Home
ಮೊಬೈಲ್

'ವಿವೋ NEX 2' ಸ್ಮಾರ್ಟ್‌ಪೋನಿನಲ್ಲಿ ಡ್ಯುಯಲ್ ಡಿಸ್‌ಪ್ಲೇ ಇರಲಿದೆಯಂತೆ!

ವಿವೋ ಮೊಬೈಲ್ ಕಂಪನಿ ತನ್ನ ವಿನೂತನ ಸ್ಮಾರ್ಟ್‌ಫೋನ್‌ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಲೇ ಇದೆ. ಈಗ ಅದೇ ಸಾಲಿನಲ್ಲಿ ವಿವೋ ಕಂಪನಿಯ ಹೊಸ 'ವಿವೋ NEX 2' ಸ್ಮಾರ್ಟ್‌ಫೋನ್ ಕೂಡ ಮಾರುಕಟ್ಟೆಗೆ ಭರ್ಜರಿ ಸಿಹಿಸುದ್ದಿ ನೀಡಲು ತಯಾರಾಗಿದೆ. ಏಕೆಂದರೆ, ಈಗಾಗಲೇ ಈ ಸ್ಮಾರ್ಟ್‌ಫೋನ್ ಮೇಲೆ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ.

ಹೌದು, ವಿವೋ NEX 2 ಸ್ಮಾರ್ಟ್‌ಫೋನ್ ನೆಕ್ಸ್ಟ್ ಜನರೆಷನ್ ಸ್ಮಾರ್ಟ್‌ಫೋನ್ ಆಗಿದೆ ಎಂದು ಹೇಳಲಾಗಿದ್ದು, ಡ್ಯುಯಲ್ ಡಿಸ್‌ಪ್ಲೇ, ಟ್ರಿಪಲ್ ರಿಯರ್ ಕ್ಯಾಮೆರಾಗಳಂತಹ ಭವಿಷ್ಯದ ಫೀಚರ್ಸ್ ಗಳನ್ನು ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ ಎನ್ನಲಾಗುತ್ತಿದೆ. ಹಾಗಾಗಿ, ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ವಿವೋ NEX 2 ಫೋನ್ ಭಾರೀ ನಿರೀಕ್ಷೆಯನ್ನು ಹುಟ್ಟಿಹಾಕಿದೆ.

'ವಿವೋ NEX 2' ಸ್ಮಾರ್ಟ್‌ಪೋನಿನಲ್ಲಿ ಡ್ಯುಯಲ್ ಡಿಸ್‌ಪ್ಲೇ ಇರಲಿದೆಯಂತೆ!

ಇತ್ತಿಚಿಗೆ ವಿವೋ ಕಂಪನಿಯು ವಿವೋ NEX 2 ಫೋನಿನಲ್ಲಿ ಡ್ಯುಯೆಲ್ ಮತ್ತು ಪೂರ್ಣ ಪ್ರಮಾಣದ ಡಿಸ್‌ಪ್ಲೇ ಇರುವುದನ್ನು ಹಂಚಿಕೊಂಡಿತ್ತು. ಜೊತೆಗೆ ಡ್ಯುಯಲ್ ಡಿಸ್‌ಪ್ಲೇ ಹೊಂದಿರುವುದನ್ನು ಸಹ ಕಂಪೆನಿ ಖಚಿತ ಪಡಿಸಿತ್ತು. ಹಾಗಾದರೆ, ಭವಿಷ್ಯದ ಸ್ಮಾರ್ಟ್‌ಫೋನ್ ಹೆಗ್ಗಳಿಕೆಯನ್ನು ಹೊತ್ತಿರುವ 'NEX 2' ಸ್ಮಾರ್ಟ್‌ಫೋನ್ ಬಗ್ಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

ಡ್ಯುಯಲ್ ಡಿಸ್‌ಪ್ಲೇ ಉಪಸ್ಥಿತಿ

ಡ್ಯುಯಲ್ ಡಿಸ್‌ಪ್ಲೇ ಉಪಸ್ಥಿತಿ

ವಿವೋ NEX 2 ಡ್ಯುಯಲ್ ಡಿಸ್‌ಪ್ಲೇ ಆವೃತ್ತಿ ಬಗ್ಗೆ ಹುಟ್ಟಿಕೊಂಡಿರುವ ವದಂತಿಗಳಂತೆ, ಈ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 6.5-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದರಲ್ಲಿ ಹಿಂಬಾಗದಲ್ಲೂ ಸಹ ಡಿಸ್‌ಪ್ಲೇ ತರುವ ಸುಚನೆಯಿದ್ದು, ಹಿಂದಿನ ಡಿಸ್‌ಪ್ಲೇ 5.5-ಇಂಚಿನ ಪ್ಯಾನಲ್ ಆಗಿರಬಹುದು ಎಂದು ಹೇಳಲಾಗಿದೆ. ಅದರ ಉಪಯೋಗವೇನು ಎಂಬುದು ಈ ವರೆಗೂ ಕಂಪೆನಿ ಮಾಹಿತಿಯನ್ನು ಹೊರಹಾಕಿಲ್ಲ.

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್!

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್!

ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿರುವ ವಿವೋ NEX 2 ಸ್ಮಾರ್ಟ್‌ಪೋನ್ ನಿರಿಕ್ಷೆಯಂತೆಯೇ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್ ಜೊತೆಗೆ ಆಂಡ್ರಾಯ್ಡ್ 9.0 ಪೈ-ಔಟ್-ಬಾಕ್ಸ್‌ನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ವಿವೋ ಕಂಪೆನಿಯ ಮೂಲಗಳು ತಿಳಿಸಿವೆ.

10GB RAM!

10GB RAM!

ಅತ್ಯುತ್ತಮ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್ ಅನ್ನು ಹೊಂದಿರುವ ವಿವೋ NEX 2 ಸ್ಮಾರ್ಟ್‌ಫೋನ್ 10GB RAM ಮಾದರಿಯಲ್ಲಿ ಮೊಬೈಲ್ ಮಾರುಕಟ್ಟೆಗೆ ಎಂಟ್ರಿನೀಡಲು ತಯಾರಾಗಿದೆ. ಇನ್ನು ಆಂತರಿಕ ಸಾಮರ್ಥ್ಯ ಎಷ್ಟಿರಬಹುದು ಎಂಬ ಮಾಹಿತಿ ಲಭ್ಯವಿಲ್ಲ. ಆದರೆ, ಸ್ಮಾರ್ಟ್‌ಪೋನಿನಲ್ಲಿನ RAM ಮಾಹಿತಿ ಮಾತ್ರ ಮೊಬೈಲ್ ಜಗತ್ತಿನ ಗಮನಸೆಳೆದಿದೆ.

ಎಲ್ಇಡಿ ರಿಂಗ್ ಕ್ಯಾಮೆರಾ

ಎಲ್ಇಡಿ ರಿಂಗ್ ಕ್ಯಾಮೆರಾ

ವಿವೋ NEX 2 ಸ್ಮಾರ್ಟ್‌ಪೋನ್ ಮೂರು ರಿಯರ್ ಕ್ಯಾಮೆರಾಗಳನ್ನು ಹೊಮದಿರಲಿದ್ದು, ವಿಶೇಷವಾಗಿ ಎಲ್ಇಡಿ ರಿಂಗ್ ಫ್ಲಾಶ್‌ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಆದರೆ, ಸ್ಮಾರ್ಟ್‌ಪೋನಿನ ಕ್ಯಾಮೆರಾಗಳ ಸಾಮರ್ಥ್ಯವೇನು ಎಂಬ ಮಾಹಿತಿ ಹೊರಬಿದ್ದಿಲ್ಲ. ಇನ್ನು ಸೆಲ್ಫಿ ಕ್ಯಾಮೆರಾ ಪಾಪ್ ಅಪ್ (ಲಿಫ್ಟ್ ರೀತಿಯ) ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿರುವುದು ಪಕ್ಕಾ.

ಇತರೆ ಫೀಚರ್ಸ್?

ಇತರೆ ಫೀಚರ್ಸ್?

ಸ್ನಾಪ್ಡ್ರಾಗನ್ 845 ಪ್ರೊಸೆಸರ್, ಡ್ಯುಯಲ್ ಡಿಸ್‌ಪ್ಲೇ, 10GB RAM , ಎಲ್ಇಡಿ ರಿಂಗ್ ಫ್ಲಾಶ್‌ನಂತಹ ವಿಶೇಷತೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್, ಸೆಲ್ಫಿ ಮೋಡ್ನಲ್ಲಿ ವ್ಯೂ ಫೈಂಡರ್ , ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಫೀಚರ್, ಕೃತಕ ಬುದ್ದಿಮತ್ತೆ ಆಧಾರಿತ ಫೇಸ್‌ಲಾಕ್, ಫುಲ್‌ ಸ್ಕ್ರೀನ್ ಬಾಡಿಯಂತಹ ಹಲವು ಅತ್ಯುತ್ತಮ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

Best Mobiles in India

English summary
We have been coming across several leaks regarding the next-generation Vivo flagship in the NEX lineup. Some of these leaks have already suggested that the smartphone might be launched with dual displays, triple rear cameras and other highlights. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+