Home
ಮೊಬೈಲ್

₹ 9,999ಗೆ ಕೂಲ್‌ಪ್ಯಾಡ್ ನೋಟ್ 8 ಸ್ಮಾರ್ಟ್‌ಫೋನ್ ಲಾಂಚ್..!

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಕೂಲ್ ಪ್ಯಾಡ್ ನೋಟ್ 6 ನ್ನು ಬಿಡುಗಡೆಗೊಳಿಸಿದೆ. 10 ಸಾವಿರ ರುಪಾಯಿ ಒಳಗಿನ ಫೋನ್ ಒಂದನ್ನು ಬಿಡುಗಡೆಗೊಳಿಸುವ ಬಗ್ಗೆ ಈಗಾಗಲೇ ತಿಳಿಸಿದ್ದ ಕಂಪೆನಿ ಇದೀಗ ದಿ ಸೆಲ್ಫೀ ಮೇಕರ್ ಎಂದು ನಾಮಾಕಿಂತಗೊಂಡಿರುವ ಹೊಸ ಫೋನ್ ಒಂದನ್ನು 9,999 ರುಪಾಯಿ ಬೆಲೆಗೆ ಬಿಡುಗಡೆಗೊಳಿಸಿದೆ. ಇದು 4GB RAM+64GB ROM ವೇರಿಯಂಟ್ ನ್ನು ಹೊಂದಿದ್ದು ಪೇಟಿಎಂ ಮಾಲ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಲಭ್ಯವಿದೆ.

₹ 9,999ಗೆ ಕೂಲ್‌ಪ್ಯಾಡ್ ನೋಟ್ 8 ಸ್ಮಾರ್ಟ್‌ಫೋನ್ ಲಾಂಚ್..!

ಸ್ಮಾರ್ಟ್‌ಫೋನ್‌ ಫೀಚರ್ಸ್‌

16MP+0.3MP ಡುಯಲ್ ಹಿಂಭಾಗದ ಕ್ಯಾಮರಾ, 8MP ಮುಂಭಾಗದ ಕ್ಯಾಮರಾ ಮತ್ತು 4,000mAh ನ ಬ್ಯಾಟರಿ ಹೊಂದಿದೆ. ಮತ್ತು ಇದರ ಸುತ್ತಳತೆ 8151x72.5x8.3mm. 5.99- ಇಂಚಿನ ಫುಲ್ HD+ ಡಿಸ್ಪ್ಲೇ (1080x2160 ಪಿಕ್ಸಲ್ಸ್) ಜೊತೆಗೆ 18:9 ಅನುಪಾತವನ್ನು ಹೊಂದಿದೆ.

ಕೂಲ್ ಪ್ಯಾಡ್ ನೋಟ್ 8 1.5GHz ಮೀಡಿಯಾ ಟೆಕ್ MTK6750T ಕ್ವಾಡ್ –ಕೋರ್ ಪ್ರೊಸೆಸರ್ ನ್ನು ಒಳಗೊಂಡಿದ್ದು MaliT860-MP2 GPU ಮತ್ತು 4GB RAM ನೊಂದಿಗೆ ಪೇರ್ ಆಗಿದೆ. 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ ಅದನ್ನು 128ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿಕೊಂಡು ಹಿಗ್ಗಿಸಿಕೊಳ್ಳಲು ಅವಕಾಶವಿರುತ್ತದೆ. ಆಂಡ್ರಾಯ್ಡ್ 8.0 ಓರಿಯೋ ಮೂಲಕ ರನ್ ಆಗುತ್ತದೆ ಮತ್ತು ಡುಯಲ್ ಸ್ಲಿಮ್ ಗಳನ್ನು ಬಳಸಲು ಅವಕಾಶ ನೀಡುತ್ತದೆ.

ಕ್ಯಾಮರಾ ವಿಚಾರಕ್ಕೆ ಬಂದರೆ, ಹಿಂಭಾಗದಲ್ಲಿ 16MP ಪ್ರೈಮರಿ ಸೆನ್ಸರ್ f/2.0 ಅಪರ್ಚರ್ ನ್ನು ಹೊಂದಿದೆ ಮತ್ತು ಆಟೋಫೋಕಸ್ ವ್ಯವಸ್ಥೆ ಇದೆ. 0.3MP ಸೆನ್ಸರ್ ನ್ನು ಹೊಂದಿದೆ. 8MP 4P ಲೆನ್ಸ್ ಇರುವ ಕ್ಯಾಮರಾವು ಮುಂಭಾಗದಲ್ಲಿದ್ದು f/2.2 ಅಪರ್ಚರ್ ನ್ನು ಹೊಂದಿದೆ.

₹ 9,999ಗೆ ಕೂಲ್‌ಪ್ಯಾಡ್ ನೋಟ್ 8 ಸ್ಮಾರ್ಟ್‌ಫೋನ್ ಲಾಂಚ್..!

ಇದು 4000mAh ಬ್ಯಾಟರಿಯನ್ನು ಹೊಂದಿದ್ದು ಸ್ಟ್ಯಾಂಡ್ ಬೈ 200 ತಾಸು ಮತ್ತು ಟಾಕ್ ಟೈಮ್ 8 ತಾಸುಗಳು ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕನೆಕ್ಟಿವಿಟಿ ವಿಚಾರದಲ್ಲಿ ವೈ-ಫೈ 802.11 b/g/n, ಬ್ಲೂಟೂತ್ 4.2 ಮತ್ತು 3.5mm ಜಾಕ್ ನ್ನು ಆಡಿಯೋ ಇನ್ ಪುಟ್ ಆಗಿ ಹೊಂದಿದೆ. ಪಾಕ್ಸಿಮಿಟಿ ಸೆನ್ಸರ್ ವ್ಯವಸ್ಥೆಯನ್ನು ಹೊಂದಿದ್ದು, ಲೈಟ್ ಸೆನ್ಸರ್ ಮತ್ತು ಆಕ್ಸಲಮೀಟರ್ ನ್ನು ಹೊಂದಿದೆ.

ಈ ಹಿಂದಿನ ಕೂಲ್ ಪ್ಯಾಡ್ ನೋಟ್ 6 ಫೋನ್ ಆಕ್ಟಾ ಕೋರ್ 1.4 GHz MSM 8940 CP ಜೊತೆಗೆ ಕ್ವಾಲ್ಕಂ MSM 8940 ಸ್ನ್ಯಾಪ್ ಡ್ರ್ಯಾಗನ್ 435 SoC ಚಿಪ್ ಸೆಟ್ ನ್ನು ಹೊಂದಿತ್ತು,ಇದು ಆಂಡ್ರಾಯ್ಡ್ 7.1.1 Nougat ನಲ್ಲಿ ರನ್ ಆಗುತ್ತಿತ್ತು ಮತ್ತು 4ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿತ್ತು. 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಗೆ ಫೋನಿನ ಬೆಲೆ 8,999 ರುಪಾಯಿಗಳಾಗಿದ್ದರೆ ಇನ್ನೊಂದು ವೇರಿಯಂಟ್ 64ಜಿಬಿ ವೇರಿಯಂಟ್ ನ ಬೆಲೆ 9,999 ರುಪಾಯಿಗಳು. ಈ ಬಜೆಟ್ ಸ್ಮಾರ್ಟ್ ಫೋನ್ Journey UI ನ್ನು ಹೊಂದಿತ್ತು ಮತ್ತು ಪ್ರೀ ಇನ್ಸ್ಟಾಲ್ಡ್ ಆಪ್ ಗಳಾದ ಅಮೇಜಾನ್ ಶಾಪಿಂಗ್, ಪ್ರೈಮ್ ವೀಡಿಯೋ, ಯುಸಿ ಬ್ರೌಸರ್ ಮತ್ತು ಹಲವು ವ್ಯವಸ್ಥೆಗಳನ್ನು ಒಳಗೊಂಡಿತ್ತು.

Best Mobiles in India

English summary
Coolpad launches Note 8 smartphone in India, priced at Rs 9,999. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+