'ರೆಡ್‌ಮಿ ನೋಟ್ 5 ಪ್ರೊ' ಖರೀದಿಸುವುದಕ್ಕಿಂತ ಈ 9,999 ರೂ.ಬೆಲೆಯ 'ರೆಡ್ ಮಿ ವೈ2' ಖರೀದಿ ಬೆಸ್ಟ್!!

|

ಭಾರತದಲ್ಲಿ ಶಿಯೋಮಿ ರೆಡ್ ಮಿ ವೈ2 ಸ್ಮಾರ್ಟ್‌ಪೋನ್ ಬಿಡುಗಡೆಗೆ ಭಾರತೀಯ ಸ್ಮಾರ್ಟ್ ಪೋನ್ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ನೆನ್ನೆಯಷ್ಟೆ ಬಿಡುಗಡೆಯಾದ ಶಿಯೋಮಿ ಸೆಲ್ಫಿ ಸೆಂಟ್ರಿಕ್ ಸ್ಮಾರ್ಟ್ ಪೋನ್ ಬಜೆಟ್ ಆಧಾರಿತ ಸ್ಮಾರ್ಟ್‌ಫೋನ್ ಕೇವಲ ಒಂದೇ ದಿನದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದೆ. !

ಚೀನಾದಲ್ಲಿ ವರ್ಷಾರಂಭದಲ್ಲಿ ಬಿಡುಗಡೆಗೊಂಡಿದ್ದ ರೆಡ್‌ಮಿ ಎಸ್‌2 ಸ್ಮಾರ್ಟ್‌ಪೋನ್ ಅನ್ನು ರಿಬ್ರಾಂಡ್ ಮಾಡಲಾಗಿದ್ದು, ಭಾರತದಲ್ಲಿ ರೆಡ್ ಮಿ ವೈ2 ಸ್ಮಾರ್ಟ್ ಪೋನ್ ಆಗಿ ಬಿಡುಗಡೆಯಾಗಿದೆ. ಈ ಮೊದಲೇ ಫೀಚರ್ಸ್‌ಗಳಿಂದ ಬಾರೀ ಸುದ್ದಿಯಾಗಿದ್ದ, ರೆಡ್‌ಮಿ ಎಸ್‌2 ಸ್ಮಾರ್ಟ್‌ಪೋನ್ ರೆಡ್ ಮಿ ವೈ2 ಹೆಸರಿನಲ್ಲಿ ಕಡಿಮೆ ಬೆಲೆಗೆ ಬಿಡುಗಡೆಯಾಗಿರುವುದು ಅಚ್ಚರಿ ಮೂಡಿಸಿದೆ.

'ರೆಡ್‌ಮಿ ನೋಟ್ 5 ಪ್ರೊ' ಗಿಂತ ಬೆಸ್ಟ್...ಈ 9,999 ರೂ.ಬೆಲೆಯ 'ರೆಡ್ ಮಿ ವೈ2'!!

ಕೇವಲ 9,999 ರೂಪಾಯಿಗಳಿಗೆ ಭಾರೀ ಫೀಚರ್ಸ್ ಹೊತ್ತಿರುವ ಶಿಯೋಮಿ ರೆಡ್ ಮಿ ವೈ2 ಸ್ಮಾರ್ಟ್‌ಪೋನ್ ಶಿಯೋಮಿ ನೋಟ್ ಪ್ರೊಗೆ ಸೆಡ್ಡು ಹೊಡೆಯುತ್ತಿದೆ. 17 ಸಾವಿರ ಬೆಲೆ ಹೊಂದಿರುವ ಶಿಯೋಮಿ ನೋಟ್ ಪ್ರೊ ಫೋನಿಗಿಂತ ಸ್ವಲ್ಪವೇ ಕಡಿಮೆ ಫೀಚರ್ಸ್ ಹೊಂದಿರುವ ಈ ಫೋನನ್ನು ಬೆಲೆ ಆಧಾರಿತವಾಗಿ ನೋಟ್ 5 ಪ್ರೊಗಿಂತಲೂ ಬೆಸ್ಟ್ ಸ್ಮಾರ್ಟ್‌ಫೋನ್ ಎನ್ನಬಹುದು.

ರೆಡ್‌ಮಿ ನೋಟ್ 5 ಪ್ರೊ VS ರೆಡ್ ಮಿ ವೈ2!!

ರೆಡ್‌ಮಿ ನೋಟ್ 5 ಪ್ರೊ VS ರೆಡ್ ಮಿ ವೈ2!!

3GB RAM ಮತ್ತು 32GB ಮೆಮೊರಿ ಹೊಂದಿರುವ 'ರೆಡ್ ಮಿ ವೈ2' ಸ್ಮಾರ್ಟ್‌ಫೋನ್ ಬೆಲೆ 9,999 ರೂ.ಗೆ ಲಭ್ಯವಿದ್ದರೆ, 4GB RAM ಮತ್ತು 64GB ಮೆಮೊರಿ ಹೊಂದಿರುವ ರೆಡ್ ಮಿ ವೈ 2ನ ಬೆಲೆ 12,999 ರೂ.ಇದೆ. ಇನ್ನು 4GB RAM ಮತ್ತು 64GB ಮೆಮೊರಿ ಹೊಂದಿರುವ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಬೆಲೆ 9,999 ರೂ.ಗೆ ಲಭ್ಯವಿದ್ದರೆ, 6GB RAM ಮತ್ತು 64GB ಮೆಮೊರಿ ಹೊಂದಿರುವ ನೋಟ್ 5 ಪ್ರೊನ ಬೆಲೆ 16,999 ರೂಪಾಯಿಗಳಾಗಿವೆ.

ಯಾವ ಸ್ಮಾರ್ಟ್‌ಪೋನ್ ಬೆಸ್ಟ್?

ಯಾವ ಸ್ಮಾರ್ಟ್‌ಪೋನ್ ಬೆಸ್ಟ್?

ಎರಡೂ ಫೋನ್‌ಗಳನ್ನು ನಾವು ಖಂಡಿತ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ, ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ರೆಡ್ ಮಿ ವೈ2 ಸ್ಮಾರ್ಟ್‌ಫೋನಿಗಿಂತ ಉತ್ತಮವಾಗಿದೆ. ಆದರೆ, ಬೆಲೆ ವಿಷಯಕ್ಕೆ ಬಂದಾಗ ರೆಡ್ ಮಿ ವೈ2 ಸ್ಮಾರ್ಟ್‌ಫೋನ್ ಖರೀದಿಸಲು ಯೋಗ್ಯವಾದ ಸ್ಮಾರ್ಟ್‌ಫೋನ್ ಆಗಿದೆ. ರೆಡ್‌ಮಿ ನೋಟ್ 5 ಪ್ರೊ ಫೋನಿನ ಶೇ 80 ರಷ್ಟು ಕೆಲಸವನ್ನು ರೆಡ್ ಮಿ ವೈ2 ಸ್ಮಾರ್ಟ್‌ಫೋನ್ ಕೂಡ ನಿರ್ವಹಿಸಲಿದೆ. ಹಾಗಾಗಿ, ಎರಡೂ ಫೋನ್‌ಗಳ ಫೀಚರ್ಸ್ ಮತ್ತು ಶಕ್ತಿಯನ್ನು ಮುಂದೆ ತಿಳಿಯಿರಿ.

ಎರಡೂ ಫೋನ್‌ಗಳ ಡಿಸ್‌ಪ್ಲೇ ಹೇಗಿದೆ?

ಎರಡೂ ಫೋನ್‌ಗಳ ಡಿಸ್‌ಪ್ಲೇ ಹೇಗಿದೆ?

ರೆಡ್ ಮಿ ವೈ 2 5.99 ಇಂಚ್ IPS LCD (720x1440 ಪಿಕ್ಸೆಲ್ಸ್) ಡಿಸ್ ಪ್ಲೇ ಹೊಂದಿದ್ದು, 18:9 ಅನುಪಾತ, 2.5 ಡಿ.ಕರ್ವ್ ಗ್ಲಾಸ್ ನಿಂದ ರಕ್ಷಿಸಲ್ಪಟ್ಟಿದೆ. 'ರೆಡ್‌ಮಿ ನೋಟ್ 5 ಪ್ರೊ' 18: 9 ಆಕಾರ ಅನುಪಾತದಲ್ಲಿ 15.2cm (5.99 ಇಂಚಿನ) FHD + ಡಿಸ್‌ಪ್ಲೇಯನ್ನು ಹೊಂದಿದೆ 2.5 ಡಿ.ಕರ್ವ್ ಗ್ಲಾಸ್ ನಿಂದ ರಕ್ಷಿಸಲ್ಪಟ್ಟಿದೆ. ಎರಡೂ ಪೋನ್‌ಗಳು ಬೆಜೆಲ್ ಲೆಸ್ ವಿನ್ಯಾಸ ಹೊಂದಿದ್ದರೂ, ರೆಡ್‌ಮಿ ನೋಟ್ 5 ಡಿಸ್‌ಪ್ಲೇ ಪಿಕ್ಸೆಲ್ (1080*2160) ಸಾಮರ್ಥ್ಯ ಹೆಚ್ಚಿದೆ.

ಎರಡೂ ಫೋನ್‌ಗಳ ಕಾರ್ಯಾಚರಣೆ

ಎರಡೂ ಫೋನ್‌ಗಳ ಕಾರ್ಯಾಚರಣೆ

'ರೆಡ್ ಮಿ ವೈ2' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8 ಒರಿಯೋ ಆಧಾರಿತ MIUI 9.5 ಸ್ನ್ಯಾಪ್ ಡ್ರಾಗನ್ 625, 2.0 GHz Octa Core ಪ್ರೊಸೆಸೆರ್ ನಿಂದ ಕಾರ್ಯನಿರ್ವಹಿಸಲಿದೆ. ರೆಡ್‌ಮಿ ನೋಟ್ 5 ಪ್ರೊ ಆಂಡ್ರಾಯ್ಡ್ 8 ಒರಿಯೋ MIUI 9.5 ಸ್ನಾಪ್ ಡ್ರಾಗನ್ 636 soc ಪ್ರೊಸೆಸರ್‌ನಿಂದ ಕಾರ್ಯನಿರ್ವಹಣೆ ನೀಡಲಿದೆ. RAM ಮತ್ತು ಪ್ರೊಸೆಸರ್ ವಿಷಯದಲ್ಲಿ ರೆಡ್‌ಮಿ ನೋಟ್ 5 ಪ್ರೊ ಸ್ವಲ್ಪವೇ ಶಕ್ತಿಶಾಲಿಯಾಗಿದೆ ಎಂದು ಹೇಳಬಹುದು.

ಎರಡೂ ಫೋನ್‌ಗಳ ಕ್ಯಾಮೆರಾ?

ಎರಡೂ ಫೋನ್‌ಗಳ ಕ್ಯಾಮೆರಾ?

'ರೆಡ್ ಮಿ ವೈ2' ಸ್ಮಾರ್ಟ್‌ಫೋನ್ 12+5MP ಸಾಮರ್ಥ್ಯದ ಎರಡು ರಿಯಲ್ ಕ್ಯಾಮೆರಾಗಳು ಹಾಗೂ 16MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ, ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 12+5MP ಸಾಮರ್ಥ್ಯದ ಎರಡು ರಿಯಲ್ ಕ್ಯಾಮೆರಾಗಳು ಹಾಗೂ 20MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನಿನ ಸೆಲ್ಫಿ ಕ್ಯಾಮೆರಾದ ಸಾಮರ್ಥ್ಯ ಸ್ವಲ್ಪ ಹೆಚ್ಚಿದೆ.

ಕ್ಯಾಮೆರಾ ತಂತ್ರಜ್ಞಾನ ಹೇಗಿದೆ?

ಕ್ಯಾಮೆರಾ ತಂತ್ರಜ್ಞಾನ ಹೇಗಿದೆ?

ಹೊಸ ಶಿಯೋಮಿ ರೆಡ್ ಮಿ ವೈ2 ಸೆಲ್ಫಿ ಸೆಂಟ್ರಿಕ್ ಸ್ಮಾರ್ಟ್ ಪೋನ್ ಆಗಿದ್ದು, 16MP AI ಸೆಲ್ಫಿ ಕ್ಯಾಮೆರಾ ಸೆನ್ಸಾರ್ f/2.0 ಅಪಾರ್ಚರ್, AI ಇಂಟಿಗ್ರೇಷನ್, ಸೆಲ್ಫಿ LED ಫ್ಲಾಶ್ ಲೈಟ್ ಹೊಂದಿದೆ. ಇದಲ್ಲದೇ Auto HDR, AI ಪೊರ್ಟರೆಟ್ ಸೆಲ್ಫಿ ಮತ್ತು ಬ್ಯುಟಿಪೈ ಮೊಡ್ ಹೊಂದಿದ್ದು, 10 ರೀತಿಯ ಪೋಟೋ ಎಡಿಟಿಂಗ್ ನಲ್ಲಿ ಬಳಕೆಯಾಗಲಿವೆ. ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿಯೂ ಬಹುತೇಕ ಇದೇ ರೀತಿಯ ತಂತ್ರಜ್ಞಾನವನ್ನು ಶಿಯೋಮಿ ಅಳವಡಿಸಿರುವುದನ್ನು ನೀವು ನೋಡಬಹುದು.

ಎರಡೂ ಫೋನ್‌ಗಳ ಬ್ಯಾಟರಿ ಶಕ್ತಿ ಎಷ್ಟು?

ಎರಡೂ ಫೋನ್‌ಗಳ ಬ್ಯಾಟರಿ ಶಕ್ತಿ ಎಷ್ಟು?

ಶಿಯೋಮಿ 'ರೆಡ್ ಮಿ ವೈ2' ಸ್ಮಾರ್ಟ್‌ಫೋನ್ 3080mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದರೆ, ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ 4000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳೂ ರೆಡ್‌ಮಿ ನೋಟ್ 5 ಪ್ರೊ 5V/2A ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿವೆ. ರೆಡ್ ಮಿ ವೈ2' ಸ್ಮಾರ್ಟ್‌ಫೋನ್ ಸಂಪೂರ್ಣ ಒಂದು ದಿನದ ಬ್ಯಾಟರಿ ಶಕ್ತಿಯನ್ನು ಒದಗಿಸಲಿದೆ ಎಂದು ಶಿಯೋಮಿ ಹೇಳಿದೆ.

ಫೇಸ್ ಅನ್‌ಲಾಕ್ ಫೀಚರ್!!

ಫೇಸ್ ಅನ್‌ಲಾಕ್ ಫೀಚರ್!!

ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ಫೇಸ್ ಅನ್‌ಲಾಕ್ ಫೀಚರ್ ನೀಡಿದಂತೆ, ರೆಡ್ ಮಿ ವೈ2 ಸ್ಮಾರ್ಟ್‌ಫೋನಿನಲ್ಲಿಯೂ AI ಆಧಾರಿತ ಫೇಸ್ ಅನ್‌ಲಾಕ್ ಮತ್ತು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ನಿಡಲಾಗಿದೆ. ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಂತೆ ರೆಡ್ ಮಿ ವೈ2ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಸಹ ಬಳಸಬಹುದಾಗಿದೆ.

Best Mobiles in India

English summary
Xiaomi Redmi Y2 vs Redmi Note 5 Pro vs Xiaomi Redmi Note 4 Mobile Phones Comparison. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X