Home
ಮೊಬೈಲ್

ಇಷ್ಟು ಕಡಿಮೆ ಬೆಲೆಯೇ..! ನಾಳೆ CMF Phone 1 ಸೇಲ್ ಶುರು: ಮೊದಲ ದಿನವೇ ಬಂಪರ್ ಆಫರ್

ನಥಿಂಗ್‌ನ ಉಪ ಬ್ರಾಂಡ್ CMF ಇತ್ತೀಚೆಗೆ ತನ್ನ ಬಹುನಿರೀಕ್ಷಿತ CMF ಫೋನ್ 1 (CMF Phone 1) ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಇದು ಬಜೆಟ್‌ ಬೆಲೆಯ 5G ಸ್ಮಾರ್ಟ್‌ಫೋನ್ ಆಗಿದ್ದು, ಗ್ರಾಹಕರನ್ನು ಆಕರ್ಷಿಸಿದೆ. ವಿಶೇಷವಾಗಿ, 16,000 ರೂ.ಗಳ ಒಳಗಿನ ದರದಲ್ಲಿ ಹೊಸ ಮೊಬೈಲ್‌ ಹುಡುಕುತ್ತಿರುವವರಿಗೆ ಈ ಸ್ಮಾರ್ಟ್‌ಫೋನ್‌ ಉತ್ತಮ ಆಯ್ಕೆಯಾಗಿದೆ. ಇನ್ನೂ ಈ ಮೊಬೈಲ್‌ ನಾಳೆಯಿಂದ (ಜುಲೈ 12) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಹಾಗೂ ಆಫ್‌ಲೈನ್‌ ಸೈಟ್‌ಗಳ ಮೂಲಕ ಅಧಿಕೃತವಾಗಿ ಮಾರಾಟ ಪ್ರಾರಂಭಿಸಲಿದೆ.

CMF ತನ್ನ ಪ್ರಪ್ರಥಮ ಮೊಬೈಲ್‌ ಅನ್ನು CMF Phone 1 ಹೆಸರಿನಲ್ಲಿ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 4nm ಪ್ರೊಸೆಸರ್ ಹೊಂದಿದೆ. ಜೊತೆಗೆ, 50MP ಮುಖ್ಯ ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ ಪಡೆದಿದೆ. 5000mAh ಬ್ಯಾಟರಿ ಬ್ಯಾಕಪ್, 8GB RAM ಮತ್ತು 8GB ವರೆಗಿನ ವರ್ಚುವಲ್ RAM ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್‌ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ ಬನ್ನಿ.

ಇಷ್ಟು ಕಡಿಮೆ ಬೆಲೆಯೇ..! ನಾಳೆ CMF Phone 1 ಮಾರಾಟ: ಮೊದಲ ದಿನವೇ ಬಂಪರ್ ಆಫರ್

ಡಿಸ್ಕೌಂಟ್‌ನೊಂದಿಗೆ 14,999 ರೂ.ಗೆ ಖರೀದಿಸುವ ಅವಕಾಶ

CMF ಫೋನ್ 1 ಫೋನ್‌ ಎರಡು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. 6GB + 128GB ಸ್ಟೋರೇಜ್‌ ಮಾದರಿಯ ಬೆಲೆ 15,999 ರೂ. ಆಗಿದೆ. ಇನ್ನೂ, 8GB + 256GB ಮಾದರಿಯ ಬೆಲೆ 17,999 ರೂ. ಇದೆ. ಡಿಸ್ಕೌಂಟ್‌ನೊಂದಿಗೆ 14,999 ರೂ.ನಲ್ಲಿ ಖರೀದಿಸುವ ಅವಕಾಶವಿದೆ. ಈ ಮೊಬೈಲ್‌ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಕಿತ್ತಳೆ, ನೀಲಿ, ಹಸಿರು ಮತ್ತು ಕಪ್ಪು ಕಲರ್‌ನಲ್ಲಿ ಖರೀದಿಸಬಹುದು. ನಾಳೆಯಿಂದ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟವಾಗಲಿದೆ.

ಈ ಬಂಪರ್ ಆಫರ್‌ಗಳನ್ನು ಕಳೆದುಕೊಳ್ಳಬೇಡಿ

ಈ ಫೋನ್‌ನ ಖರೀದಿಯ ಮೇಲೆ ಕಂಪನಿಯು ಆಕರ್ಷಕ ಲಾಂಚ್‌ ಆಫರ್‌ಗಳನ್ನು ಘೋಷಿಸಿದೆ. ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್‌ ಬಳಸಿಕೊಂಡು CMF ಫೋನ್ 1 ಮೊಬೈಲ್ ಖರೀದಿಸುವ ಗ್ರಾಹಕರು 1,000 ರೂ. ಬ್ಯಾಂಕ್ ಡಿಸ್ಕೌಂಟ್ ಪಡೆಯಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಖರೀದಿಸಿದರೆ CMF ವಾಚ್ ಪ್ರೊ 2 ಮತ್ತು CMF ಬಡ್ಸ್ ಪ್ರೊ 2 ಮೇಲೆ 1,000 ರೂ. ರಿಯಾಯಿತಿ ನೀಡಲಾಗುವುದು. CMF ಫೋನ್ 1 ನೊಂದಿಗೆ ನೀವು 799 ರೂ.ನ CMF Power 33 ಖರೀದಿಸಬಹುದು.

CMF ಫೋನ್ 1 ಫೋನ್‌ನ ವಿಶೇಷತೆಗಳು

ಡಿಸ್ಪ್ಲೇ: ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 1080x2400 ಪಿಕ್ಸೆಲ್ ರೆಸಲ್ಯೂಶನ್, 395 PPI ಪಿಕ್ಸೆಲ್ ಸಾಂದ್ರತೆ, 120Hz ಟಚ್ ಮತ್ತು 2000nits ಗರಿಷ್ಠ ಬ್ರೈಟ್‌ನೆಸ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇಷ್ಟು ಕಡಿಮೆ ಬೆಲೆಯೇ..! ನಾಳೆ CMF Phone 1 ಮಾರಾಟ: ಮೊದಲ ದಿನವೇ ಬಂಪರ್ ಆಫರ್

ಪ್ರೊಸೆಸರ್: CMF ಫೋನ್ 1 ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 73004nm ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ Mali-G615 MC2 GPU ಹೊಂದಿದೆ. ಈ ಫೋನ್ 2.5GHZ ವರೆಗೆ ಹೆಚ್ಚಿನ ಗಡಿಯಾರದ ವೇಗವನ್ನು ಒದಗಿಸುತ್ತದೆ ಮತ್ತು 4 ನ್ಯಾನೊಮೀಟರ್ ಪ್ರಕ್ರಿಯೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಸ್ಟೋರೇಜ್: ಈ ಫೋನ್‌ನಲ್ಲಿ 8GB RAM ಮತ್ತು 128GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಅನ್ನು ಒದಗಿಸಲಾಗಿದೆ. ಇದರೊಂದಿಗೆ, ಇದು 8GB ವರ್ಚುವಲ್ RAM ಮತ್ತು 2TB ವರೆಗೆ ವಿಸ್ತರಿಸಬಹುದಾದ ಮೊಮೊರಿಯನ್ನು ಸಹ ಹೊಂದಿದೆ.

ಕ್ಯಾಮೆರಾ: ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ CMF ಫೋನ್ 1 ಅನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 50MP ಪ್ರೈಮರಿ ಕ್ಯಾಮೆರಾ ಲೆನ್ಸ್ ಮತ್ತು ಪೋಟ್ರೇಟ್ ಸೆನ್ಸಾರ್ ಅನ್ನು ಬಳಸಲಾಗಿದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಫ್ರಂಟ್‌ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಕಂಪನಿಯು ಈ ಸ್ಮಾರ್ಟ್‌ಫೋನ್‌ನಲ್ಲಿ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಅಳವಡಿಸಿದೆ. ಇದಲ್ಲದೆ, CMF 33 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲ ಮತ್ತು 5 ವ್ಯಾಟ್ ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲದ ಸೌಲಭ್ಯವನ್ನು ಫೋನ್‌ನಲ್ಲಿ ಸೇರಿಸಿದೆ. 20 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಮಾಡಬಹುದು. ಇದು ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿಲ್ಲ.

ಓಎಸ್: ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ನಥಿಂಗ್ ಓಎಸ್ 2.6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಕಂಪನಿಯು CMF ಫೋನ್ 1 ನಲ್ಲಿ 2 ವರ್ಷಗಳ OS ಅಪ್ಡೇಟ್‌ಗಳು ಮತ್ತು 3 ವರ್ಷಗಳ ಭದ್ರತಾ ಪ್ಯಾಚ್‌ಗಳ ಸೌಲಭ್ಯವನ್ನು ಸಹ ಒದಗಿಸುತ್ತಿದೆ.

ಇತರೆ ಫೀಚರ್ಸ್‌: CMF ಫೋನ್ 1 IP52 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳಿನ ರಕ್ಷಣೆ ಹೊಂದಿದೆ. ಡ್ಯುಯಲ್ ಸಿಮ್, 5G SA/NSA, 4G VoLTE, Wi-Fi 6 802.11ax (2.5GMOGHz), ಬ್ಲೂಟೂತ್ 5.3, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಸಂಪರ್ಕ ಒಳಗೊಂಡಿದೆ. ಜೊತೆಗೆ, ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

Best Mobiles in India

English summary
CMF Phone 1 goes on sale in india Tomorrow at 12 PM via Flipkart. check Price, Offers, discount, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+