ಶಿಯೋಮಿಗೆ ಹೆದರಿದ ಸ್ಯಾಮ್‌ಸಂಗ್!..ಭಾರತದ ಮೊಬೈಲ್ ದಿಗ್ಗಜನಾಗಲಿದೆಯೇ ಶಿಯೋಮಿ?!!
ಉತ್ತಮ ಪ್ರೊಸೆಸರ್, ಹೆಚ್ಚು ಮೆಮೊರಿ ಹಾಗೂ ಹೆಚ್ಚು ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿರುವ 4ಜಿ ಹೊಂದಿರುವ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಬೇಡಿಕೆ.!!
ಉತ್ತಮ ಪ್ರೊಸೆಸರ್, ಹೆಚ್ಚು ಮೆಮೊರಿ ಹಾಗೂ ಹೆಚ್ಚು ಮೆಗಾಪಿಕ್ಸೆಲ್ ಕ್ಯಾಮೆರಾ ಒಳಗೊಂಡಿರುವ 4ಜಿ ಹೊಂದಿರುವ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಇದರಿಂದ ಚೀನಾ ಕಂಪೆನಿಗಳು ಹೆಚ್ಚು ಭಾರತೀಯರನ್ನು ಆಕ್ರಮಿಸಿಕೊಳ್ಳುತ್ತಿವೆ ಎಂದು ವರದಿಯೊಂದು ಹೊರಬಿದ್ದಿದೆ.!!

9,600 ರಿಂದ 12,800ರ ಬೆಲೆಯಲ್ಲಿನ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಹಾಗಾಗಿ 2017ರ ಎರಡನೇ ತ್ರೈಮಾಸಿಕದಲ್ಲಿ ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧಿಸಿವೆ.! ಹಾಗಾದರೆ, ಇತ್ತೀಚಿನ ವರದಿ ಪ್ರಕಾರ ಯಾವ ಮೊಬೈಲ್ ಕಂಪೆನಿ ಎಷ್ಟನೇ ಸ್ಥಾನದಲ್ಲಿ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಭಾರತದಲ್ಲಿ ಚೀನಾ ಕಂಪೆನಿಗಳ ಆಟ!!
ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, 2017ರ ಮೊದಲ ತ್ರೈಮಾಸಿಕದಲ್ಲಿ ಶಿಯೋಮಿ, ವಿವೊ ಮತ್ತು ಒಪ್ಪೊ ಕಂಪೆನಿಗಳ ಮಾರುಕಟ್ಟೆ ಪಾಲು ಶೇ 51 ರಷ್ಟಿತ್ತು. ಇದೀಗ ಎರಡನೇ ತ್ರೈಮಾಸಿಕದಲ್ಲಿ ಶೇ 54ಕ್ಕೆ ಏರಿಕೆಯಾಗಿದೆ.!!

ಜಾರುತ್ತಿದೆ ಸ್ಯಾಮ್‌ಸಂಗ್ ಪಾಲು!!
ಭಾರತದಲ್ಲಿ ನೋಕಿಯಾ ನಂತರ ಬಹುದೊಡ್ಡ ಮಾರುಕಟ್ಟೆ ಹೊಂದಿರುವ ಸ್ಯಾಮ್ಸಂಗ್ ಈಗಲೂ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದೆ. ಆದರೆ, ಸ್ಯಾಮ್ಸಂಗ್ ಕಂಪೆನಿ ಮಾರುಕಟ್ಟೆ ಪಾಲು ಶೇ 28 ರಿಂದ ಶೇ 24ಕ್ಕೆ ಇಳಿಕೆ ಕಂಡಿದೆ. ಸ್ಯಾಮ್‌ಸಂಗ್ ಅನ್ನು ಶಿಯೋಮಿ ಹಿಂದಿಕ್ಕಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು!!

ಎರಡನೇ ಸ್ಥಾನದಲ್ಲಿ ಶಿಯೋಮಿ!!
ಎಷ್ಟೇ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ನೀಡಿದರು ಸಹ ಚೀನಾದಲ್ಲಿ 5 ನೇ ಸ್ಥಾನದಲ್ಲಿರುವ ಶಿಯೋಮಿ ಭಾರತದಲ್ಲಿ ಮಾತ್ರ ಎಲ್ಲರ ಮನೆಮಾತಾಗಿದೆ. ಭಾರತೀಯ ಮೊಬೈಲ್ ಮಾರುಕಟ್ಟೆ ಪಾಲಿನಲ್ಲಿ ಶಿಯೋಮಿ ಎರಡನೇ ಸ್ಥಾನ ಪಡೆದುಕೊಂಡಿದ್ದು ಶೇ 17 ರಷ್ಟು ಪಾಲು ಹೊಂದಿದೆ.! ಇನ್ನು ವಿವೊ, ಶೇ 13 ರಷ್ಟು ಪಾಲು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ.!!

ಭಾರತದ ಕಂಪೆನಿಗಳು ಸಹ ಲಾಭದಲ್ಲಿ!!
ಸತತ ಮೂರು ತ್ರೈಮಾಸಿಕಗಳಿಂದ ಮೊಬೈಲ್ ಮಾರಾಟದಲ್ಲಿ ಇಳಿಕೆ ಕಂಡಿದ್ದ ಭಾರತೀಯ ಕಂಪೆನಿಗಳು 2017ರ ಎರಡನೇ ತ್ರೈಮಾಸಿಕದಲ್ಲಿ ಶೇ 18 ರಷ್ಟು ಪ್ರಗತಿ ಸಾಧಿಸಿವೆ.!! ಹೀಗಿದ್ದರೂ ಇವುಗಳ ಒಟ್ಟಾರೆ ಮಾರುಕಟ್ಟೆ ಪಾಲು ಕೇವಲ ಶೇ 15 ರಷ್ಟಿದೆ. ಚೀನಾ ವಸ್ತ ಬಹಿಷ್ಕರಿಸಿ ಎನ್ನುವುದು ಬರಿ ಮಾತಾಗಿದೆ.!!


Click it and Unblock the Notifications