ಬರಲಿದೆ ಕೂಲ್ ಪ್ಯಾಡ್ ಕೂಲ್ ಸ್ಮಾರ್ಟ್‌ಫೋನ್..!
ಚೀನೀ ಮೊಬೈಲ್ ತಯಾರಕರಾದ ಕೂಲ್ಪ್ಯಾಡ್ ತನ್ನ ದೇಶದಲ್ಲಿ ಹೊಸದೊಂದು ಸ್ಮಾರ್ಟ್ಫೋನ್ ಅನ್ನು ಬಿಡುಗಡೆಮಾಡಿದೆ. ಅದುವೇ ಕೂಲ್ಪ್ಯಾಡ್ ಕೂಲ್ 2. ಸಧ್ಯಕ್ಕೆ ಈ ಹೊಸ ಸ್ಮಾರ್ಟ್ಫೋನ್ ಚೀನಾದಲ್ಲಿ ಮಾತ್ರ ಲಭ್ಯವಿದ್ದು ಶೀಘ್ರದಲ್ಲಿಯೇ ಭಾರತದ ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆ ಇದೆ. ಇದೊಂದು ಮಧ್ಯಮ ಶ್ರೇಣಿಯ ಮೊಬೈಲ್ ಆಗಿದ್ದು ತಕ್ಕಮಟ್ಟಿಗೆ ಉತ್ತಮ ಫೀಚರ್ಗಳನ್ನೇ ಹೊಂದಿದೆ.

ಇದರ ಸ್ಪೆಸಿಫಿಕೇಶನ್ಗಳ ಕುರಿತು ಹೇಳುವುದಾದದರೆ , ಕೂಲ್ಪ್ಯಾಡ್ ಕೂಲ್ 2 ನಲ್ಲಿದೆ 5.7 ಇಂಚ್ HD+ ಡಿಸ್ಪ್ಲೇ 1440X720 ಪಿಕ್ಸೆಲ್ ರೆಸೊಲ್ಯೂಶನ್ ಮತ್ತು 18:9 ಆಸ್ಪೆಕ್ಟ್ ಅನುಪಾತದೊಂದಿಗೆ. ಇದರ ಡಿಸ್ಪ್ಲೇ 2.5D ಕರ್ವ್ಡ್ ಗ್ಲಾಸ್ ನ ರಕ್ಷಣಾ ಕವಚವನ್ನೂ ಹೊಂದಿದೆ. 64ಬಿಟ್ ಮೀಡಿಯಾಟೆಕ್ MT6750 ಪ್ರಾಸೆಸರ್ ಹೊಂದಿರುವ ಕೂಲ್ಪ್ಯಾಡ್ ಕೂಲ್ 2 ಜೊತೆಗೆ ಮಾಲಿ T-860 GPU ಅನ್ನೂ ಹೊಂದಿದೆ.
ಕೂಲ್ಪ್ಯಾಡ್ ಕೂಲ್ 2 ಸ್ಮಾರ್ಟ್ಫೋನ್ 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಇದರ ಸ್ಟೋರೇಜ್ ಅನ್ನು ಮೈಕ್ರೋSD ಕಾರ್ಡ್ ಬಳಸಿ ಮತ್ತಷ್ಟು ವಿಸ್ತರಿಸಬಹುದಾಗಿದೆ.
ಇದರ ಕ್ಯಾಮೆರಾ ಕುರಿತು ಹೇಳುವುದಾದದರೆ ಕೂಲ್ಪ್ಯಾಡ್ ಕೂಲ್ 2 ನಲ್ಲಿದೆ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್. ಇದರ ಕ್ಯಾಮೆರಾ ಸೆಟಪ್ ಐಫೋನ್ X ನ ಕ್ಯಾಮೆರಾವನ್ನೇ ಹೋಲುತ್ತದೆ. ಇದರಲ್ಲಿದೆ 13MP ಪ್ರೈಮರಿ ಸೆನ್ಸರ್ ಮತ್ತು 0.3MP ಸೆಕೆಂಡರಿ ಸೆನ್ಸರ್. ಅಷ್ಟೇ ಅಲ್ಲದೆ ಇದರ ಸೆಲ್ಫೀ ಕ್ಯಾಮೆರಾ 8MP ಸೆನ್ಸರ್ ನ ಬಳಕೆ ಮಾಡುತ್ತದೆ.
ಕೂಲ್ಪ್ಯಾಡ್ ಕೂಲ್ 2 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 7.0 ನುಗಾಟ್ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು 3200 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. 154.7X73X9.0mm ಸುತ್ತಳತೆಯ ಈ ಹ್ಯಾಂಡ್ಸೆಟ್ ಅಂದಾಜು 160ಗ್ರಾಂ ತೂಕ ಹೊಂದಿದೆ.
ಕೂಲ್ಪ್ಯಾಡ್ ಕೂಲ್ 2 4G LTE,VoLTE, ವೈಫೈ 802.11 b/g/n, ಬ್ಲೂಟೂತ್, GPS, ಮೈಕ್ರೋ USB ಪೋರ್ಟ್ ಮೊದಲಾದ ಕನೆಕ್ಟಿವಿಟಿ ಫೀಚರ್ಗಳನ್ನು ಹೊಂದಿದೆ. ಇಷ್ಟೇ ಅಲ್ಲದೆ ಕೂಲ್ 2 ರೇರ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಪೀಚರ್ಗಳನ್ನು ಹೊಂದಿದೆ.
ಕೂಲ್ಪ್ಯಾಡ್ ಮುಂದಿನ ಕೆಲವು ತಿಂಗಳಲ್ಲಿ ಇನ್ನೂ 3 ಹೊಸ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡುವ ಯೋಜನೆ ಹೊಂದಿರುವುದಾಗಿ ಗಿಜ್ಬಾಟ್ ಗೆ ತಿಳಿಸಿದೆ. ಕೂಲ್ಪ್ಯಾಡ್ ನ CEO ಆದ ಸೈಯೆದ್ ತಾಜುದ್ದೀನ್ ಅವರು ಈ ಸಾಧನಗಳ ಬೆಲೆ ರೂ 12000 ದೊಳಗೆ ಇರಲಿದೆ ಎಂದು ತಿಳಿಸಿದ್ದಾರೆ.
ಕೂಲ್ಪ್ಯಾಡ್ ಇತ್ತೀಚೆಗಷ್ಟೇ ಕೂಲ್ಪ್ಯಾಡ್ A1 ಮತ್ತು ಕೂಲ್ಪ್ಯಾಡ್ ಮೆಗಾ 4A ಸ್ಮಾರ್ಟ್ಫೋನ್ಗಳನ್ನು ಕೈಗೆಟಕುವ ಬೆಲೆಯಲ್ಲಿ ಲಾಂಚ್ ಮಾಡಿತ್ತು. ಕೂಲ್ಪ್ಯಾಡ್ A1 8MP ರೇರ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾ ಹೊಂದಿದ್ದು 5.0ಇಂಚ್ ಫುಲ್ HD ಡಿಸ್ಪ್ಲೇ ಹೊಂದಿದೆ.


Click it and Unblock the Notifications