ಬರೀ 15,999 ರೂ.! CMF Phone 1 ಗ್ರ್ಯಾಂಡ್ ಎಂಟ್ರಿ: ಬೆಚ್ಚಿಬಿದ್ದ ಎದುರಾಳಿಗಳು! ಜು.12ಕ್ಕೆ ಮಾರಾಟ
ದಿ ವೇಟ್ ಈಸ್ ಓವರ್..! ಮೊಬೈಲ್ ಪ್ರಿಯರು ಕಾಯುತ್ತಿದ್ದ ಆ ಕ್ಷಣ ಬಂದೇಬಿಡ್ತು. ಹೌದು, ಬಹುನಿರೀಕ್ಷಿತ CMF Phone 1 ಸ್ಮಾರ್ಟ್‌ಫೋನ್ ಇಂದು ಭಾರತದಲ್ಲಿ ಬಿಡುಗಡೆಯಾಗಿದೆ. ವಿಶೇಷವಾಗಿ 16,000 ರೂ.ಗಳ ಒಳಗಿನ ಬಜೆಟ್‌ನಲ್ಲಿ ಹೊಸ ಮೊಬೈಲ್ ಹುಡುಕುತ್ತಿರುವ ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್ ಸ್ಪೆಷಲ್ ಗಿಫ್ಟ್ ಆಗಿದೆ. ಈ ಮೊಬೈಲ್‌ನ ಸ್ಟನ್ನಿಂಗ್ ಲುಕ್, ಅದ್ಭುತ ಕ್ಯಾಮೆರಾ, ವಾವ್ ಎನಿಸುವ ಫೀಚರ್ಸ್‌ಗಳು ಗ್ರಾಹಕರ ಕಣ್ಣು ಕುಕ್ಕುತ್ತಿದೆ. CMF Phone 1 ಫೋನ್ ಖರೀದಿಗೆ ಅದೆಷ್ಟೋ ಜನರು ಕಾದು ಕುಳಿತಿದ್ದಾರೆ. ಹಾಗಿದ್ರೆ, ಈ ಫೋನ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ, ಬೆಲೆ ಮತ್ತು ಲಭ್ಯತೆ ಇತ್ಯಾದಿ ವಿವರಗಳನ್ನು ತಿಳಿಯೋಣ ಬನ್ನಿ.
ನಥಿಂಗ್‌ನ ಉಪ ಬ್ರಾಂಡ್ CMF ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಇಂದು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪರಿಚಯಿಸಿದೆ. ಇದು CMF Phone 1 ಹೆಸರಿನಲ್ಲಿ ಲೋಕಾರ್ಪಣೆಗೊಂಡಿದೆ. ಇದು CMFನ ಹೊಸ ಕೈಗೆಟುಕುವ ಫೋನ್ ಆಗಿದ್ದು, 50MP ಮುಖ್ಯ ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ ಹೊಂದಿದೆ. 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 8GB RAM ಮತ್ತು 8GB ವರೆಗಿನ ವರ್ಚುವಲ್ RAM ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.

ಈ ಫೋನ್‌ನ ಬೆಲೆ ಎಷ್ಟು? ಎಲ್ಲಿ ಖರೀದಿಸಬೇಕು?
CMF ಫೋನ್ 1 ಸ್ಮಾರ್ಟ್‌ಫೋನ್ 6GB + 128GB ಸ್ಟೋರೇಜ್ ಮಾದರಿಯ ಬೆಲೆ 15,999 ರೂ. ಇದೆ. 8GB + 256GB ಮಾದರಿಯ ಬೆಲೆ 17,999 ರೂ. ಇರಲಿದೆ. ಇದೇ ಜುಲೈ 12 ರಿಂದ ಫ್ಲಿಪ್‌ಕಾರ್ಟ್‌ನಿಂದ ಈ ಫೋನ್ ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್ ಕಿತ್ತಳೆ, ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರಲಿದೆ.
ಲಾಂಚ್ ಆಫರ್ ಮಿಸ್ ಮಾಡಿಕೊಳ್ಳಬೇಡಿ
- 1,000 ರೂ. ಬ್ಯಾಂಕ್ ಡಿಸ್ಕೌಂಟ್.
- CMF ಫೋನ್ 1 ನೊಂದಿಗೆ ನೀವು 799 ರೂ. ಬೆಲೆಗೆ CMF Power 33 ಖರೀದಿಸಬಹುದು.
- ಫ್ಲಿಪ್‌ಕಾರ್ಟ್‌ನಲ್ಲಿ CMF ಫೋನ್ 1 ಅನ್ನು ಖರೀದಿಸುವ ಗ್ರಾಹಕರಿಗೆ CMF ವಾಚ್ ಪ್ರೊ 2 ಮತ್ತು CMF ಬಡ್ಸ್ ಪ್ರೊ 2 ಮೇಲೆ 1,000 ರೂ. ರಿಯಾಯಿತಿ.
ಮೊದಲ 100 ಗ್ರಾಹಕರು CMF ಬಡ್ಸ್ ಉಚಿತ
CMF ಫೋನ್ 1 ಮತ್ತು CMF ಬಡ್ಸ್ ಪ್ರೊ 2ನ ಸೀಮಿತ ಸಂಖ್ಯೆಗಳು ವಿಶೇಷ ಪಾಪ್-ಅಪ್ ಡ್ರಾಪ್ ಮೂಲಕ ಜುಲೈ 9 ರಂದು ಮಂಗಳವಾರ ಬೆಂಗಳೂರಿನ ಲುಲು ಮಾಲ್‌ನಲ್ಲಿ ಸಂಜೆ 7 ಗಂಟೆಯಿಂದ ಲಭ್ಯವಿರುತ್ತವೆ. CMF ಫೋನ್ 1 ಅನ್ನು ಖರೀದಿಸುವ ಮೊದಲ 100 ಗ್ರಾಹಕರು CMF ಬಡ್ಸ್ ಅನ್ನು ಉಚಿತವಾಗಿ ಪಡೆಯಬಹುದು.
ಈ ಫೋನ್ ಡೈಮೆನ್ಸಿಟಿ 7300 SoC ಡೈಮೆನ್ಸಿಟಿ 7050 SoCಗೆ ಉತ್ತರಾಧಿಕಾರಿಯಾಗಿದೆ. ಆದರೆ, ಅತ್ಯಾಧುನಿಕ ವಿದ್ಯುತ್ ದಕ್ಷತೆಗಾಗಿ 4nm ಪ್ರಕ್ರಿಯೆ ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಕಂಪನಿ ಹೇಳಿದೆ. ಇದು ನಥಿಂಗ್ ಓಎಸ್ 2.6 ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ. ಕಂಪನಿಯು 2 ಆಂಡ್ರಾಯ್ಡ್ ಓಎಸ್ ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡಿದೆ.
ಅತ್ಯಾಕರ್ಷಕ ಕ್ಯಾಮೆರಾ ಸೆಟಪ್, ಸೂಪರ್ ಬ್ಯಾಟರಿ
ಈ ಫೋನ್ 50MP ಮುಖ್ಯ ಕ್ಯಾಮೆರಾ (ಸೋನಿ ಸಂವೇದಕ) ಮತ್ತು ಸೆಕೆಂಡರಿ ಪೋಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. 16MP ಫ್ರಂಟ್ ಕ್ಯಾಮೆರಾ ಇದೆ. ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. 33W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇದು 20 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು. ಇದು ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿಲ್ಲ.
CMF ಫೋನ್ 1 ಸಂಪೂರ್ಣ ಫೀಚರ್ಸ್
- ಡಿಸ್‌ಪ್ಲೇ: 6.67-ಇಂಚಿನ (2400 × 1080 ಪಿಕ್ಸೆಲ್‌ಗಳು) FHD+ ಸೂಪರ್ AMOLED ಡಿಸ್‌ಪ್ಲೇ, 960Hz PWM ಮಬ್ಬಾಗಿಸುವಿಕೆ, HDR10+, 10 ಬಿಟ್ ಪೀಕ್ ಬಣ್ಣ, 5000-700 nits ಬ್ರೈಟ್‌ನೆಸ್.
- ರಿಫ್ರೆಶ್ ರೇಟ್: 120Hz ಅಡಾಪ್ಟಿವ್ ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್.
- ಪ್ರೊಸೆಸರ್: 2.5GHz ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 4nm ಪ್ರೊಸೆಸರ್, ಜೊತೆಗೆ Mali-G615 MC2 GPU.
- ಸ್ಟೋರೇಜ್: 6GB / 8GB LPDD4X RAM ಜೊತೆಗೆ 128GB / 256GB UFS 2.2 ಸ್ಟೋರೇಜ್.
- ಮೆಮೊರಿ: ಮೈಕ್ರೊ SD ಜೊತೆಗೆ 2TB ವರೆಗೆ ವಿಸ್ತರಿಸಬಹುದಾದ ಮೆಮೊರಿ.
- OS: ನಥಿಂಗ್ ಓಎಸ್ 2.6 ಜೊತೆಗೆ ಆಂಡ್ರಾಯ್ಡ್ 14
- ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
- ಕ್ಯಾಮೆರಾ: f/1.8 ಅಪರ್ಚರ್‌ನೊಂದಿಗೆ 50MP ಮುಖ್ಯ ಕ್ಯಾಮೆರಾ, ಸೆಕೆಂಡರಿ ಪೋಟ್ರೇಟ್ ಸಂವೇದಕ.
- ಫ್ರಂಟ್ ಕ್ಯಾಮೆರಾ: 30 fps ವರೆಗೆ 4K f/2.4 ಅಪರ್ಚರ್‌ನೊಂದಿಗೆ 16MP ಫ್ರಂಟ್ ಕ್ಯಾಮರಾ, 1080p 30 fps.
- ಫಿಂಗರ್‌ಪ್ರಿಂಟ್ ಸ್ಕ್ಯಾನರ್: ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್.
- ಆಡಿಯೋ: ಯುಎಸ್‌ಬಿ ಟೈಪ್-ಸಿ ಆಡಿಯೋ, ಬಾಟಮ್-ಪೋರ್ಟ್ ಮಾಡಿದ ಸ್ಪೀಕರ್.
- ಅಳತೆ: 164x 77x 8mm (ಸ್ಟ್ಯಾಂಡರ್ಡ್) / 9mm (vegan leather).
- ತೂಕ: 197g (ಸ್ಟ್ಯಾಂಡರ್ಡ್) / 202g (vegan leather).
- ಪ್ರೊಟೆಕ್ಷನ್: ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP52 ರೇಟಿಂಗ್).
- ಬ್ಯಾಟರಿ: 5000mAh ಬ್ಯಾಟರಿ.
- ಚಾರ್ಜಿಂಗ್: 33W ವೈರ್ಡ್ ಚಾರ್ಜಿಂಗ್.
- ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 6 802.11ax (2.5GMOGHz), ಬ್ಲೂಟೂತ್ 5.3, ಜಿಪಿಎಸ್, ಯುಎಸ್‌ಬಿ ಟೈಪ್-ಸಿ.
ರಶ್ಮಿಕಾ ಮಂದಣ್ಣ ಬ್ರಾಂಡ್ ಅಂಬಾಸಿಡರ್
ನ್ಯಾಷನಲ್ ಕ್ರಶ್, ಕನ್ನಡತಿ ರಶ್ಮಿಕಾ ಮಂದಣ್ಣ ನಥಿಂಗ್ ಸಬ್ ಬ್ರ್ಯಾಂಡ್ CMFಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಕಾರ್ಲ್ ಪಿ ತನ್ನ CMF ಬ್ರ್ಯಾಂಡ್‌ನ ಹೊಸ ರಾಯಭಾರಿಯಾಗಿ ರಶ್ಮಿಕಾ ಅವರನ್ನು ಪರಿಚಯಿಸಿದ್ದಾರೆ. ಇತ್ತೀಚೆಗೆ CMF ಸ್ಮಾರ್ಟ್‌ಫೋನ್ ಮತ್ತು ಆಕ್ಸೆಸರೀಸ್ ಕಿಟ್‌ನೊಂದಿಗೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದರು. ಪೋಸ್ಟರ್‌ನಲ್ಲಿ, ರಶ್ಮಿಕಾ ಕಿತ್ತಳೆ ಬಣ್ಣದ ಉಡುಪಿನಲ್ಲಿ CMF ಫೋನ್ 1 ಮೊಬೈಲ್ ಅನ್ನು ಹಿಡಿದಿದ್ದಾರೆ. ಇದರಿಂದಾಗಿ ಈಗ ವಿಶ್ವದೆಲ್ಲೆಡೆ ರಶ್ಮಿಕಾ ಮಂದಣ್ಣ ಬಗ್ಗೆ ಹಲವು ವಿದೇಶಿಗರು ಗೂಗಲ್ ಸರ್ಚ್ ಮಾಡುತ್ತಿದ್ದಾರೆ.


Click it and Unblock the Notifications








