5,599 ರೂ.ಗೆ ಹೊಸ ಕೊಮಿಯೋ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯ..!
ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ Comio ಭಾರತದಲ್ಲಿ ಮತ್ತೊಂದು ಎಲ್ಲರ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಿದೆ.ಹೊಸದಾಗಿ ಬಿಡುಗಡೆಗೊಂಡಿರುವ Comio C1 Pro ನ ಬೆಲೆ ಕೇವಲ 5,599 ರುಪಾಯಿಗಳು. ಹೊಸ ಸ್ಮಾರ್ಟ್ ಫೋನ್ ನಲ್ಲಿ Mediatek 6739quad core ಪ್ರೊಸೆಸರ್ ಇದೆ ಮತ್ತು ಇದು Android 8.1 (Oreo) ಆಪರೇಟಿಂಗ್ ಸಿಸ್ಟಂ ಮುಖಾಂತರ ರನ್ ಆಗಲಿದೆ. ಇದರಲ್ಲಿ 5.0-ಇಂಚಿನ HD ಸ್ಕ್ರೀನ್ ಡಿಸ್ಪ್ಲೇ ವೈಶಿಷ್ಟ್ಯ ಕೂಡ ಇದೆ.
ಈ ಡಿವೈಸ್ 1.5ಜಿಬಿ RAM ಮತ್ತು 16ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ 128 ಜಿಬಿ ವರೆಗೆ ಅದನ್ನು ಹಿಗ್ಗಿಸಿಕೊಳ್ಳುವ ಅವಕಾಶವೂ ಇದೆ. ಕ್ಯಾಮರಾ ವಿಚಾರವನ್ನು ಹೇಳುವುದಾದರೆ Comio C1 Pro ನಲ್ಲಿ 8MP AF ಹಿಂಭಾಗದ ಕ್ಯಾಮರಾ ಮತ್ತು 5MP ಸೆಲ್ಪೀ ಕ್ಯಾಮರಾವಿದೆ.

ಇದು ಎರಡು ಸಿಮ್ ಕಾರ್ಡ್ ಗಳನ್ನು ಹಾಕಲು ಅವಕಾಶ ನೀಡಲಿದ್ದು 2500mAh ಬ್ಯಾಟರಿ ಹೊಂದಿದೆ. ಮೂರು ಪ್ರಮುಖ ಸ್ಲಾಟ್ ಗಳನ್ನು ಹೊಂದಿದೆ. ಎರಡು ಸಿಮ್ ಕಾರ್ಡ್ ಗಳಿಗೆ ಒಂದು ಎಸ್ ಡಿ ಕಾರ್ಡ್ ಗೆ.ಭದ್ರತಾ ವಿಚಾರವನ್ನು ಹೇಳುವುದಾದರೆ, ಮುಖವನ್ನು ಗುರುತಿಸಿ ಮೊಬೈಲ್ ಅನ್ ಲಾಕ್ ಮಾಡುವ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಅಷ್ಟೇ ಈ ಸ್ಮಾರ್ಟ್ ಫೋನ್ dual 4G VoLTE/ViLTE ನ್ನು ಬೆಂಬಲಿಸುತ್ತದೆ.
ಈ ಫೋನಿನಲ್ಲಿರುವ ಮತ್ತುಳಿದ ವೈಶಿಷ್ಟ್ಯಗಳೆಂದರೆ ನಿಮ್ಮ ಭಾಷೆಗೆ ಇದು ಬೆಂಬಲ ನೀಡುತ್ತದೆ, ಹಲವಾರು ಫಾಂಟ್ ಅಪ್ಲಿಕೇಷನ್ ಗಳಿವೆ, ವೀನಸ್ ಬ್ರೌಸರ್ ಮತ್ತು ಬೈಕ್ ಮೋಡ್ ಇದೆ.ಮೂರು ವೇರಿಯಂಟ್ ನ ಬಣ್ಣಗಳಲ್ಲಿ ಇದು ಲಭ್ಯವಿದೆ ಅವುಗಳೆಂದರೆ ಮೆಟಾಲಿಕ್ ಗ್ರೇ, ಸನ್ ರೈಸ್ ಗೋಲ್ಡ್, ರಾಯಲ್ ಬ್ಲಾಕ್.

ಹ್ಯಾಂಡ್ ಸೆಟ್ ತಯಾರಕರು ಮಾರಾಟಕ್ಕಾಗಿ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಒಂದು ವರ್ಷ ವಾರೆಂಟಿ ಇದ್ದ ಮೊಬೈಲ್ ನ್ನು 1 ವರ್ಷ 100 ದಿನಗಳ ವಾರೆಂಟಿಗೆ ವಿಸ್ತರಿಸಲಾಗಿದೆ, 30 ದಿನಗಳ ಒಳಗೆ ಬೇಕಿದ್ದರೆ ಫೋನನ್ನೇಬದಲಾಯಿಸುವ ಅವಕಾಶವೂಇದೆ. ಸ್ಪೆಷಲ್ ಖರೀದಿ ಬ್ಯಾಕ್ ಮತ್ತು ಅಪ್ ಗ್ರೇಡ್ ಮಾಡುವ ಅವಕಾಶವೂ ಈ ಆಫರ್ ಗಳಲ್ಲಿ ಸೇರಿದೆ. ಇದರ ಜೊತೆಗೆ ಜಿಯೋ ಗ್ರಾಹಕರಿಗೆ 2,200 ರುಪಾಯಿಯ ಕ್ಯಾಷ್ ಬ್ಯಾಕ್ ಕೂಡ ಲಭ್ಯವಾಗಲಿದೆ, ಆದರೆ ಮೊದಲ 198/299 ತಿಂಗಳ ಪ್ಲಾನ್ ರಿಚಾರ್ಜ್ ಮಾಡಿದಾಗ ಈ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ.
ಆನ್ ಲೈನ್ ನ ಸ್ನ್ಯಾಪ್ ಡೀಲ್, ಫ್ಲಿಪ್ ಕಾರ್ಟ್, ಅಮೇಜಾನ್, ಶಾಪ್ ಕ್ಲೂ, ಪೇಟಿಎಮ್ ಗಳಲ್ಲಿ ಈ ಸ್ಮಾರ್ಟ್ ಫೋನ್ ಈಗಾಗಲೇ ಲಭ್ಯವಿದೆ. ಕೊಮಿಯೋ ಸ್ಮಾರ್ಟ್ ಫೋನ್ ಕಂಪೆ ನಿಯ ಸಿಇಓ ಮತ್ತು ಡೈರೆಕ್ಟರ್ ಆಗಿರುವ ಸಂಜಯ್ ಕುಮಾರ್ ಹೇಳುವಂತೆ” ಕಡಿಮೆ ಬಜೆಟ್ಟಿನಲ್ಲಿ ಹೆಚ್ಚು ವೈಶಿಷ್ಟ್ಯವಿರುವ ಸ್ಮಾರ್ಟ್ ಫೋನ್ ನ್ನು ನಮ್ಮ ಸಂಸ್ಥೆಯ ಮೂಲಕ ಬಿಡುಗಡೆಗೊಳಿಸಿದ್ದೇವೆ, ಇದು ಜನರಿಗೆ ಉತ್ತಮ ಸೇವೆ ಒದಗಿಸಲು ನೆರವಿಗೆ ಬರಲಿದೆ ” ಎಂದಿದ್ದಾರೆ.


Click it and Unblock the Notifications








