Subscribe to Gizbot

50 ದಿನಗಳ ಬ್ಯಾಟರಿ ಸ್ಟಾಂಡ್‌ಬೈ ನೊಂದಿಗೆ ನಾಲ್ಕು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್..!

Written By:

ಎಷ್ಟು ದುಡ್ಡುಕೊಟ್ಟು ಕೊಂಡರು ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಬರುತ್ತಿಲ್ಲ ಎಂಬುದು ಹಲವರ ಸಮಸ್ಯೆಯಾಗಿದೆ. ಇಲ್ಲವೇ ಸದಾ ಚಾರ್ಜಿಗೆ ಹಾಕಿರಬೇಕು ಅಥವಾ ಪವರ್ ಬ್ಯಾಂಕಿನೊಂದಿಗೆ ಸಿಕ್ಕಿಸಿಕೊಂಡು ತಿರುಗಬೇಕು ಎನ್ನುವವರು ನಮ್ಮ ನಿಮ್ಮ ನಡುವೆ ಸಿಗುತ್ತಾರೆ. ಈ ಬ್ಯಾಟರಿ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿಯೇ ಮಾರುಕಟ್ಟೆಗೆ ಕಾಲಿಟ್ಟಿದೆ ಅತೀ ದೊಡ್ಡ ಬ್ಯಾಟರಿಯನ್ನು ಹೊಂದಿರುವ ಬ್ಲಾಕ್ ವಿವ್ P10000 ಪ್ರೋ ಸ್ಮಾರ್ಟ್‌ಫೋನ್‌.

50 ದಿನಗಳ ಬ್ಯಾಟರಿ ಸ್ಟಾಂಡ್‌ಬೈ ನೊಂದಿಗೆ ನಾಲ್ಕು ಕ್ಯಾಮೆರಾ ಹೊಂದಿರುವ ಫೋನ್..!

ಈ ಸ್ಮಾರ್ಟ್‌ಫೋನ್ ಕೇವಲ ದೊಡ್ಡ ಬ್ಯಾಟರಿಯನ್ನು ಹೊಂದಿರುವುದು ಮಾತ್ರವಲ್ಲವೇ ಮಾರುಕಟ್ಟೆಯಲ್ಲಿ ಟ್ರೆಂಟ್ ಆಗಿರುವ ಎಲ್ಲಾ ವಿಶೇಷತೆಗಳೊಂದಿಗೆ ಕಾಣಿಸಿಕೊಳ್ಳುತ್ತಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅತೀ ದೊಡ್ಡ ಬ್ಯಾಟರಿ:

ಅತೀ ದೊಡ್ಡ ಬ್ಯಾಟರಿ:

ಸದ್ಯ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಬ್ಯಾಟರಿಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಬ್ಲಾಕ್ ವಿವ್ P10000 ಪ್ರೋ ಸ್ಮಾರ್ಟ್‌ಫೋನಿನಲ್ಲಿ 110000mAh ನಷ್ಟು ದೊಡ್ಡದಾದ ಬ್ಯಾಟರಿಯನ್ನು ಕಾಣಬಹುದಾಗಿದೆ. ನಿಮ್ಮ ಸಾಮಾನ್ಯ ಸ್ಮಾರ್ಟ್‌ಫೋನ್‌ ಅನ್ನು ಮೂರು ನಾಲ್ಕು ಬಾರಿ ಚಾರ್ಜ್ ಮಾಡಿಕೊಳ್ಳುವ ಪವರ್ ಬ್ಯಾಂಕಿನಲ್ಲಿಯೂ ಇಷ್ಟು ದೊಡ್ಡ ಪ್ರಮಾಣದ ಬ್ಯಾಟರಿಯನ್ನು ಕಾಣಲು ಸಾಧ್ಯವಿಲ್ಲ.

ಒಂದೇ ಚಾರ್ಜ್ 7 ದಿನ ಬಾಳಿಕೆ:

ಒಂದೇ ಚಾರ್ಜ್ 7 ದಿನ ಬಾಳಿಕೆ:

ಬ್ಲಾಕ್ ವಿವ್ P10000 ಪ್ರೋ ಸ್ಮಾರ್ಟ್‌ಫೋನ್‌ 50 ದಿನಗಳ ಸ್ಟಾಂಡ್‌ಬೈ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 7 ದಿನಗಳು ಕಾರ್ಯನಿರ್ವಹಿಸಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್ ಫುಲ್‌ ಚಾರ್ಜ್‌ ಆಗಲು ತೆಗೆದುಕೊಳ್ಳುವ ಸಮಯ ಕೇವಲ 25 ನಿಮಿಷಗಳು ಮಾತ್ರವೇ, ಇದಕ್ಕಾಗಿ ಫಾಸ್ಟ್ ಚಾರ್ಜಿಂಗ್ ಅನ್ನು ನೀಡಲಾಗಿದೆ. ಆದರೆ ಇಷ್ಟು ದೊಡ್ಡ ಬ್ಯಾಟರಿ ಇದ್ದರೂ ಸಹ ಈ ಸ್ಮಾರ್ಟ್‌ ಹೆಚ್ಚು ತೂಕವನ್ನು ಹೊಂದಿಲ್ಲ ಎನ್ನಲಾಗಿದೆ.

ಟಾಪ್ ಫೀಚರ್:

ಟಾಪ್ ಫೀಚರ್:

ಬ್ಲಾಕ್ ವಿವ್ P10000 ಪ್ರೋ ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನ್ ದೊಡ್ಡ ಬ್ಯಾಟರಿಯೊಂದಿಗೆ ಟಾಪ್ ಫೀಚರ್ ಗಳನ್ನು ಒಳಗೊಂಡಿದ್ದು, 5.99 ಇಂಚಿನ 18:9 ಅನುಪಾತದ FHD ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೇ ಹೆಲಿಯೋ P23 ಪ್ರೋಸೆಸರ್ ನೊಂದಿಗೆ ಕಾಣಿಸಿಕೊಳ್ಳಲಿದ್ದು, 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ.

ನಾಲ್ಕು ಕ್ಯಾಮೆರಾ:

ನಾಲ್ಕು ಕ್ಯಾಮೆರಾ:

ಇದಲ್ಲದೇ ಬ್ಲಾಕ್ ವಿವ್ P10000 ಪ್ರೋ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 16MP + 0.3MP ಲೈನ್ಸ್ ಅನ್ನು ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿಯೂ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, 13MP + 0.3MP ಲೈನ್ಸ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ಫೆಷಿಯಲ್ ರೆಕಗ್ನೇಷನ್ ನೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೋಡಬಹುದಾಗಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಬ್ಲಾಕ್ ವಿವ್ P10000 ಪ್ರೋ ಸ್ಮಾರ್ಟ್‌ಫೋನ್‌ ಇಷ್ಟೆಲ್ಲಾ ಟಾಪ್ ಫೀಚರ್ ಹೊಂದಿರುವುದಲ್ಲದೇ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಜೊತೆಗೆ ಲೆದರ್ ಮತ್ತು ಗ್ಲಾಸ್ ಪ್ಯಾನಲ್ ಅನ್ನು ಹಿಂಭಾಗದಲ್ಲಿ ಕಾಣಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಪೋನ್ $200ಗೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Blackview P10000 Pro with massive 11,000mAh battery is here. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot