Subscribe to Gizbot

ಬ್ಲ್ಯಾಕ್‌ಬೆರ್ರಿ Z3 ಸ್ಮಾರ್ಟ್‌ಫೋನ್ ವೀಡಿಯೊ ವಿಮರ್ಶೆ

Written By:

ಬ್ಲ್ಯಾಕ್‌ಬೆರ್ರಿ ತನ್ನ ಅತ್ಯಾಧುನಿಕ ಸ್ಮಾರ್ಟ್‌ಫೋನ್ Z3 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಲಾಂಚ್ ಮಾಡಿದೆ. ಅತ್ಯಂತ ಆಕರ್ಷಕ ಸೆಟ್ ಆಗಿರುವ ಬ್ಲ್ಯಾಕ್‌ಬೆರ್ರಿಯ ಈ ಡಿವೈಸ್ ಬೆಲೆ ರೂ 15,999 ಆಗಿದೆ. ಮತ್ತು ಇದು ಕಪ್ಪು ಬಣ್ಣದಲ್ಲಿ ಬಂದಿದ್ದು ಅತ್ಯಾಕರ್ಷಕವಾಗಿದೆ.

ಇಂದಿನ ನಮ್ಮ ಲೇಖನದಲ್ಲಿ ಫೋನ್ ಕುರಿತಾದ ಸುಂದರ ವೀಡಿಯೊವನ್ನು ಕೂಡ ನಾವು ಲಗತ್ತಿಸಿದ್ದು ಇದು ವಿವರವಾದ ಮಾಹಿತಿಯನ್ನು ನಿಮಗೆ ನೀಡಲಿದೆ. ಆದರೆ ಅದಕ್ಕೂ ಮುಂಚೆ ಡಿವೈಸ್ ಕುರಿತಾದ ಮುಖ್ಯ ಮಾಹಿತಿಗಳನ್ನು ತಿಳಿದುಕೊಂಡು ನಂತರ ವೀಡಿಯೊಗೆ ಗಮನ ಹರಿಸಿ.

ಅತ್ಯಾಕರ್ಷಕ ಹ್ಯಾಂಡ್‌ಸೆಟ್ ಆಗಿ ಬ್ಲ್ಯಾಕ್‌ಬೆರ್ರಿ Z3

ಬ್ಲ್ಯಾಕ್‌ಬೆರ್ರಿ Z3, 5 ಇಂಚಿನ qHD ಡಿಸ್‌ಪ್ಲೇಯನ್ನು ಹೊಂದಿದ್ದು ಇದರ ರೆಸಲ್ಯೂಶನ್ 960 x 540 ಪಿಕ್ಸೆಲ್‌ಗಳಾಗಿವೆ. ಇದರಲ್ಲಿ 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಇದ್ದು 400 ಡ್ಯುಯಲ್ ಕೋರ್ ಪ್ರೊಸೆಸರ್ ಅನ್ನು ಡಿವೈಸ್ ಹೊಂದಿದೆ. ಇನ್ನು ಫೋನ್‌ನ RAM ಶಕ್ತಿ 1.5GB ಆಗಿದ್ದು ಇದರ ಆಂತರಿಕ ಸಂಗ್ರಹಣಾ ಶಕ್ತಿ 8 ಜಿಬಿಯಾಗಿದೆ ಮತ್ತು ಇದನ್ನು ಎಸ್‌ಡಿ ಕಾರ್ಡ್ ಮೂಲಕ 32 ಜಿಬಿಗೆ ವಿಸ್ತರಿಸಬಹುದಾಗಿದೆ.

Z3 ಯಲ್ಲಿ ಬ್ಲ್ಯಾಕ್‌ಬೆರ್ರಿ ಆವೃತ್ತಿ 10.2.1 ಓಎಸ್ ಚಾಲನೆಯಾಗುತ್ತಿದೆ. ಫೋನ್‌ನ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 1.1 ಮೆಗಾಪಿಕ್ಸೆಲ್ ಆಗಿದೆ. ಇನ್ನು ಫೋನ್‌ನ ಸಂಪರ್ಕ ಅಂಶಗಳ ಕಡೆಗೆ ಗಮನ ಹರಿಸುವುದಾದರೆ ಇದು 3G, GPRS, ಬ್ಲ್ಯೂಟೂತ್, ವೈ-ಫೈ, GPS ಅನ್ನು ಒಳಗೊಂಡಿದೆ. ಫೋನ್ ತಯಾರಕರು 2,500mAh ಬ್ಯಾಟರಿಯನ್ನು ಡಿವೈಸ್‌ನಲ್ಲಿ ಅಳವಡಿಸಿದ್ದಾರೆ.ಸ್ಪೇನ್ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ನಲ್ಲಿ ಬ್ಲ್ಯಾಕ್‌ಬೆರ್ರಿ ಈ ಫೋನ್ ಅನ್ನು ಪ್ರದರ್ಶಿಸಿತು. ಫೋಕ್ಸನ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಮೊದಲ ಉತ್ಪನ್ನವಾಗಿ Z3 ಕಂಡುಬಂದಿದೆ.

<center><iframe width="100%" height="360" src="//www.youtube.com/embed/iUBXkHQ23GI?feature=player_embedded" frameborder="0" allowfullscreen></iframe></center>

English summary
This article tells about BlackBerry Z3 Smartphone Unboxing video review.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot