ಬ್ಲ್ಯಾಕ್‌ಬೆರ್ರಿಯಿಂದ ಅಸಾಧಾರಣ ದರ ಕಡಿತ

Written By:

ತನ್ನ ಕ್ವಾರ್ಟಿ ಸ್ವರೂಪದ ಹ್ಯಾಂಡ್‌ಸೆಟ್‌ಗಳಿಗೆ ಭರ್ಜರಿ ಟೀಕೆಯನ್ನು ಪಡೆದುಕೊಂಡಿರುವ ಬ್ಲ್ಯಾಕ್‌ಬೆರ್ರಿ ತನ್ನ Q5, 9720 ಮತ್ತು ಕರ್ವ್ 9320 ಅನ್ನು ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.

ಈ ಫೋನ್‌ಗಳನ್ನು ಲಾಂಚ್ ಮಾಡಿದ ಕೂಡಲೇ ಕೆನಾಡಿಯನ್ ಸ್ಮಾರ್ಟ್‌ಫೋನ್ ತಯಾರಕ ರೂ 19,990 ಗಳ ಅದ್ಭುತ ದರ ಕಡಿತವನ್ನು Q5 ನಿಯೋಜಿಸಿದೆ. ಕಳೆದ ವರ್ಷ ಜುಲೈನಲ್ಲಿ Q5 ಬೆಲೆ ರೂ 24,990 ಆಗಿತ್ತು. ಅಸಾಧಾರಣವಾಗಿ ಬೆಳೆಯುತ್ತಿರುವ ಇತರ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿಯನ್ನು ನೀಡುತ್ತಿರುವ ಉದ್ದೇಶದಿಂದ, ಬ್ಲ್ಯಾಕ್‌ಬೆರ್ರಿ Q5 ಜೊತೆಗೆ ಬ್ಲ್ಯಾಕ್‌ಬೆರ್ರಿ 9720 ಮತ್ತು ಕರ್ವ್ 9320 ಗೂ ದರ ಕಡಿತವನ್ನು ಕಂಪೆನಿ ನಿಯೋಜಿಸಿದೆ.

ಬ್ಲ್ಯಾಕ್‌ಬೆರ್ರಿ ಕ್ವಾರ್ಟಿಗಳ ಆಕರ್ಷಕ ದರಕಡಿತ

ಬ್ಲ್ಯಾಕ್‌ಬೆರ್ರಿ Q5 ರೂ 6,000 ದರ ಕಡಿತವನ್ನು ಪಡೆದುಕೊಂಡಿದ್ದು, ಇದೀಗ ಮಾರುಕಟ್ಟೆಯಲ್ಲಿ ರೂ 13,990 ಕ್ಕೆ ಲಭ್ಯವಾಗುತ್ತಿದೆ. ಪ್ರಾರಂಭದಲ್ಲಿ ರೂ 15,990 ಕ್ಕೆ ಬ್ಲ್ಯಾಕ್‌ಬೆರ್ರಿ 9720 ಅನ್ನು ನಿಗದಿಪಡಿಸಿದ್ದು ಇದೀಗ ರೂ 11,990 ಕ್ಕೆ ಅಂತೆಯೇ ಕರ್ವ್ 9320 ಹ್ಯಾಂಡ್‌ಸೆಟ್ ರೂ 9,900 ಕ್ಕೆ ದೊರೆಯುತ್ತಿದೆ.

ಬ್ಲ್ಯಾಕ್‌ಬೆರ್ರಿ 9720: ಪ್ರಮುಖ ವೈಶಿಷ್ಟ್ಯ
2.8 ಇಂಚಿನ HVGA ಡಿಸ್‌ಪ್ಲೇ (480 x 360 ಪಿಕ್ಸೆಲ್‌ಗಳೊಂದಿಗೆ) ಇದು ಬಂದಿದ್ದು ಇದು ಕ್ವಾರ್ಟಿ ಕೀಪ್ಯಾಡ್ ಮತ್ತು BB 7 ಓಎಸ್ ಅನ್ನು ಪಡೆದುಕೊಂಡಿದೆ. 512 ಎಮ್‌ಬಿ RAM ಫೋನ್‌ನಲ್ಲಿದೆ ಹಾಗೂ 512ಎಮ್‌ಬಿ ROM ಕೂ ಡ ಇದರಲ್ಲಿದೆ. ಇತರ ಅಂಶಗಳೆಂದರೆ : ವೈ-ಫೈ, 3ಜಿ, GPS, ಬ್ಲ್ಯೂಟೂತ್ 2.1, USB 2.0, ಹಾಗೂ 1450mAh Li Ion ಬ್ಯಾಟರಿಯಾಗಿದೆ.

ಬ್ಲ್ಯಾಕ್‌ಬೆರ್ರಿ Q5: ಪ್ರಮುಖ ವೈಶಿಷ್ಟ್ಯ
3.1 ಇಂಚಿನ IPS LCD ಡಿಸ್‌ಪ್ಲೇ (720 x 720 ಪಿಕ್ಸೆಲ್‌ಗಳೊಂದಿಗೆ) ಇದು ಬಂದಿದ್ದು ಇದು ಕ್ವಾರ್ಟಿ ಕೀಪ್ಯಾಡ್ ಮತ್ತು BB 10.1 ಓಎಸ್ ಅನ್ನು ಪಡೆದುಕೊಂಡಿದೆ. 2 ಜಿಬಿ RAM ಫೋನ್‌ನಲ್ಲಿದೆ ಹಾಗೂ 512ಎಮ್‌ಬಿ ROM ಕೂ ಡ ಇದರಲ್ಲಿದೆ. ಇತರ ಅಂಶಗಳೆಂದರೆ : 2ಜಿ, 3ಜಿ, GPRS, SPEED, WLAN, ಬ್ಲ್ಯೂಟೂತ್ microUSB v2.0, NFC, ಮತ್ತು 2180mAh Li Ion ಬ್ಯಾಟರಿ ಇದರಲ್ಲಿದೆ. ಇದರಲ್ಲಿ 5ಎಮ್‌ಪಿ ರಿಯರ್ ಕ್ಯಾಮೆರಾ ಇದ್ದು 2ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಹ್ಯಾಂಡ್‌ಸೆಟ್ ಹೊಂದಿದೆ.

ಬ್ಲ್ಯಾಕ್‌ಬೆರ್ರಿ ಕರ್ವ್ 9320: ಪ್ರಮುಖ ವೈಶಿಷ್ಟ್ಯ
2.44 ಇಂಚಿನ IPS LCD ಡಿಸ್‌ಪ್ಲೇ (320 x 240 ಪಿಕ್ಸೆಲ್‌ಗಳೊಂದಿಗೆ) ಇದು ಬಂದಿದ್ದು ಇದು ಕ್ವಾರ್ಟಿ ಕೀಪ್ಯಾಡ್ ಮತ್ತು BB 7.1 ಓಎಸ್ ಅನ್ನು ಪಡೆದುಕೊಂಡಿದೆ. 512 ಎಮ್‌ಬಿ RAM ಫೋನ್‌ನಲ್ಲಿದೆ ಹಾಗೂ 512ಎಮ್‌ಬಿ ROM ಕೂ ಡ ಇದರಲ್ಲಿದೆ. ಇತರ ಅಂಶಗಳೆಂದರೆ : 3ಜಿ, ವೈಫೈ, ಬ್ಲ್ಯೂಟೂತ್, ಮತ್ತು GPS ಇದೆ 2180mAh Li Ion ಬ್ಯಾಟರಿ ಡಿವೈಸ್‌ನಲ್ಲಿದೆ. ಇದರಲ್ಲಿ 3.15 ಎಮ್‌ಪಿ ರಿಯರ್ ಕ್ಯಾಮೆರಾ ಹೊಂದಿದೆ.

English summary
This article tells about Blackberry sets gets exclusive price cut to compete with the fast growing Indian smartphone market, now the company has announced another price cut for BlackBerry Q5 along with BlackBerry 9720 and the Curve 9320.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot