ಭಾರತದ ಮಾರುಕಟ್ಟೆಗೆ ಹೊಸ 'Vivo Y39 5G' ಫೋನ್ ಎಂಟ್ರಿ!...ಕೇವಲ 15,499 ರೂ.!
ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುದಿನಗಳಿಂದ ಎದುರುನೋಡುತ್ತಿದ್ದ ಬಜೆಟ್ ಬೆಲೆಯ 'Vivo Y39 5G' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಗುರುವಾರದಂದು Vivo ಕಂಪನಿಯು ಆಯೋಜಿಸಿದ್ದ ಸರಳ ಸಮಾರಂಭದಲ್ಲಿ Vivo Y39 5G ಸ್ಮಾರ್ಟ್‌ಫೋನನ್ನು 16,999 ರೂ.ಗಳ ಆರಂಭಿಕ ಬೆಲೆಯಲ್ಲಿ ಮತ್ತು 1,500 ರ ತ್ವರಿತ ಕ್ಯಾಶ್‌ಬ್ಯಾಕ್ ಜೊತೆಗೆ ಪರಿಚಯಿಸಲಾಗಿದೆ. ಅಂದರೆ, ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ 15,499 ರೂ. ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ಬೆಲೆಯಲ್ಲಿ Vivo Y39 5G ಸ್ಮಾರ್ಟ್‌ಫೋನಿನಲ್ಲಿ 6.68-ಇಂಚಿನ (720 x 1,608 ಪಿಕ್ಸೆಲ್‌ಗಳು) LCD ಡಿಸ್‌ಪ್ಲೇ, ಕ್ವಾಲ್ಕಾಮ್‌ನ 4nm ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್ ಮತ್ತು ಹಲವಾರು AI ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಹಾಗಾದರೆ, ಹೊಸ Vivo Y39 5G ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬ ಮಾಹಿತಿಯನ್ನು ಮುಂದೆ ನೋಡೋಣ ಬನ್ನಿ.
Vivo Y39 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು.
ನೂತನ Vivo Y39 5G ಸ್ಮಾರ್ಟ್‌ಫೋನಿನಲ್ಲಿ 120Hz ರಿಫ್ರೆಶ್ ರೇಟ್ ಮತ್ತು 264 ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 6.68-ಇಂಚಿನ (720 x 1,608 ಪಿಕ್ಸೆಲ್‌ಗಳು) LCD ಪರದೆಯನ್ನು ನೀಡಲಾಗಿದೆ. ಪ್ರೊಸೆಸರ್ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ 8GB LPDDR4X RAM ಮತ್ತು 256GB ವರೆಗೆ UFS 2.2 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 4 Gen 2 SoC ನಿಂದ ಚಾಲಿತವಾಗಿದೆ. ಮತ್ತು Android 15 ಆಧಾರಿತ Funtouch OS 15 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ವಿಸ್ತರಿಸಬಹುದಾದ ಸಂಗ್ರಹಣೆಯನ್ನು ಬೆಂಬಲಿಸದಿದ್ದರೂ RAM ಅನ್ನು ವಾಸ್ತವಿಕವಾಗಿ ಹೆಚ್ಚುವರಿ 8GB ವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗೆ ಕಂಪನಿಯು ಎರಡು ವರ್ಷಗಳ Android ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಭರವಸೆ ನೀಡಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ Vivo Y39 5G ಸ್ಮಾರ್ಟ್‌ಫೋನಿನಲ್ಲಿ 50-ಮೆಗಾಪಿಕ್ಸೆಲ್ ಸೋನಿ HD ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಬೊಕೆ ಕ್ಯಾಮೆರಾವನ್ನು ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾವು ಸಿಸ್ಟಮ್ AI ನೈಟ್ ಮೋಡ್, ಡ್ಯುಯಲ್ ವ್ಯೂ ವಿಡಿಯೋ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ನಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇಷ್ಟೇ ಅ್ಲಲದೆ, ಈ ಸ್ಮಾರ್ಟ್‌ಫೋನ್ ಹಲವಾರು AI ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಫೋಟೋಗಳಿಂದ ವಸ್ತುಗಳನ್ನು ವರ್ಧಿಸಲು ಮತ್ತು ತೆಗೆದುಹಾಕಲು ಕ್ರಮವಾಗಿ AI ಫೋಟೋ ಎನ್‌ಹಾನ್ಸ್ ಮತ್ತು AI ಎರೇಸ್ ಅನ್ನು ಹೊಂದಿದೆ ಎಂದು ವಿವೋ ಕಂಪೆನಿ ಹೇಳಿಕೊಂಡಿದೆ.

ಈ ಸ್ಮಾರ್ಟ್‌ಫೋನಿನಲ್ಲಿ AI ವೈಶಿಷ್ಟ್ಯಗಳು ಕರೆಗಳ ಸಮಯದಲ್ಲಿ ಆಡಿಯೊ ಗುಣಮಟ್ಟವನ್ನು ಸುಧಾರಿಸಲು ಮತ್ತು ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡಲು ಸಹಾಯ ಮಾಡುವ AI ಆಡಿಯೊ ಅಲ್ಗಾರಿದಮ್ ಅನ್ನು ಒಳಗೊಂಡಿದೆ. ಇದಲ್ಲದೆ, AI ಸೂಪರ್‌ಲಿಂಕ್ ಮತ್ತು AI ಸ್ಕ್ರೀನ್ ಟ್ರಾನ್ಸ್‌ಲೇಷನ್ ಉತ್ಪಾದಕತೆಯನ್ನು ಹೆಚ್ಚಿಸಲು ಉದ್ದೇಶಿತವಾಗಿದೆ. ಈ ಸಾಧನವು ಸರ್ಕಲ್ ಟು ಸರ್ಚ್ ಮತ್ತು ಜೆಮಿನಿ ವಾಯ್ಸ್ ಅಸಿಸ್ಟೆಂಟ್ ಅನ್ನು ಸಹ ಒಳಗೊಂಡಿದೆ. ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್ ಬೆಂಬಲ, 5G, ಬ್ಲೂಟೂತ್ 5.0, GPS, BeiDou, GLONASS, ಗೆಲಿಲಿಯೋ, QZSS ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ ವೈಶಿಷ್ಟ್ಯಗಳು ಸೇರಿವೆ. ಇನ್ನು Vivo Y39 5G ಸ್ಮಾರ್ಟ್‌ಫೋನಿನಲ್ಲಿ 6,500mAh ಬ್ಯಾಟರಿ ಇದ್ದು, ಇದು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಭಾರತದಲ್ಲಿ Vivo Y39 5G ಸ್ಮಾರ್ಟ್‌ಫೋನಿನ ಬೆಲೆ
ಭಾರತದಲ್ಲಿ Vivo Y39 5G ಸ್ಮಾರ್ಟ್‌ಫೋನಿನ 8GB + 128GB ಕಾನ್ಫಿಗರೇಶನ್‌ಗಾಗಿ ಬೆಲೆ 16,999 ರೂ.ಗಳಿಂದ ಆರಂಭವಾಗುತ್ತದೆ, ಮತ್ತು ಇದರ 256GB ಮಾದರಿಯ ಬೆಲೆ 18,999 ರೂ. ಇದೆ. ಏಪ್ರಿಲ್ 6 ರವರೆಗೆ Vivo Y39 5G ಖರೀದಿಸುವ ಗ್ರಾಹಕರು ರೂ. 1,500 ರ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಸ್ಮಾರ್ಟ್‌ಫೋನ್ ಅನ್ನು ಅಮೆಜಾನ್, ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಎಲ್ಲಾ ಪಾಲುದಾರ ಚಿಲ್ಲರೆ ಅಂಗಡಿಗಳ ಮೂಲಕ ಲೋಟಸ್ ಪರ್ಪಲ್ ಮತ್ತು ಓಷನ್ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.


Click it and Unblock the Notifications








