ಸ್ಮಾರ್ಟ್‌ಫೋನ್‌ಗಳ ಕಾರ್ಯವೈಖರಿ ಬದಲಾಯಿಸಿದ ಕಲರ್‌ ಒಎಸ್‌7!

|

ಆಪರೇಟಿಂಗ್‌ ಸಿಸ್ಟಂಗಳಲ್ಲಿ ಇತ್ತೀಚಿನ ಆಪ್‌ಡೇಟ್‌ ವರ್ಷನ್‌ ಆದ ಕಲರ್‌ ಒಎಸ್‌7 ಸದ್ಯ ಆಂಡ್ರಾಯ್ಡ್‌10 ಬೆಂಬಲಿಸುವ ಸ್ಮಾರ್ಟ್‌ಪೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಮಾರ್ಟ್‌ಫೋನ್‌ಗಳ ಕಾರ್ಯವೈಖರಿಯನ್ನೇ ಬದಲಾಯಿಸಿರುವ ಓಎಸ್‌7 ಬಳಕೆದಾರರಿಗೆ ಉತ್ತಮ ಅನುಭವವನ್ನ ನೀಡುತ್ತಿದೆ. ಸಧ್ಯ ಒಪ್ಪೋ ಕಂಪೆನಿಯ ಹೊಸ ಆವೃತ್ತಿಯಾದ ರೆನೋ ಸೀರಿಸ್‌ ಸ್ಮಾರ್ಟ್‌ಫೋನ್‌ನಲ್ಲಿ ಕಲರ್ ಓಎಸ್ 7 ಅನ್ನು ಅಳವಡಿಸಲಾಗಿದೆ. ಅಲ್ಲದೆ ಕಲರ್‌ ಒಎಸ್‌7 ತನ್ನ ಕಾರ್ಯ ಸ್ಥಾನದಲ್ಲಿ ಸ್ಥಿರವಾದ ಕಾರ್ಯಕ್ಷಮತೆಯನ್ನು ನೀಡುವಲ್ಲಿ ಸಫಲವಾಗಿದೆ.

ಹೌದು

ಹೌದು, ಹೊಸ ಆಪ್‌ಡೇಟ್ ವರ್ಷನ್‌ ಆದ ಕಲರ್‌ ಒಎಸ್‌7 ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಉತ್ತಮ ಅನುಭವವನ್ನ ನೀಡುತ್ತಿದೆ. ಈಗಾಗ್ಲೆ ಒಪ್ಪೋ ರೆನೋ 10 ಎಕ್ಸ್ ಜೂಮ್ ಸ್ಮಾರ್ಟ್‌ಫೋನ್‌ ಅನ್ನು ಇತ್ತೀಚಿನ ಕಲರ್ ಓಎಸ್ 7 ಗೆ ನವೀಕರಿಸಲಾಗಿದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಗಳಿಗಾಗಿಯೇ ಕಲರ್ ಓಎಸ್7 ಅನ್ನು ಹೆಚ್ಚು ಪರಿಷ್ಕೃತ ಮಾಡಲಾಗಿದ್ದು, ಹೊಸ ಮಾದರಿಯ ಫೀಚರ್ಸ್‌ಗಳನ್ನ ಅಳವಡಿಸಲಾಗಿದೆ. ಅಷ್ಟಕ್ಕೂ ಹೊಸ ಕಲರ್ ಓಎಸ್ 7ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಕಲರ್ ಓಎಸ್ 7 ವಿನ್ಯಾಸ

ಕಲರ್ ಓಎಸ್ 7 ವಿನ್ಯಾಸ

ಕಲರ್‌ ಓಎಸ್‌ 7 ಸರಳ ಮತ್ತು ಹಗುರವಾದ ವಿನ್ಯಾಸವನ್ನ ಹೊಂದಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತದೆ. ಕಲರ್‌ ಒಎಸ್ 7ನಲ್ಲಿ ದೃಶ್ಯ ವಿಧಾನವನ್ನು ಅಳವಡಿಸಿರುವುದರಿಂದ ಬಳಕೆದಾರರಿಗೆ ಉತ್ತಮ ಅನುಭವ ಸಿಗುತ್ತಿದೆ. ಅಲ್ಲದೆ ಡಿಸ್‌ಪ್ಲೇ ಮೇಲೆ ಪ್ಲೇ ಆದ ವಿಷಯದ ಮೇಲೆ ಹೆಚ್ಚು ಗಮನಹರಿಸಲು ಬಳಕೆದಾರರ ಇಂಟರ್‌ಫೇಸ್ ನಿಮಗೆ ಅನುಮತಿಸುತ್ತದೆ. ಅಲ್ಲದೆ ಇನ್ಫಿನಿಟಿ ಡಿಸೈನ್‌ನಿಂದಾಗಿ ಸ್ವೈಪಿಂಗ್, ಟ್ಯಾಪಿಂಗ್ ಮತ್ತು ಸ್ಕ್ರೋಲಿಂಗ್ ಅನ್ನು ಪರಿಣಾಮಕಾರಿಯಾಗಿ ಮಾಡಲು ಅನುಕೂಲವಾಗಿದೆ. ಇನ್ನು ಕಲರ್ ಓಎಸ್ 7 ಐಕಾನ್‌ಗಳ ನೋಟವನ್ನು ಹೆಚ್ಚು ಸುಧಾರಿಸಿದೆ. ಅಲ್ಲದೆ ಹೊಸ ಐಕಾನ್‌ಗಳು ಡ್ಯುಯಲ್-ಟೋನ್ ವಸ್ತು ವಿನ್ಯಾಸವನ್ನು ಸರಳ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಐಕಾನ್‌ಗಳ ನೋಟ ಮತ್ತು ಭಾವನೆಯನ್ನು ಇನ್ನಷ್ಟು ಕಸ್ಟಮೈಸ್ ಮಾಡಲು ನೀವು 'ಕಸ್ಟಮ್' ಮೋಡ್ ಅನ್ನು ಸಹ ಆಯ್ಕೆ ಮಾಡಬಹುದಾಗಿದೆ.

ಉತ್ತಮ ಟಚ್‌ ಸ್ಕ್ರೀನ್‌ ರೆಸ್ಪಾನ್ಸ್‌

ಉತ್ತಮ ಟಚ್‌ ಸ್ಕ್ರೀನ್‌ ರೆಸ್ಪಾನ್ಸ್‌

ಕಲರ್‌ ಒಎಸ್‌7 ಸ್ಮಾರ್ಟ್‌ಫೋನ್‌ಗಳಲ್ಲಿ ಡಿಸ್‌ಪ್ಲೇ ಟಚ್‌ ಸ್ಕ್ರೀನ್‌ ರೆಸ್ಪಾನ್ಸ್‌ ಉತ್ತಮವಾಗಿರಲು ಹ್ಯಾಪ್ಟಿಕ್ಸ್ ಅನ್ನು ಸುಧಾರಿಸಿದೆ. ಕೀ ಭೋರ್ಡ್‌ ವಿನ್ಯಾಸ, ಕ್ಯಾಲ್ಕುಲೇಟರ್, ಕಂಪಾಸ್, ಆನ್-ಆಫ್ ಸ್ವಿಚ್‌ಗಳು, ಸ್ಕ್ರೀನ್-ಆಫ್ ಗೆಸ್ಚರ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಕಲರ್ ಓಎಸ್ 7-ಬೆಂಬಲಿತ ಸಾಧನಗಳಲ್ಲಿ ಸುಧಾರಿತ ಹ್ಯಾಪ್ಟಿಕ್ಸ್ ಯುಐನಾದ್ಯಂತ ಕಾರ್ಯನಿರ್ವಹಿಸುತ್ತದೆ.

ಆನಿಮೇಷನ್‌ ಮತ್ತು ಹೊಸ ಧ್ವನಿಯ ಪರಿಣಾಮಗಳು

ಆನಿಮೇಷನ್‌ ಮತ್ತು ಹೊಸ ಧ್ವನಿಯ ಪರಿಣಾಮಗಳು

ಇನ್ನು ಅನಿಮೇಷನ್‌ಗಳು ಮತ್ತು ಪರಿವರ್ತನೆಗಳನ್ನು ಹೆಚ್ಚು ಸ್ಪಂದಿಸುವಂತೆ ಕಲರ್‌ ಒಎಸ್‌7 ವಿನ್ಯಾಸ ತಂಡವು ಕೆಲಸ ಮಾಡಿದೆ. ಕಲರ್ ಓಎಸ್ 7 ಭೌತಶಾಸ್ತ್ರ ಆಧಾರಿತ ಅನಿಮೇಷನ್‌ಗಳನ್ನು ಅನ್ವಯಿಸುತ್ತದೆ, ಇದು ಮೂಲ ಯುಐ ಸಂವಹನಗಳನ್ನು ವಾಸ್ತವಿಕವಾಗಿಸುತ್ತದೆ. ಇದರಿಂದಾಗಿ ಫೋನ್‌ನ ಅನಿಮೇಷನ್‌ಗಳು ವಾಸ್ತವಿಕತೆಯ ಪ್ರಜ್ಞೆಯನ್ನು ಪ್ರಚೋದಿಸುತ್ತದೆ. ಅಲ್ಲದೆ ಚಾರ್ಜಿಂಗ್ ಅನಿಮೇಷನ್ ಸಹ ಉತ್ತಮವಾಗಿ ಕಾಣುವಂತೆ ಪರಿಷ್ಕರಿಸಲಾಗಿದೆ. ಜೊತೆಗೆ ಕಲರ್‌ ಓಎಸ್ 7 ರಲ್ಲಿ ಹವಾಮಾನ ಎಚ್ಚರಿಕೆ ವೈಶಿಷ್ಟ್ಯ ಕೂಡ ಸಕ್ರಿಯವಾಗಿದೆ. ಇದಲ್ಲದೆ, ಟಾಗಲ್ ಶಬ್ದಗಳು, ಟ್ಯಾಪ್‌ಗಳು, ಕ್ಲಿಕ್‌ಗಳು, ಸ್ಲೈಡ್‌ಗಳು, ಫೈಲ್ ಅಳಿಸುವಿಕೆ, ಕ್ಯಾಲ್ಕುಲೇಟರ್ ಕೀ ಸ್ಪರ್ಶಗಳು, ದಿಕ್ಸೂಚಿ ಪಾಯಿಂಟರ್ ಮತ್ತು ಅಧಿಸೂಚನೆ ಶಬ್ದಗಳನ್ನು ಸಹ ಸರಳೀಕರಿಸಲಾಗಿದ್ದು, ಇದು ಕಿವಿಗಳಿಗೆ ಹೆಚ್ಚು ಆಹ್ಲಾದಕರವಾಗಿರುತ್ತದೆ.

ಸುಲಭ ಬಳಕೆ

ಸುಲಭ ಬಳಕೆ

ಕಲರ್ ಓಎಸ್ 7-ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನ ಬಳಸುವುದು ಸುಲಭವಾಗಿದೆ. ಸದ್ಯ ರೆನೋ 10x ಜೂಮ್ ಸ್ಮಾರ್ಟ್‌ಫೋನ್‌ನ ವೇಗ ಮತ್ತು ದ್ರವತೆಯು ಸಾಕಷ್ಟು ನವೀಕರಣದ ನಂತರ ಬಹುಪಟ್ಟು ಸುಧಾರಿಸಿದೆ. ಪಾಸ್ವರ್ಡ್ ಅನ್‌ಲಾಕ್‌ ಗ್ರಾಫಿಕ್ ವಿನ್ಯಾಸವನ್ನು ಒಳಗೊಂಡಂತೆ, ಸ್ಮಾರ್ಟ್ ಸೈಡ್‌ಬಾರ್ ಕಾರ್ಯವನ್ನು ಸಹ ಕಲರ್‌ ಒಎಸ್‌7ನಲ್ಲಿ ಪರಿಷ್ಕರಿಸಲಾಗಿದೆ. ಅಲ್ಲದೆ ಸ್ಪ್ಲಿಟ್-ಸ್ಕ್ರೀನ್ ಮೋಡ್‌ನಲ್ಲಿ ಸ್ಮಾರ್ಟ್‌ಫೋನ್‌ ತೆರೆಯಲು ಸೈಡ್‌ಬಾರ್‌ನಿಂದ ಅಪ್ಲಿಕೇಶನ್ ಅನ್ನು ಡ್ರಾಗ್‌ ಮಾಡಬಹುದು. ನೀವು 'ಅಸಿಸ್ಟಿವ್ ಬಾಲ್' ನ ಅಪಾರದರ್ಶಕತೆಯನ್ನು ಸಹ ನಿಯಂತ್ರಿಸಬಹುದು ಮತ್ತು ಅದನ್ನು ಪೂರ್ಣ-ಪರದೆಯ ಅಪ್ಲಿಕೇಶನ್‌ನಲ್ಲಿ ಮರೆಮಾಡಬಹುದು. ಜೊತೆಗೆ ಫ್ಲೋಟಿಂಗ್ ವಿಂಡೋ ವೈಶಿಷ್ಟ್ಯವನ್ನು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲು ಹೊಂದುವಂತೆ ಮಾಡಲಾಗಿದೆ. ಇದು ಬಳಕೆದಾರರಿಗೆ ಸೂಕ್ತವಾಗಿದೆ.

ನ್ಯಾವಿಗೇಷನ್ ಗೆಸ್ಚರ್‌ ಮತ್ತು ಸ್ಕ್ರೀನ್‌ಶಾಟ್‌

ನ್ಯಾವಿಗೇಷನ್ ಗೆಸ್ಚರ್‌ ಮತ್ತು ಸ್ಕ್ರೀನ್‌ಶಾಟ್‌

ಇದರಲ್ಲಿ ಹೊಸದಾಗಿ ಸೇರಿಸಲಾದ ಸನ್ನೆಗಳು UI ಉದ್ದಕ್ಕೂ ನ್ಯಾವಿಗೇಟ್ ಮಾಡಲು ಸುಲಭವಾಗಿಸುತ್ತದೆ. ಅಲ್ಲದೆ ವಾಪಾಸ್‌ ಹಿಂತಿರುಗಲು ನೀವು ಕೆಳಗಿನ ಯಾವುದೇ ಮೂಲೆಯಿಂದ ಮೇಲಕ್ಕೆ ಸ್ವೈಪ್ ಮಾಡಬಹುದು, ಹೋಮ್ ಸ್ಕ್ರೀನ್‌ಗೆ ಹೋಗಲು ಕೆಳಗಿನ ಮಧ್ಯಭಾಗದಿಂದ ಸ್ವೈಪ್ ಮಾಡಿ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಸ್ವೈಪ್ ಬ್ಯಾಕ್ ಸ್ಥಾನವನ್ನು ಕಸ್ಟಮೈಸ್ ಮಾಡಲು ಕಲರ್ ಓಎಸ್ 7 ನಿಮಗೆ ಅವಕಾಶ ನೀಡುತ್ತದೆ ಎಂಬ ಅಂಶ ಇಷ್ಟವಾಗಿದೆ. ಹಿಂಬದಿ ಗುಂಡಿಯನ್ನು ಕೆಳಭಾಗದಲ್ಲಿ ಅಥವಾ ಪರದೆಯ ಎಡ ಅಥವಾ ಬಲಭಾಗದಲ್ಲಿ ಇರಿಸಲು ನೀವು ಆಯ್ಕೆ ಮಾಡಬಹುದು.ಜೊತೆಗೆ 3-ಫಿಂಗರ್ ಸ್ಕ್ರೀನ್‌ ಸಾಟ್‌ ಮೋಡ್ ಅನ್ನು ಸಹ ಹೊಂದಿದ್ದು, ಸ್ಕ್ರೀನ್‌ಶಾಟ್ ಅನ್ನು ತ್ವರಿತವಾಗಿ ಸೆರೆಹಿಡಿಯಲು ನೀವು ಮೂರು ಬೆರಳುಗಳಿಂದ ಕೆಳಕ್ಕೆ ಸ್ವೈಪ್ ಮಾಡಬಹುದು.

ವಿಷುಯಲ್ ಆಯ್ಕೆಗಳು

ವಿಷುಯಲ್ ಆಯ್ಕೆಗಳು

ಕಲರ್ ಓಎಸ್ 7 ಸಿಸ್ಟಮ್-ವೈಡ್ 'ಡಾರ್ಕ್ ಮೋಡ್' ಅನ್ನು ಸಹ ಸೇರಿಸಿದೆ, ಇದು ದೃಷ್ಟಿಗೆ ಆಕರ್ಷಕವಾಗಿ ಕಾಣುತ್ತದೆ, ಪವರ್‌ ಯೂಸ್‌ ಅನ್ನು ಕಡಿಮೆ ಮಾಡುತ್ತದೆ ಮತ್ತು ಬೆಳಕಿನ ಅನುಪಸ್ಥಿತಿಯಲ್ಲಿ ಫೋನ್ ಬಳಸುವಾಗ ಕಣ್ಣುಗಳನ್ನು ರಕ್ಷಿಸುತ್ತದೆ. ಕಲರ್ ಓಎಸ್ 7 ನಲ್ಲಿನ ಡಾರ್ಕ್ ಮೋಡ್ ಯುಐ ನಾದ್ಯಂತ ಕಾರ್ಯನಿರ್ವಹಿಸುತ್ತದೆ ಮತ್ತು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಆಪ್, ಟ್ವಿಟರ್ ಮುಂತಾದ ಹಲವಾರು ತೃತೀಯ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ, ದೃಷ್ಟಿಹೀನ ಬಳಕೆದಾರರಿಗೆ ಬಳಕೆದಾರರ ಅನುಭವವನ್ನು ಸುಧಾರಿಸಲು ಕಲರ್ ಓಎಸ್ 7 ಕಲರ್‌ ಮೋಡ್ ಅನ್ನು ಸಹ ನೀಡಿದೆ.

ಹೊಸ ವಾಲ್‌ಪೇಪರ್

ಹೊಸ ವಾಲ್‌ಪೇಪರ್

ಕಲರ್‌ ಓಎಸ್ 7 ರ ಹೊಸ ಲೈವ್ ವಾಲ್‌ಪೇಪರ್‌ಗಳು ಬಳಕೆದಾರರಿಗೆ ಇಷ್ಟವಾಗಲಿದೆ. ವಿಶೇಷವಾಗಿ ಹವಾ ಮಹಲ್‌ನ ಲೈವ್ ವಾಲ್‌ ಪೇಪರ್ ಟೈಂ ಮತ್ತು ಟಚ್‌ ನಿಂದಾಗಿ ಬಣ್ಣಗಳು ಮತ್ತು ಅನಿಮೇಷನ್‌ಗಳನ್ನು ಬದಲಾಯಿಸುತ್ತದೆ. ಬೆರಳಿನ ಸ್ಪರ್ಶದಿಂದ ಬಣ್ಣದ ಜ್ವಾಲೆಗಳನ್ನು ತೋರಿಸುವ ಎಲ್ಲಾ ಬ್ಲ್ಯಾಕ್‌ ಲೈವ್ ವಾಲ್‌ಪೇಪರ್ ಕೇವಲ ಒಂದು ಕಲಾಕೃತಿಯಾಗಿದೆ. ಇದಲ್ಲದೆ, ಕಲರ್ ಓಎಸ್ 7 ಹಲವಾರು ಸ್ಥಿರ ವಾಲ್‌ ಪೇಪರ್‌ಗಳನ್ನು ಸಹ ತರುತ್ತದೆ, ಅದು ನಿಮ್ಮ ಫೋನ್‌ನ ಹೋಮ್‌ ಸ್ಕ್ರೀನ್‌ಗೆ ಉತ್ತಮ ಸ್ಪರ್ಶ ನೀಡುತ್ತದೆ.

ಕಾರ್ಯದಕ್ಷತೆ

ಕಾರ್ಯದಕ್ಷತೆ

ಸದ್ಯ ಕಲರ್ ಓಎಸ್ 7 ಬೆಂಬಲಿತ ರೆನೋ 10 ಎಕ್ಸ್ ಜೂಮ್ ಸ್ಮಾರ್ಟ್‌ಫೋನ್‌ನಲ್ಲಿ ಗೇಮಿಂಗ್ ಅನ್ನು ಸಂಪೂರ್ಣವಾಗಿ ಆನಂದಿಸಬಹುದಾಗಿದೆ. ವೇಗದ ಗತಿಯ ಆಕ್ಷನ್ ಗೇಮ್‌ಗಳನ್ನ ಆಡುವಾಗ ಡಿಸ್‌ಪ್ಲೇ ಟಚ್‌ಹೆಚ್ಚು ಸ್ಪಂದಿಸುತ್ತದೆ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಟಚ್ ಸ್ಕ್ಯಾನ್‌ಗಳನ್ನ ಸುಧಾರಿಸುವಲ್ಲಿ ಕಲರ್‌ ಒಎಸ್‌7 ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ ನಲ್ಲಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಹೆಚ್ಚಿನ ಹೊರೆಗಳನ್ನು ಕಂಡುಹಿಡಿಯಲು ಸಾಕಷ್ಟು ಸ್ಮಾರ್ಟ್ ಆಗಿದೆ. ಸಂದರ್ಭಕ್ಕೆ ತಕ್ಕಂತೆ, ಕಾರ್ಯಕ್ಷಮತೆಯನ್ನು ನಿಯಂತ್ರಿಸಲು ಕಲರ್ಓಎಸ್ 7 ಎಫ್‌ಪಿಎಸ್ (Frame per Second) ಅನ್ನು 38% ಹೆಚ್ಚಿಸುತ್ತದೆ. ಗೇಮ್‌ಗಳನ್ನ ಆಡಿದ ನಂತರವೂ ಬ್ಯಾಟರಿ ಬಾಳಿಕೆ ಉತ್ತಮವಾಗಿರಲಿದೆ. ಅಲ್ಲದೆ ನೀವು ಲೂಪ್‌ನಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದು ಮತ್ತು ಗೇಮ್‌ಗಳನ್ನ ಮೊದಲಿಗಿಂತ ಹೆಚ್ಚು ಕಾಲ ಆಡಬಹುದು.

ಕಲರ್ ಓಎಸ್ 7 ಲಭ್ಯತೆ

ಕಲರ್ ಓಎಸ್ 7 ಲಭ್ಯತೆ

ಈಗಾಗಲೇ ರೆನೊ 10 ಎಕ್ಸ್ ಜೂಮ್, ರೆನೋ, ಎಫ್ 11, ಎಫ್ 11 ಪ್ರೊ ಮತ್ತು ಎಫ್ 11 ಪ್ರೊ ಮಾರ್ವೆಲ್ಸ್ ಅವೆಂಜರ್ಸ್ ಲಿಮಿಟೆಡ್ ಆವೃತ್ತಿ ಗಳಲ್ಲಿ ಕಲರ್‌ ಓಎಸ್ 7 ಅನ್ನು ಈಗಾಗಲೇ ಬಳಸಲಾಗ್ತಿದೆ. ಅಲ್ಲದೆ 2020 ರ ಮೊದಲ ತ್ರೈಮಾಸಿಕದಲ್ಲಿ ಒಪ್ಪೋ ಫೈಂಡ್ ಎಕ್ಸ್ ಸರಣಿ, ರೆನೋ 2 ಎಫ್, ರೆನೋ Z ಡ್, ಆರ್ 17, ಆರ್ 17 ಪ್ರೊ, ಆರ್ಎಕ್ಸ್ 17 ಪ್ರೊ, ರೆನೋ 2 ಜೆಡ್ ಮತ್ತು ಎ 9 ಗೆ ಲಭ್ಯವಾಗಲಿದೆ. ಒಪ್ಪೋ ಎಫ್ 7, ಎಫ್ 9, ಎಫ್ 9 ಪ್ರೊ, ಆರ್ 15, ಆರ್ 15 ಪ್ರೊ , ಎ 9 2020, ಎ 5 2020 ಮತ್ತು ಒಪ್ಪೋಕೆ 3 ಸ್ಮಾರ್ಟ್‌ಫೋನ್‌‌ಗಳಲ್ಲಿಯೂ ಆಪ್‌ಡೇಟ್‌ ಮಾಡಲು ನಿರ್ಧರಿಸಲಾಗಿದೆ.

ಕಲರ್ ಓಎಸ್ 7 ಗೆ ಅಪ್‌ಗ್ರೇಡ್ ಮಾಡುವುದು ಹೇಗೆ?

ಕಲರ್ ಓಎಸ್ 7 ಗೆ ಅಪ್‌ಗ್ರೇಡ್ ಮಾಡುವುದು ಹೇಗೆ?

ಹೌದು ಹೊಸ ಆಪ್‌ಡೇಟ್‌ ವರ್ಷನ್‌ ಆದ ಕಲರ್ಓಎಸ್ 7 ನ ಫೀಚರ್ಸ್‌ ಉತ್ತಮವಾಗಿರುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನ ಕಲರ್‌ ಒಎಸ್‌7ಗೆ ಅಪ್‌ಗ್ರೇಡ್ ಮಾಡಬಹುದು. ಅದು ಹೇಗೆ ಅಂದರೆ ನೀವು ಒಪ್ಪೋ ರೆನೋ, ರೆನೋ 10 ಎಕ್ಸ್ ಜೂಮ್, ಎಫ್ 11, ಎಫ್ 11 ಪ್ರೊ ಅಥವಾ ಎಫ್ 11 ಪ್ರೊ ಮಾರ್ವೆಲ್‌ನ ಎವೆಂಜರ್ ಎಡಿಷನ್ ಹೊಂದಿದ್ದರೆ, ಹೊಸ ಸಾಫ್ಟ್‌ವೇರ್ ನವೀಕರಣಕ್ಕಾಗಿ ನೀವು ನೋಟಿಫೀಕೆಷನ್‌ ಅನ್ನು ಸ್ವೀಕರಿಸಿರಬೇಕು. ಇಲ್ಲದೆ ಹೋದಲ್ಲಿ ಫೋನ್‌ನ 'ಅಭೌಟ್‌' ವಿಭಾಗಕ್ಕೆ ಹೋಗಿ ಮತ್ತು 'ಸಾಫ್ಟ್‌ವೇರ್ ಆಪ್‌ಡೇಟ್‌' ಅನ್ನ ಪರಿಶೀಲಿಸಿದ ನಂತರ ಆಪ್‌ಡೇಟ್‌ಗೆ ಕೊಟ್ಟರೆ ನೀವು ಕಲರ್‌ಒಎಸ್‌7ಗೆ ಆಪ್‌ಡೇಟ್‌ ಆಗುತ್ತೀರಿ. ಆದ್ರೆ ಸಾಫ್ಟ್‌ವೇರ್‌ ಆಪ್ಡೇಟ್‌ ಆಗಬೇಕಿದ್ದಲ್ಲಿ ಕನಿಷ್ಠ 3GB ಶೇಖರಣಾ ಸಾಮರ್ಥ್ಯವನ್ನ ಕಾಯ್ದಿರಿಸಬೇಕಿದೆ.

Most Read Articles
Best Mobiles in India

Read more about:
English summary
The latest version of the ColorOS has started rolling out to the recently launched Reno-series smartphones. Based on Android 10, the ColorOS 7 is built on an 'Infinite Design concept' to offer a "Smooth and Delightful" user experience. The new custom skin focuses on delivering consistent performance by keeping security and customizability at its centre.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X