SICT ಚೋಟಾ ಮೊಬೈಲ್ ಎಂಟ್ರಿ ಯಾವಾಗ?

ಡ್ಯೂಯಲ್ ಸಿಮ್ ಆಯ್ಕೆ ಹೊಂದಿರುವ ಈ ಮೊಬೈಲ್ ಡಿಸ್ಪ್ಲೇ 2 ಇಂಚಿನದಾಗಿದೆ. ಮನರಂಜನೆಗೆಂದು ಮೊಬೈಲಿನಲ್ಲಿ ಎಫ್ ಎಂ ಇದೆ. ಜೊತೆಗೆ AMR, MIDI, WAV ಮತ್ತು MP3 ಆಡಿಯೋ ಫಾರ್ಮೆಟ್ ಗಳನ್ನು ಬೆಂಬಲಿಸಲಿದೆ. ಬ್ಲೂಟೂಥ್ ಹೆಡ್ ಸೆಟ್ ಹೊಂದಿದ್ದವರಿಗೆ ಬ್ಲೂಟೂಥ್ A2DP ಆಯ್ಕೆಯೂ ಇದ್ದು, 20 fps ಪ್ಲೇಬ್ಯಾಕ್ ನೀಡುವ ವಿಡಿಯೋಗೆಂದು 3ಜಿಪಿ ಬೆಂಬಲವಿದೆ.
ಸುರಕ್ಷತೆಗಾಗಿ ಮೊಬೈಲಿನಲ್ಲಿ ಕಾಲ್ ಕಾಂಟಾಕ್ಟ್ ನೋಟಿಸ್ ಅಳವಡಿಸಲಾಗಿದೆ. ಬೇಡದ ಕರೆಗಳನ್ನು ನಿರ್ಬಂಧಗೊಳಿಸಲೂ ಇಲ್ಲಿ ಆಯ್ಕೆಯಿದೆ. 1.3 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರುವ ಈ ಮೊಬೈಲಿನಲ್ಲಿ ಡ್ಯೂಯಲ್ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ. ಸಂಪರ್ಕಕ್ಕೆಂದು ಅವಶ್ಯಕ ಬ್ಲೂಟೂಥ್, USB ಕೇಬಲ್ ಇದೆ. ಮೊಬೈಲ್ ನಲ್ಲಿ 16ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಸ್ಲಾಟ್ ಇದೆ.
ಈ ಚೋಟಾ ಉಸ್ತದ್ ಮೊಬೈಲ್ ನಲ್ಲಿರುವ 1450 mAh ಬ್ಯಾಟರಿಯಿಂದ 10 ಗಂಟೆ ಟಾಕ್ ಟೈಂ ನೀಡಲಿದೆ. ಕಪ್ಪು ಮತ್ತು ಗ್ರೇ ಬಣ್ಣದ ಮಿಶ್ರಣದೊಂದಿಗೆ ಮೆಟಾಲಿಕ್ ರೆಡ್ ಲೈನ್ ಮೊಬೈಲ್ ಗೆ ಇನ್ನೂ ಒಳ್ಳೆ ಲುಕ್ ನೀಡಲಿದೆ. ಮೊಬೈಲಿನ ಬೆಲೆಯೂ ಗ್ರಾಹಕರಿಗೆ ಆಶ್ಚರ್ಯ ತರುವುದೆಂದು ಮೂಲಗಳಿಂದ ತಿಳಿದುಬಂದಿದ್ದು, ಮೊಬೈಲ್ ಬಿಡುಗಡೆ ಮತ್ತು ಬೆಲೆಯ ಕುರಿತು ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ.


Click it and Unblock the Notifications








