Home
ಮೊಬೈಲ್

2025ರ ಹೀರೋ..! ಭಾರತದಲ್ಲಿ CMF Phone 2 Pro ಬಿಡುಗಡೆ; ಬೆಲೆ ಇಷ್ಟೇನಾ, ವಿಶೇಷತೆಗಳೇನು?

ನಥಿಂಗ್‌ ಕಂಪನಿಯ ಉಪ-ಬ್ರಾಂಡ್ ಸಿಎಂಎಫ್ (CMF) ತನ್ನ ಹೊಸ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಮಧ್ಯಮ ಶ್ರೇಣಿಯ ಮೊಬೈಲ್ ಆಗಿದ್ದು, 20 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹೌದು, ಬಹುನಿರೀಕ್ಷಿತ ಸಿಎಂಎಫ್‌ ಫೋನ್ 2 ಪ್ರೊ (CMF Phone 2 Pro) ಸ್ಮಾರ್ಟ್‌ಫೋನ್ ದೇಶೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ. ಈ ಮೊಬೈಲ್ ಶಕ್ತಿಯುತ ಪ್ರೊಸೆಸರ್, ಉತ್ತಮ ಡಿಸ್ಪ್ಲೇ ಮತ್ತು ಪ್ರೀಮಿಯಂ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಬನ್ನಿ, ತಡ ಮಾಡದೇ ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

CMF ಫೋನ್ 2 ಪ್ರೊ ಮೊಬೈಲ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ರಿಲೀಸ್ ಆಗಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.77 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8GB RAM + 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 33W ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವಿಶೇಷತೆಗಳೊಂದಿಗೆ ಈ ಫೋನ್ ಬಿಡುಗಡೆಯಾಗಿದೆ.

ಭಾರತದಲ್ಲಿ CMF Phone 2 Pro ಬಿಡುಗಡೆ; ಬೆಲೆ ಇಷ್ಟೇನಾ, ವಿಶೇಷತೆಗಳೇನು?

ನೂತನ CMF ಫೋನ್ 2 ಪ್ರೊ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್‌ ಪಡೆದಿದೆ. ಭದ್ರತೆಗಾಗಿ ಅಂಡರ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಲಭ್ಯವಿದೆ. ಆಡಿಯೋ ಅನುಭವವನ್ನು ಹೆಚ್ಚಿಸಲು 150% ಅಲ್ಟ್ರಾ ವಾಲ್ಯೂಮ್ ಸ್ಪೀಕರ್‌ಗಳು ಮತ್ತು ಎರಡು ಹೈ ಡೆಫಿನಿಷನ್ ಮೈಕ್ರೊಫೋನ್‌ಗಳನ್ನು ಸಹ ಅಳವಡಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G ಡ್ಯುಯಲ್ ಮೋಡ್ (NSA ಮತ್ತು SA) ಬೆಂಬಲ ಹೊಂದಿದೆ. ಮತ್ತು 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಇದಲ್ಲದೆ, ವೈ-ಫೈ 6, ಬ್ಲೂಟೂತ್ 5.3 ಸೇರಿದಂತೆ ಹಲವು ಸೌಲಭ್ಯಗಳನ್ನು ಈ ಫೋನಿನಲ್ಲಿ ಲಭ್ಯಗೊಳಿಸಲಾಗಿದೆ.

CMF ಫೋನ್ 2 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

CMF ಫೋನ್ 2 ಪ್ರೊ ಸ್ಮಾರ್ಟ್‌ಫೋನ್ 6.77 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 480Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇ 10 ಬಿಟ್ ಕಲರ್ ಡೆಪ್ತ್ ಮತ್ತು 2160Hz PWM ಡಿಮ್ಮಿಂಗ್ ಜೊತೆಗೆ HDR10+ ಪ್ರಮಾಣೀಕರಣವನ್ನು ಸಹ ಪಡೆದಿದೆ. ಈ ಫೋನ್ ಪಾಂಡಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

CMF ಫೋನ್ 2 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಇದು 8 ಕೋರ್ ಸಿಪಿಯು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.2 ಜೊತೆಗೆ ಕೆಲಸ ಮಾಡುತ್ತದೆ. ಈ ಫೋನ್ 8GB RAM ನೊಂದಿಗೆ ಬರುತ್ತದೆ. ಇದಕ್ಕೆ ಪೂರಕವಾಗಿ 128GB ಮತ್ತು 256GB ಸ್ಟೋರೇಜ್ ಆಯ್ಕೆ ಲಭ್ಯವಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.

ಭಾರತದಲ್ಲಿ CMF Phone 2 Pro ಬಿಡುಗಡೆ; ಬೆಲೆ ಇಷ್ಟೇನಾ, ವಿಶೇಷತೆಗಳೇನು?

ಕ್ಯಾಮೆರಾ ಸೆಟಪ್

CMF ಫೋನ್ 2 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಟೆಲಿಸ್ಕೋಪ್ ಲೆನ್ಸ್ ಹೊಂದಿಎ. ಇದು 2x ಆಪ್ಟಿಕಲ್ ಜೂಮ್ ಮತ್ತು 20x ಡಿಜಿಟಲ್ ಜೂಮ್ ಬೆಂಬಲದೊಂದಿಗೆ ಬರುತ್ತದೆ. ಮತ್ತು ತೃತೀಯ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌

CMF ಫೋನ್ 2 ಪ್ರೊ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 33W ವೇಗದ ಚಾರ್ಜಿಂಗ್‌ ತಂತ್ರಜ್ಞಾನ ಹೊಂದಿದೆ. ಇದಲ್ಲದೆ, 5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸಹ ಒದಗಿಸಲಾಗಿದೆ. ಇದು 59 ನಿಮಿಷಗಳಲ್ಲಿ ಶೇ.20 ರಿಂದ ಶೇ.100 ರಷ್ಟು ಚಾರ್ಜ್ ಆಗುತ್ತದೆ.

ಭಾರತದಲ್ಲಿ CMF Phone 2 Pro ಬಿಡುಗಡೆ; ಬೆಲೆ ಇಷ್ಟೇನಾ, ವಿಶೇಷತೆಗಳೇನು?

CMF ಫೋನ್ 2 ಪ್ರೊ ಬೆಲೆ ಮತ್ತು ಲಭ್ಯತೆ

8GB RAM + 128GB ಸ್ಟೋರೇಜ್ ಬೆಲೆ = 18,999 ರೂ.
8GB RAM + 256GB ಸ್ಟೋರೇಜ್ ಬೆಲೆ = 20,999 ರೂ.

CMF ಫೋನ್ 2 ಪ್ರೊ ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಮೂಲ ರೂಪಾಂತರದ ಬೆಲೆ 18,999 ರೂ. ಆಗಿದೆ. ಈ ನಥಿಂಗ್ CMF ಫೋನ್ 2 ಪ್ರೊ ಇದೇ ಮೇ 5 ರಂದು ಭಾರತದಲ್ಲಿ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಆರಂಭಿಕ ಮಾರಾಟದ ಪ್ರಯುಕ್ತ ಕಂಪನಿಯು 1,000 ರೂ. ರಿಯಾಯಿತಿಯಲ್ಲಿ ಘೋಷಿಸಿದೆ.

Best Mobiles in India

English summary
CMF Phone 2 Pro with MediaTek Dimensity 7300 Pro launched in India: Know price, offers, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+