Subscribe to Gizbot

ಬ್ಲೂ ಆರ್ 1 ಪ್ಲಸ್ ಸ್ಮಾರ್ಟ್‌ಫೋನ್‌: ವಿಶೇಷತೆ ನೋಡಿದ್ರೆ ಕೊಳ್ಳಲೇ ಬೇಕು..!!

Written By:

ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಬ್ಲೂ, ಹೊಸದಾಗಿ ಆರ್ 1 ಪ್ಲಸ್ ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದ್ದು, 4G ಸಪೋರ್ಟ್ ಮಾಡವ ಈ ಪೋನ್ ಭಾರತೀಯ ಮಾರುಕಟ್ಟೆಯಲ್ಲಿರುವ ಎಲ್ಲಾ ಬಜೆಟ್‌ಫೋನ್‌ಗಳಿಗೂ ಪ್ರಬಲ ಪ್ರತಿ ಸ್ಪರ್ಧೆಯನ್ನು ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬ್ಲೂ ಆರ್ 1 ಪ್ಲಸ್ ಸ್ಮಾರ್ಟ್‌ಫೋನ್‌: ವಿಶೇಷತೆ ನೋಡಿದ್ರೆ ಕೊಳ್ಳಲೇ ಬೇಕು..!!

ಈ ಫೋನಿನ ಫಿಚರ್‌ಗಳು ಉತ್ತಮವಾಗಿದ್ದು, ಬೆಲೆ ಕೂಡ ಕಡಿಮೆ ಎನ್ನಲಾಗಿದೆ. ಇಷ್ಟು ಕಡಿಮೆ ಬೆಲೆ ಮಿಡಿಮ್ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಆಯ್ಕೆಗಳು ಈ ಫೋನಿನಲ್ಲಿದೆ. ಅವುಗಳ ಬಗ್ಗೆ ಗಮನಹರಿಸುವುದಾದರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಡಿಸ್‌ಪ್ಲೇ:

ಉತ್ತಮ ಡಿಸ್‌ಪ್ಲೇ:

ಬ್ಲೂ ಆರ್ 1 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ ಡಿಸ್‌ಪ್ಲೇಯನ್ನು ನೋಡಬಹುದಾಗಿದೆ. 720X1280 p ರೆಸೆಲ್ಯೂಷನ್ ಗುಣಮಟ್ಟವನ್ನು ಈ ಫೋನ್ ಹೊಂದಿದೆ. ಅಲ್ಲದೇ ಕಾರ್ನಡ್ ಆನ್ ಸೆಲ್ ಗ್ಲಾಸ್ ಮತ್ತು ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಈ ಫೋನ್ ಹೊಂದಿದೆ.

 ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆ:

ಬ್ಲೂ ಆರ್ 1 ಪ್ಲಸ್ ಸ್ಮಾರ್ಟ್‌ಫೋನಿನ ಬೆಲೆ ಕಡಿಮೆ ಇರುವುದರಿಂದ ಗುಣಮಟ್ಟವು ಕಳೆಪೆ ಎಂದು ಕೊಂಡರೆ ಅದು ತಪ್ಪು. ಈ ಫೋನಿನಲ್ಲಿ 1.3 GHz ವೇಗದ ಮಿಡಿಯಾ ಟೆಕ್ 6737 ಪ್ರೋಸೆಸರ್ ಅಳವಡಿಸಲಾಗಿದ್ದು, 3GB RAM/32 GB ROM ಮತ್ತು 2GB RAM/16 GB ROM ಈ ಫೋನಿನಲ್ಲಿದೆ.

ಗುಣಮಟ್ಟದ ಕ್ಯಾಮೆರಾ:

ಗುಣಮಟ್ಟದ ಕ್ಯಾಮೆರಾ:

ಬ್ಲೂ ಆರ್ 1 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಹಿಂಭಾಗದಲ್ಲಿ 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್ ನೀಡಲಾಗಿದ್ದು, ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೋಡಬಹುದಾಗಿದೆ.

4000mAh ಬ್ಯಾಟರಿ:

4000mAh ಬ್ಯಾಟರಿ:

ಬ್ಲೂ ಆರ್ 1 ಪ್ಲಸ್ ಸ್ಮಾರ್ಟ್‌ಫೋನ್ 4000mAh ಬ್ಯಾಟರಿಯನ್ನು ಹೊಂದಿದ್ದು, ದೀರ್ಘಕಾಲದ ಬಾಳಿಕೆಯನ್ನು ನೀಡಲಿದೆ. 4G ಸಫೋರ್ಟ್ ಮಾಡಲಿದೆ. ವೈಫೈ, ಬ್ಲೂಟೂತ್ ಸಂಪರ್ಕವೂ ಇದೆ.

ಬೆಲೆ ಕೂಡ ಕಡಿಮೆ:

ಬೆಲೆ ಕೂಡ ಕಡಿಮೆ:

3GB RAM/32 GB ROM ಬ್ಲೂ ಆರ್ 1 ಪ್ಲಸ್ ಸ್ಮಾರ್ಟ್‌ಫೋನ ಬೆಲೆ ಸುಮಾರು ರೂ.10,300 ಆಗಿದ್ದು, ಇದೇ ಮಾದರಿಯಲ್ಲಿ 2GB RAM/16 GB ROM ಫೋನಿನ ಬೆಲೆ ರೂ.9,000.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
Smartphone manufacturer Blu has launched its new R1 Plus smartphone with 4G LTE connectivity. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot