ನೀವು ಸೆಲ್ಫಿ ಪ್ರಿಯರೇ? 20 MP ಸೆಲ್ಫಿ ಕ್ಯಾಮೆರಾ ಜೊತೆಗೆ AI ತಂತ್ರಜ್ಞಾನ ಇಲ್ಲಿದೇ ನೋಡಿ..!
ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೋ ಸೆಲ್ಫಿ ಸ್ಮಾರ್ಟ್‌ಫೋನ್‌ಗಳನ್ನು ನಿರ್ಮಿಸುವುದರಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿದೆ. ತನ್ನ ಬ್ರಾಂಡಿನ ಟ್ಯಾಗ್ ಲೈನ್‌ನಲ್ಲಿಯೇ ಕ್ಯಾಮೆರಾ ಫೋನ್ ಎಂದು ಬರೆದುಕೊಂಡಿರುವ ಒಪ್ಪೋ ತನ್ನ ಬಳಕೆದಾರರಿಗೆ ಸೆಲ್ಫಿ ಕ್ರೇಜ್ ಹೆಚ್ಚಿಸಿದೆ ಎಂದರೆ ತಪ್ಪಾಗುವುದಿಲ್ಲ. ಇದಕ್ಕಾಗಿ ಸೆಲ್ಫಿ ಕ್ಯಾಮೆರಾ ವಿಭಾಗದಲ್ಲಿ ಹಿಂದೆಂದೂ ಖಂಡಿರದ ಬದಲಾವಣೆಯನ್ನು ಮಾಡಲು ಮುಂದಾಗಿದೆ.

ಸದ್ಯ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F5 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಇದು ನ್ಯಾಚುರಲ್ ಬ್ಯೂಟಿ ಮಾದರಿಯ ಸೆಲ್ಪಿಯನ್ನು ಸೆರೆಹಿಡಿಯಲಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದ. ಇದು ಫ್ರಂಟ್ ಕ್ಯಾಮೆರಾ ಇತಿಹಾಸದಲ್ಲಿಯೇ ಹೊಸ ಭಾಷ್ಯವನ್ನು ಬರೆಯುವ ಸಾಧ್ಯತೆ ಇದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಸೆಲ್ಫಿಗಾಗಿ ಬಳಸಿಕೊಳ್ಳಲು ಮುಂದಾಗಿದೆ.

ನ್ಯಾಚುರಲ್ ಸೆಲ್ಫಿಗಳು:
ದಿನೇ ದಿನೇ ಸೆಲ್ಫಿ ಕ್ರೇಜ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಒಪ್ಪೋ F5ನಲ್ಲಿ ನ್ಯಾಚುರಲ್ ಸೆಲ್ಪಿ ತೆಗೆಯುವ ಸಲುವಾಗಿ 20MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದೆ. ಇದರಲ್ಲಿ ಬಿಲ್ಟ್ ಇನ್ AI ಬ್ಯೂಟಿ ಟೆಕ್ನಾಲಜಿಯನ್ನು ನಿಡಲಾಗಿದೆ. ಇದು ಸುಮಾರು 200 ಫೇಷಿಯಲ್ ರೆಕಗ್ನೇಷನ್ ಅನ್ನು ರೆಕಾರ್ಡ್ ಮಾಡಿಕೊಳ್ಳಲಿದೆ. ಇದರಿಂದಾಗಿ ಉತ್ತಮ ಸೆಲ್ಫಿಗಳು ಮೂಡಿಬರಲಿದೆ.

ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಲಿದೆ:
ಒಪ್ಪೋ F5 ಸ್ಮಾರ್ಟ್‌ಫೋನ್ ನಲ್ಲಿ ಅಳವಡಿರುವ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ನಿಮ್ಮ ಸ್ಕಿನ್ ಟೂನ್, ಕಲರ್, ವಯಸ್ಸು ಮತ್ತು ಹುಡುಗ-ಹುಡುಗಿಯೇ ಎಂಬುದನ್ನು ಗುರುತಿಸಲಿದೆ. ಇದರಿಂದಾಗಿ ನಿಮ್ಮ ಮುಖವನ್ನು ಸಂಫೂರ್ಣವಾಗಿ ಸ್ಕ್ಯಾನ್ ಮಾಡಿ ಉತ್ತಮ ಸೆಲ್ಫಿ ಪೋಟ್ರೇಟ್ ಗಳನ್ನು ಕ್ಲಿಕಿಸಲು ಸಹಾಯ ಮಾಡಲಿದೆ. ಅಲ್ಲದೇ ಹುಡುಗ-ಹುಡುಗಿ ಎಂದು ಗುರುತಿಸಿ ಅವರಿಗೆ ಬೇಕಾದ ಮಾದರಿಯಲ್ಲಿ ಫೋಟೊವನ್ನು ಅಂದಗೊಳಿಸಲಿದೆ.

ಸೆಲ್ಪಿ ಕೃತವೆನ್ನಿಸುವುದಿಲ್ಲ:
ಒಪ್ಪೋ F5 ಸ್ಮಾರ್ಟ್‌ಫೋನ್ ನಲ್ಲಿ ಅಳವಡಿರುವ ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದಾಗಿ ಈ ಫೋನಿನಲ್ಲಿ ತೆಗೆಯುವ ಫೋಟೋಗಳು ಕೃತಕವಾಗಿ ಎಡಿಟ್ ಮಾಡಿರುವುದು ಎನ್ನಿಸುವುದಿಲ್ಲ. ನ್ಯಾಚುರಲ್ ಆಗಿ ಮೂಡಿಬರಲಿದ್ದು, ನೋಡಿದರೆ ಇಷ್ಟವಾಗಲಿದೆ. ಸೆಲ್ಫಿಗಳು ಸುಂದರವಾಗಿ ಕಾಣಿಸಿಕೊಳ್ಳಲಿದೆ.

ಸೆಲ್ಪಿ ಕೃತವೆನ್ನಿಸುವುದಿಲ್ಲ:
ಒಪ್ಪೋ F5 ಸ್ಮಾರ್ಟ್‌ಫೋನ್ ನಲ್ಲಿ ಅಳವಡಿರುವ ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದಾಗಿ ಈ ಫೋನಿನಲ್ಲಿ ತೆಗೆಯುವ ಫೋಟೋಗಳು ಕೃತಕವಾಗಿ ಎಡಿಟ್ ಮಾಡಿರುವುದು ಎನ್ನಿಸುವುದಿಲ್ಲ. ನ್ಯಾಚುರಲ್ ಆಗಿ ಮೂಡಿಬರಲಿದ್ದು, ನೋಡಿದರೆ ಇಷ್ಟವಾಗಲಿದೆ. ಸೆಲ್ಫಿಗಳು ಸುಂದರವಾಗಿ ಕಾಣಿಸಿಕೊಳ್ಳಲಿದೆ.

ಬೇರೆ ಎಲ್ಲಿಯೂ ಈ ಮಾದರಿಯ ಸೆಲ್ಪಿ ಕಾಣಲು ಸಾಧ್ಯವಿಲ್ಲ:
ಒಪ್ಪೋ F5 ಸ್ಮಾರ್ಟ್‌ಫೋನ್ ನಲ್ಲಿ ಅಳವಡಿರುವ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಅಳವಡಿಸಲಾಗಿದ್ದು, ಈ ತಂತ್ರಜ್ಞಾನವನ್ನು ಕೇವಲ ಸೆಲ್ಪಿ ತೆಗೆಯುವ ಸಲುವಾಗಿ ಅವಳಡಿಸಿರುವ ಸ್ಮಾರ್ಟ್‌ಫೋನ್ ಅನ್ನು ಇದುವರೆಗೂ ಕಾಣಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಮೊಬೈಲ್ ಇತಿಹಾಸದಲ್ಲೇ ಇದೆ ಮೊದಲು. ನಿಮ್ಮ ಸೆಲ್ಪಿ ಆಸೆಗೆ ಇದೆ ಸರಿಯಾದ ಫೋನ್.


Click it and Unblock the Notifications








