Home
ಮೊಬೈಲ್

CMF Phone 2 Pro ಪೋನಿನಲ್ಲಿಯೂ ಇರಲಿದೆ 'ಎಸೆನ್ಷಿಯಲ್ ಕೀ' ಮತ್ತು AI ಸ್ಪೇಸ್!

ನಥಿಂಗ್‌ನ ಉಪ-ಬ್ರ್ಯಾಂಡ್ ಆದ CMF ತನ್ನ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ 'CMF Phone 2 Pro' ಅನ್ನು ಇದೇ ಏಪ್ರಿಲ್ 28 ರಂದು ಜಾಗತಿಕವಾಗಿ ಮತ್ತು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆಗೆ ಮುಂಚಿತವಾಗಿ, ಕಂಪನಿಯು ಈ ಮುಂಬರುವ CMF Phone 2 Pro ಸ್ಮಾರ್ಟ್‌ಪೊನಿನ ಕುರಿತಾದ ಪ್ರಮುಖ ವೈಶಿಷ್ಟ್ಯಗಳನ್ನು ಒಂದೊಂದಾಗಿ ಬಹಿರಂಗಪಡಿಸುತ್ತಿದೆ. ಇತ್ತೀಚಿನ ಬಹಿರಂಗಪಡಿಸುವಿಕೆಯಲ್ಲಿ, 'CMF Phone 2 Pro ಸ್ಮಾರ್ಟ್‌ಫೋನಿನ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳು ಮತ್ತು ಅದರ ಕಾರ್ಯನಿರ್ವಹಣೆಗೆ ಮೀಸಲಾದ ಬಟನ್ ಹೊಂದಿರುವುದನ್ನು CMF ದೃಢಪಡಿಸಿದೆ.!

ಹೌದು, ಮುಂಬರುವ CMF Phone 2 Pro ಸ್ಮಾರ್ಟ್‌ಫೋನ್ ಕೂಡ ನಥಿಂಗ್ ಫೋನ್ 3a ಸರಣಿಯೊಂದಿಗ ಪರಿಚಯಿಸಲಾದ AI-ಚಾಲಿತ "ಎಸೆನ್ಷಿಯಲ್ ಸ್ಪೇಸ್" ಎಂಬ ವಿಶೇಷ ವೈಶಿಷ್ಟ್ಯದೊಂದಿಗೆ ಬರಲಿದೆ. ವಿಶೇಷವೆಂದರೆ, ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಫೋನ್‌ನ ಬಲಭಾಗದಲ್ಲಿ, ಪವರ್ ಬಟನ್‌ನ ಪಕ್ಕದಲ್ಲಿ ಮೀಸಲಾದ ಬಟನ್ ಇರಲಿದೆ ಎಂದು ಕಂಪನಿ ತಿಳಿಸಿದೆ. ಈ "ಎಸೆನ್ಷಿಯಲ್ ಕೀ" ಬಳಕೆದಾರರಿಗೆ ತಮ್ಮ ಅಗತ್ಯ ಮಾಹಿತಿಯನ್ನು ತ್ವರಿತವಾಗಿ ಪ್ರವೇಶಿಸಲು ಸಹಾಯ ಮಾಡುತ್ತದೆ.ಈ ವೈಶಿಷ್ಟ್ಯವು ಡೇಟಾ ನಿರ್ವಹಣೆಯನ್ನು ಹೆಚ್ಚು ಸುಲಭ ಮತ್ತು ಪರಿಣಾಮಕಾರಿಯಾಗಿಸುತ್ತದೆ ಎಂದು ಹೇಳಲಾಗಿದೆ.

ಈ "ಎಸೆನ್ಷಿಯಲ್ ಸ್ಪೇಸ್" ವೈಶಿಷ್ಟ್ಯವು ಸ್ಕ್ರೀನ್‌ಶಾಟ್‌ಗಳು, ಫೋಟೋಗಳು ಮತ್ತು ಧ್ವನಿ ಟಿಪ್ಪಣಿಗಳಂತಹ ವಿವಿಧ ರೀತಿಯ ಡೇಟಾವನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಲು ಮತ್ತು AI ತಂತ್ರಜ್ಞಾನವನ್ನು ಬಳಸಿಕೊಂಡು ಅವುಗಳನ್ನು ಸುಲಭವಾಗಿ ಮರುಪಡೆಯಲು ಸಹಾಯ ಮಾಡುತ್ತದೆ. ಇದರೊಂದಿಗೆ, "ಸ್ಮಾರ್ಟ್ ಕಲೆಕ್ಷನ್ಸ್" ಎಂಬ ಮತ್ತೊಂದು ವೈಶಿಷ್ಟ್ಯವು ಇರಲಿದೆ. ಇದು ಆಡಿಯೋ, ಚಿತ್ರಗಳು ಮತ್ತು ಪಠ್ಯವನ್ನು ಅವುಗಳ ಸಂಬಂಧಿತ ಸಂಗ್ರಹಗಳಾಗಿ ಸ್ವಯಂಚಾಲಿತವಾಗಿ ವಿಂಗಡಿಸುತ್ತದೆ. ಇದರಿಂದಾಗಿ ಬಳಕೆದಾರರು ತಮ್ಮ ಡೇಟಾವನ್ನು ಹಸ್ತಚಾಲಿತವಾಗಿ ಸಂಘಟಿಸುವ ಅಗತ್ಯವಿರುವುದಿಲ್ಲ ಎಂದು ಕಂಪೆನಿಯು ತಿಳಿಸಿದೆ.

CMF Phone 2 Pro ಪೋನಿನಲ್ಲಿಯೂ ಇರಲಿದೆ 'ಎಸೆನ್ಷಿಯಲ್ ಕೀ' ಮತ್ತು AI ಸ್ಪೇಸ್!

ಈ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಟೀಸರ್ ವೀಡಿಯೊದಲ್ಲಿ, CMF Phone 2 Pro ನಲ್ಲಿನ ಎಸೆನ್ಷಿಯಲ್ ಸ್ಪೇಸ್ ನಥಿಂಗ್ ಫೋನ್ 3a ಸರಣಿಯಂತೆಯೇ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ನಥಿಂಗ್ ಫೋನ್ 3a ಸರಣಿಯಲ್ಲಿ, ಎಸೆನ್ಷಿಯಲ್ ಕೀ ಕ್ಯಾಮೆರಾ ಶಟರ್ ಬಟನ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಮುಂಬರುವ CMF Phone 2 Pro ನಲ್ಲಿ ಈ ಕಾರ್ಯ ಲಭ್ಯವಿರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಲಭ್ಯವಿದ್ದಲ್ಲಿ, ಬಳಕೆದಾರರು ತ್ವರಿತವಾಗಿ ಫೋಟೋಗಳನ್ನು ತೆಗೆದು ಅವುಗಳನ್ನು ಎಸೆನ್ಷಿಯಲ್ ಸ್ಪೇಸ್‌ಗೆ ಕಳುಹಿಸಲು ಸಾಧ್ಯವಿದೆ.

ಇದಲ್ಲದೆ, CMF Phone 2 Pro ಪ್ರೊಸೆಸರ್ ಕುರಿತು ಮಾಹಿತಿ ಲಭ್ಯವಾಗಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ದೃಢಪಡಿಸಲಾಗಿದೆ. ಕಂಪನಿಯ ಪ್ರಕಾರ, ಈ ಪ್ರೊಸೆಸರ್ ಹಿಂದಿನ CMF ಫೋನ್ 1 ಗಿಂತ ಶೇಕಡಾ 10 ರಷ್ಟು ವೇಗದ CPU ಮತ್ತು ಶೇಕಡಾ ಐದರಷ್ಟು ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ನೀಡುತ್ತದೆ. AI ಕಾರ್ಯಗಳನ್ನು ನಿರ್ವಹಿಸಲು, ಈ ಪ್ರೊಸೆಸರ್ ಮೀಡಿಯಾ ಟೆಕ್‌ನ ಆರನೇ ತಲೆಮಾರಿನ NPU (Neural Processing Unit) ಅನ್ನು ಒಳಗೊಂಡಿದೆ, ಇದು ಸೆಕೆಂಡಿಗೆ 4.8 ಟೆರಾ ಆಪರೇಷನ್‌ಗಳ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಕ್ಯಾಮೆರಾ ವಿಭಾಗದಲ್ಲಿಯೂ CMF Phone 2 Pro ಗಮನಾರ್ಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ. ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ 1/1.57-ಇಂಚಿನ ಸಂವೇದಕವನ್ನು ಹೊಂದಿದೆ. ಇದರೊಂದಿಗೆ, 2x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 119.5-ಡಿಗ್ರಿ ವೀಕ್ಷಣಾ ಕ್ಷೇತ್ರವನ್ನು ಹೊಂದಿರುವ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಇರಲಿದೆ. ಗೇಮಿಂಗ್ ಅನುಭವವನ್ನು ಉತ್ತಮಗೊಳಿಸಲು, ಈ ಹ್ಯಾಂಡ್‌ಸೆಟ್ BGMI ಗೇಮ್‌ಗೆ 120 fps (ಪ್ರತಿ ಸೆಕೆಂಡಿಗೆ ಫ್ರೇಮ್‌ಗಳು) ಮತ್ತು 1,000Hz ಟಚ್ ಸ್ಯಾಂಪ್ಲಿಂಗ್ ದರವನ್ನು ಬೆಂಬಲಿಸುತ್ತದೆ ಎಂದು ತಿಳಿಸಲಾಗಿದೆ.

Best Mobiles in India

English summary
The phone is rumored to feature a dedicated "Essential key" positioned on the right side, adjacent to the power button.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+