ಬಜೆಟ್ ಬೆಲೆಯಲ್ಲಿ ಕೂಲ್ ಫೋನ್ ಕೂಲ್ ಪ್ಯಾಡ್ ನೋಟ್ 3

By Shwetha
|

ಇತ್ತೀಚೆಗಷ್ಟೇ, ಕೂಲ್‌ಪ್ಯಾಡ್ ಸಣ್ಣ ಮತ್ತು ಕೈಗೆಟಕುವ ನೋಟ್ 3 ಸ್ಮಾರ್ಟ್‌ಫೋನ್ ಅನ್ನು ಘೋಷಿಸಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೂ 8,999 ಕ್ಕೆ ಈ ಲಾಂಚ್ ಅನ್ನು ಬಿಡುಗಡೆ ಮಾಡಿತ್ತು. ಕಂಪೆನಿಯ ಹೊಸ ಡಿವೈಸ್ ಕೂಲ್ ಪ್ಯಾಡ್ ನೋಟ್ 3 ಅನ್ನು ರೂ 6,999 ಕ್ಕೆ ಲಾಂಚ್ ಮಾಡಿದ್ದು ಕಡಿಮೆ ಬಜೆಟ್ ದರದಲ್ಲಿ ಬಂದಿರುವ ಈ ಫೋನ್ ಅತ್ಯಾಕರ್ಷಕ ಫೀಚರ್‌ಗಳನ್ನೊಳಗೊಂಡು ಮನಸೆಳೆಯುವಂತಿದೆ.

ಅಮೆಜಾನ್ ಇಂಡಿಯಾದ ಪಾಲುದಾರಿಕೆಯೊಂದಿಗೆ ಕೂಲ್ ಪ್ಯಾಡ್ ನೋಟ್ 3 ಲೈಟ್ ಅನ್ನು ಲಾಂಚ್ ಮಾಡಲಾಗಿದ್ದು ಫ್ಲ್ಯಾಶ್ ಸೇಲ್ ಮೋಡ್‌ನಲ್ಲಿ ಈ ಡಿವೈಸ್ ಲಭ್ಯವಾಗಲಿದೆ. ಹೆಚ್ಚು ದರದ ಫೋನ್‌ಗಳು ಹೊಂದಿರುವ ವಿಶೇಷತೆಯನ್ನೇ ನೋಟ್ 3 ಒಳಗೊಂಡಿದ್ದು ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು 3ಜಿಬಿ RAM ಇದರಲ್ಲಿದೆ.

ಇಂದಿನ ಲೇಖನದಲ್ಲಿ ಈ ಫೋನ್‌ನ ಇನ್ನಷ್ಟು ಕೂಲ್ ಅಂಶಗಳನ್ನು ನಾವು ತಿಳಿಸುತ್ತಿದ್ದು ಫೋನ್ ದೊರೆಯುತ್ತಿರುವ ಬೆಲೆಗೆ ಹೇಗೆ ತಕ್ಕುದಾಗಿದೆ ಎಂಬುದನ್ನು ಅರಿತುಕೊಳ್ಳೋಣ.

ವೇಗವಾದ ಫಿಂಗರ್ ಪ್ರಿಂಟ್ ಸ್ಕ್ಯಾನರ್

ವೇಗವಾದ ಫಿಂಗರ್ ಪ್ರಿಂಟ್ ಸ್ಕ್ಯಾನರ್

ಯುಎಸ್‌ಪಿಯೊಂದಿಗೆ ಆರಂಭವಾಗುತ್ತಿರುವ ಕೂಲ್ ಪ್ಯಾಡ್ ನೋಟ್ 3 ಆಯತಾಕಾರದ ಫಿಂಗರ್ ಪ್ರಿಂಟ್ ಪ್ಯಾಡ್ ಮತ್ತು ಅನ್ನು ಪಡೆದುಕೊಂಡಿದೆ ರಿಯರ್ ಕ್ಯಾಮೆರಾದ ಕೆಳಭಾಗದಲ್ಲಿ ನಿಮಗಿದನ್ನು ಗಮನಿಸಬಹುದಾಗಿದೆ. ಫಿಂಗರ್ ಪ್ರಿಂಟ್ ಗುರುತಿಸುವಿಕೆಯನ್ನು ಪಡೆದುಕೊಂಡಿರುವ ಪ್ರಥಮ ಬಜೆಟ್ ಡಿವೈಸ್ ಇದಾಗಿದೆ. ವಿವಿಧ ಅಪ್ಲಿಕೇಶನ್ ಮತ್ತು ವಿಶೇಷತೆಗಳಿಗಾಗಿ ಇದು ಐದು ಫಿಂಗರ್ ಪ್ರಿಂಟ್‌ಗಳನ್ನು ನೋಂದಾಯಿಸಿಕೊಳ್ಳಬಹುದು.

ವಿನ್ಯಾಸ

ವಿನ್ಯಾಸ

ನಿಮ್ಮ ಕೈಯಲ್ಲಿ ಈ ಫೋನ್ ಯಾವತ್ತೂ ಜಾರುವುದಿಲ್ಲ ಅಂತಹ ರಚನೆಯನ್ನು ಈ ಡಿವೈಸ್ ಪಡೆದುಕೊಂಡಿದ್ದು ಫೋನ್‌ನ ಸುತ್ತಲೂ ಗೋಲ್ಡನ್ ರಿಮ್ ಇದರ ಸೌಂದರ್ಯವನ್ನು ಹೆಚ್ಚಿಸಿದೆ. ಸಿಂಗಲ್ ಹ್ಯಾಂಡಿಯಾಗಿ ಕೂಡ ಈ ಡಿವೈಸ್ ಅನ್ನು ಬಳಸುವ ಮಾದರಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಕೂಲ್ ಪ್ಯಾಡ್ ನೋಟ್ 3 ಆಕರ್ಷಕ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. 5 ಇಂಚಿನ 1280x720 ಪಿಕ್ಸೆಲ್‌ಗಳು ಇದರಲ್ಲಿದ್ದು, ಉತ್ತಮ ವೀಕ್ಷಣಾ ಆಂಗಲ್‌ಗಳು ಮತ್ತು ಬಣ್ಣವನ್ನು ಇದು ನೀಡುತ್ತಿದೆ.

ಕಾರ್ಯಕ್ಷಮತೆ

ಕಾರ್ಯಕ್ಷಮತೆ

ಉತ್ತಮ ಕಾರ್ಯಕ್ಷಮತೆಗಾಗಿ ಕೂಲ್ ಪ್ಯಾಡ್ ನೋಟ್ 3 64 ಬಿಟ್ ಮೀಡಿಯಾ ಟೆಕ್ MT6735 ಕ್ವಾಡ್ ಕೋರ್ ಚಿಪ್‌ಸೆಟ್‌ನೊಂದಿಗೆ 1.3GHz ಕ್ಲಾಕ್ ಸ್ಪೀಡ್ ಅನ್ನು ಪಡೆದಿದೆ.

RAM

RAM

ಈ ಫೋನ್‌ನ ಇನ್ನೊಂದು ಆಕರ್ಷಕ ಅಂಶವೆಂದರೆ ಇದರ ಸಂಗ್ರಹಣಾ ಸಾಮರ್ಥ್ಯವಾಗಿದೆ. ಕಡಿಮೆ ಬೆಲೆಯಲ್ಲಿ ಇದು ಹೊಂದಿರುವ RAM ಸಾಮರ್ಥ್ಯ ನಿಜಕ್ಕೂ ಅಮೋಘನೀಯ. ಇದು 16ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಎಸ್‌ಡಿ ಕಾರ್ಡ್ ಬಳಸಿ ಇದನ್ನು 64ಜಿಬಿಗೆ ವಿಸ್ತರಿಸಬಹುದು. ಹೆವಿ ಅಪ್ಲಿಕೇಶನ್‌ಗಳು, ಗೇಮಿಂಗ್ ಆಪ್ಸ್ ಅನ್ನು ಸುಲಲಿತವಾಗಿ ಚಾಲನೆ ಮಾಡಬಹುದಾಗಿದೆ.

 ಕ್ಯಾಮೆರಾ

ಕ್ಯಾಮೆರಾ

ಕೂಲ್ ಪ್ಯಾಡ್ ನೋಟ್ 3, 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಮುಂಭಾಗದಲ್ಲಿ 5ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಂಡಿದೆ. 2.2 ಅಪಾರ್ಚರ್ ಗಾತ್ರವನ್ನು ಫೋನ್ ಪಡೆದುಕೊಂಡಿದ್ದು ನಿಮ್ಮ ಫೋಟೋ ಹವ್ಯಾಸವನ್ನು ಇದು ವೃದ್ಧಿಸುವುದು ಖಂಡಿತ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಫೋನ್‌ನ ಸಾಫ್ಟ್‌ವೇರ್ 5.1 ಲಾಲಿಪಪ್ ಓಎಸ್ ಅನ್ನು ಒಳಗೊಂಡಿದ್ದು ಕೂಲ್ ಯುಐ ಇದರಲ್ಲಿದೆ. ಫೋನ್ ಅನ್ನು ಶೇಕ್ ಮಾಡುವುದರ ಮೂಲಕ ವಾಲ್‌ಪೇಪರ್ ಅನ್ನು ನಿಮಗೆ ಬದಲಾಯಿಸಬಹುದಾಗಿದೆ.

ಸಂಪರ್ಕ

ಸಂಪರ್ಕ

ಈ ಬಜೆಟ್ ಸ್ಮಾರ್ಟ್‌ಫೋನ್ 4ಜಿ ಎಲ್‌ಟಿಇ ಯನ್ನು ಪಡೆದುಕೊಂಡಿದ್ದು ವೇಗದ ಟೆಲಿಕಾಮ್ ಸೇವೆಗಳನ್ನು ಅನುಭವಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.

ಲಭ್ಯವಿರುವ ಆವೃತ್ತಿಗಳು

ಲಭ್ಯವಿರುವ ಆವೃತ್ತಿಗಳು

ಹ್ಯಾಂಡ್‌ಸೆಟ್ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಿದ್ದು, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯಲಿವೆ.

ಬಜೆಟ್‌ಗೆ ಅನುಕೂಲಕರ

ಬಜೆಟ್‌ಗೆ ಅನುಕೂಲಕರ

ರೂ 6,999 ರ ಈ ಡಿವೈಸ್ ನಿಜಕ್ಕೂ ಆಕರ್ಷಕ ಹ್ಯಾಂಡ್‌ಸೆಟ್ ಆಗಿದ್ದು, ಅಧಿಕೃತವಾಗಿ ಈ ಡಿವೈಸ್ ಅಮೆಜಾನ್ ಇಂಡಿಯಾದಲ್ಲಿ ಲಭ್ಯವಾಗುತ್ತಿದೆ ಇದು ಸ್ಕ್ರೀನ್ ಗಾರ್ಡ್ ಅನ್ನು ಹೊಂದಿ ಬಂದಿದ್ದು ಇತರ ಆಕ್ಸೆಸರೀಸ್‌ಗಳು ಇದರಲ್ಲಿದೆ.

Best Mobiles in India

English summary
Here we bring to you a list of 10 groundbreaking features of the Coolpad Note 3 Lite that make this phone one of the bests in this price range.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X