀಕ್

ಈ ಫೋನ್ 3.5 ಇಂಚಿನ ಪರದೆಯೊಂದಿಗೆ ಬಂದಿದ್ದು, 1.7GHz ಡ್ಯುಯಲ್ ಕೋರ್ CPU, 3GB RAM ಅನ್ನು ಪೋನ್ ಹೊಂದಿದೆ. ಫೋನ್‌ನ ಆಂತರಿಕ ಸಂಗ್ರಹಣೆ 64GB ಯಾಗಿದ್ದು ಬ್ಲ್ಯಾಕ್‌ಬೆರ್ರಿ 10.3 ಓಎಸ್ ಅನ್ನು ಇದು ಹೊಂದಿದೆ. ಇದು ಕಪ್ಪು ಮೆಟಲ್‌ನಲ್ಲಿ ಬಂದಿದ್ದು, ಇದರ ಬೆಲೆ ರೂ (124,000,) ಎಂದು ಅಂದಾಜಿಸಲಾಗಿದೆ ಈ ವರ್ಷದಲ್ಲಿ ರೀಟೈಲ್ ಅಂಗಡಿಗಳಲ್ಲಿ ದೊರೆಯಲಿರುವ ಈ ಹ್ಯಾಂಡ್‌ಸೆಟ್ ಬಹುಬೇಗನೇ ಬ್ಲ್ಯಾಕ್‌ಬೆರ್ರಿ ಪ್ರಿಯರ ಮನ ಗೆಲ್ಲಲಿದೆ.

English summary
This article tells about BlackBerry Porsche Design P’9983 Smartphone With Codename ‘Khan’ Leaked Ahead of Launch.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot