ಇಂದು ಗ್ರ್ಯಾಂಡ್ ಎಂಟ್ರಿ ಕೊಡಲಿದೆ CMF ಫೋನ್ 1: ಖರೀದಿಗೆ ಕ್ಯೂ ಗ್ಯಾರಂಟಿ! ಬೆಲೆ ಎಷ್ಟು?
ನಥಿಂಗ್ ಮೊಬೈಲ್ ಪ್ರಿಯರ ಕಾಯುವಿಕೆ ಮುಗಿಯಿತು..! CMF ತನ್ನ ಮೊದಲ ಸ್ಮಾರ್ಟ್‌ಫೋನ್ CMF ಫೋನ್ 1 ಅನ್ನು ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದು ನಥಿಂಗ್‌ನ ಉಪ ಬ್ರಾಂಡ್ CMFನ ಮೊದಲ ಫೋನ್ ಆಗಿದೆ. ಇದನ್ನು CMF Phone 1 ಹೆಸರಿನಲ್ಲಿ ಲಾಂಚ್ ಮಾಡಲಾಗುವುದು. ಇದು ಅತ್ಯಾಕರ್ಷಕ ಫೀಚರ್ಸ್, ಅದ್ಭುತ ಕ್ಯಾಮೆರಾದೊಂದಿಗೆ ಅನಾವರಣಗೊಳ್ಳಲಿದೆ. ಕಂಪನಿಯು ಈ ಮುಂಬರುವ ಫೋನ್‌ನ ಕೆಲವು ವಿಶೇಷತೆಗಳನ್ನು ಬಿಡುಗಡೆಗು ಮುನ್ನವೇ ಖಚಿತಪಡಿಸಿದೆ. ಇದೀಗ ಈ ಫೋನ್‌ನ ಬೆಲೆ ಕೂಡ ಬಹಿರಂಗವಾಗಿದೆ. ಹಾಗಾಗಿ, ಈ ಸ್ಮಾರ್ಟ್‌ಫೋನ್‌ನ ಬೆಲೆ ಸೇರಿದಂತೆ ಎಲ್ಲಾ ವಿವರಗಳನ್ನು ತಿಳಿಯೋಣ ಬನ್ನಿ.
ನಥಿಂಗ್ ಫೋನ್‌ಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಇದೀಗ CMF Phone 1 ಮೊಬೈಲ್ ಅನ್ನು ಅನಾವರಣಗೊಳಿಸಲು ಕಂಪನಿ ಸಜ್ಜಾಗಿದೆ. ಕಂಪನಿಯ ಮೊದಲ ಬಜೆಟ್ 5G ಸ್ಮಾರ್ಟ್‌ಫೋನ್ ಹೊಸ CMF ಬಡ್ಸ್ ಮತ್ತು CMF ಸ್ಮಾರ್ಟ್‌ವಾಚ್‌ನೊಂದಿಗೆ ಬರುತ್ತದೆ.ರಿಲೀಸ್ ಬಳಿಕ, ಈ ಫೋನ್ ಅನ್ನು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಬಹುನಿರೀಕ್ಷಿತ ಮೊಬೈಲ್‌ನ ಬೆಲೆ ಎಷ್ಟು? ಫೀಚರ್ಸ್‌ಗಳೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಲಾಂಚ್ ಯಾವಾಗ? ಮತ್ತು ಎಲ್ಲಿ ಲೈವ್ ವೀಕ್ಷಿಸಬೇಕು?
CMF Phone 1 ಮೊಬೈಲ್ ಅನ್ನು ಭಾರತದಲ್ಲಿ ಇಂದು (ಜುಲೈ 8, ಸೋಮವಾರ) ಬಿಡುಗಡೆಯಾಗಲಿದೆ. ಜೊತೆಗೆ, CMF Buds Pro 2 ಹಾಗೂ CMF Watch Pro 2 ಸಹ ಲಾಂಚ್ ಆಗಲಿದೆ. ಲೈವ್ ಈವೆಂಟ್ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಇದನ್ನು ಕಂಪನಿಯ YouTube ಚಾನಲ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. CMFನ ಈ ಮೊದಲ ಫೋನ್‌ನಲ್ಲಿ ಕ್ಯಾಮೆರಾ, ಚಿಪ್‌ಸೆಟ್ ಮತ್ತು ಡಿಸ್ಪ್ಲೇ ವೈಶಿಷ್ಟ್ಯಗಳಲ್ಲಿಯೂ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ.
ಭಾರತದಲ್ಲಿ ಬೆಲೆ ಎಷ್ಟು? ಏನನ್ನು ನಿರೀಕ್ಷಿಸಬಹುದು?
CMF ಫೋನ್ 1 ಕುರಿತು ಹೇಳುವುದಾದರೆ, ಇದು ಮಾರುಕಟ್ಟೆಯಲ್ಲಿ ನಥಿಂಗ್‌ನಿಂದ ಹೆಚ್ಚು ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿರಬಹುದು. ಸೋರಿಕೆಯಾದ ವರದಿಗಳು ಭಾರತದಲ್ಲಿ CMF ಫೋನ್ 1 ಬೆಲೆ ಸುಮಾರು 17,000 ರೂಪಾಯಿಗಳಿಂದ ಪ್ರಾರಂಭವಾಗಬಹುದು ಮತ್ತು ಬ್ಯಾಂಕ್ ಆಫರ್‌ಗಳೊಂದಿಗೆ ಕಡಿಮೆಯಾಗಬಹುದು ಎಂದು ಹೇಳುತ್ತದೆ. ಆಫರ್‌ನೊಂದಿಗೆ ಇದನ್ನು 14,999 ರೂ.ಗೆ ಮಾರಾಟ ಮಾಡಬಹುದು. ಇದು ನಥಿಂಗ್ ಬ್ರ್ಯಾಂಡ್‌ನ ಕೈಗೆಟುಕುವ ದರದಲ್ಲಿ ಲಭ್ಯವಿರುವ ನಥಿಂಗ್ ಫೋನ್ 2aಗಿಂತ ಅಗ್ಗವಾಗಿರಲಿದೆ.

CMF ಫೋನ್ 1 ಮೊಬೈಲ್‌ನ ವೈಶಿಷ್ಟ್ಯಗಳು
CMF ಫೋನ್ 1 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್, HDR10+ ಬೆಂಬಲ ಮತ್ತು 2,000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 5G SoC ಚಿಪ್‌ಸೆಟ್ ಅನ್ನು ಹೊಂದಿರುತ್ತದೆ. ಇದರೊಂದಿಗೆ 8GB RAM ಅನ್ನು ಸೇರಿಸಲಾಗುತ್ತದೆ. ವಾಸ್ತವಿಕವಾಗಿ 8GB ವರೆಗೆ ವಿಸ್ತರಿಸಬಹುದು. ಭದ್ರತೆಗಾಗಿ, ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ.
22 ಗಂಟೆ ತಡೆರಹಿತ YouTube ಸ್ಟ್ರೀಮಿಂಗ್
ಈ ಫೋನ್‌ನ ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಇದು ಡ್ಯುಯಲ್ ರಿಯರ್ ಕ್ಯಾಮೆರಾ ಘಟಕದೊಂದಿಗೆ ಬರಲಿದೆ. ಇದು ಅಲ್ಟ್ರಾ XDR ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಸಂವೇದಕವನ್ನು ಒಳಗೊಂಡಿರುತ್ತದೆ. ಇನ್ನೂ ಬ್ಯಾಟರಿ ಬ್ಯಾಕಪ್ ಬಗ್ಗೆ ನೋಡುವುದಾದರೆ, ಕಂಪನಿಯು ಇದರಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಇದು 22 ಗಂಟೆಗಳ ಕಾಲ ತಡೆರಹಿತ YouTube ಸ್ಟ್ರೀಮಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.

ಈ ಫೋನ್ 4 ಬಣ್ಣಗಳಲ್ಲಿ ಲಾಂಚ್
ಈ ಮುಂಬರುವ ಫೋನ್ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು CMF ದೃಢಪಡಿಸಿದೆ. ಕಪ್ಪು, ನೀಲಿ, ತಿಳಿ ಹಸಿರು ಮತ್ತು ಕಿತ್ತಳೆ ಬಣ್ಣಗಳಿಲ್ಲಿ ಖರೀದಿಗೆ ಲಭ್ಯವಿರಲಿದೆ.. ನೀಲಿ ಮತ್ತು ಕಿತ್ತಳೆ ರೂಪಾಂತರಗಳು ಸಸ್ಯಾಹಾರಿ ಚರ್ಮದ ಫಲಕಗಳನ್ನು ಹೊಂದಿರುತ್ತದೆ. ಆದರೆ, ಕಪ್ಪು ಮತ್ತು ತಿಳಿ ಹಸಿರು ಬಣ್ಣದ ಆಯ್ಕೆಗಳು ವಿನ್ಯಾಸದ ಮುಕ್ತಾಯವನ್ನು ಹೊಂದಿರುತ್ತವೆ.


Click it and Unblock the Notifications








