ಚೇಝ್ ಸಿರೀಸ್ ಮೊಬೈಲ್ ಗಳಲ್ಲಿ ನಿಮ್ಮ ಆಯ್ಕೆ ಯಾವುದು?

Posted By: Staff
ಚೇಝ್ ಸಿರೀಸ್ ಮೊಬೈಲ್ ಗಳಲ್ಲಿ ನಿಮ್ಮ ಆಯ್ಕೆ ಯಾವುದು?
ಕಳೆದ ಎರಡು ವರ್ಷಗಳಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಬೆಳವಣಿಗೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾರತೀಯ ಗ್ರಾಹಕರನ್ನು ಉದ್ದೇಶದಲ್ಲಿಟ್ಟುಕೊಂಡು ಅನೇಕ ಮೊಬೈಲ್ ತಯಾರಿಕರು ನೂತನ ಹ್ಯಾಂಡ್ ಸೆಟ್ ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.

ಇದೀಗ ಮೊಬೈಲ್ ತಯಾರಿಕೆಗೆ ಕಾಲಿಟ್ಟಿರುವ ನೂತನ ಕಂಪನಿಯೆಂದರೆ ಕೆ.ಆರ್.ಮಂಗಳಂ ಗ್ರೂಪ್. ಈ ಕಂಪನಿ ಚೇಝ್ ಎಂಬ ಬ್ರ್ಯಾಂಡ್ ಏಳು ಸಿರೀಸ್ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದೆ.

ಅತ್ಯಾಕರ್ಷಕ ಬ್ಯಾಟರಿ ಬ್ಯಾಕಪ್, ಮಲ್ಟಿಮೀಡಿಯಾ ಬೆಂಬಲಿತವಾಗಿರುವ ಈ ಮೊಬೈಲ್ ಗಳು ಸ್ಟೈಲ್ ಲುಕ್ ಪಡೆದುಕೊಂಡಿದ್ದು, ಕೈಗೆಟುಕುವ ದರದಲ್ಲೇ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಸಿರೀಸ್ ಮೊಬೈಲಿನಲ್ಲಿ ಮೊದಲಾಗಿರುವ C123 ಮೊಬೈಲ್ ಡ್ಯೂಯಲ್ ಸಿಮ್ ಆಗಿದ್ದು, ಉತ್ತಮ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ. 1800mAh ಬ್ಯಾಟರಿಯ ಈ ಮೊಬೈಲ್ 30 ದಿನಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

C245 ಮೊಬೈಲ್ 3000 mAh ಬ್ಯಾಟರಿಯಿಂದ 55 ದಿನಗಳ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. C133 ನಲ್ಲಿ ಸ್ಪೈ ಕ್ಯಾಮ್ ಇರುವುದು ವಿಶೇಷವೆನಿಸಿದೆ. C159 ಮೊಬೈಲ್ K ಸಿರೀಸ್ ಮಾದರಿಯಾಗಿದ್ದು, ಅತ್ಯುತ್ತಮ ವಿನ್ಯಾಸ ಮತ್ತು ಅನೇಕ ಬಣ್ಣಗಳಲ್ಲಿ ಲಭ್ಯವಿದೆ. C249 ಮೊಬೈಲ್ ಒಳ್ಳೆಯ ಸಂಗೀತ ಮತ್ತು ಶಬ್ಧ ಗುಣಮಟ್ಟವನ್ನು ನೀಡುತ್ತದೆ. ಇದು 2030 ಬಾಕ್ಸ್ ಸ್ಪೀಕರ್ ಮತ್ತು ಆಂಪ್ಲಿಫೈಯರ್ ಹೊಂದಿದ್ದು ಸಖತ್ ಸೌಂಡ್ ನೀಡಲಿದೆ.

C234 ಎಂಬ ಟಚ್ ಸ್ಕ್ರೀನ್ ಫೋನನ್ನೂ ಕಂಪನಿ ಹೊರತಂದಿದೆ. ಈ ಫೋನ್ ಟಚ್ ಅಂಡ್ ಟೈಪ್ ಫೋನ್ ಆಗಿದ್ದು, ಇನ್ನೊಂದು C333 ಮೊಬೈಲ್ ಪೂರ್ಣ ಟಚ್ ಸ್ಕ್ರೀನ್ ಪಡೆದುಕೊಂಡಿದೆ. ಈ ಮೊಬೈಲಿನೊಂದಿಗೆ ಅನೇಕ ಗೇಮ್ ಮತ್ತು ಅಪ್ಲಿಕೇಶನ್ ಗಳನ್ನೂ ಒದಗಿಸಲಾಗಿದೆ.

ಮೇಲೆ ತಿಳಿಸಿದ ಎಲ್ಲಾ ಸಿರೀಸ್ ಮೊಬೈಲ್ ಗಳಲ್ಲೂ ಮೊಬೈಲ್ ಟ್ರ್ಯಾಕರ್ ಇದ್ದು, ಇದರೊಂದಿಗೆ ಆಸ್ಟ್ರಾಲೊಜಿ ಪ್ಯಾಕ್, ಮಲ್ಟಿಮೀಡಿಯಾ, ಆಡಿಯೋ ಮತ್ತು ವಿಡಿಯೋ ಫಾರ್ಮೆಟ್ ಗಳನ್ನು ಬೆಂಬಲಿಸುತ್ತದೆ. ಜೊತೆಗೆ ಸಾಮಾಜಿಕ ತಾಣಗಳ ಅಪ್ಲಿಕೇಶನ್ ಕೂಡ ಇದೆ.

ಯುವಜನತೆಯನ್ನು ಉದ್ದೇಶವಾಗಿಟ್ಟುಕೊಂಡು ಹೊರತಂದಿರುವ ಈ ಮೊಬೈಲ್ ಗಳು ಕಡಿಮೆ ಬೆಲೆಯಲ್ಲಿ ದೊರೆಯಲಿರುವುದಾಗಿ ಕಂಪನಿ ತಿಳಿಸಿದ್ದು, ಈ ಮೊಬೈಲ್ ಗಳ ನಿಖರ ಬೆಲೆ ಇನ್ನೂ ತಿಳಿದುಬಂದಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ಮೊಬೈಲ್ ಸ್ಟೋರ್ ಗಳಲ್ಲಿಯೂ ಈ ಸಿರೀಸ್ ಮೊಬೈಲ್ ಕಾಣಿಸಿಕೊಳ್ಳಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot