Home
ಮೊಬೈಲ್

ಸಿಹಿಸುದ್ದಿ! ಇನ್ಮುಂದೆ ಸ್ಮಾರ್ಟ್‌ಫೋನ್‌ಗಳು ಅಗ್ಗ.. ಬ್ಯಾಟರಿ ತಯಾರಕರಿಗೆ ಉತ್ತೇಜನ

ಮೊಬೈಲ್ ಬಳಕೆದಾರರಿಗೆ ದೊಡ್ಡ ಸಿಹಿಸುದ್ದಿ! ಇನ್ಮುಂದೆ ಸ್ಮಾರ್ಟ್‌ಫೋನ್‌ಗಳು ಮತ್ತಷ್ಟು ಅಗ್ಗ. ಹೌದು, ಮೊಬೈಲ್ ಪ್ರಿಯರಿಗೆ ಪ್ರಧಾನಿ ನರೇಂದ್ರ ಮೋದಿ ಗುಡ್‌ ನ್ಯೂಸ್ ಕೊಟ್ಟಿದ್ದಾರೆ. ಮೊಬೈಲ್‌ಗಳು ಅಗ್ಗವಾಗಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜೊತೆಗೆ ಮೊಬೈಲ್ ಫೋನ್‌ಗಳಲ್ಲಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿ ತಯಾರಕರಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಗ್ಯಾಜೆಟ್‌ಗಳು (ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್ ಟಿವಿಗಳು), ಈ ಉತ್ಪನ್ನಗಳ ಘಟಕಗಳ ಮೇಲಿನ ಆಮದು ಸುಂಕ ಸಹ ಕಡಿಮೆ ಆಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸತತ 8ನೇ ಬಾರಿ ಕೇಂದ್ರ ಬಜೆಟ್ (Budget 2025) ಮಂಡಿಸಿದ್ಧಾರೆ. ಈ 2025-26ರ ಬಜೆಟ್ ಅನ್ನು ಪ್ರಧಾನಿ ಮೋದಿ 3.0 ಸರ್ಕಾರದ ಕ್ರಿಯಾ ಯೋಜನೆ ಎಂದು ಪರಿಗಣಿಸಲಾಗುತ್ತಿದೆ. ಮೊಬೈಲ್ ಬೆಲೆ ಇಳಿಕೆ ಜೊತೆಗೆ, ಔಷಧಿ ಮತ್ತು ಎಲೆಕ್ಟ್ರಿಕ್ ಕಾರುಗಳು ಅಗ್ಗವಾಗಲಿವೆ. ಇದಲ್ಲದೆ ಟಿವಿ, ಎಲೆಕ್ಟ್ರಿಕ್ ಕಾರುಗಳು ಮತ್ತು ಭಾರತದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳೂ ಅಗ್ಗವಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸಿಹಿಸುದ್ದಿ! ಇನ್ಮುಂದೆ ಸ್ಮಾರ್ಟ್‌ಫೋನ್‌ಗಳು ಅಗ್ಗ; ಬ್ಯಾಟರಿ ತಯಾರಕರಿಗೆ ಉತ್ತೇಜನ

ಸರ್ಕಾರಿ ಶಾಲೆಗಳಿಗೆ ಬ್ರಾಡ್​ಬ್ಯಾಂಡ್ ಸಂಪರ್ಕ

ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ವಿಸ್ತರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2014ರ ನಂತರ ಸ್ಥಾಪಿಸಲಾದ ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಐಐಟಿ ಪಾಟ್ನಾವನ್ನು ವಿಸ್ತರಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ. ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್​ನ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಸಿಲಾಗುವುದು ಎಂದು ಘೋಷಿಸಿದ್ದಾರೆ.

ಸಾಂಪ್ರದಾಯಿಕ ಬ್ಯಾಗ್​ನಲ್ಲಿ ಟ್ಯಾಬ್ಲೆಟ್​​

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಪೇಪರ್​ಲೆಸ್​ ಮೊರೆ ಹೋಗಿದ್ದಾರೆ. ಇಂದು ಡಿಜಿಟಲ್​ ಬಜೆಟ್​ ಪ್ರತಿ ಓದಿದರು. ಈ ಪ್ರತಿ ಹೊಂದಿದ ಟ್ಯಾಬ್ಲೆಟ್​ ಅನ್ನು ಸಾಂಪ್ರದಾಯಿಕವಾಗಿ ಬಹು ಖಾತಾ ಶೈಲಿಯ ಬ್ಯಾಗ್​ನಲ್ಲಿ ತೆದುಕೊಂಡು ಬಂದಿದ್ದರು. 2021ರಿಂದ ಪೇಪರ್​ ಬದಲಾಗಿ ಡಿಜಿಟಲ್​ ಟ್ಯಾಬ್ಲೆಟ್​ ಮೊರೆ ಹೋಗಲಾಗಿದೆ. ಇದೇ ಸಂಪ್ರದಾಯವನ್ನು ಇಂದು ಸಹ ನಿರ್ಮಲಾ ಸೀತಾರಾಮನ್ ಮುಂದುವರಿಸಿದರು.

ತಂತ್ರಜ್ಞಾನ ಕ್ಷೇತ್ರಕ್ಕೆ ಏನೆಲ್ಲಾ ಘೋಷಣೆ

* ಶಿಕ್ಷಣಕ್ಕಾಗಿ ಎಐನಲ್ಲಿ ಶ್ರೇಷ್ಠತಾ ಕೇಂದ್ರ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣಕ್ಕಾಗಿ 500 ಕೋಟಿ ರೂ. ವೆಚ್ಚದಲ್ಲಿ ಎಐನಲ್ಲಿ (AI) ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಕೃಷಿ, ಆರೋಗ್ಯ ಮತ್ತು ಸುಸ್ಥಿರ ನಗರಗಳಿಗಾಗಿ ಎಐನಲ್ಲಿ 3 ಕೇಂದ್ರಗಳು ಪ್ರಾರಂಭವಾಗಲಿವೆ.

* ಟೆಲಿಕಾಂ: ಕೇಂದ್ರ ಸರ್ಕಾರವು ವರ್ಗೀಕರಣ ವಿವಾದವನ್ನು ತಡೆಯುತ್ತದೆ. ಜೊತೆಗೆ ವಾಹಕ ದರ್ಜೆಯ ಈಥರ್ನೆಟ್ ಸ್ವಿಚ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.20 ರಿಂದ ಶೇ.10ಕ್ಕೆ ಇಳಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

* ಕೆವೈಸಿ (KYC) ಸರಳಗೊಳಿಸುವುದು: ಕೇಂದ್ರ ಕೆವೈಸಿ (KYC) ನೋಂದಣಿಯನ್ನು 2025 ರಲ್ಲಿ ಜಾರಿಗೆ ತರಲಾಗುವುದು. ಆವರ್ತಕ ನವೀಕರಣಗಳಿಗಾಗಿ ಸರ್ಕಾರವು ಸುವ್ಯವಸ್ಥಿತ ವ್ಯವಸ್ಥೆಯನ್ನು ಸಹ ಜಾರಿಗೆ ತರುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

* ಕೇಂದ್ರ ಸರ್ಕಾರವು ದೇಶೀಯ ಎಲೆಕ್ಟ್ರಾನಿಕ್ ಉಪಕರಣಗಳ ಉದ್ಯಮವನ್ನು ಬೆಂಬಲಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

* ಜ್ಞಾನ ಹಂಚಿಕೆಗಾಗಿ ಭಾರತೀಯ ಜ್ಞಾನ ವ್ಯವಸ್ಥೆಗಳಿಗಾಗಿ ರಾಷ್ಟ್ರೀಯ ಡಿಜಿಟಲ್ ಭಂಡಾರ. ಮುಂದಿನ ಪೀಳಿಗೆಯ ಸ್ಟಾರ್ಟ್‌ಅಪ್‌ಗಳನ್ನು ವೇಗಗೊಳಿಸಲು ದೊಡ್ಡ ತಂತ್ರಜ್ಞಾನ ನಿಧಿಯನ್ನು ಸಹ ಅನ್ವೇಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Best Mobiles in India

English summary
Finance Minister Nirmala Sitharman proposed reducing mobile phones prices in Budget 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+