2016ರಲ್ಲಿ ಬಿಡುಗಡೆಗೊಂಡ ಹುವಾಯಿ ಸ್ಮಾರ್ಟ್ ಫೋನುಗಳು.

2016ರಲ್ಲಿ ಮಾರುಕಟ್ಟೆಗೆ ಬಂದ ಹುವಾಯಿ ಸ್ಮಾರ್ಟ್ ಫೋನುಗಳ ಪಟ್ಟಿ ಮಾಡಿದ್ದೀವಿ.

|

ಭಾರತದ ಮಾರುಕಟ್ಟೆಯಲ್ಲಿ ಆಕರ್ಷಕ ಫೋನುಗಳನ್ನು ಬಿಡುಗಡೆಗೊಳಿಸುತ್ತ ಚೀನಾದ ಕಂಪನಿಗಳು ಖ್ಯಾತಿ ಪಡೆದಿವೆ. ಇಂತಹ ಒಂದು ಕಂಪನಿ ಹುವಾಯಿ. ಶೆನ್ಝೆನ್ ಮೂಲದ ಹುವಾಯಿ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಅತ್ಯಾಧುನಿಕ ವಿಶೇಷತೆಗಳಿರುವ, ಉತ್ತಮ ಕ್ಯಾಮೆರಾ ಹಾಗೂ ಸಾಫ್ಟ್ ವೇರ್ ಇರುವ ಫೋನುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

2016ರಲ್ಲಿ ಬಿಡುಗಡೆಗೊಂಡ ಹುವಾಯಿ ಸ್ಮಾರ್ಟ್ ಫೋನುಗಳು.

2016 ಕೊನೆಯಾಗಿದೆ. ಈ ಸಂದರ್ಭದಲ್ಲಿ ಹುವಾಯಿ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿದ ಫೋನುಗಳೆಡೆಗೊಮ್ಮೆ ಕಣ್ಣಾಡಿಸೋಣ. ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಹುವಾಯಿ ಬಿಡುಗಡೆಗೊಳಿಸಿದ ಫೋನುಗಳ ಪಟ್ಟಿಯಿದು. ಒಮ್ಮೆ ನೋಡಿ.

ಹಾನರ್ ಮ್ಯಾಜಿಕ್.

ಹಾನರ್ ಮ್ಯಾಜಿಕ್.

ಹುವಾಯಿ ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿದ ಫ್ಲಾಗ್ ಶಿಪ್ ಫೋನಿದು. ಚೀನಾದಲ್ಲಿ ಡಿಸೆಂಬರ್ 2016ರಲ್ಲಿ ಬಿಡುಗಡೆಯಾದ ಹಾನರ್ ಮ್ಯಾಜಿಕ್ ತನ್ನ ನವೀನ ವಿನ್ಯಾಸ, ಉತ್ತಮ ಹಾರ್ಡ್ ವೇರ್, ಡುಯಲ್ ಕ್ಯಾಮೆರ ಮತ್ತು ಹೊಸ ಆರ್ಟಿಫಿಷಿಯಲ್ ಅಸಿಸ್ಟೆಂಟ್ ಮೂಲಕ ಗಮನ ಸೆಳೆಯುತ್ತದೆ.

5.09 ಇಂಚಿನ 2ಕೆ ಅಮೊಲೆಡ್ ಪರದೆಯಿರುವ ಈ ಫೋನಿನ ಪಿಕ್ಸೆಲ್ ಡೆನ್ಸಿಟಿ 577 ಪಿಪಿಐ. ಹುವಾಯಿಯ ಕಿರಿನ್ 950 ಚಿಪ್ಸೆಟ್ ಇರುವ ಫೋನಿನಲ್ಲಿ 2.3GHz, 4ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಎಫ್/2.2 ಅಪರ್ಚರ್, ಎಲ್.ಇ.ಡಿ ಫ್ಲಾಶ್ ಹೊಂದಿರುವ 12 ಮೆಗಾಪಿಕ್ಸೆಲ್ಲಿನ ಡುಯಲ್ ಕ್ಯಾಮೆರಾಗಳು ಹಿಂಬದಿಯಲ್ಲಿದ್ದರೆ ಎಫ್/2.0 ಅಪರ್ಚರ್ ಇರುವ 8 ಮೆಗಾಪಿಕ್ಸೆಲ್ಲಿನ ಸೆಲ್ಫಿ ಕ್ಯಾಮೆರ ಇದರಲ್ಲಿದೆ. ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಹಾನರ್ ಮ್ಯಾಜಿಕ್ ಲೈವ್ ಒ.ಎಸ್ ಇರುವ ಈ ಫೋನಿನಲ್ಲಿ 2,900 ಎಂ.ಎ.ಹೆಚ್ ಬ್ಯಾಟರಿಯಿದೆ.

ಹುವಾಯಿ ಪಿ9.

ಹುವಾಯಿ ಪಿ9.

ಆಗಷ್ಟ್ 2016ರಲ್ಲಿ ಬಿಡುಗಡೆಯಾದ ಹುವಾಯಿ ಪಿ9ನಲ್ಲಿ ಲ್ಯೀಕಾ ಲೆನ್ಸ್ ಇದೆ. ಸ್ಮಾರ್ಟ್ ಫೋನಿನಲ್ಲಿ ಮೊದಲ ಬಾರಿಗೆ ಲ್ಯೀಕಾ ಲೆನ್ಸ್ ಗಳನ್ನು ಉಪಯೋಗಿಸಿದ ಖ್ಯಾತಿ ಹುವಾಯಿ ಪಿ9ದು. ಈ ಸ್ಮಾರ್ಟ್ ಫೋನಿನಲ್ಲಿ ಲ್ಯೀಕಾ ಪ್ರಮಾಣೀಕೃತ 12 ಮೆಗಾಪಿಕ್ಸೆಲ್ಲಿನ ಡುಯಲ್ ಕ್ಯಾಮೆರಾಗಳಿದೆ. ಲ್ಯೀಕಾ ಸಮ್ಮರಿಟ್ ಲೆನ್ಸ್ ಇರುವ ಈ ಫೋನಿನ ಚಿತ್ರಗಳ ಗುಣಮಟ್ಟ ಅತ್ಯುತ್ತಮವಾಗಿದೆ. 5.2 ಇಂಚಿನ ಅಮೊಲೆಡ್ 2.5 ಡಿ ಕರ್ವ್ಡ್ ಗಾಜಿನ ಪರದೆ, 1920* 1080 ಪಿಕ್ಸೆಲ್ಸ್ ಪರದೆಯ ರೆಸೊಲ್ಯೂಷನ್ 423ಪಿಪಿಐನಷ್ಟಿದೆ.

ಹುವಾಯಿ ಪಿ9ರಲ್ಲಿ ಆಕ್ಟಾ ಕೋರ್ ಕಿರಿನ್ 955 ಪ್ರೊಸೆಸರ್ ಮತ್ತು ಮಾಲಿ ಟಿ 880 ಎಂಪಿ4 ಜಿಪಿಯು ಇದೆ. ಹೊಸ ಕಾರ್ಟೆಕ್ಸ್ ಎ-72 ಅನ್ನು ಮೊದಲು ಉಪಯೋಗಿಸಿದ್ದು ಹುವಾಯಿ ಪಿ9. 3ಜಿಬಿ ರ್ಯಾಮ್, 32 ಜಿಬಿ ಸಂಗ್ರಹ ಸಾಮರ್ಥ್ಯವಿದೆ, ಮೈಕ್ರೋ ಎಸ್.ಡಿ ಕಾರ್ಡ್ ಬಳಸಿಕೊಂಡು 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.

ಹಾನರ್ 8.

ಹಾನರ್ 8.

ಹಾನರ್ ಸರಣಿಯಲ್ಲಿ ಹಾನರ್ 8 ಫೋನನ್ನು ಅಕ್ಟೋಬರ್ 2016ರಲ್ಲಿ ಬಿಡುಗಡೆಗೊಳಿಸಲಾಯಿತು. ಇದರಲ್ಲೂ 12 ಮೆಗಾಪಿಕ್ಸೆಲ್ಲಿನ ಡುಯಲ್ ಕ್ಯಾಮೆರಾಗಳಿದೆ. (ಲ್ಯೀಕಾ ಲೆನ್ಸ್ ಇದರಲ್ಲಿರಲಿಲ್ಲ) 5.2 ಇಂಚಿನ, 423 ಪಿಪಿಐ ಫುಲ್ ಹೆಚ್.ಡಿ ಎಲ್.ಟಿ.ಪಿ.ಎಸ್ ಎಲ್.ಸಿ.ಡಿ ಪರದೆ ಇದರಲ್ಲಿದೆ. ಆಕ್ಟಾ ಕೋರ್ ಕಿರಿನ್ 950, ಮಾಲಿ ಟಿ880 ಜಿಪಿಯು ಹೊಂದಿರುವ ಹಾನರ್ 8ರಲ್ಲಿ 4ಜಿಬಿ ರ್ಯಾಮ್ 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು. 3,000ಎಂ.ಎ.ಹೆಚ್ ಬ್ಯಾಟರಿ ಇದರಲ್ಲಿದೆ.

 ಹಾನರ್ 8 ಸ್ಮಾರ್ಟ್.

ಹಾನರ್ 8 ಸ್ಮಾರ್ಟ್.

ಹಾನರ್ 8ರ ಜೊತೆಗೆ ಬಿಡುಗಡೆಯಾದ ಹಾನರ್ 8ಸ್ಮಾರ್ಟ್ ನ ಬೆಲೆ 19,999 ರುಪಾಯಿಗಳು. ಹಾನರ್ 8ರಲ್ಲಿರುವಂತೆಯೇ ಇದರಲ್ಲೂ 5.2ಇಂಚಿನ ಫುಲ್ ಹೆಚ್.ಡಿ ಪರದೆಯಿದೆ. ಆದರೆ ಇದರಲ್ಲಿ 2ಜಿಬಿ ರ್ಯಾಮ್ ಅಷ್ಟೇ ಇದೆ, ಜೊತೆಗೆ 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಕಿರಿನ್ 650 ಪ್ರೊಸೆಸರ್ ಹೊಂದಿರುವ ಹಾನರ್ 8 ಸ್ಮಾರ್ಟ್ ನಲ್ಲಿ 13 ಮೆಗಾಪಿಕ್ಸೆಲ್ಲಿನ ಸಿಂಗಲ್ ಕ್ಯಾಮೆರಾ ಹಿಂಬದಿಯಲ್ಲಿದ್ದರೆ 8ಮೆಗಾಪಿಕ್ಸೆಲ್ಲಿನ ಸೆಲ್ಫಿ ಕ್ಯಾಮೆರ ಮುಂದಿದೆ. 3,000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.

ಹಾನರ್ ಹಾಲಿ 3.

ಹಾನರ್ ಹಾಲಿ 3.

ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತದಲ್ಲಿ ತಯಾರಾದ ಮೊದಲ ಫೋನ್ ಹಾಲಿ 3. ಅಕ್ಟೋಬರ್ 2016ರಲ್ಲಿ ಬಿಡುಗಡೆಯಾದ ಈ ಫೋನಿನ ಬೆಲೆ 9,999 ರುಪಾಯಿ. ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಆಧಾರಿತ ಇಎಂಯುಐ 4.1 ಇದರಲ್ಲಿದೆ. ಕಿರಿನ್ 620 ಚಿಪ್ ಹೊಂದಿರುವ ಹಾಲಿ 3ರಲ್ಲಿ 2ಜಿಬಿ ರ್ಯಾಮ್ ಮತ್ತು 16 ಜಿಬಿ ಸಂಗ್ರಹ ಸಾಮರ್ಥ್ಯವಿದೆ. 128ಜಿಬಿವರೆಗಿನ ಮೈಕ್ರೋ ಎಸ್.ಡಿ ಕಾರ್ಡ್ ಅನ್ನು ಬಳಸಬಹುದು. 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಹಾಗೂ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಹೊಂದಿರುವ ಹಾಲಿ 3ರಲ್ಲಿ 3,100ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ.

ಹಾನರ್ 5ಎಕ್ಸ್.

ಹಾನರ್ 5ಎಕ್ಸ್.

ಇದರ ಬೆಲೆ 12,999 ರುಪಾಯಿಗಳು. ಜನವರಿ 2016ರಲ್ಲಿ ಬಿಡುಗಡೆಗೊಂಡ ಈ ಫೋನಿನಲ್ಲಿ 5.5 ಇಂಚಿನ ಫುಲ್ ಹೆಚ್.ಡಿ ಐಪಿಎಸ್ ಪರದೆಯಿದೆ. 64 ಬಿಟ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 616 ಆಕ್ಟಾ ಕೋರ್ ಪ್ರೊಸೆಸರ್ ಜೊತೆಗೆ ಅಡ್ರಿನೊ 405 ಜಿಪಿಯು ಇದೆ. 2ಜಿಬಿ ರ್ಯಾಮ್, 16 ಜಿಬಿ ರಾಮ್ ಮತ್ತು ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯವಿದೆ. ಆ್ಯಂಡ್ರಾಯ್ಡ್ 5.1 ಲಾಲಿಪಪ್ ಆಧಾರಿತ ಇಎಂಯುಐ 3.1 ಇದರಲ್ಲಿದೆ.

ಹಾನರ್ 6ಎಕ್ಸ್.

ಹಾನರ್ 6ಎಕ್ಸ್.

ಭಾರತದಲ್ಲಿ ಜನವರಿ 2017ರಲ್ಲಿ ಬಿಡುಗಡೆಯಾಗಲಿರುವ ಈ ಫೋನು ಚೀನಾದ ಮಾರುಕಟ್ಟೆಯಲ್ಲಿ ಅಕ್ಟೋಬರ್ 2016ರಲ್ಲಿ ಬಿಡುಗಡೆಗೊಂಡಿತ್ತು. 5.5 ಇಂಚಿನ 1920*1080 ಪಿಕ್ಸೆಲ್ಲಿನ ಪರದೆ, ಆಕ್ಟಾ ಕೋರ್ ಕಿರಿನ್ 655 ಪ್ರೊಸೆಸರ್ ಇದರಲ್ಲಿದೆ. 3ಜಿಬಿ ರ್ಯಾಮ್, 32 ಜಿಬಿ ರಾಮ್, 128ಜಿಬಿಯ ಮೈಕ್ರೋ ಎಸ್.ಡಿ ಕಾರ್ಡ್ ಬಳಸುವ ಸೌಲಭ್ಯ ಇದರಲ್ಲಿದೆ. ಹಿಂಬದಿಯಲ್ಲಿ 12 + 2 ಮೆಗಾಪಿಕ್ಸೆಲ್ಲಿನ ಡುಯಲ್ ಕ್ಯಾಮೆರಾ ಇದ್ದರೆ, ಮುಂಬದಿಯಲ್ಲಿ 8 ಮೆಗಾಪಿಕ್ಸೆಲ್ಲಿನ ಸೆಲ್ಪಿ ಕ್ಯಾಮೆರಾ ಇದೆ.

ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇರುವ ಹಾನರ್ 6ಎಕ್ಸ್ ನಲ್ಲಿ ತೆಗೆಯಲಾಗದ 3340 ಎಂ.ಎ.ಹೆಚ್ ಬ್ಯಾಟರಿಯಿದೆ.

ಹಾನರ್ 2 ಪ್ಲಸ್.

ಹಾನರ್ 2 ಪ್ಲಸ್.

ಹಾನರ್ 5ಎಕ್ಸ್ ಬಿಡುಗಡೆಗೊಳಿಸಿದ ನಂತರದಲ್ಲಿ 4ಜಿ ಸಾಮರ್ಥ್ಯವಿರುವ ಕಡಿಮೆ ಬೆಲೆಯ ಹಾನರ್ ಹಾಲಿ 2 ಪ್ಲಸ್ ಬಿಡುಗಡೆಯಾಯಿತು. ಎರಡೂ ಸಿಮ್ ಸ್ಲಾಟ್ ನಲ್ಲಿ ಸಿ.ಡಿ.ಎಂ.ಎ ಮತ್ತು ಜಿ.ಎಸ್.ಎಮ್/ಡಬ್ಲೂ.ಸಿ.ಡಿ.ಎಂ.ಎ ಬಳಸಬಹುದು. 5 ಇಂಚಿನ ಹೆಚ್.ಡಿ ಐಪಿಎಸ್ 1280*720 ಪಿಕ್ಸೆಲ್ಸ್ ಪರದೆ ಇದರಲ್ಲಿದೆ. 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ ಎಂಟಿ6735 ಪ್ರೊಸೆಸರ್ ಜೊತೆಗೆ ಮಾಲಿ ಟಿ720 ಜಿಪಿಯು ಇದೆ. 2ಜಿಬಿ ರ್ಯಾಮ್, 16 ಜಿಬಿ ರಾಮ್, 128 ಜಿಬಿವರೆಗಿನ ಮೈಕ್ರೋ ಎಸ್.ಡಿ ಕಾರ್ಡ್ ಬಳಸುವ ಸೌಲಭ್ಯವಿದೆ.

ಹಾನರ್ 5ಸಿ.

ಹಾನರ್ 5ಸಿ.

ಏಪ್ರಿಲ್ 2016ರಲ್ಲಿ ಈ ಬಜೆಟ್ ಫೋನನ್ನು ಹುವಾಯಿ ಪರಿಚಯಿಸಿತು. 10,999 ರುಪಾಯಿ ಬೆಲೆಯ ಹಾನರ್ 5ಸಿಯಲ್ಲಿ 5.2 ಇಂಚಿನ ಐಪಿಎಸ್ ಫುಲ್ ಹೆಚ್.ಡಿ 1080*1920 ಪಿಕ್ಸೆಲ್ಸ್ ಎಲ್.ಸಿ.ಡಿ ಪರದೆಯಿದೆ. ಕಿರಿನ್ 650 ಆಕ್ಟಾಕೋರ್ ಪ್ರೊಸೆಸರ್ ಇರುವ ಹಾನರ್ 5ಸಿಯಲ್ಲಿ 2ಜಿಬಿ ರ್ಯಾಮ್ ಮತ್ತು 16 ಜಿಬಿ ರಾಮ್ ಇದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿಕೊಂಡು 128ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯವೂ ಇದೆ. ಎಫ್/2.0 ಅಪರ್ಚರ್, ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಕ್ಯಾಮೆರ ಹಾಗೂ ಎಫ್/2.0 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಇದರಲ್ಲಿದೆ.

ಹಾನರ್ 5ಎ.

ಹಾನರ್ 5ಎ.

ಚೀನಾದಲ್ಲಿ ಜೂನ್ 2016ರಲ್ಲಿ ಬಿಡುಗಡೆಯಾಗಿತ್ತು ಹಾನರ್ 5ಎ. 5.5 ಇಂಚಿನ 720*1280 ಪಿಕ್ಸೆಲ್ ಹೊಂದಿರುವ ಹೆಚ್.ಡಿ ಐಪಿಎಸ್ ಪರದೆ ಇದರಲ್ಲಿದೆ. ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ಎಮೋಷನ್ ಯುಐ 4.1 ಇದರಲ್ಲಿದೆ. ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಹಾಗೂ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇರುವ ಹಾನರ್ 5ಎನಲ್ಲಿ 1.2GHz ಆಕ್ಟಾ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 617 ಪ್ರೊಸೆಸರ್ ಇದೆ. 2ಜಿಬಿ ರ್ಯಾಮ್, 16ಜಿಬಿ ರಾಮ್, ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯ ಇದರಲ್ಲಿದೆ.

ಹುವಾಯಿ ಮೇಟ್ 9.

ಹುವಾಯಿ ಮೇಟ್ 9.

ನವೆಂಬರ್ 2016ರಲ್ಲಿ ಪರಿಚಯಿಸಲಾದ ಈ ಫೋನ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. 5.9 ಇಂಚಿನ, 1080*1920 ಪಿಕ್ಸೆಲ್ಸ್ ಪರದೆ ಇರುವ ಈ ಫೋನಿನಲ್ಲಿ 1.8GHz ಆಕ್ಟಾ ಕೋರ್ ಕಿರಿನ್ 960 ಪ್ರೊಸೆಸರ್ ಇದೆ. 4ಜಿಬಿ ರ್ಯಾಮ್, 64 ಜಿಬಿ ರಾಮ್, 256ಜಿಬಿಯ ಮೈಕ್ರೋ ಎಸ್.ಡಿ ಕಾರ್ಡ್ ಬಳಸುವ ಸೌಲಭ್ಯ ಇದರಲ್ಲಿದೆ. 20ಮೆಗಾಪಿಕ್ಸೆಲ್ಲಿನ ಹಿಂಬದಿಯ ಹಾಗೂ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಇದೆ. ಆ್ಯಂಡ್ರಾಯ್ಡ್ 7.0 ಇರುವ ಮೇಟ್ 9ನಲ್ಲಿ 4,000ಎಂ.ಎ.ಹೆಚ್ ಬ್ಯಾಟರಿಯಿದೆ.

ಹುವಾಯಿ ಮೇಟ್ 9 ಲೈಟ್.

ಹುವಾಯಿ ಮೇಟ್ 9 ಲೈಟ್.

ಮೇಟ್ 9 ಫೋನಿನ ಲೈಟ್ ಆವೃತ್ತಿಯನ್ನೂ ಹುವಾಯಿ ನವೆಂಬರ್ 2016ರಲ್ಲಿ ಪರಿಚಯಿಸಿತು. 5.5 ಇಂಚಿನ 1080*1920 ಪಿಕ್ಸೆಲ್ಸ್ 2.5ಡಿ ಕರ್ವ್ಡ್ ಪರದೆ ಇದರಲ್ಲಿದೆ. ಇದರಲ್ಲಿ ಆಕ್ಟಾ ಕೋರ್ ಕಿರಿನ್ 655 ಎಸ್.ಒ.ಸಿ, 3ಜಿಬಿ ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಇದರಲ್ಲಿದೆ. 4ಜಿಬಿ ರ್ಯಾಮ್, 64 ಜಿಬಿ ರಾಮ್ ನ ಫೋನನ್ನು ಕೂಡ ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಲ್ಯೀಕಾ ಲೆನ್ಸ್ ಹೊಂದಿರುವ 12 +2 ಮೆಗಾಪಿಕ್ಸೆಲ್ಸ್ ಡುಯಲ್ ಕ್ಯಾಮೆರ ಇದರಲ್ಲಿದೆ. ಮುಂಬದಿಯಲ್ಲಿ 8 ಮೆಗಾಪಿಕ್ಸೆಲ್ಸ್ ಕ್ಯಾಮೆರಾ ಇದೆ.

ಹುವಾಯಿ ಎಂಜಾಯ್ 6ಎಸ್.

ಹುವಾಯಿ ಎಂಜಾಯ್ 6ಎಸ್.

ಡಿಸೆಂಬರ್ 2016ರಲ್ಲಿ ಬಿಡುಗಡೆಗೊಂಡ ಕಡಿಮೆ ಬೆಲೆಯ ಫೋನಿದು. 5 ಇಂಚಿನ 720*1080 ಪಿಕ್ಸೆಲ್ಸ್ ಪರದೆಯಿರುವ ಫೋನಿನಲ್ಲಿ 1.4GHz ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 435 ಪ್ರೊಸೆಸರ್ ಇದೆ. 3ಜಿಬಿ ರ್ಯಾಮ್, ಡುಯಲ್ ಸಿಮ್, 32 ಜಿಬಿ ರಾಮ್ ಇದರಲ್ಲಿದೆ. ಮೈಕ್ರೋ ಎಸ್.ಡಿ ಕಾರ್ಡ್ ಸೌಲಭ್ಯವಿಲ್ಲ. 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ, 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಇದರಲ್ಲಿದೆ. ಆ್ಯಂಡ್ರಾಯ್ಡ್ 6.0 ಹಾಗೂ 3,200 ಎಂ.ಎ.ಹೆಚ್ ಬ್ಯಾಟರಿ ಇದರಲ್ಲಿದೆ.

Best Mobiles in India

English summary
The year 2016 was full of exciting smartphones from Huawei and here"s a list of all them under one roof. Check them out yourself

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X