ಬ್ಲ್ಯಾಕ್ ಬೆರಿಯಿಂದ 2012ಕ್ಕೆ ಕಾಲಿಡುತ್ತಿರುವ ಸಾಧನಗಳೇನು?

Posted By: Staff
ಬ್ಲ್ಯಾಕ್ ಬೆರಿಯಿಂದ 2012ಕ್ಕೆ ಕಾಲಿಡುತ್ತಿರುವ ಸಾಧನಗಳೇನು?

ಬ್ಲ್ಯಾಕ್ ಬೆರಿ ಕಂಪನಿ ತನ್ನ ಸಾಮರ್ಥ್ಯದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದೆ. ಅದೇ ರೀತಿ ಬ್ಲ್ಯಾಕ್ ಬೆರಿ ಮತ್ತು ರಿಮ್ ಸಹಯೋಗದಲ್ಲಿ 2012 ರ ಹೊತ್ತಿಗೆ ಹಲವು ಮೊಬೈಲ್ ಮತ್ತು ಇನ್ನಿತರ ಸಾಧನಗಳು ಬಿಡುಗಡೆಯಾಗಲಿರುವುದಾಗಿ ತಿಳಿದುಬಂದಿದೆ.

ಮೊದಲಾಗಿ ಬ್ಲ್ಯಾಕ್ ಬೆರಿ ಪ್ಲೇ ಬುಕ್ ಟ್ಯಾಬ್ಲೆಟ್ ನ QNX ಸಾಫ್ಟ್ ವೇರ್ ನಿಂದ ಹೊಸದಾಗಿ ನಿರೂಪಿಸಿರುವ BBX OS ಅನ್ನು 2012ಕ್ಕೆ ಪರಿಚಯಿಸಲಿರುವುದು ಪ್ರಮುಖವೆನಿಸಿದೆ.

2012 ರ ಮಾರ್ಚ್ 13 ರಂದು ಬಿಬಿಎಕ್ಸ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತ ಮೊದಲ ಸ್ಮಾರ್ಟ್ ಫೋನನ್ನು ಬಿಡುಗಡೆಮಾಡಲಿದ್ದು, ಅದನ್ನು ಬ್ಲ್ಯಾಕ್ ಬೆರಿ ಲಂಡನ್ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಸ್ಮಾರ್ಟ್ ಫೋನನ್ನು ಬ್ಲ್ಯಾಕ್ ಬೆರಿ ಸರ್ಫ್ ಬೋರ್ಡ್ ಎಂದು ಕರೆಯಬಹುದಾಗಿದೆ. ಈ ಮೊಬೈಲಿನಲ್ಲಿ ಇಂಟರ್ನೆಟ್ ವೇಗ ಅತಿ ಹೆಚ್ಚಿರುವುದು ಇನ್ನೊಂದು ಆಕರ್ಷಿತ ಅಂಶ.

2012 ರ ಇನ್ನೊಂದು ನಿರೀಕ್ಷೆಯೆಂದರೆ, ಬ್ಲ್ಯಾಕ್ ಬೆರಿ ಲಂಡನ್ ಮೊಬೈಲ್ GSM ಆಯಾಮದಲ್ಲಿ ಮೂಡಿ ಬರುತ್ತಿರುವುದು. ಬ್ಲ್ಯಾಕ್ ಬೆರಿ ಮಿಲನ್ ಎನ್ನಲಾಗುವ ಈ ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚು ಹೆಸರುಗಳಿಸಲಿರುವುದೆಂದು ನಿರೀಕ್ಷಿಸಲಾಗಿದೆ.

ಬ್ಲ್ಯಾಕ್ ಬೆರಿ ನೆವಡ ಮೊಬೈಲ್ ಕೂಡ 2012ಕ್ಕೆ ಬಿಡುಗಡೆಗೊಳ್ಳುತ್ತದೆ ಎಂಬ ಸುದ್ದಿಯಿದ್ದು, ಇದು ಹಲವು ಆಯ್ಕೆಗಳನ್ನು ಪಡೆದುಕೊಂಡಿರುವ ಅತ್ಯಾಧುನಿಕ ಸ್ಮಾರ್ಟ್ ಫೋನಾಗಿದ್ದು, ಬಿಬಿಎಕ್ಸ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ ಎಂದು ತಿಳಿದುಬಂದಿದೆ. ಈ ಫೋನ್ ನಲ್ಲಿನ ಗುಣಲಕ್ಷಣಗಳೂ ಕೂಡ ಬ್ಲ್ಯಾಕ್ ಬೆರಿ 9900/9930 ಮಾದರಿಯಂತಿದ್ದು, ಕ್ವೆರ್ಟಿ ಕೀ ಪ್ಯಾಡ್ ಪಡೆದುಕೊಂಡಿದೆ.

ಇನ್ನು ಬ್ಲ್ಯಾಕ್ ಬೆರಿ ಟ್ಯಾಬ್ಲೆಟ್ ಗಳ ಮಾರುಕಟ್ಟೆ ವಿಷಯಕ್ಕೆ ಬಂದರೆ, ಬ್ಲ್ಯಾಕ್ ಬೆರಿ ಬ್ಲ್ಯಾಕ್ ಫಾರೆಸ್ಟ್ ಎಂಬ ನೂತನ ಟ್ಯಾಬ್ಲೆಟ್ 10 ಇಂಚಿನ ಸ್ಕ್ರೀನ್ ಡಿಸ್ಪ್ಲೇ ಜೊತೆ 2012ಕ್ಕೆ ಕಾಲಿಡಲಿದೆ ಎಂಬ ಸುದ್ದಿಯಿದೆ.

ಅಷ್ಟೇ ಅಲ್ಲ, ಬ್ಲ್ಯಾಕ್ ಬೆರಿ 7 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಅನೇಕ ಸ್ಮಾರ್ಟ್ ಫೋನ್ ಗಳನ್ನೂ ಬ್ಲ್ಯಾಕ್ ಬೆರಿ ಬಿಡುಗಡೆಗೊಳಿಸಲಿದೆ ಎಂದು ಕಂಪನಿ ಅಧೀಕೃತ ಮೂಲಗಳು ತಿಳಿಸಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot