ಕಡಿಮೆ ಬೆಲೆಯ Vivo V50e ಫೋನಿನಲ್ಲಿರಲಿದೆ ವೆಡ್ಡಿಂಗ್ ಪೋರ್ಟ್ರೇಟ್ ಸ್ಟುಡಿಯೋ!
ಚೀನಾದ ದೈತ್ಯ ಮೊಬೈಲ್ ಬ್ರ್ಯಾಂಡ್ Vivo ಕಂಪನಿಯು ತನ್ನ ಮುಂಬರುವ ಬಜೆಟ್ ಸ್ನೇಹಿ ಬೆಲೆಯ Vivo V50e ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ Vivo V50e ಸ್ಮಾರ್ಟ್‌ಫೋನನ್ನು ಈಗಾಗಲೇ BIS ಪ್ರಮಾಣೀಕರಣ ಸೈಟ್‌ನಲ್ಲಿ ಗುರುತಿಸಲಾಗಿದೆ ಮತ್ತು ಇತ್ತೀಚಿನ ರೆಂಡರ್‌ಗಳು ಅದರ ಸಂಪೂರ್ಣ ವಿನ್ಯಾಸವನ್ನು ಅನಾವರಣಗೊಳಿಸಿವೆ. ಇದೇ ವೇಳೆಯಲ್ಲಿ ಮತ್ತೊಂದು ಭರ್ಜರಿ ಸಿಹಿ ಸುದ್ದಿ ದೊರೆತಿದೆ. ಇತ್ತೀಚಿನ ಮಾಹಿತಿಯು ತಿಳಿಸಿರುವಂತೆ, ಮುಂಬರುವ Vivo V50e ಸ್ಮಾರ್ಟ್‌ಫೋನ್ OIS ಬೆಂಬಲದೊಂದಿಗೆ, ಬಾರತೀಯರಿಗಾಗಿ ವಿಶೇಷ ವೆಡ್ಡಿಂಗ್ ಪೋರ್ಟ್ರೇಟ್ ಸ್ಟುಡಿಯೋ ವೈಶಿಷ್ಟ್ಯವನ್ನು ಒಳಗೊಂಡಿರಲಿದೆಯಂತೆ. ಹಾಗಾದರೆ, ಏನಿದು ವಿಶೇಷ ವೈಶಿಷ್ಟ್ಯ?, ಮುಂಬರುವ Vivo V50e ಸ್ಮಾರ್ಟ್‌ಫೋನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂಬುದನ್ನು ನೋಡೋಣ ಬನ್ನಿ.
Vivo V50e ಸ್ಮಾರ್ಟ್‌ಫೋನಿನಲ್ಲಿರಲಿದೆ 50MP ಸೋನಿ IMX882 ಕ್ಯಾಮೆರಾ
ಇತ್ತಚಿನ MySmartPrice ವರದಿ ಪ್ರಕಾರ, ಬಜೆಟ್ ಸ್ನೇಹಿ ಬೆಲೆಯಲ್ಲಿ ಬರಲಿರುವ ಮುಂಬರುವ Vivo V50e ಸ್ಮಾರ್ಟ್‌ಫೋನಿನಲ್ಲಿ OIS ಬೆಂಬಲದೊಂದಿಗೆ 50MP ಸೋನಿ IMX882 ಸಂವೇದಕವನ್ನು ನೀಡಲಾಗಿದೆಯಂತೆ. ಜೊತೆಗೆ ಭಾರತದ ವಿಶೇಷ ವೆಡ್ಡಿಂಗ್ ಪೋರ್ಟ್ರೇಟ್ ಸ್ಟುಡಿಯೋ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ. ಈ ವೈಶಿಷ್ಟ್ಯವು ಛಾಯಾಗ್ರಹಣ ಉತ್ಸಾಹಿಗಳಿಗೆ ಆಕರ್ಷಕ ಆಯ್ಕೆಯಾಗಲಿದ್ದು, ಗ್ರಾಹಕರು 1x, 1.5x ಮತ್ತು 2x ಫೋಕಲ್ ಉದ್ದಗಳೊಂದಿಗೆ ಸೋನಿ ಮಲ್ಟಿಫೋಕಲ್ ಪೋರ್ಟ್ರೇಟ್ ಚಿತ್ರಗಳನ್ನು ಚಿತ್ರಿಸಲು ಸಾಧ್ಯವಾಗಲಿದೆಯಂತೆ. ಇದರಿಂದ ಗ್ರಾಹಕರ ಫೋಟೋಗ್ರಫಿ ಅನುಭವ ಅತ್ಯುತ್ತಮವಾಗಿರಲಿದೆ ಎಂದು ಎಂದುಹೇಳಲಾಗಿದೆ. ಈ ಫೋನ್ ಬಜೆಟ್ ಬೆಲೆಯದ್ದಾರೂ ಸಹ, Vivo V50e, Vivo V50 5G ಗೆ ಹೋಲುವ ಕ್ಯಾಮೆರಾ ಅನುಭವವನ್ನು ಒದಗಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

Vivo V50e ಸ್ಮಾರ್ಟ್‌ಫೋನಿನ ನಿರೀಕ್ಷಿತ ವೈಶಿಷ್ಟ್ಯಗಳು
ಇತ್ತೀಚಿನ ರೆಂಡರ್‌ಗಳ ಪ್ರಕಾರ, ಹೊಸ Vivo V50e ಸ್ಮಾರ್ಟ್‌ಫೋನಿನ ವಿನ್ಯಾಸವು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ Vivo V50 ಸ್ಮಾರ್ಟ್‌ಫೋನಿನ ವಿನ್ಯಾಸಕ್ಕೆ ಹೋಲಿಸುತ್ತಿದೆ. ಹೊಸ Vivo V50e ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿರುವ 6.77-ಇಂಚಿನ ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇಯನ್ನು ಒಳಗೊಂಡಿರಲಿದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ, Vivo V50e ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ಚಾಲಿತವಾಗಿರಲಿದ್ದು, ಇದು 8GB RAM ಮತ್ತು 256GB ವರೆಗೆ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, Vivo V50e ಸ್ಮಾರ್ಟ್‌ಫೋನ್ 50MP ಸೋನಿ IMX882 ಸಂವೇದಕವನ್ನು OIS ಬೆಂಬಲದೊಂದಿಗೆ ಹೊಂದಿದೆ ಎಂದು ಹೇಳಲಾಗಿದೆ. ಈ ಪ್ರಾಥಮಿಕ ಕ್ಯಾಮೆರಾದೊಂದಿಗೆ 8MP ಅಲ್ಟ್ರಾವೈಡ್ ಕ್ಯಾಮೆರಾ ಕೂಡ ಇರಬಹುದು. ಹಾಗೂ ಸೆಲ್ಫಿಗಳಿಗಾಗಿ, ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ 50MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇರಲಿದ್ದು, ಇದು ಶ್ರೇಷ್ಠ ಸ್ವಯಂ-ಭಾವಚಿತ್ರಗಳನ್ನು ಸೆರೆಹಿಡಿಯುವ ನಿರೀಕ್ಷೆಯಿದೆ. ಹಾಗೂ ಈ Vivo V50e ಸ್ಮಾರ್ಟ್‌ಫೋನ್ 90W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,600 mAh ದೊಡ್ಡದಾದ ಬ್ಯಾಟರಿಯನ್ನು ಹೊಂದಿರಬಹುದು ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ..
ಇದರ ಜೊತೆಗೆ, Vivo V50e ಸ್ಮಾರ್ಟ್‌ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು IP68+IP69 ರೇಟಿಂಗ್ ಮೂಲಕ ಧೂಳು ಮತ್ತು ನೀರಿನ ಪ್ರತಿರೋಧವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಖರೀದಿದಾರರು ನೀಲಮಣಿ ನೀಲಿ ಮತ್ತು ಪರ್ಲ್ ವೈಟ್ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನನ್ನು ಆಯ್ಕೆ ಮಾಡಬಹುದು. ಇನ್ನು ಈ ಬಜೆಟ್ ಸ್ನೇಹಿ ಬೆಲೆಯ ಹೊಸ Vivo V50e ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ ಮಧ್ಯಭಾಗದಲ್ಲಿ 25 ಸಾವಿರ ರೂ. ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಆದರೆ ನಿಖರವಾದ ದಿನಾಂಕವು ಇನ್ನೂ ಪ್ರಕಟವಾಗಿಲ್ಲ.


Click it and Unblock the Notifications








