ವಿಶ್ವದ ಮೊದಲ 'ಬ್ಲಾಕ್‌ ಚೈನ್' ಆಧಾರಿತ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಲಗ್ಗೆ!

|

ಡೇಟಾದ ಮೇಲೆ ಸಂಪೂರ್ಣ ನಿಯಂತ್ರಣವನ್ನು ನೀಡುವಂತಹ ವಿಶ್ವದ ಮೊಟ್ಟ ಮೊದಲ ಬ್ಲಾಕ್‌ ಚೈನ್ ಆಧಾರಿತ ಸ್ಮಾರ್ಟ್‌ಫೋನ್ ಒಂದನ್ನು ಸಿಂಗಾಪುರ ಮೂಲದ ಕ್ರಿಪ್ಟೋಕರೆನ್ಸಿ ಸ್ಟಾರ್ಟ್ಅಪ್ ಅನಾವರಣಗೊಳಿಸಿದೆ. 'ಬ್ಲಾಕ್ ಆನ್ ಬ್ಲಾಕ್' (ಬಾಬ್) ಎಂದು ಹೆಸರಿಸಲ್ಪಟ್ಟ ಈ ಹ್ಯಾಂಡ್‌ಸೆಟ್ ಅನ್ನು ವಿಶ್ವದ ಮೊದಲ ಕಾರ್ಯನಿರತ ಬ್ಲಾಕ್‌ಚೇನ್ ಸಾಧನವೆಂದು ಹೆಸರಿಸಲಾಗಿದ್ದು, ಪ್ರತಿ ಬಿಟ್ ಡೇಟಾವನ್ನು ಬ್ಲಾಕ್‌ಚೈನ್ ಪರಿಸರ ವ್ಯವಸ್ಥೆ ಕಾರ್ಯಗತಗೊಳಿಸುವ ಈ ಸ್ಮಾರ್ಟ್‌ಫೋನನ್ನು 'ಪುಂಡಿ ಎಕ್ಸ್' ಸಂಸ್ಥೆ ಅಭಿವೃದ್ಧಿಪಡಿಸಿದೆ.

ವಿಕೇಂದ್ರೀಕೃತ ಬ್ಲಾಕ್‌ಚೇನ್ ನೆಟ್‌ವರ್ಕ್‌

ಈ ಬಾಬ್ ಸ್ಮಾರ್ಟ್‌ಫೋನ್ ತನ್ನ ಬಳಕೆದಾರರಿಗೆ ಕೊನೆಯಿಂದ ಕೊನೆಯವರೆಗೆ ಗೂಢಲಿಪೀಕರಣವನ್ನು ಒದಗಿಸಲಿದೆ ಎಂದು 'ಪುಂಡಿ ಎಕ್ಸ್'ತಿಳಿಸಿದೆ. ಇದು ಕೇಂದ್ರೀಕೃತ ಸೇವಾ ವೇದಿಕೆಯನ್ನು ಬಳಸುವ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಂತಲ್ಲದೆ, ಬ್ಲಾಕ್‌ಚೈನ್ ಆಧಾರಿತ ಹ್ಯಾಂಡ್‌ಸೆಟ್ ವಿಕೇಂದ್ರೀಕೃತ ಬ್ಲಾಕ್‌ಚೇನ್ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಯಾವುದೇ ಕೇಂದ್ರೀಕೃತ ಸೇವಾ ಪೂರೈಕೆದಾರರು ತಮ್ಮ ಸೇವೆಗಳನ್ನು ಬಳಸುವಾಗ ಬಳಕೆದಾರರ ಡೇಟಾವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಡಿಜಿಟಲ್ ಸೇವೆಸುರಕ್ಷಿತ

ಇದರ ಅರ್ಥವೇನೆಂದರೆ, ಬ್ಲಾಕ್ ಆನ್ ಬ್ಲಾಕ್' (ಬಾಬ್) ಫೋನ್ ಬ್ಲಾಕ್‌ಚೇನ್ ಚಾಲಿತ ಸ್ಮಾರ್ಟ್‌ಫೋನ್ ಡೇಟಾವನ್ನು ವಿಕೇಂದ್ರೀಕರಿಸುವ ಮೂಲಕ ನಿಮ್ಮ ಕರೆಗಳು, ಪಠ್ಯ ಮತ್ತು ಇತರ ಎಲ್ಲ ರೀತಿಯ ಡಿಜಿಟಲ್ ಸೇವೆಯನ್ನು ಸುರಕ್ಷಿತಗೊಳಿಸುತ್ತದೆ ಮತ್ತು ಅದಕ್ಕೆ ಗೌಪ್ಯತೆ ಮತ್ತು ಸುರಕ್ಷತೆಯ ಪದರವನ್ನು ನೀಡುತ್ತದೆ. ಈ ವಿಕೇಂದ್ರೀಕೃತ ಬ್ಲಾಕ್‌ಚೈನ್ ಮೋಡ್ ಓಪನ್ ಸೋರ್ಸ್ ಎಫ್ (ಎಕ್ಸ್) ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಬ್ಲಾಕ್ ಆನ್ ಬ್ಲಾಕ್' (ಬಾಬ್) ಎಲ್ಲಾ ವಿಕೇಂದ್ರೀಕೃತ ಪ್ರಕ್ರಿಯೆಗಳನ್ನು ಹೊಂದಿರುತ್ತದೆ ಎಂದು ಹೇಳಬಹುದು.

ಆಂಡ್ರಾಯ್ಡ್ ಮೋಡ್ ಬಳಸಬಹುದು.

ಇನ್ನು ನೀವು ಬ್ಲಾಕ್ ಆನ್ ಬ್ಲಾಕ್' (ಬಾಬ್) ಫೋನನ್ನು ಬ್ಲಾಕ್‌ಚೇನ್ ಮೋಡ್ ಮತ್ತು ಆಂಡ್ರಾಯ್ಡ್ ಮೋಡ್ ನಡುವೆ ಬಳಸಬಹುದು. ಬಳಕೆದಾರರು ಮನಬಂದಂತೆ ಕಾರ್ಯ ಬದಲಾಯಿಸಲು ಬ್ಲಾಕ್‌ಚೇನ್ ಡೆವಲಪರ್‌ಗಳೂ ಹ್ಯಾಂಡ್‌ಸೆಟ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಅಂದರೆ, ನೀವು ಸಾಮಾನ್ಯ ಆಂಡ್ರಾಯ್ಡ್ ಫೋನ್‌ನಂತೆಯೂ ಬಾಬ್ ಅನ್ನು ಬಳಸಬಹುದು. ಸಾಮಾನ್ಯ ಆಂಡ್ರಾಯ್ಡ್ ಮೋಡ್ ಸಾಂಪ್ರದಾಯಿಕ ಆಂಡ್ರಾಯ್ಡ್- ಸಾಧನಗಳನ್ನು ಹೋಲುತ್ತದೆ. ಆಂಡ್ರಾಯ್ಡ್ ಮೋಡ್‌ನಲ್ಲಿ ಬಳಸಿದಾಗ, ಬಾಬ್ ಆಂಡ್ರಾಯ್ಡ್ 9 ಆಧಾರಿತ ಇಂಟರ್ಫೇಸ್ ನೀಡುತ್ತದೆ.

ಐದು ಘಟಕಗಳನ್ನು ಒಳಗೊಂಡಿದೆ.

599 ಡಾಲರ್ ಬೆಲೆ ಹೊಂದಿರುವ ಬ್ಲಾಕ್ ಆನ್ ಬ್ಲಾಕ್' (ಬಾಬ್) ಸ್ಮಾರ್ಟ್‌ಫೋನ್ ಮೂಲಭೂತವಾಗಿ ಐದು ಘಟಕಗಳನ್ನು ಒಳಗೊಂಡಿದೆ. ಫಂಕ್ಷನ್ ಎಕ್ಸ್ ಓಎಸ್, ಫಂಕ್ಷನ್ ಎಕ್ಸ್ ಬ್ಲಾಕ್‌ಚೈನ್, ಫಂಕ್ಷನ್ ಎಕ್ಸ್ ಐಪಿಎಫ್ಎಸ್, ಎಫ್‌ಎಕ್ಸ್‌ಟಿಪಿ ಪ್ರೊಟೊಕಾಲ್ ಮತ್ತು ಫಂಕ್ಷನ್ ಎಕ್ಸ್ ಡಾಕರ್ ಫೀಚರ್ಸ್ ಅನ್ನು ತರಲಾಗಿದೆ. ಬಳಕೆದಾರರ ಅಪ್ಲಿಕೇಶನ್‌ಗಳು, ಬಳಕೆದಾರರ ಪ್ರವೇಶವನ್ನು ಹೊಂದಿರುವ ವೆಬ್‌ಸೈಟ್‌ಗಳು ಮತ್ತು ಕರೆಗಳು ಮತ್ತು ಪಠ್ಯಗಳಂತಹ ಇತರ ಡೇಟಾ ರೂಪಗಳನ್ನು ವಿಕೇಂದ್ರೀಕರಿಸಲು ಈ ಘಟಕಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ.

ಏನಿದು ಬ್ಲಾಕ್‌ ಚೈನ್?

ಬ್ಲಾಕ್​ಚೈನ್ ಒಂದು ಲೆಕ್ಕದ ಪುಸ್ತಕ ಇದ್ದಹಾಗೆ. ಬಿಟ್​ಕಾಯಿನ್ ಉದಾಹರಣೆಯನ್ನೇ ತೆಗೆದುಕೊಂಡರೆ, ಯಾರು ಯಾವಾಗ ಯಾರಿಗೆ ಹಣ ಪಾವತಿಸಿದರು ಎನ್ನುವ ವಿವರವೆಲ್ಲ ಇದರಲ್ಲಿ ದಾಖಲಾಗಿರುತ್ತದೆ. ಈ ಲೆಕ್ಕದ ಪುಸ್ತಕ ಸಾರ್ವಜನಿಕವಾದದ್ದು ಹಾಗೂ ಶಾಶ್ವತವಾದದ್ದು ಎನ್ನುವುದು ವಿಶೇಷ. ಇದರಲ್ಲಿರುವ ವಿವರಗಳು ಒಂದು ಸಂಸ್ಥೆಯಲ್ಲೋ ಅದರ ಕಂಪ್ಯೂಟರಿನಲ್ಲೋ ಮಾತ್ರವೇ ಇರದೆ ವಿಶ್ವದಾದ್ಯಂತ ಇರುವ ಸಾವಿರಾರು ಕಂಪ್ಯೂಟರುಗಳಲ್ಲಿ ಸಂಗ್ರಹವಾಗಿರುತ್ತದೆ. ಇದು ಹಣಕಾಸು ವ್ಯವಹಾರದಂತಹ ಮಹತ್ವದ ವಿವರಗಳನ್ನು ಬ್ಯಾಂಕ್​ನಂತಹ ಮಧ್ಯವರ್ತಿಗಳ ಅಗತ್ಯ ಇಲ್ಲದೆಯೇ ಉಳಿಸಿಡಲು ಅತ್ಯಂತ ಸೂಕ್ತವಾಗಿದೆ. .

ಹಲವು ಕ್ಷೇತ್ರಗಳಲ್ಲಿ ಬಳಕೆ

ಇನ್ನು ಬದುಕಿನ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುವ ಒಪ್ಪಂದಗಳನ್ನು (ಕಾಂಟ್ರಾಕ್ಟ್) ಸ್ಮಾರ್ಟ್ ಆಗಿಸುವಲ್ಲೂ ಬ್ಲಾಕ್​ಚೈನ್ ವ್ಯವಸ್ಥೆ ನೆರವಾಗಬಲ್ಲದು. ಉದಾಹರಣೆಗೆ, ಸಾಮಗ್ರಿಯ ಪೂರೈಕೆಯಾದ ಮೂವತ್ತು ದಿನಗಳಲ್ಲಿ ಹಣ ಪಾವತಿಸುವುದಾಗಿ ವಿತರಕ ಹಾಗೂ ಚಿಲ್ಲರೆ ಮಾರಾಟಗಾರ ನಡುವೆ ಒಪ್ಪಂದವಿದೆ ಎಂದುಕೊಂಡರೆ, ಇನ್​ವಾಯ್ಸ್ ಬಂದಿದೆಯೇ ಎನ್ನುವುದನ್ನೆಲ್ಲ ಗಮನಿಸಿ ಎಲ್ಲವೂ ಸರಿಯಿದ್ದಲ್ಲಿ ಮೂವತ್ತು ದಿನಗಳ ನಂತರ ವಿತರಕರಿಗೆ ತಂತಾನೇ ಹಣ ಪಾವತಿಯಾಗುವಂತೆ ಬ್ಲಾಕ್​ಚೈನ್ ವ್ಯವಸ್ಥೆ ನೋಡಿಕೊಳ್ಳಬಲ್ಲದು. ಗಾರ್ಟ್​ನರ್ ಸಂಸ್ಥೆಯ ಅಂದಾಜಿನಂತೆ 2030ರ ವೇಳೆಗೆ ಬ್ಲಾಕ್​ಚೈನ್ ವ್ಯವಸ್ಥೆಗಳ ಮೂಲಕ 3 ಟ್ರಿಲಿಯನ್ ಡಾಲರುಗಳಿಗೂ ಹೆಚ್ಚು ಮೌಲ್ಯದ ವಹಿವಾಟು ನಡೆಯಲಿದೆಯಂತೆ.

Most Read Articles
Best Mobiles in India

English summary
Singapore based Cryptocurrency startup- Pundi X has unveiled a fully-functional Blockchain-powered smartphone at IFA 2019. Named as Blok on Blok (BOB). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more