ಶಿಯೋಮಿಗೆ ಸೆಡ್ಡುಹೊಡೆಯಲು ಬಂದಿವೆ ಎರಡು ಬೆಸ್ಟ್ 'ಕಾಮಿಯೊ' ಸ್ಮಾರ್ಟ್‌ಫೋನ್‌ಗಳು!!

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಕಾಮಿಯೊ ಭಾರತದ ಮಾರುಕಟ್ಟೆಗೆ ಮತ್ತೆರಡು ಸ್ಮಾರ್ಟ್‌ಫೋನುಗಳನ್ನು ಪರಿಚಯಿಸಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿವೆ.!!

|

ಕಳೆದವರ್ಷವಷ್ಟೇ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಕಾಮಿಯೊ ಭಾರತದ ಮಾರುಕಟ್ಟೆಗೆ ಮತ್ತೆರಡು ಸ್ಮಾರ್ಟ್‌ಫೋನುಗಳನ್ನು ಪರಿಚಯಿಸಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿವೆ.!!

ಶಿಯೋಮಿಗೆ ಸೆಡ್ಡುಹೊಡೆಯಲು ಬಂದಿವೆ ಎರಡು ಬೆಸ್ಟ್ 'ಕಾಮಿಯೊ' ಸ್ಮಾರ್ಟ್‌ಫೋನ್‌ಗಳು!

ಭಾರತದ ಟೆಲಿಕಾಂ ದಿಗ್ಗಜ ಜಿಯೋ ಜತೆ ಪಾಲುದಾರನಾಗಿ ಕಾಮಿಯೋ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿದ್ದು, ರಿಲಯನ್ಸ್ ಜಿಯೋದಿಂದ 2,200 ರೂ.ಗಳ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು ಪಡೆಯಲಿದ್ದಾರೆ.!! ಹಾಗಾದರೆ, ಕಾಮಿಯೋದ ನೂತನ ಸ್ಮಾರ್ಟ್‌ಫೋನ್‌ಗಳು ಯಾವವು? ಬೆಲೆ ಎಷ್ಟು? ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ಕಾಮಿಯೋ ಸ್ಮಾರ್ಟ್‌ಫೋನ್ಸ್!!

ಕಾಮಿಯೋ ಸ್ಮಾರ್ಟ್‌ಫೋನ್ಸ್!!

ಕಾಮಿಯೋ ಕಂಪೆನಿಯ ಕಾಮಿಯೊ ಸಿ2 ಲೈಟ್ ಮತ್ತು ಕಾಮಿಯೊ ಎಸ್1 ಲೈಟ್ ಎಂಬ ಎರಡು ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿವೆ. ಕಾಮಿಯೊ ಸಿ2 ಲೈಟ್ 5,999 ರೂಪಾಯಿಗಳ ಬೆಲೆ ಹೊಂದಿದ್ದರೆ, ಕಾಮಿಯೊ ಎಸ್1 ಲೈಟ್ 7,499 ರೂಪಾಯಿಗಳ ಬೆಲೆಯನ್ನು ಹೊಂದಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಕಾಮಿಯೊ ಎಸ್1 ಲೈಟ್ ಮತ್ತು ಕಾಮಿಯೊ ಸಿ2 ಲೈಟ್ ಎರಡೂ ಸ್ಮಾರ್ಟ್‌ಫೋನ್‌ಗಳೂ 720x1280 ಪಿಕ್ಸೆಲ್ ರೆಸೊಲ್ಯೂಷನ್ ಇರುವ 5 ಇಂಚುಗಳ HD IPS ಡಿಸ್‌ಪ್ಲೇ ಹೊಂದಿವೆ. M Wall ಗ್ಲಾಸ್ ಡಿಸ್‌ಪ್ಲೇ ರಕ್ಷಣೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ವಿನ್ಯಾಸದಲ್ಲಿ ರೆಡ್‌ಮಿ 4 ಸ್ಮಾರ್ಟ್‌ಫೋನ್ ಹೋಲುತ್ತದೆ ಎನ್ನಬಹುದು.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಕಾಮಿಯೊ ಎಸ್1 ಲೈಟ್ ಮತ್ತು ಕಾಮಿಯೊ ಸಿ2 ಲೈಟ್ ಎರಡೂ ಸ್ಮಾರ್ಟ್‌ಫೋನ್‌ಗಳೂ1.3GHz ಕ್ವಾಡ್ ಕೋರ್ ಮೀಡಿಯಾಟೆಕ್ MTK6737 ಪ್ರೊಸೆಸರ್ ಅನ್ನು ಹೊಂದಿವೆ. ಕಾಮಿಯೊ UI ತಳಹದಿಯ ಆಂಡ್ರಾಯ್ಡ್ 7.0 ನೌಗಾಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಕಾರ್ಯರ್ನಿಹಿಸುತ್ತವೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಕಾಮಿಯೊ ಎಸ್1 ಲೈಟ್ 2GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿದ್ದರೆ, ಕಾಮಿಯೊ ಸಿ2 ಲೈಟ್ 1.5GB RAM 16GB ಇನ್‌ಬಿಲ್ಟ್ ಮೆಮೊರಿ ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಎರಡೂ ಸ್ಮಾರ್ಟ್‌ಫೋನ್‌ಗಳ ಮೆಮೊರಿಯನ್ನು 128GB ವರೆಗೆ ವಿಸ್ತರಿಸಬಹುದಾಗಿದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಕಾಮಿಯೊ ಎಸ್1 ಲೈಟ್ 13MP ರಿಯರ್ ಹಾಗೂ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕಾಮಿಯೊ ಸಿ2 ಲೈಟ್ 8MP ರಿಯರ್ ಮತ್ತು 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಆಟೋಫೋಕಸ್, ರಿಯರ್ ಫ್ಲ್ಯಾಶ್, f/2.2 ಅಪಾರ್ಚರ್ ಫೀಚರ್ಸ್ಗಳನ್ನು ಕ್ಯಾಮೆರಾಗಲ್ಲಿ ನೀಡಲಾಗಿದೆ.!!

ಬ್ಯಾಟರಿ ಮತ್ತು ಕನೆಕ್ಟಿವಿಟಿ!!

ಬ್ಯಾಟರಿ ಮತ್ತು ಕನೆಕ್ಟಿವಿಟಿ!!

ಕಾಮಿಯೊ ಎಸ್1 ಲೈಟ್ 3050mAh ಬ್ಯಾಟರಿ ಹೊಂದಿದ್ದರೆ, ಕಾಮಿಯೊ ಸಿ2 ಲೈಟ್ 3900mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. 4G VoLTE, Wi-Fi 802.11 b/g/n, Bluetooth v4.0, GPS/ A-GPS ಮತ್ತು Micro-USB ಕನೆಕ್ಟಿವಿಟಿಗಳನ್ನು ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.!!

Best Mobiles in India

English summary
These budget phones are designed for youth and are priced at Rs 7,499 for S1 Lite and Rs 5,999 for C2 Lite, says the company.to know more visit to kannada.gibot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X