ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ 'ವಿಶ್ವ ಆರೋಗ್ಯ ಸಂಸ್ಥೆ' ಹೇಳಿರುವುದನ್ನು ಕೇಳಿ!

|

ಇತ್ತೀಚಿನ ತಂತ್ರಜ್ಞಾನ ಆಧಾರಿತ ಗ್ಯಾಜೆಟ್‌ಗಳು ಮಕ್ಕಳನ್ನು ಆವರಿಸುತ್ತಿರುವ ಪರಿಗೆ ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸಿದೆ. ಇತ್ತೀಚಿನ ಹೊರ ಜಗತ್ತನ್ನು ಮರೆತು ಟಿವಿ, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ವಿಡಿಯೋ ಗೇಮ್‌ಗಳಲ್ಲಿ ಮಕ್ಕಳು ಮುಳುಗಿಹೋಗುತ್ತಿರುವ ಆತಂಕಕಾರಿ ವಿದ್ಯಮಾನದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪೋಷಕರಿಗೆ ಎಚ್ಚರಿಕೆ ನೀಡಿದೆ.

ಹೌದು, ತಂತ್ರಜ್ಞಾನ ಸಾಧನಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಮಕ್ಕಳ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಹಲವು ಸಾಮಾಜಿಕ ಮತ್ತು ವೈಜ್ಞಾನಿಕ ಅಧ್ಯಯನಗಳು ನಡೆದಿವೆ. ಈ ಎಲ್ಲಾ ಅಧ್ಯಯನಗಳಲ್ಲೂ ಬಾಲ್ಯದ ಪಾಲಿಗೆ ತಂತ್ರಜ್ಞಾನದ ಬಳಕೆ ಅಪಾಯಕಾರಿ ಎಂಬುದು ಸಾಬೀತಾಗಿರುವುದರಿಂದ ಹಬ್ಲ್ಯೂಎಚ್ಒ ಪೋಷಕರಿಗೆ ನಿರ್ದೇಶನ ನೀಡಿದೆ.

ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ 'ವಿಶ್ವ ಆರೋಗ್ಯ ಸಂಸ್ಥೆ' ಹೇಳಿರುವುದನ್ನು ಕೇಳಿ!

ತಂತ್ರಜ್ಞಾನ ಸಾಧನಗಳು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವಂತಹ ವ್ಯವಸ್ಥೆ ಬದಲಾಗಬೇಕು ಎಂದು ಅಭಿಪ್ರಾಯಪಟ್ಟಿರುವ ವಿಶ್ವ ಆರೋಗ್ಯ ಸಂಸ್ಥೆ, ಇದಕ್ಕಾಗಿ ತಂತ್ರಜ್ಞಾನ ಸಾಧನಗಳಿಂದ ಮಕ್ಕಳನ್ನು ದೂರ ಇಡುವ ಮಾರ್ಗಸೂಚಿಯನ್ನೇ ಪ್ರಕಟಿಸಿದೆ. ಈ ಮಾರ್ಗಸೂಚಿಯಲ್ಲಿ ಮಕ್ಕಳು ಸ್ಕ್ರೀನ್ ಟೈಮ್ ನೋಡುವುದು ಹೇಗಿರಬೇಕು ಎಂಬುದನ್ನು ಪೋಷಕರಿಗೆ ತಿಳಿಸಲಾಗಿದೆ.

0-12 ತಿಂಗಳ ಮಕ್ಕಳು

0-12 ತಿಂಗಳ ಮಕ್ಕಳು

*ನವಜಾತ ಶಿಶುವಿಗೆ 14 ರಿಂದ 17 ಗಂಟೆ ನಿದ್ದೆ ಬೇಕಾಗುತ್ತದೆ
*ನಿರಂತರ ಮುವತ್ತು ನಿಮಿಷ ಮಗು ಹೊಟ್ಟೆ ಮೇಲೆ ಮಲಗಬೇಕು.
* ಕಡ್ಡಾಯವಾಗಿ ಗ್ಯಾಜೆಟ್ ಬಳಕೆ ನಿಷಿದ್ಧ.

1-2 ವರ್ಷ ಮಕ್ಕಳಿಗೆ

1-2 ವರ್ಷ ಮಕ್ಕಳಿಗೆ

*11 ರಿಂದ 14 ಗಂಟೆ ನಿದ್ದೆ ಬೇಕಾಗುತ್ತದೆ.
*ಕನಿಷ್ಠ ಮೂರು ಗಂಟೆ ದೈಹಿಕ ಚಟುವಟಿಕೆ.
*ಒಂದು ಗಂಟೆ ಗ್ಯಾಜೆಟ್ ಬಳಕೆ ಮಾಡಬಹುದು( ನಿರಂತರವಾಗಿರಬಾರದು).

2-5 ವರ್ಷ ಮಕ್ಕಳಿಗೆ

2-5 ವರ್ಷ ಮಕ್ಕಳಿಗೆ

*10 ರಿಂದ 13 ಗಂಟೆ ನಿದ್ದೆ ಬೇಕಾಗುತ್ತದೆ.
*ಕನಿಷ್ಠ ಮೂರು ಗಂಟೆ ದೈಹಿಕ ಚಟುವಟಿಕೆ.
*ಒಂದು ಗಂಟೆ ಗ್ಯಾಜೆಟ್ ಬಳಕೆ ಮಾಡಬಹುದು.

5 - 10 ವರ್ಷ ಮಕ್ಕಳಿಗೆ

5 - 10 ವರ್ಷ ಮಕ್ಕಳಿಗೆ

* ಕನಿಷ್ಠ 10 ಗಂಟೆ ನಿದ್ದೆ ಬೇಕಾಗುತ್ತದೆ.
*ಕನಿಷ್ಠ ನಾಲ್ಕು ಗಂಟೆ ದೈಹಿಕ ಚಟುವಟಿಕೆ.( ಹೊರಾಂಗಣ)
*ಒಂದರಿಂದ ಎರಡು ಗಂಟೆ ಗ್ಯಾಜೆಟ್ ಬಳಕೆ ಮಾಡಬಹುದು.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಸಂಶೋಧನೆ ನಡೆಸಿ ರಿಪೋರ್ಟ್ ನೀಡಲಾಗಿದೆ.

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.

ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.

ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಮೊಬೈಲ್ ಬಳಕೆಯಿಮದಾಗಿ ನರಮಂಡಲದ ರಚನೆ ಮೇಲೆ ಪರಿಣಾಮ ಬೀರುವುದರಿಮದ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಸಂಶೋಧನೆ ತಿಳಿಸಿದೆ.

ಮಕ್ಕಳ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ.

ಮಕ್ಕಳ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ.

ಮೊಬೈಲ್ ಮೂಲಕ ಸಾಮಾಜಿಕ ಮಾಧ್ಯಮಗಳ ವೀಕ್ಷಣೆ ಮಾಡುತ್ತಿರುವ ಮಕ್ಕಳ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತಿದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ. ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು.

Best Mobiles in India

English summary
Children and electronic gadgets: To grow up healthy, children need to sit less and play more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X