Home
ಮೊಬೈಲ್

ಕೂಲ್‌ಪ್ಯಾಡ್‌ ಮೆಗಾ 4A: ಶಿಯೋಮಿಗೆ ಸೆಡ್ಡು ಹೊಡೆಯುವ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಸ್ಮಾರ್ಟ್‌ಫೋನ್ ಮಾರಾಟವಾಗುವುದು ಬಜೆಟ್ ವಿಭಾಗದಲ್ಲಿ. ಅದರಲ್ಲಿಯೂ ಚೀನಾ ಕಂಪನಿಗಳ ಪಾಲು ಅತೀ ಹೆಚ್ಚಿನದು. ಈ ಹಿನ್ನಲೆಯಲ್ಲಿ ಹಲವು ಟಾಪ್ ಕಂಪನಿಗಳು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದನ್ನು ನಾವು ನೋಡಬಹುದು. ಈ ವಿಭಾಗದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸದ್ದು ಮಾಡುತ್ತಿವೆ. ಇದಕ್ಕೆ ಟಕ್ಕರ್ ನೀಡುವ ಸಲುವಾಗಿ ಕೂಲ್ ಪ್ಯಾಡ್ ಹೊಸದೊಂದು ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.

ಕೂಲ್‌ಪ್ಯಾಡ್‌ ಮೆಗಾ 4A:ಶಿಯೋಮಿಗೆ ಸೆಡ್ಡು ಹೊಡೆಯುವ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್

ಕೂಲ್ ಪ್ಯಾಡ್ ಮೆಗಾ 4A ಸ್ಮಾರ್ಟ್‌ಫೋನ್ ಅನ್ನು ಸದ್ಯ ಮಾರುಕಟ್ಟೆಗೆ ಕೂಲ್ ಪ್ಯಾಡ್ ಪರಿಚಯ ಮಾಡಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸದೆ ಎನ್ನುವ ಮಾತು ಕೇಳಿಬಂದಿದೆ. ರೂ.5,999ಕ್ಕೆ ಮಾರಾಟಗಾಲಿರುವ ಈ ಸ್ಮಾರ್ಟ್‌ಫೋನ್ ಆಫ್‌ಲೈನ್ ಮಾರುಕಟ್ಟೆಯಲ್ಲಿ ಮಾತ್ರವೇ ಲಭ್ಯವಿರಲಿದೆ. ಉತ್ತಮವಾದ ವಿಶೇಷತೆಗಳು ಈ ಸ್ಮಾರ್ಟ್‌ಫೋನ್ ಬೇಡಿಕೆಯನ್ನು ಹೆಚ್ಚಿಸಲಿದೆ. ಕಡಿಮೆ ಬೆಲೆಯಾದರು ವಿಶೇಷತೆಗಳು ಹೆಚ್ಚಿನ ಪ್ರಮಾಣದಲ್ಲಿದೆ ಎನ್ನಲಾಗಿದೆ.

ಕೂಲ್ ಪ್ಯಾಡ್ ಮೆಗಾ 4A ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಇದಲ್ಲದೇ 5 ಇಂಚಿನ ಡಿಸ್‌ಪ್ಲೇಯನ್ನು ಈ ಸ್ಮಾರ್ಟ್‌ಫೋನಿನಲ್ಲಿ ನೀಡಲಿದೆ ಎನ್ನಲಾಗಿದೆ. ಇದನ್ನು ಬಿಟ್ಟು ಉಳಿದ ಮಾಹಿತಿಯನ್ನು ಕೂಲ ಪ್ಯಾಡ್ ಬಿಟ್ಟು ಕೊಟ್ಟಿಲ್ಲ.

ಇದೇ ಮಾದರಿಯಲ್ಲಿ ಕಳೆದ ವರ್ಷದ ಕೊನೆಯಲ್ಲಿ ಕೂಲ್ ಪ್ಯಾಡ್ ನೋಟ್ 5 ಲೈಟ್ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲಾಗಿತ್ತು, ಈ ಸ್ಮಾರ್ಟ್‌ಫೋನ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಿತಿತ್ತು. ಈ ಸ್ಮಾರ್ಟ್‌ಫೋನ್ ಬೆಲೆ ರೂ.8199 ಆಗಿತ್ತು. ಈ ಸ್ಮಾರ್ಟ್‌ಫೋನ್ ಸಹ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿತ್ತು.

How to Check Your Voter ID Card Status (KANNADA)

ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಮತ್ತು ಪೂರೈಕೆ ಹೆಚ್ಚಾಗುತ್ತಿದ್ದು, ಇದೇ ಹಿನ್ನಲೆಯಲ್ಲಿ ಕೂಲ್‌ಪ್ಯಾಡ್ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಕಾರ್ಯವನ್ನು ಮಾಡುತ್ತಿದೆ ಎನ್ನಲಾಗಿದೆ.

Best Mobiles in India

English summary
Coolpad Mega 4A launched for Rs 5,999. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+