ಬ್ಲ್ಯಾಕ್‌ಬೆರ್ರಿ z3 ಸುತ್ತ ಒಂದು ನೋಟ

By Shwetha
|

ಅದೊಂದು ಕಾಲವಿತ್ತು ಇಡೀಯ ಸ್ಮಾರ್ಟ್‌ಫೋನ್ ಜಗತ್ತನ್ನೇ ಬ್ಲ್ಯಾಕ್‌ಬೆರ್ರಿ ತನ್ನ ಹೈ ಎಂಡ್ ಸ್ಮಾರ್ಟ್‌ಫೋನ್ ಉತ್ಪಾದನೆಯೊಂದಿಗೆ ಆಳುತ್ತಿತ್ತು. ಆದರೆ ದಿನಗಳೆದಂತೆ ಇತರ ಮಹಾನ್ ಕಂಪೆನಿಗಳಾದ ಆಪಲ್ ಮತ್ತು ಸ್ಯಾಮ್‌ಸಂಗ್ ತಮ್ಮ ಸ್ಮಾರ್ಟ್‌ಫೋನ್ ಉತ್ಪಾದನೆಯನ್ನುಅತ್ಯುನ್ನತ ವೈಶಿಷ್ಟ್ಯಗಳೊಂದಿಗೆ ಉತ್ಪಾದಿಸಿದ ನಂತರ ಬ್ಲ್ಯಾಕ್‌ಬೆರ್ರಿ ತನ್ನ ಕಳೆಯನ್ನು ಕೊಂಚ ಕಳೆದುಕೊಂಡಿತು ಎಂದೇ ಹೇಳಬಹುದು.

ಆದರೂ ಈ ಕೆನಾಡಾದ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ಕೈ ಚೆಲ್ಲಿ ಕೂರದೇ ಛಲ ಬಿಡದ ತ್ರಿವಿಕ್ರಮನಂತೆ ಕಳೆದುಕೊಂಡಿರುವ ತನ್ನ ಗ್ರಾಫ್ ಮೌಲ್ಯವನ್ನು ಏರಿಸುವ ಭರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತೀಚೆಗೆ ಈ ಕಂಪೆನಿಯು Z3 ಯನ್ನು ಬಿಡುಗಡೆಗೊಳಿಸಿದ್ದು ಬ್ಲ್ಯಾಕ್‌ಬೆರ್ರಿ 10.2 ಮೊಬೈಲ್ ಓಎಸ್‌ ಇದರಲ್ಲಿ ಚಾಲನೆಯಾಗುತ್ತಿದೆ.

ಇದರ ಬೆಲೆ ರೂ 15,990 ಗಳಾಗಿದ್ದು ನೀವಿದನ್ನು ಜುಲೈ 2 ರಿಂದ ಖರೀದಿಸಬಹುದಾಗಿದೆ. ಬ್ಲ್ಯಾಕ್‌ಬೆರ್ರಿ Z3 ಆಕರ್ಷಕ ವಿನ್ಯಾಸದೊಂದಿಗೆ ಬಂದಿದ್ದು ಇದು ಆಧುನಿಕ ಮತ್ತು ಕಂಟೆಂಪರರಿ ಲುಕ್ ಅನ್ನು ಹೊಂದಿದೆ. ಬ್ಲ್ಯಾಕ್‌ಬೆರ್ರಿ Z3 ಅನ್ನು ಕುರಿತಾದ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನೀಡುತ್ತಿದ್ದು ಅದರತ್ತ ಗಮನ ಹರಿಸಿ.

#1

#1

ಕೆನಡಾ ಮೂಲದ ಸ್ಮಾರ್ಟ್‌ಫೋನ್ ದಿಗ್ಗಜ ಬ್ಲ್ಯಾಕ್‌ಬೆರ್ರಿಯು ತನ್ನ Z3 ಆವೃತ್ತಿಗೆ ಆಕರ್ಷಕ ವಿನ್ಯಾಸವನ್ನು ಮನಸೆಳೆಯುವ ವೈಶಿಷ್ಟ್ಯವನ್ನು ನೀಡುವಲ್ಲಿ ಸಂಪೂರ್ಣ ಸಫಲತೆಯನ್ನು ಗಳಿಸಿದೆ. ಇತ್ತೀಚೆಗೆ ಬರುತ್ತಿರುವ ಫೋನ್‌ಗಳೆಲ್ಲವೂ ಗೂಗಲ್‌ನ ಆಂಡ್ರಾಯ್ಡ್ ಒಡೆತನದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ತನ್ನದೇ ಬ್ರ್ಯಾಂಡ್ ಓಎಸ್ ಅನ್ನು ಫೋನ್‌ನಲ್ಲಿ ಸ್ಥಾಪಿಸುವ ಮೂಲಕ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ಈ ಫೋನ್ ನೀಡುತ್ತಿದೆ.

#2

#2

ಇದು ಆಕರ್ಷಕ ವಿನ್ಯಾಸದಲ್ಲಿ ಬಂದಿದ್ದು ಆಧುನಿಕ ಲುಕ್ ಅನ್ನು ಹೊಂದಿದೆ. ಇದರ ತಯಾರಿಕಾ ಘಟಕ ಫೋಕ್ಸ್‌ಕೋನ್ ಆಗಿದೆ. ಡಿವೈಸ್ ರಚನೆಗೆ ಬಳಸಿದ ಉತ್ಪನ್ನ ಗುಣಮಟ್ಟ ಮತ್ತು ಸಾಮಾಗ್ರಿಗಳು ಅತ್ಯದ್ಭುತವಾಗಿವೆ. ಇದು ಪ್ಲಾಸ್ಟಿಕ್ ರಚನೆಯನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನ ಮುಂಭಾಗವು ಕ್ಲೀನ್ ಆಗಿದ್ದು ದೊಡ್ಡದಾದ ಬ್ಲ್ಯಾಕ್‌ಬೆರ್ರಿ ಲೋಗೋವನ್ನು ಹೊಂದಿದೆ.

#3

#3

ಡಿವೈಸ್‌ನ ಎಡಭಾಗದಲ್ಲಿ ರಬ್ಬರ್‌ನಿಂದ ತಯಾರಿಸಲಾದ ಹೊದಿಕೆಯನ್ನು ಗಮನಿಸಬಹುದಾಗಿದ್ದು ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಬಟನ್‌ಗಳನ್ನು ಇದು ಹೊಂದಿದೆ. ಇದರ ಹಿಂಬದಿಯ ಕವರ್ ಅನ್ನು ವಿನ್ಯಸಿಸುವಲ್ಲಿ ತಯಾರಕರು ಉತ್ತಮ ಕೆಲಸವನ್ನೇ ಮಾಡಿದ್ದು ಡಾಟ್ ಇರವಂತಹ ವಿನ್ಯಾಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ಪೋನ್ ಅನ್ನು ಸುಲಭವಾಗಿ ಹ್ಯಾಂಡಲ್ ಮಾಡಬಹುದಾಗಿದೆ.

#4

#4

ಇದು 5 ಇಂಚಿನ ಸ್ಕ್ರೀನ್ ಅನ್ನು ಹೊಂದಿದ್ದು ಇದು 960 x 540 ರೆಸಲ್ಯೂಶನ್‌ನೊಂದಿಗೆ ಬಂದಿದೆ. ಇದು ಕಲರ್ ವೀಕ್ಷಣಾ ಆಂಗಲ್‌ಗಳನ್ನು ಹೊಂದಿದ್ದು ವೀಡಿಯೋ ವೀಕ್ಷಣೆಗೆ ಹೇಳಿ ಮಾಡಿಸಿದಂತಿದೆ.

#5

#5

ಬ್ಲ್ಯಾಕ್‌ಬೆರ್ರಿ Z3 ಯು ಬ್ಲ್ಯಾಕ್‌ಬೆರ್ರಿ ಇತ್ತೀಚಿನ ಆವೃತ್ತಿಯಾದ 10.2 ಮೊಬೈಲ್ ಓಎಸ್‌ನಲ್ಲಿ ಚಾಲನೆಯಾಗುತ್ತಿದೆ. ಈ ಓಎಸ್ ಹಿಂದಿಗಿಂತಲೂ ಹೆಚ್ಚಿನ ಮಾರ್ಪಾಡುಗಳನ್ನು ಹೊಂದಿದ್ದು ಈ ಡಿವೈಸ್ ಅನ್ನು ಅನ್‌ಲಾಕ್ ಮಾಡಲು, ಪರದೆಯ ಕೆಳಭಾಗದಿಂದ ಸ್ಲೈಡ್ ಅಪ್ ಮಾಡಬೇಕಾಗುತ್ತದೆ. ಇದು ಸನ್ನೆ ಆಧಾರಿತವಾಗಿದೆ ಅಂದರೆ ನೀವು ಈಗಾಗಲೇ ಚಾಲನೆ ಮಾಡಿದ ಕೊನೆಯ ನಾಲ್ಕು ಅಪ್ಲಿಕೇಶನ್‌ಗಳನ್ನು ಪ್ರದರ್ಶಿಸುವ ಮುಖ್ಯ ಪರದೆಗೆ ನೀವು ಹಿಂತಿರುಗುತ್ತೀರಿ.

#6

#6

ಬ್ಲ್ಯಾಕ್‌ಬೆರ್ರಿ Z3 ಯ ಒಂದು ಕೊರತೆ ಎಂದರೆ ಅಪ್ಲಿಕೇಶನ್‌ಗಳ ಕೊರತೆಯಾಗಿದೆ. ಒಮ್ಮೊಮ್ಮೆ ಕೆಲವೊಂದು ಅಗತ್ಯದ ಅಪ್ಲಿಕೇಶನ್‌ಗಳನ್ನು ಹುಡುಕುವ ಸಮಯದಲ್ಲಿ ನೀವು ಸಮಸ್ಯೆಗಳಿಗೆ ಸಿಲುಕಿ ಹಾಕಿಕೊಳ್ಳಬಹುದು. ಆದರೂ ಇದರಲ್ಲಿ ಸಾಕಷ್ಟು ಆಟಗಳು ಲಭ್ಯವಿದ್ದು ಬಳಕೆದಾರರಿಗೆ ಮೋಜನ್ನು ಉಂಟುಮಾಡಬಹುದು. ಬ್ಲ್ಯಾಕ್‌ಬೆರ್ರಿ ತನ್ನ ಸ್ಥಳೀಯ ನಕ್ಷೆಯನ್ನು ಈ ಡಿವೈಸ್‌ನಲ್ಲಿ ಸೇರಿಸಿದೆ. ಬಳಕೆದಾರರು ಬ್ಲ್ಯಾಕ್‌ಬೆರ್ರಿ ಮ್ಯಾಪ್ಸ್ ಅನ್ನು ಎಲ್ಲಾ ಬ್ಲ್ಯಾಕ್‌ಬೆರ್ರಿ 10 - ಚಾಲಿತ ಡಿವೈಸ್‌ಗಳಲ್ಲಿ ಇದೀಗ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

<center><iframe width="100%" height="360" src="//www.youtube.com/embed/L2C-9yB17xQ?feature=player_detailpage" frameborder="0" allowfullscreen></iframe></center>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X