ಮೊಟೊ E5 ಮತ್ತು ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಮಾಹಿತಿ!!

|

ಲೆನೊವೊ ಒಡೆತನದ ಮೊಟೊರೊಲಾ ಮೊಬೈಲ್ ಕಂಪೆನಿ ತನ್ನ ನೂತನ ಎರಡು ಸ್ಮಾರ್ಟ್‌ಫೋನ್​ಗಳನ್ನು ಭಾರತೀಯ ಮೊಬೈಲ್​ ಮಾರುಕಟ್ಟೆಗೆ ಪರಿಚಯಿಸಿದೆ. ವಿಡಿಯೋ ಮತ್ತು ಗೇಮ್ ಪ್ರಿಯರಿಗಾಗಿ ದೀರ್ಘ ಬಾಳಿಕೆಯ ಬ್ಯಾಟರಿ ಸಾಮರ್ಥ್ಯದ ಫೋನ್‌ಗಳನ್ನು ಮೋಟರೋಲಾ ಮಾರುಕಟ್ಟೆಗೆ ತಂದಿದ್ದು, ಬ್ಯಾಟರಿ ವಿಷಯದಲ್ಲಿ ದೇಶದ ಗಮನ ಸೆಳೆದಿವೆ.

ಹೆಚ್ಚುತ್ತಿರುವ ಬ್ಯಾಟರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಮೊಟೊ, ಮೋಟೊ E5 ಮತ್ತು E5 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ತಮ್ಮ ಸರಣಿಯಲ್ಲೇ ಅತಿ ಹೆಚ್ಚು ಅಂದರೆ, ಕ್ರಮವಾಗಿ 4000 ಮತ್ತು 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿವೆ. ಇದರಿಂದ 20+ ಗಂಟೆಗಳ ತಡೆರಹಿತ ವೆಬ್ ಸರ್ಫಿಂಗ್ ಸೇವೆ ಪಡೆಯಬಹುದು ಎಂದು ಕಂಪೆನಿ ಹೇಳಿದೆ.

ಮೊಟೊ E5 ಮತ್ತು ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಮಾಹಿತಿ!!

ಬಿಡುಗಡೆಯಾಗಿರುವ ಮೊಟೊ E5 ಮತ್ತು ಮೊಟೊ E5 ಪ್ಲಸ್ ಎರಡೂ ನೂತನ ಸ್ಮಾರ್ಟ್‌ಫೋನ್‌ಗಳ ಬೆಲೆ ಕ್ರಮವಾಗಿ 9,999ರೂ. ಹಾಗೂ 11,999ರೂ.ಗಳನ್ನು ಹೊಂದಿದ್ದು, ಹಾಗಾದರೆ, ಮಾರುಕಟ್ಟೆಗೆ ಕಾಲಿಟ್ಟಿರುವ ಮೋಟೊ E5 ಮತ್ತು E5 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಯಾವುವು? ಖರೀದಿಸಲು ಯೋಗ್ಯ ಮೊಬೈಲ್‌ಗಳೆ? ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ?

ಡಿಸ್‌ಪ್ಲೇ ಮತ್ತು ವಿನ್ಯಾಸ?

ಮೊಟೊ E5 ಸ್ಮಾರ್ಟ್‌ಫೋನ್ 720x1440 ಪಿಕ್ಸೆಲ್‌ ಸಾಮರ್ಥ್ಯದ 5.7 ಇಂಚಿನ ಹೆಚ್​ಡಿ ಪ್ಲಸ್​ ಡಿಸ್​ಪ್ಲೇಯನ್ನು ಹೊಂದಿದ್ದರೆ, ಮೊಟೊ E5 ಪ್ಲಸ್ ಸ್ಮಾರ್ಟ್‌ಫೋನ್ 720x1440 ಪಿಕ್ಸೆಲ್‌ ಸಾಮರ್ಥ್ಯದ 6 ಇಂಚಿನ ಹೆಚ್​ಡಿ ಪ್ಲಸ್​ ಮ್ಯಾಕ್ಸ್​ ವಿಶನ್​ ಡಿಸ್​ಪ್ಲೇಯನ್ನು ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಮೊಟೊವಿನ ಬಜೆಟ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಹೊಂದಿವೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಮೊಟೊ E5 ಮತ್ತು ಮೊಟೊ E5 ಪ್ಲಸ್ ಎರಡೂ ಸ್ಮಾರ್ಟ್‌ಪೋನ್‌ಗಳಲ್ಲಿಯೂ ಸ್ನ್ಯಾಪ್​ಡ್ರಾಗನ್​ 425 ಪ್ರೊಸೆಸರ್​ ಅನ್ನು ಅಳವಡಿಸಲಾಗಿದೆ. ಮೊಟೊ E5 2GB RAM ಮತ್ತು 16GB ಆಂತರಿಕ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದರೆ, ಮೊಟೊ E5 ಪ್ಲಸ್ ಸ್ಮಾರ್ಟ್‌ಪೋನ್ 3GB RAM ಮತ್ತು 32GB ಆಂತರಿಕ ಮೆಮೊರಿಯನ್ನು ಹೊಂದಿದೆ.

ಕ್ಯಾಮೆರಾ

ಕ್ಯಾಮೆರಾ

ಮೊಟೊ E5 ಸ್ಮಾರ್ಟ್‌ಫೋನ್ ಹಿಂಬದಿ 13 ಎಂಪಿ ಕ್ಯಾಮೆರಾ ಹಾಗೂ 5 ಎಂಪಿ ಸೆಲ್ಫಿ ಕ್ಯಾಮೆರಾಗಳನ್ನು ಒಳಗೊಂಡಿದ್ದರೆ, ಮೊಟೊ E5 ಪ್ಲಸ್ 12ಎಂಪಿ ರಿಯರ್ ಕ್ಯಾಮೆರಾ ಹಾಗೂ 5 ಎಂಪಿ ವೈಡ್​ ಆಂಗಲ್ ಸೆಲ್ಫಿ​ ಕ್ಯಾಮೆರಾಗಳನ್ನು ಒಳಗೊಂಡಿದೆ. ಎರಡೂ ಫೋನ್‌ಗಳು ಟಚ್ ಫೋಕಸ್, ಫೇಸ್ ಡಿಟೆಕ್ಷನ್, HDR ಕ್ಯಾಮೆರಾ ತಂತ್ರಜ್ಞಾನಗಳನ್ನು ಹೊಂದಿವೆ.

ಬ್ಯಾಟರಿ ವಿಶೇಷತೆ!

ಬ್ಯಾಟರಿ ವಿಶೇಷತೆ!

ಎಲ್ಲಾ ಫೀಚರ್ಸ್‌ಗಳಲ್ಲಿಯೂ ಸ್ವಲ್ಪ ಹಿಂದುಳಿದಿರುವ ಮೊಟೊ E5 ಮತ್ತು ಮೊಟೊ E5 ಪ್ಲಸ್ ಸ್ಮಾರ್ಟ್‌ಪೋನ್‌ಗಳು ಬ್ಯಾಟರಿ ವಿಷಯದಲ್ಲಿ ಉತ್ತಮವಾಗಿದೆ. ಎರಡೂ ಪೋನ್‌ಗಳು ಕ್ರಮವಾಗಿ 4000 ಮತ್ತು 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 8 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್, 200+ ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.

ಇತರೆ ಫೀಚರ್ಸ್ ?

ಇತರೆ ಫೀಚರ್ಸ್ ?

ಲೇಸರ್ ಫಿಂಗರ್‌ಪ್ರಿಂಟ್ ರೀಡರ್, 10W ಫಾಸ್ಟ್ ಚಾರ್ಜಿಂಗ್, ವೈ-ಫೈ, ಜಿಪಿಎಸ್, ಬ್ಲೂಟೂತ್, ಎಫ್ಎಂ, 3 ಜಿ ಮತ್ತು 4 ಜಿ (ಭಾರತದಲ್ಲಿ ಕೆಲವು ಎಲ್‌ಟಿಇ ನೆಟ್ವಕ್‌ಗಳಿಂದ ಬಳಸಲ್ಪಡುವ ಬ್ಯಾಂಡ್ 40ರ ಬೆಂಬಲದೊಂದಿಗೆ) ಸೇರಿವೆ. ಪ್ರಾಕ್ಸಿಮಿಟಿ ಸಂವೇದಕ, ಅಕ್ಸೆಲೆರೊಮೀಟರ್ ಮತ್ತು ಆಂಬಿಯಂಟ್ ಲೈಟ್ ಸೆನ್ಸರ್‌ಗಳನ್ನು ಫೋನ್ ಒಳಗೊಂಡಿದೆ.

Best Mobiles in India

English summary
Moto E5 vs Moto E5 Plus Mobile Phones Comparison - Compare Size, Camera, Specs, Features, Price of Moto E5 with Moto E5 Plus.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X