14,000 ಕ್ಕೆ 4.3 ಇಂಚ್ ಸ್ಕ್ರೀನ್ ಸ್ಮಾರ್ಟ್ ಫೋನ್

By Varun
|
14,000 ಕ್ಕೆ 4.3 ಇಂಚ್ ಸ್ಕ್ರೀನ್ ಸ್ಮಾರ್ಟ್ ಫೋನ್

ಸ್ಯಾಮ್ಸಂಗ್, HTC ಅಂತಹ ಕಂಪನಿಗಳು ಆಪಲ್ ಐಫೋನ್ ಗೆ ಸವಾಲು ಹಾಕುವಂತೆ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುವಾಗ, ನಾವೂ ಯಾಕೆ ಅಗ್ಗದ ಬೆಲೆಗೆ ತಯಾರಿಸಬಾರದು ಎಂದು ಹಲವಾರು ಭಾರತೀಯ ಕಂಪನಿಗಳಾದ ಕಾರ್ಬನ್, ಸ್ಪೈಸ್, ಮೈಕ್ರೋ ಮ್ಯಾಕ್ಸ್, ಲಾವಾ ನಂತಹ ಕಂಪನಿಗಳೂ ಆಂಡ್ರಾಯ್ಡ್ ಫೋನುಗಳನ್ನು ಬಿಟ್ಟಿವೆ.

ಇದೇ ಸಾಲಿಗೆ ಈಗ ದಕ್ಷಿಣ ಅಮೆರಿಕಾದ BLU ಎಂಬ ಹೊಸ ಕಂಪನಿಯೊಂದು ಈಗ ವಿವೋ ಎಂಬ 4.3 ಇಂಚ್ ನ ದೊಡ್ಡ AMOLED ಸ್ಕ್ರೀನ್ ಇರುವ ದ್ವಿಸಿಮ್ ಸ್ಮಾರ್ಟ್ ಫೋನ್ ಒಂದನ್ನು ಕೇವಲ 14 ಸಾವಿರ ರೂಪಾಯಿಗೆ ಹೊರತಂದಿದೆ.

ಬರಿ ಇದಷ್ಟೇ ಅಲ್ಲದೆ ಇದರ ಇತರೆ ಫೀಚರುಗಳು ಕೂಡ ಚೆನ್ನಾಗಿದೆ. ಅದರ ಮಾಹಿತಿ ಇಲ್ಲಿದೆ ನೋಡಿ:

  • 4.3 ಇಂಚ್ ಸೂಪರ್ AMOLED ಸ್ಕ್ರೀನ್

  • MediaTek MT6577 ಡ್ಯುಯಲ್ ಕೋರ್ 1GHz ಕಾರ್ಟೆಕ್ಸ್-A9 ಪ್ರೊಸೆಸರ್

  • 1GB ರಾಮ್

  • ಆಂಡ್ರಾಯ್ಡ್ 4.0 ಐಸ್ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

  • 8-ಮೆಗಾಪಿಕ್ಸೆಲ್ ಕ್ಯಾಮೆರಾ (1080 p HD ವೀಡಿಯೋ ರೆಕಾರ್ಡಿಂಗ್)

  • 3G ಮತ್ತು ವೈಫೈ ಸಂಪರ್ಕ

ಮುಂದಿನ ತಿಂಗಳು ಅಮೆರಿಕಾದಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್ ಫೋನ್, ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಬರುವ ನಿರೀಕ್ಷೆ ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X