ಮಾರುಕಟ್ಟೆಗೆ ಕಾಲಿರಿಸಿರುವ ಸಿಗ್ನೇಚರ್ ಟು A500 ಕಿಟ್‌ಕ್ಯಾಟ್ ಫೋನ್
ಆಗಸ್ಟ್ 2 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಹೈದ್ರಾಬಾದ್ ಮೂಲದ ಸ್ಮಾರ್ಟ್‌ಫೋನ್ ಕಂಪೆನಿ, ಸೆಲ್ಕೋನ್ ತನ್ನ ಅತ್ಯಾಧುನಿಕ ಸಿಗ್ನೇಚರ್ ಟು A500 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಇದು ಕಡಿಮೆ ದರದ 5 ಇಂಚುಳ್ಳ, 1ಜಿಬಿ RAM ಅನ್ನು ಒಳಗೊಂಡಿರುವ ಫೋನ್ ಆಗಿ ಮಾರುಕಟ್ಟೆಯಲ್ಲಿ ತನ್ನ ಹೆಸರನ್ನು ಪ್ರಸಿದ್ಧಿಗೆ ತರುವ ನಿಟ್ಟಿನಲ್ಲಿದೆ. ಈ ಫೋನ್ ಅನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ ರೂ 5,999 ಕ್ಕೆ ಪಡೆದುಕೊಳ್ಳಬಹುದಾಗಿದೆ.
ಸೆಲ್ಕೋನ್ ಸಿಗ್ನೇಚರ್ ಟು A500 ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಉಚಿತ ಫ್ಲಿಪ್ ಕವರ್‌ನೊಂದಿಗೆ ಲಭ್ಯವಿದ್ದು ಇದು ಬಜೆಟ್ ಸ್ನೇಹಿ ಬೆಲೆ ಮತ್ತು ಅತ್ಯಾಕರ್ಷಕ ವಿಶಿಷ್ಟತೆಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇನ್ನು ಈ ಫೋನ್ ಕೂಡ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಸ್ಮಾರ್ಟ್‌ಫೋನ್ ಸ್ಪರ್ಧೆಯಲ್ಲಿ ತಲೆಕೊಡಬೇಕಾದ ಪರಿಸ್ಥಿತಿ ಇದೆ.

ಮಾರುಟ್ಟೆಯಲ್ಲಿ ಇದೇ ದರದಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಒಡ್ಡುತ್ತಿರುವ ಇತರ ಫೋನ್‌ಗಳಾದ ಮೋಟೋ ಇ, ಅಸೂಸ್ ಜೆನ್‌ಫೋನ್ 4, ಕ್ಸೋಲೋ Q600s ಸದ್ಯಕ್ಕೆ ಸೆಲ್ಕೋನ್ ಸಿಗ್ನೇಚರ್ ಟು A500 ಗೆ ಭರ್ಜರಿ ಪೈಪೋಟಿಯನ್ನು ಉಂಟುಮಾಡುವಲ್ಲಿ ಮುಂದಿರುವಂತಹವುಗಳು.
ಮಿತದರದ ಕ್ವಾಡ್‌ಕೋರ್ ಫೋನ್‌ಗಳ ಸಂಗ್ರಹ
ಸೆಲ್ಕೋನ್ ಸಿಗ್ನೇಚರ್ ಟು A500: ಪ್ರಮುಖ ವಿಶೇಷತೆಗಳು
ಈ ಡಿವೈಸ್ 5 ಇಂಚಿನ (854 x 480 pixels) ಕ್ಯಾಪಸಿಟೀವ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಮತ್ತು 1.3 GHz ಡ್ಯುಯಲ್ ಕೋರ್ MediaTek MT6572M ಪ್ರೊಸೆಸರ್ ಜೊತೆಗೆ 400 GPU ಹೊಂದಾಣಿಕೆ ಇರುವ 1ಜಿಬಿ RAM ನೊಂದಿಗೆ ಬಂದಿದೆ. ಇದರಲ್ಲಿ ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಓಎಸ್ ಚಾಲನೆಯಾಗುತ್ತಿರುವುದು ಗ್ರಾಹಕರಲ್ಲಿ ಖರೀದಿಸುವ ಉತ್ಸಾಹವನ್ನು ತುಂಬುವುದಂತೂ ಖಂಡಿತ.
ಡಿವೈಸ್ 5MP ರಿಯರ್ ಕ್ಯಾಮೆರಾವನ್ನು LED ಫ್ಲ್ಯಾಶ್ ಜೊತೆಗೆ ಪಡೆದಿದ್ದು 0.3MP ಮುಂಭಾಗ ಕ್ಯಾಮೆರಾ ಇದರಲ್ಲಿದೆ. ಫೋನ್ 8 ಜಿಬಿ ಆಂತರಿಕ ಸಂಗ್ರಹವನ್ನು ಒದಗಿಸುತ್ತಿದ್ದು ಇದನ್ನು 32 ಜಿಬಿ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ. ಇನ್ನು ಸಂಪರ್ಕ ಅಂಶಗಳೆಂದರೆ 3G, ವೈ- ಫೈ 802.11 b/g/n, ಬ್ಲ್ಯೂಟೂತ್, GPS ಡ್ಯುಯಲ್ ಸಿಮ್ ಜೊತೆಗೆ ಡ್ಯುಯಲ್ ಸ್ಟ್ಯಾಂಡ್‌ಬೈ ಮೋಡ್ ಆಗಿದೆ. 9.9mm ದಪ್ಪ ಮತ್ತು 147 gram ತೂಕವನ್ನು ಹೊಂದಿರುವ ಫೋನ್ ಇದಾಗಿದ್ದು ಬ್ಯಾಟರಿ ಶಕ್ತಿ 2000 mAh ಆಗಿದೆ.
ಖರೀದಿಸಬಹುದಾದ ಟಾಪ್ ಅತಿವಿಶಿಷ್ಟ ಸ್ಮಾರ್ಟ್‌ಫೋನ್ ಮೇಳ
ಫೋನ್‌ನ ವಿಸ್ತಾರ ವಿವರಣೆಗಾಗಿ ಇದನ್ನು ಕುರಿತ ಸುಂದರ ವೀಡಿಯೋವನ್ನು ನಾವಿಲ್ಲಿ ಲಗತ್ತಿಸುತ್ತಿದ್ದೇವೆ. ಇದನ್ನು ಕೂಡ ಆಸ್ವಾದಿಸಿ.
<center><iframe width="100%" height="510" src="//www.youtube.com/embed/8II5Sa-F0i0" frameborder="0" allowfullscreen></iframe></center>


Click it and Unblock the Notifications








